ಗಾಂಜಾ ಬೆಳೆದಿದ್ದ ಚಾಲಾಕಿ ಟಿಬೇಟಿಗನ ಬಂಧನ, ಹಸಿ ಹಸಿ ಗಾಂಜಾ ವಶಕ್ಕೆ ಪಡೆದ ಮುಂಡಗೋಡ ಪೊಲೀಸ್ರು..!

ಮುಂಡಗೋಡ: ಪೊಲೀಸರು ಸ್ವಾತಂತ್ರೋತ್ಸವದ ದಿನವೇ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಟಿಬೇಟಿಯನ್‌ ಕಾಲೋನಿಯಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಸಮೇತ ಆರೋಪಿಯನ್ನು ಎಳೆದು ತಂದಿದ್ದಾರೆ‌.

ಅಂದಹಾಗೆ, ಟಿಬೇಟಿಯನ್ ಕಾಲೋನಿಯ ಕ್ಯಾಂಪ್ ನಂಬರ್ 4 ರ ನ್ಯಾಮಗೆಲ್ ಚೋಟೆನ್ ಎಂಬುವ ವ್ಯಕ್ತಿಯೇ ಆರೋಪಿಯಾಗಿದ್ದು ಸದ್ಯ ಅಂದರ್ ಆಗಿದ್ದಾನೆ. ಹಸಿ ಹಸಿಯಾದ ಗಾಂಜಾ ವಶಕ್ಕೆ ಪಡೆದುಕೊಂಡಿದ್ದು ಬರೋಬ್ಬರಿ 6 ಕೆಜಿ 900 ಗ್ರಾಂ ತೂಕ ತೂಗಿದೆ.

ಮುಂಡಗೋಡ ಪಿಐ ಸಿದ್ದಪ್ಪ ಸಿಮಾನಿ, ಪಿಎಸ್ಐ ಬಸವರಾಜ್ ಮಬನೂರು, ಕ್ರೈಂ ಪಿಎಸ್ಐ ಎನ್.ಡಿ.ಜಕ್ಕಣ್ಣವರ್ ನೇತೃತ್ವದಲ್ಲಿ ದಾಳಿ ನಡೆದಿದ್ದು ಆರೋಪಿಯ ಹೆಡೆಮುರಿ ಕಟ್ಟಿದ್ದಾರೆ.

error: Content is protected !!