ಮುಂಡಗೋಡ: ಸದ್ಯ, ರಾಷ್ಟ್ರಾಧ್ಯಂತ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಡಗರ ಸಂಭ್ರಮ ಜೋರಾಗಿದೆ. ಅಗಷ್ಟ 13 ರಿಂದಲೇ “ಹರ್ ಘರ್ ತಿರಂಗಾ” ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ದೇಶಾಧ್ಯಂತ ಅಮೃತ ಮಹೋತ್ಸವದ ಸಂಭ್ರಮ ಮನೆ, ಮನೆ ಮಾತಾಗಿದೆ. ಈ ಹೊತ್ತಲ್ಲೇ ಅವರೊಬ್ಬ ಅಧಿಕಾರಿ ಹೀಗೆ ಮಾಡಿದ್ದು ಸರಿನಾ ಅನ್ನೋ ಪ್ರಶ್ನೆ ಕೂಡ ತಾಲೂಕಿನಾಧ್ಯಂತ ಚರ್ಚೆಯಾಗ್ತಿದೆ. ತಾಲೂಕಿನ ಗುಂಜಾವತಿ ಭಾಗದ ಉಪ ವಲಯ ಅರಣ್ಯಾಧಿಕಾರಿಯೊಬ್ಬರು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ರಾ..? ಈ ಪೋಟೋ ನೋಡಿದ್ರೆ ಎಂಥವರಿಗೂ ಹಾಗೆ ಅನ್ನಿಸದೇ ಇರಲ್ಲ.
ಶ್ರೀಶೈಲ್ ಐನಾಪುರ..!
ಅವ್ರ ಹೆಸ್ರು ಶ್ರೀಶೈಲ್ ಐನಾಪುರ ಸದ್ಯ ಗುಂಜಾವತಿ ಅರಣ್ಯ ಭಾಗದ ಉಪ ವಲಯ ಅರಣ್ಯಾಧಿಕಾರಿ. “ಹರ್ ಘರ್ ತಿರಂಗಾ” ಕಾರ್ಯಕ್ರಮಕ್ಕೆ ಪೂರಕವಾಗಿ ಇವತ್ತು ಗುಂಜಾವತಿಯ ತಮ್ಮ ಕಚೇರಿಯ ಎದುರು ಈ ಫಾರೆಸ್ಟರ್ ಕೂಡ ಧ್ವಜಾರೋಹಣ ಮಾಡಿದ್ದಾರೆ. ಆದ್ರೆ, ದ್ವಜಾರೋಹಣ ಮಾಡುವಾಗ ಶೂ ಧರಿಸಿಯೇ ಧ್ವಜಸ್ತಂಭದ ಮೇಲೆ ನಿಂತಿದ್ದಾರೆ. ಹೀಗಾಗಿ, ಇವರ ಈ ರೀತಿಯ ವರ್ತನೆ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ಅಪಮಾನ ಅಲ್ವಾ..?
ಅಂದಹಾಗೆ, ಈ ಫಾರೆಸ್ಟರ್ ಸಾಹೇಬ್ರು, ಧ್ವಜಾರೋಹಣ ಮಾಡುವ ವೇಳೆ ಧ್ವಜಸ್ತಂಭದ ಮೇಲೆ ಶೂ ಧರಿಸಿಯೇ ನಿಂತು ಧ್ವಜಾರೋಹಣ ಮಾಡಿದ್ದಾರೆ. ಕಾನೂನಿನಲ್ಲಿ ಇದಕ್ಕೆ ಅವಕಾಶ ಇದೆಯೋ ಇಲ್ಲವೋ ಗೊತ್ತಿಲ್ಲ. ಆದ್ರೆ, ಇಡೀ ಭಾರತೀಯ ಪ್ರಜೆಗಳು ಧ್ವಜ ಹಾಗೂ ಧ್ವಜ ಸ್ತಂಭದ ಬಗ್ಗೆ ಇಟ್ಟಿರುವ ಗೌರವ ಭಾವನೆಗಳಿಗೆ ಈ ಫಾರೆಸ್ಟರ್ ಅಪಚಾರ ಮಾಡಿದ್ರಾ..? ಅಷ್ಟಕ್ಕೂ ಯೂನಿಫಾರ್ಮಿನಲ್ಲಿದ್ದಾಗ ಶೂ ಧರಿಸಬಹುದು ಅದನ್ನ ನಾವು ಪ್ರಶ್ನಿಸಲ್ಲ.. ಆದ್ರೆ, ಹಾಗೆ ಶೂ ಧರಿಸಿಕೊಂಡು ಧ್ವಜಸ್ತಂಭದ ಮೇಲೆ ಹತ್ತೋದು ಅದೇಷ್ಟು ಸರಿ..? ಇಂತಹ ಹತ್ತಾರು ಪ್ರಶ್ನೆಗಳು ಎದ್ದಿವೆ.
ನಮ್ಮ ಕಳಕಳಿ ಇಷ್ಟೆ..!
ಭಾರತ ಭಾವನಾತ್ಮಕತೆಯ ದೇಶ, ಇಲ್ಲಿ ಪ್ರತಿಯೊಂದರಲ್ಲೂ ದೇವರನ್ನು ಹುಡುಕುವ ಮನಸ್ಸುಗಳಿವೆ, ನಂಬಿಕೆಗಳಿವೆ. ಹೀಗಿದ್ದಾಗ ರಾಷ್ಟೃ ಹಾಗೂ ರಾಷ್ಟ್ರಭಕ್ತಿಯ ಬಗ್ಗೆ ಕೇಳಬೇಕಾ..? ಭಾರತದ ಕಣ ಕಣದಲ್ಲೂ ರಾಷ್ಟ್ರಭಕ್ತಿ ಜಾಗ್ರತವಿದೆ. ಹೀಗಿದ್ದಾಗಲೂ ಇದೇಲ್ಲ ಆ ಅಧಿಕಾರಿಗೆ ಗೊತ್ತಾಗಲಿಲ್ಲವಾ..? ಎಂಬುದಷ್ಟೇ ನಮ್ಮ ಪ್ರಶ್ನೆ, ಆದ್ರೆ, ಉತ್ತರಿಸೋರು ಯಾರು..?