ಇದೇನಿದು ಲೋಯೊಲಾ ಶಿಕ್ಷಣ ಸಂಸ್ಥೆಯ ದುರಹಂಕಾರ..? ವಿದ್ಯಾರ್ಥಿಗಳ ರಕ್ಷಾಬಂಧನ ಕಿತ್ತೊಗೆದದ್ದು ಸರಿನಾ..? ಹಿಂದುಪರ ಸಂಘಟನೆಗಳ ಪ್ರೊಟೆಸ್ಟ್..!


ಮುಂಡಗೋಡಿನ ಲೋಯೊಲಾ ಶಿಕ್ಷಣ ಸಂಸ್ಥೆ ವಿರುದ್ಧ ಹಿಂದು ಸಂಘಟನೆಗಳು ಆಕ್ರೋಶ ವ್ಯಕ್ತ ಪಡಿಸಿವೆ. ಹಿಂದು ವಿದ್ಯಾರ್ಥಿಗಳು ಕೈಗೆ ಕಟ್ಟಿಸಿಕೊಂಡಿದ್ದ ರಕ್ಷಾಬಂಧನದ ರಾಖಿಗಳನ್ನು ಈ ಶಾಲೆಯಲ್ಲಿ ಕಿತ್ತೊಗೆಯಲಾಗ್ತಿದೆಯಂತೆ, ಹಿಂದು ವಿದ್ಯಾರ್ಥಿಗಳು ಹಣೆಗೆ ಕುಂಕುಮ ಹಚ್ಚಿಕೊಳ್ಳುವ ಹಾಗಿಲ್ಲವಂತೆ, ಅಲ್ಲದೇ ಕೈಯಲ್ಲಿ ಯಾವುದೇ ತರಹದ ಧಾರ್ಮಿಕ ಭಾವನೆ ಸಾರುವ ದಾರಗಳನ್ನು ಕಟ್ಟಿಕೊಳ್ಳುವ ಹಾಗಿಲ್ಲವಂತೆ, ಹೀಗಾಗಿ ಇದ್ಯಾವ ನ್ಯಾಯ ಅಂತಾ ಪೋಷಕರು ಹಾಗು ಹಿಂದು ಸಂಘಟನೆ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.

ರಾಖಿಗಿಲ್ಲ “ರಕ್ಷೆ”
ಇತ್ತೀಚೆಗೆ ನಡೆದ ರಕ್ಷಾಬಂಧನದಲ್ಲಿ ಈ ಶಾಲೆಯಲ್ಲಿ ವ್ಯಾಸಂಗ ಮಾಡ್ತಿರೋ ವಿದ್ಯಾರ್ಥಿಗಳು ತಮ್ಮ‌ ಕೈಗಳಿಗೆ ರಾಖಿ ಕಟ್ಟಿಕೊಂಡು ಬಂದಿದ್ರು. ಆದ್ರೆ, ಹಾಗೆ ರಾಖಿ ಕಟ್ಟಿಕೊಳ್ಳಬೇಡಿ ಅಂತ ಇಲ್ಲಿನ ಆಡಳಿತ ಮಂಡಳಿ ವಿದ್ಯಾರ್ಥಿಗಳ ಕೈಯಲ್ಲಿದ್ದ ರಾಖಿಗಳನ್ನು ಕಿತ್ತೆಸೆದಿದೆ ಅನ್ನೊ ಆರೋಪ ಕೇಳಿಬಂದಿದೆ. ಹೀಗಾಗಿ, ಈ ಶಾಲೆಯಲ್ಲಿ ಯಾಕೆ ಅಂತಹ ರೂಲ್ಸ್..? ಅಂತಾ ಹಿಂದು ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ಕೈಗೊಂಡಿದ್ದಾರೆ.

