ಮುಂಡಗೋಡ: ಇಲ್ಲಿನ ಕೃಷಿ ಅಧಿಕಾರಿಗಳು ಅದೆಲ್ಲಿಗೆ ಹೋಗಿ ನಿದ್ದೆ ಮಾಡುತ್ತಿದ್ದಾರೋ ಗೊತ್ತಿಲ್ಲ. ಅಸಲು “ಹರ್ ಘರ್ ತಿರಂಗಾ” ಕಾರ್ಯಕ್ರಮ ಇವ್ರಿಗೆ ಅರ್ಥವೇ ಆಗಿಲ್ಲವೆನೋ. ಯಾಕಂದ್ರೆ ಈ ಬೇಜವಾಬ್ದಾರಿ ಅಪರಾವತಾರಿ ಅಧಿಕಾರಿಗಳು ಕೃಷಿ ಇಲಾಖೆ ಎದುರು ಧ್ವಜಾರೋಹಣವನ್ನೇ ಮಾಡಿಲ್ಲ. ಹೀಗಾಗಿ, ಸರ್ಕಾರದ ಮಹತ್ವಪೂರ್ಣ ಕಾರ್ಯಕ್ರಮಕ್ಕೆ ಕ್ಯಾರೇ ಅಂದಿಲ್ಲ.
ಎಲ್ಲಿದ್ದಿರಾ ಕುಲಕರ್ಣಿ ಸಾಹೇಬ್ರೆ..?
ಅಸಲು, ಮುಂಡಗೋಡಿನ ಕೃಷಿ ಇಲಾಖೆಯ ಅಂಗಳಕ್ಕೆ ಬಂದ್ರೆ ಬರೀ ಮಂತ್ರಕ್ಕಿಂತ ಉಗುಳೇ ಜಾಸ್ತಿ ಅನ್ನುವ ಪರಿಸರವಿದೆ. ಕುಲಕರ್ಣಿ ಅನ್ನೋ ಆ ಯಪ್ಪಾ ಬರೀ ಮಾತಾಡುವುದಕ್ಕಷ್ಟೇ ಸೀಮಿತ ಅನ್ನುವಂತಾಗಿದೆ. ಹೀಗಾಗಿ, ತಾಲೂಕಿನ ಅದೇಷ್ಟೋ ರೈತರು ನಿತ್ಯವೂ “ಅಡಿಕೆ ಎಲೆ” ತಿಂದು ನೇರವಾಗಿ ಕೃಷಿ ಇಲಾಖೆ ಆಫೀಸಿನೆಡೆಗೇ ಬರುವಂತಾಗಿದೆ ಅನ್ನೋದು ಬೇರೆ ಮಾತು. ಆದ್ರೆ ಈ ಅಧಿಕಾರಿಗೆ ಸರ್ಕಾರದ ಮಹತ್ವಪೂರ್ಣ ಕಾರ್ಯಕ್ರಮದ ಅರಿವೂ ಇಲ್ಲದೇ ಹೊಯ್ತಲ್ಲ ಅನ್ನೋದೇ ಈಗಿರೋ ಮೂಲ ಆಕ್ರೋಶ.
ಬಣ ಬಣಗುಡುತ್ತಿದೆ ಧ್ವಜ ಸ್ತಂಭ..!
