ಮೂಡಸಾಲಿಯಲ್ಲಿ ಕುಸಿದು ಬಿದ್ದ ಶಾಲಾ ಕಟ್ಟಡ, ಅದೃಷ್ಟವಶಾತ್ ತಪ್ಪಿದ ಭಾರೀ ದುರಂತ, ಛೇ..ಬಿಇಓ ಸಾಹೇಬನ ನಿರ್ಲಕ್ಷಕ್ಕೆ ಏನೇನ್ನಬೇಕು..?


ಮುಂಡಗೋಡ: ತಾಲೂಕಿನ ಮೂಡಸಾಲಿಯಲ್ಲಿ ಭಾರೀ ಅನಾಹುತವೊಂದು ಜಸ್ಟ್ ಮಿಸ್ ಆಗಿದೆ. ನಿರಂತರ ಮಳೆಯಿಂದ ನೆನೆದಿದ್ದ ಶಾಲಾ ಕೊಠಡಿ ಕುಸಿದು ಬಿದ್ದಿದೆ. ನಿನ್ನೆ ತಡರಾತ್ರಿ ಘಟನೆ ನಡೆದಿದ್ದು, ಹೀಗಾಗಿನೇ ಅದೃಷ್ಟವಶಾತ್ ಪ್ರಾಣಾಪಾಯವಾಗಿಲ್ಲ.


ಮೊದಲೇ ಸಂಶಯವಿತ್ತು..!
ಅಂದಹಾಗೆ, ಮೂಡಸಾಲಿಯ ಸರ್ಕಾರಿ ಶಾಲೆಯ ಕಟ್ಟಡದ ದುಸ್ಥಿತಿ ಮೊದಲೇ ಅರಿವಿತ್ತು, ಸಂಶಯವಿತ್ತು. ಯಾಕಂದ್ರೆ ಕೊಠಡಿ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿತ್ತು. ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೂ ತರಲಾಗಿತ್ತು. ಆದ್ರೆ, ಅಂತಹ ಆತಂಕದ ನಡುವೆಯೇ ಅದೇ ಕೊಠಡಿಯಲ್ಲೇ ವಿದ್ಯಾರ್ಥಿಗಳು ನಿತ್ಯ ಪಾಠ ಕೇಳುತ್ತಿದ್ದರು. ಹಾಗೊಂದು ವೇಳೆ ರಾತ್ರಿ ನಡೆದಿರೋ ಘಟನೆ ಹಗಲಲ್ಲಿ ನಡೆದಿದ್ದರೇ ಅದೇಂತಹ ದುರಂತ ಸಂಭವಿಸುತ್ತಿತ್ತು..? ನೀವೇ ಯೋಚಿಸಿ.

ಕೊಠಡಿ ಸಮಸ್ಯೆ..!
ಅಂದಹಾಗೆ, ಮೂಡಸಾಲಿ ಶಾಲೆಯಲ್ಲಿ ಒಟ್ಟೂ 103 ವಿದ್ಯಾರ್ಥಿಗಳು ವ್ಯಾಸಂಗ ಮಾಡ್ತಿದಾರೆ. ಅದ್ರಲ್ಲಿ 4 ಮತ್ತು 5 ನೇ ತರಗತಿಯ ಸುಮಾರು 30 ವಿದ್ಯಾರ್ಥಿಗಳು ಇದೇ ಶಿಥಿಲವಾದ ಕೊಠಡಿಯಲ್ಲೇ ಕುಳಿತು ಪಾಠ ಕೇಳುತ್ತಿದ್ದರು‌. ಅಸಲಿಗೆ, ಕೊಠಡಿ ತುಂಬ ಬಿರುಕು ಬಿಟ್ಟು ಇನ್ನೇನು ಬೀಳುವ ಸ್ಥಿತಿಯಲ್ಲಿದೆ ಅನ್ನೋದು ಗ್ರಾಮಸ್ಥರಿಗೆ ಯಾವಾಗ ಅರಿವಿಗೆ ಬಂತೋ ಆ ಕ್ಷಣವೇ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಅಲ್ಲದೇ, ಇಲ್ಲಿನ ಮುಖ್ಯಾಧ್ಯಾಪಕರೂ ಕೂಡ ಬಿಇಓ ಸಾಹೇಬ್ರ ಗಮನಕ್ಕೆ ತಂದಿದ್ರು. ಆದ್ರೆ, ಬಡಮಕ್ಕಳ ಜೀವದ ಖಬರು ನಮ್ಮ ಮುಂಡಗೋಡಿನ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಹೇಗೆ ಬರಬೇಕು ಹೇಳಿ..? ಇವತ್ತಿಗೂ ಅದರ ಬಗ್ಗೆ ಗಮನ ಕೊಡಲೇ ಇಲ್ಲ ಮಾನ್ಯ ಬಿಇಓ ಸಾಹೇಬ್ರು. ಹೀಗಾಗಿ, ಗ್ರಾಮಸ್ಥರ ಆಕ್ರೋಶದ ಕಟ್ಟೆ ಒಡೆದಿದೆ.