ಅವ್ಯವಸ್ಥೆ ಇದೆಯಾ.‌?
ಇನ್ನು ಈ ಶಾಲೆಯಲ್ಲಿ ವ್ಯಾಸಂಗ ಮಾಡ್ತಿರೋ ಮಕ್ಕಳಿಗೆ ತುಂಬಾ ಕೀಳು ಮಟ್ಟದಲ್ಲಿ ನೋಡಿಕೊಳ್ಳಲಾಗ್ತಿದೆಯಂತೆ. ಇನ್ನಿಲ್ಲದ ಅವ್ಯವಸ್ಥೆ ತುಂಬಿಕೊಂಡಿದೆಯಂತೆ. ಸರಿಯಾಗಿ ನೀರಿನ ವ್ಯವಸ್ಥೆ ಮಾಡ್ತಿಲ್ಲವಂತೆ ಹಾಗಂತ ಪೋಷಕರು ಆರೋಪಿಸ್ತಿದಾರೆ. ಒಂದು ವೇಳೆ ವಿದ್ಯಾರ್ಥಿಗಳು ತಮಗೆ ಆದ ಅವ್ಯವಸ್ಥೆ ಬಗ್ಗೆ ಪೋಷಕರ ಎದುರು ಹೇಳಿದಾಗ, ಪೋಷಕರು ಅಂತಹ ಅವ್ಯವಸ್ಥೆ ಬಗ್ಗೆ ಪ್ರಶ್ನಿಸಿದ್ರೆ ಮುಗೀತು. ಆ ವಿದ್ಯಾರ್ಥಿಗಳನ್ನೇ ಹೊರಹಾಕುವ ಧಮ್ಕಿ ನೀಡಲಾಗ್ತಿದೆಯಂತೆ. ಹೀಗಾಗಿ, ಪೋಷಕರು ಆಕ್ರೋಶಗೊಂಡಿದ್ದಾರೆ.

ಧಿಕ್ಕಾರ..!
ಇದೇಲ್ಲ ಸಮಸ್ಯೆಗಳು, ಆರೋಪಗಳ ಹಿನ್ನೆಲೆಯಲ್ಲೇ ಶ್ರೀರಾಮಸೇನೆ ಸಂಘಟನೆ, ಸಂಗೊಳ್ಳಿ ರಾಯಣ್ಣ ಅಭಿಮಾನಿ ಪಡೆ ಸೇರಿದಂತೆ ಹಿದೂಪರ ಸಂಘಟನೆ ಕಾರ್ಯಕರ್ತರು ಲೋಯೊಲಾ ಶಾಲೆಯ ಎದುರು ಪ್ರತಿಭಟನೆ ನಡೆಸ್ತಿದಾರೆ. ಶಾಲೆಯ ನೀತಿಯ ಬಗ್ಗೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತ ಪಡಿಸ್ತಿದಾರೆ. ಹಿಂದು ವಿರೋಧಿ ನೀತಿಗಳ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. ಹೀಗಾಗಿ, ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ರ ಎದುರು ಪ್ರತಿಭಟನಾಕಾರರು, ಸಂಸ್ಥೆಯ ಮುಖ್ಯಸ್ಥರು ಪ್ರತಿಭಟನಾ ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದಿದ್ದರು. ಆ ನಂತರ ಬಂದ ಸಂಸ್ಥೆಯ ಮುಖ್ಯಸ್ಥ ಫಾದರ್ ರವರಿಗೆ ತರಾಟೆಗೆ ಪಡೆದ್ರು. ಬಿಇಓ ಸಾಹೇಬ್ರೂ ಸ್ಥಳಕ್ಕೆ ಬಂದಿದ್ರು. ಅದೇನೆನೋ ಮನವೊಲಿಸಲು ಯತ್ನಿಸಿದ್ರು. ಆದ್ರೆ, ಪ್ರತಿಭಟನಾಕಾರರ ಕೋಪ ತಣ್ಣಗಾಗಿಲ್ಲ. ಮನವೊಲಿಸುವ ಕಾರ್ಯ ಚಾಲ್ತಿಯಲ್ಲಿದೆ.

ಅಂದಹಾಗೆ, ಲೋಯೊಲಾ ಶಿಕ್ಷಣ ಸಂಸ್ಥೆಯ ಎದುರು ಶ್ರೀರಾಮ ಸೇನೆಯ ಮಂಜುನಾಥ್ ಪವಾರ್, ಹಿಂದು ಜಾಗರಣ ವೇದಿಕೆ ಸಂಚಾಲಕ ಪ್ರಕಾಶ್ ಬಡಿಗೇರ್, ಯುವ ಮುಖಂಡ ಗಣೇಶ್ ಶಿರಾಲಿ, ಭಜರಂಗದಳ ತಾಲೂಕಾ ಸಂಚಾಲಕ ಶಂಕರ್ ಲಮಾಣಿ, ಅಯ್ಯಪ್ಪ ಭಜಂತ್ರಿ, ಸೇರಿದಂತೆ ಹಲವ್ರು ಪ್ರತಿಭಟನೆ ನಡೆಸಿದ್ರು.

error: Content is protected !!