ಮುಂಡಗೋಡ ತಾಲೂಕಿನ ಪಾಳಾದಲ್ಲಿ MSIL ವೈನ್ ಶಾಪ್ ಕಳ್ಳತನವಾಗಿದೆ. ಸೆಟರ್ಸ್ ಮುರಿದು ಒಳನುಗ್ಗಿರೋ ಕಳ್ಳರು ಸಿಕ್ಕಷ್ಟು ಎಣ್ಣೆ ಬಾಚಿಕೊಂಡು ಪರಾರಿಯಾಗಿದ್ದಾರೆ. ನಿನ್ನೆ ರಾತ್ರಿಯೇ ನಡೆದಿರೋ ಘಟನೆ, ಇಂದು ಸಂಜೆ ಬೆಳಕಿಗೆ ಬಂದಿದೆ. ಗಾಂಧಿ ಜಯಂತಿಯ ಕಾರಣಕ್ಕೆ ಬಂದ್ ಆಗಿದ್ದ MSIL ವೈನ್ ಶಾಪ್ ಗೆ ಕನ್ನ ಹಾಕಿರೋ ಖದೀಮರು ಸುಮಾರು 60-65 ಸಾವಿರ ಮೌಲ್ಯದ ಮದ್ಯ ಎಗರಿಸಿ ಹೋಗಿದ್ದಾರೆ ಅಂತಾ ಅಂದಾಜಿಸಲಾಗಿದೆ. ಅಂದಹಾಗೆ, ನಿನ್ನೆ ಶಿರಸಿ ತಾಲೂಕಿನ ಬನವಾಸಿ ಪೊಲೀಸ್ ಠಾಣಾ ವ್ಯಾಪ್ತಿಯ ದಾಸನಕೊಪ್ಪದಲ್ಲೂ ಇದೇಮಾದರಿಯಲ್ಲಿ ವೈನ್ ಶಾಪ್ ಕಳ್ಳತನವಾಗಿದೆ. ಹೀಗಾಗಿ, ಈ ಕಳ್ಳತನವೂ ಅದೇ ಗ್ಯಾಂಗ್ ಮಾಡಿದೆಯಾ ಅನ್ನೋ ಅನುಮಾನ ಶುರುವಾಗಿದೆ. ಸದ್ಯ ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡು, ಕಳ್ಳರಿಗೆ ಬಲೆ ಬೀಸಿದ್ದಾರೆ.
Top Stories
ಮುಂಡಗೋಡಿನಲ್ಲಿ ಇಂದು ಪೊಲೀಸ್ ಜನಸಂಪರ್ಕ ಸಭೆ..! ಎಸ್ಪಿ ಎಂ ನಾರಾಯಣ್ ರಿಂದ ಮಹತ್ವದ ಹೆಜ್ಜೆ..!!
ಹುಬ್ಬಳ್ಳಿಯಲ್ಲಿ ಮತ್ತೆ ಗುಂಡಿನ ಸದ್ದು, ಇಬ್ಬರು ನಟೋರಿಯಸ್ ದರೋಡೆಕೋರರ ಮೇಲೆ ಪೊಲೀಸರ ಫೈರಿಂಗ್..!
ಹಾಡಹಗಲೇ ಮುಂಡಗೋಡಿನಲ್ಲಿ ನಡೀತು ಬೆಚ್ಚಿ ಬೀಳಿಸೋ ಅಟ್ಯಾಕ್..! ಏನಾಗ್ತಿದೆ ಮುಂಡಗೋಡಿನಲ್ಲಿ..? ಯಾರ ಭಯವೂ ಇಲ್ಲದೇ ಹೋಯ್ತಾ..?
ಮೀನುಗಾರರ ಸಂಕಷ್ಟ ಪರಿಹಾರ ಮೊತ್ತ 10 ಲಕ್ಷಕ್ಕೆ ಏರಿಕೆ :ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಅಕ್ರಮವಾಗಿ ಇಂದೂರಿನಿಂದ ಸಾಗಿಸಲಾಗುತ್ತಿದ್ದ ಜಾನುವಾರುಗಳ ರಕ್ಷಣೆ, ಟಾಟಾ ಎಸ್ ಸಮೇತ ಆರೋಪಿ ವಶಕ್ಕೆ..!
ಯಲ್ಲಾಪುರದಲ್ಲಿ ನಡೀತು ಮತ್ತೊಂದು ಖತರ್ನಾಕ ರಾಬರಿ, ಖಡಕ್ಕ ಪೊಲೀಸರ ಏಟಿಗೆ ಕೆಲವೇ ಗಂಟೆಯಲ್ಲಿ ಆರೋಪಿಗಳು ಅಂದರ್..!
ಹಾನಗಲ್ ಮಾಜಿ ಶಾಸಕ ಮನೋಹರ್ ತಹಶೀಲ್ದಾರ್ ವಿಧಿವಶ..!