ಬಿಇಓ ಸಾಹೇಬ್ರೇ..?
ಕಳೆದ ಎರಡು ತಿಂಗಳ ಹಿಂದೆಯೇ ಇಲ್ಲಿನ ಅವ್ಯವಸ್ಥೆ ನಿಮ್ಮ ಅರಿವಿಗೆ ಬಂದಿದ್ರೂ ನಿತ್ಯವೂ ಅದೇ‌ ಕೊಠಡಿಯಲ್ಲಿ ಮಕ್ಕಳ ಜೀವ ಒತ್ತೆ ಇಟ್ಟಿದ್ದೀರಲ್ಲ..? ನಿಮಗೆ ಏನೂ ಅನಿಸಲ್ವಾ..? ಒಂದು ವೇಳೆ ರಾತ್ರಿ ಘಟನೆ ನಡೆದಿದೆ ಓಕೆ. ಆದ್ರೆ, ಇದೇ ಘಟನೆ ವಿದ್ಯಾರ್ಥಿಗಳು ಪಾಠ ಕೇಳುವ ಹೊತ್ತಲ್ಲಿ ನಡೆದ್ದಿದ್ದರೆ ಮಕ್ಕಳ ಜೀವಕ್ಕೆ ಯಾರಪ್ಪಾ ಹೊಣೆ..? ನಿಮಗೇನು ವಿದ್ಯಾರ್ಥಿಗಳ ಬಗ್ಗೆ ಕಾಳಜಿಯೇ ಇಲ್ವಾ..? ವಿದ್ಯಾರ್ಥಿಗಳ ಜೀವದ ಜೊತೆ ಇನ್ನೂ ಅದೇಷ್ಟು ಚೆಲ್ಲಾಟವಾಡ್ತಿರಿ..? ಹಾಗಂತ, ತಾಲೂಕಿನ ಜನ ಕೇಳ್ತಿದಾರೆ. ನಿಮ್ಮ ಬೇಜವಾಬ್ದಾರಿಗೆ ಕೊನೆಯೇ ಇಲ್ವಾ..?

ಸರ್ಕಾರದ ಆದೇಶಕ್ಕೂ ಕಿಮ್ಮತ್ತಿಲ್ವಾ..?
ಅಸಲು, ಸರ್ಕಾರ ಅದೊಂದು ಆದೇಶ ಹೊರಡಿಸಿತ್ತು. ಶಿಥಿಲಾವಸ್ಥೆಯಲ್ಲಿರೋ ಯಾವುದೇ ಶಾಲಾ ಕಟ್ಟಡದಲ್ಲೂ ಮಕ್ಕಳನ್ನು ಕೂರಿಸುವಂತಿಲ್ಲ. ಅಂತಹ ಕಟ್ಟಡಗಳಲ್ಲಿ ಪಾಠ ಹೇಳುವಂತಿಲ್ಲ ಅಂತಾ. ಆದ್ರೆ, ಕಳೆದ ಎರಡು ತಿಂಗಳ ಹಿಂದೆಯೇ ಬಿಇಓ ಸಾಹೇಬ್ರಿಗೆ ಕಟ್ಟಡದ ನೈಜ ಸ್ಥಿತಿಯ ಮಾಹಿತಿ ನೀಡಿದ್ರೂ, ಅದೇ ಕಟ್ಟಡದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮುಂದುವರೆಸಿದ್ದು ಯಾವ ಕಾರಣಕ್ಕೆ..? ಹಾಗಿದ್ರೆ ಸರ್ಕಾರದ ಆದೇಶ ಇವ್ರಿಗೆ ಸಂಬಂಧಿಸಿಯೇ ಇಲ್ವಾ..? ಹಾಗಂತ, ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.

ಶಿಕ್ಷಣಾಧಿಕಾರಿಗಳೆ ಉತ್ತರಿಸಿ, ಇ‌ನ್ನೂ ಅದೇಷ್ಟು ಬೇಜವಾಬ್ದಾರಿ ತೋರುತ್ತಿರಿ..? ಧಿಕ್ಕಾರವಿರಲಿ..!

error: Content is protected !!