ಹಿರಿಯ ಸಹಕಾರಿ ಧುರೀಣ ಎಂ.ಬಿ.ಕುಟ್ರಿ ವಿಧಿವಶ..!

ಮುಂಡಗೋಡ ತಾಲೂಕಿನ ಕೊಪ್ಪ ಗ್ರಾಮದ ಮುಖಂಡ, ಹಿರಿಯ ರಾಜಕಾರಣಿ ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ್ ಕುಟ್ರಿ ವಿಧಿವಶರಾಗಿದ್ದಾರೆ‌‌. ಹುಬ್ಬಳ್ಳಿಯ SDM ನಲ್ಲಿ ಎಂ.ಬಿ.ಕುಟ್ರಿ ಕೊನೆಯುಸಿರೆಳೆದಿದ್ದಾರೆ.

ಕಳೆದ ಕೆಲ ದಿನಗಳಿಂದ ತೀವ್ರ ಆನಾರೋಗ್ಯಕ್ಕೀಡಾಗಿದ್ದ ಎಂ.ಬಿ.ಕುಟ್ರಿ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ ಅಂತಾ ತಿಳಿದು ಬಂದಿದೆ.

APMC ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಎಂ.ಬಿ.ಕುಟ್ರಿ ಜನಾನುರಾಗಿಯಾಗಿದ್ದರು. ಶ್ರೀಯುತರ ನಿಧನಕ್ಕೆ ಹಲವು ನಾಯಕರು ಕಂಬನಿ ಮಿಡಿದಿದ್ದಾರೆ.

error: Content is protected !!