ಅಸಲು, ನಿನ್ನೆಯಿಂದ ಅಂದ್ರೆ ಆಗಷ್ಟ 13 ರಿಂದ ಪ್ರತಿದಿನ ಬೆಳಿಗ್ಗೆ ಎಂಟು ಗಂಟೆಗೆ ಪ್ರತೀ ಸರ್ಕಾರಿ ಕಛೇರಿಗಳ ಎದುರು ಧ್ವಜಾರೋಹಣ ಮಾಡಲೇ ಬೇಕು. ಹಾಗೇ ಸಂಜೆ ಸೂರ್ಯಾಸ್ತದ ನಂತರ ಧ್ವಜವನ್ನು ಗೌರವಪೂರ್ವಕವಾಗಿ ಇಳಿಸಬೇಕು. ಆದ್ರೆ, ಈ ಕೃಷಿ ಇಲಾಖೆ ಆವರಣದಲ್ಲಿರೋ ಧ್ವಜ ಸ್ತಂಭ ಮಾತ್ರ ಹೆಮ್ಮೆಯ ತ್ರಿವರ್ಣ ಧ್ವಜ ಹಾರಿಸುವ ನಸೀಬು ಪಡೆದುಕೊಂಡಿಲ್ಲವೆನೋ..? ಇಲ್ಲಿನ ಅಧಿಕಾರಿಗಳ ನಿರ್ಲಕ್ಷದಿಂದ ಧ್ವಜಾರೋಹಣವನ್ನೇ ಮಾಡಿಲ್ಲ ಅನ್ನೋದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕುಲಕರ್ಣಿ ಸಾಹೇಬಾ ಹೇಳಿದ್ದೇನು ಗೊತ್ತಾ..?
ಯಾಕ್ರಿ ಕುಲಕರ್ಣಿ ಸಾಹೇಬ್ರೆ, ನಿಮ್ಮಆಫೀಸು ಎದುರು ಧ್ವಜಾರೋಹಣವನ್ನೇ ಮಾಡಿಲ್ಲವಲ್ಲ ಅಂತಾ ಕೇಳಿದ್ರೆ, ಹೇ ಅಲ್ಲಿ ಧ್ವಜಸ್ತಂಭ ಹತ್ರ ಗಲೀಜು ಇತ್ತು ಅದಿಕೆ ಮಾಡಿಲ್ಲ, ಹಾಗೆ ಒಂದು ಕೋಲಿನಲ್ಲಿ ಧ್ವಜ ಹಾಕಿ ಮೇಲೆ ಕಟ್ಟಿದ್ದಾರೆ ನಮ್ಮ ಹುಡುಗ್ರು ಅಂತಾರೆ ಸಾಹೇಬ್ರು. ಅಸಲು, ಸಾಹೇಬ್ರು ರಜೆಯ ಮೂಡ್ ನಲ್ಲಿದ್ದಾರೆ ಹೀಗಾಗಿ, ಅವ್ರಿಗೆ ಅಲ್ಲಿ ಏನಾಗಿದೆ ಅಂತಾನೇ ಗೊತ್ತಿಲ್ಲವೆನೊ..?
ಕ್ರಮವೇನು..?
ಹರ್ ಘರ್ ತಿರಂಗಾ ಕಾರ್ಯಕ್ರಮವನ್ನ ಖುದ್ದು ಸರ್ಕಾರಿ ಅಧಿಕಾರಿಗಳೇ ಹೀಗೆ ಬೇಜವಾಬ್ದಾರಿ ತೋರಿ ಆಚರಿಸದಿರೋದು ಭಾರೀ ಖಂಡನೆಗೆ ಕಾರಣವಾಗಿದೆ. ಹೀಗಾಗಿ, ಈ ಕೃಷಿ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಗೆ ಅದೇನು ಕ್ರಮ ಕೈಗೊಳ್ತಾರೋ ಮಾನ್ಯ ಜಿಲ್ಲಾಧಿಕಾರಿಗಳೇ ಹೇಳಬೇಕಿದೆ. ಈ ಬಗ್ಗೆ ಕೇಳೋಣ ಅಂದ್ರೆ ಪಾಪ ಮುಂಡಗೋಡಿನ ತಹಶೀಲ್ದಾರ್ ಸಾಹೆಬ್ರ ಪೋನ್ ರಿಂಗಣಿಸತ್ತೆ, ಆದ್ರೆ ರಿಸಿವ್ ಆಗೋದೇ ಇಲ್ಲ. ಹೀಗಾಗಿ, “ಯಾರಿಗೆ ಹೇಳೋಣಾ ನಮ್ಮ ಪ್ರಾಬ್ಲೆಮ್ಮು” ಅನ್ನುವ ಸ್ಥಿತಿ ಮುಂಡಗೋಡಿಗರದ್ದು.