ಮುಂಡಗೋಡ APMC ಸಮೀಪ, ಎಮ್ಮೆ ಅಡ್ಡ ಬಂದುಮರಕ್ಕೆ ಡಿಕ್ಕಿ ಹೊಡೆದ ಕಾರ್, ಓರ್ವ ಮಹಿಳೆ ಸ್ಥಳದಲ್ಲೇ ಸಾವು, ಐವರಿಗೆ ಗಾಯ..!


ಮುಂಡಗೋಡ: ಪಟ್ಟಣದ APMC ಬಳಿ ಭೀಕರ ಅಪಘಾತವಾಗಿದೆ. ಕಾರಿಗೆ ಎಮ್ಮೆ ಅಡ್ಡ ಬಂದ ಪರಿಣಾಮ, ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಓರ್ವ ‌ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಐವರಿಗೆ ಗಂಭೀರ ಗಾಯವಾಗಿದೆ.

ಮಹಾರಾಷ್ಟ್ರ ಕೊಲ್ಲಾಪುರ ಮೂಲದ ರೂಪಾಲಿ ಗೋಂದಳಿ (42) ಎಂಬ ಮಹಿಳೆ ಸ್ಥಳದಲ್ಲೇ‌ ಮೃತಪಟ್ಟಿದ್ದಾಳೆ. ಇನ್ನು ಕಾರಲ್ಲಿ ಇನ್ನುಳಿದ ಐವರಿಗೆ ಗಾಯವಾಗಿದ್ದು ಸದ್ಯ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ. ಹುಬ್ಬಳ್ಳಿ ಕಡೆಯಿಂದ ಬರುತ್ತಿದ್ದ ಕಾರಿಗೆ ಎಮ್ಮೆ ಅಡ್ಡ ಬಂದಿದೆ. ಹೀಗಾಗಿ ನಿಯಂತ್ರಿಸಲು ಹೋದ ವೇಳೆ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ಕಾರು ಸಂಪೂರ್ಣ ನುಜ್ಜು ಗುಜ್ಜಾಗಿದೆ. ಸ್ಥಳಕ್ಕೆ‌ ಮುಂಡಗೋಡ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

error: Content is protected !!