ಶಿಗ್ಗಾವಿ ಕಾಂಗ್ರೆಸ್ ಅಭ್ಯರ್ಥಿಯ ಮೇಲೆ ರೌಡಿಶೀಟ್ ಇಲ್ಲ: ಹಾವೇರಿ ಎಸ್ಪಿ ಅಂಶುಕುಮಾರ್ ಪ್ರಕಟಣೆ
ಹಳಿಯಾಳದಲ್ಲಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳೊಂದಿಗೆ ಡಿಸಿ ಸಭೆ: ಪ್ರಮುಖ ನಿರ್ಣಯಗಳು
ಸಲ್ಮಾನ್ ಖಾನ್ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಅಂದರ್
ತೆರವಾದ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ: ವೇಳಾಪಟ್ಟಿ ಪ್ರಕಟ, ನಾಳೆ ಬುಧವಾರದಿಂದಲೇ ಅಧಿಸೂಚನೆ..!
ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅರವಿಂದ್ ಸಾವು..! ಅಯ್ಯೋ ಈ ಸಾವು ನ್ಯಾಯವೇ..!
ಕೊಪ್ಪ (ಇಂದೂರು)ನಲ್ಲಿ ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡ ಪತಿ ಆತ್ಮಹತ್ಯೆಗೆ ಯತ್ನ..! ಗಂಭೀರ ಗಾಯ, ಕಿಮ್ಸ್ ಗೆ ದಾಖಲು..!
ಮುಂಡಗೋಡ ಹಳೂರಿನ ಹೋರಿ ಹಬ್ಬ ಅರ್ದಕ್ಕೆ ಬಂದ್..!
ಚಿಗಳ್ಳಿ ಹೋರಿಹಬ್ಬಕ್ಕೆ ಯುವಕ ಬಲಿ, ಹೋರಿ ತಿವಿದು 21 ವರ್ಷದ ಹುಡುಗನ ಭಯಾನಕ ಸಾವು.!
ಮುಂಡಗೋಡ ಪಟ್ಟಣದಲ್ಲೇ ಬೈಕ್ ಅಪಘಾತ, ಹಬ್ಬಕ್ಕೆಂದು ಬಂದಿದ್ದ ಹಳೂರಿನ ಯುವಕನಿಗೆ ಗಂಭೀರ ಗಾಯ..!
ಶಿಗ್ಗಾವಿ ಉಪಸಮರ: ಖಾದ್ರಿ ಮನವೊಲಿಸಲು ಜಮೀರ್ ಸರ್ಕಸ್: ಶ್ರೀನಿವಾಸ್ ಮಾನೆ ಜೊತೆ ಸಂಧಾನ..! ನಾಮಪತ್ರ ವಾಪಸ್ ಪಡೀತಾರಾ ಅಜ್ಜಂಫೀರ್..?
ಶಿಗ್ಗಾವಿ 19 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ; ಮಂಜುನಾಥ ಕುನ್ನೂರ ಸೇರಿ 7 ನಾಮಪತ್ರ ತಿರಸ್ಕೃತ
ಅಂದಲಗಿಯಲ್ಲಿ ರೈತನ ಮೇಲೆ ಕರಡಿ ದಾಳಿ, ಆಸ್ಪತ್ರೆಗೆ ದಾಖಲು..!
ಪಾಳಾದಲ್ಲಿ MSIL ವೈನ್ ಶಾಪ್ ದೋಚಿದ ಖದೀಮರು, ಗಾಂಧಿ ಜಯಂತಿಯಂದೇ ಅದೇಷ್ಟು ಎಣ್ಣೆ ಕದ್ರು ಗೊತ್ತಾ..?
ಮುಂಡಗೋಡಿನಲ್ಲಿ ಗಾಂಧಿ ಜಯಂತಿಯಂದು ಪುಣ್ಯದ ಕೆಲಸ ಮಾಡುತ್ತಿರೋ ಧನ್ಯತೆಯಿದೆ- ಸಚಿವ ಹೆಬ್ಬಾರ್
ಮುಂಡಗೋಡ: ಗಾಂಧಿ ಜಯಂತಿ ಹಾಗೂ ಶಾಸ್ತ್ರಿಯವರ ಜಯಂತಿಯಂದು ಮುಂಡಗೋಡಿನಲ್ಲಿ ಪುಣ್ಯದ ಕೆಲಸ ಮಾಡುತ್ತಿರುವ ಧನ್ಯತೆ ಇದೆ ಅಂತಾ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಮನತುಂಬಿ ಹೇಳಿದ್ರು. ಅವ್ರು ಇಂದು ಪಟ್ಟಣದ ಟೌನ್ ಹಾಲ್ ನಲ್ಲಿ ವಸತಿ ಇಲಾಖೆಯ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಪಟ್ಟಣದ ಗಾಂಧಿನಗರ, ಕಂಬಾರಗಟ್ಟಿ, ಲಂಬಾಣಿ ತಾಂಡಾ, ಅಂಬೇಡ್ಕರ್ ಬಡಾವಣೆಯ 250 ಅರ್ಹ ಫಲಾನುಭವಿಗಳಿಗೆ ಅಧಿಕೃತ ಹಕ್ಕು ಪತ್ರ ವಿತರಿಸಿ ಮಾತನಾಡುತ್ತಿದ್ದರು. ಮುಂಡಗೋಡಿನ ಬಡವರಿಗೆ ಒಳ್ಳೆಯ ದಿನಗಳು ಬಂದಿವೆ. ಕಳೆದ ಮೂವತ್ತು ವರ್ಷಗಳಿಂದ ಆಗದ ಕೆಲಸ ಮೊಟ್ಟ ಮೊದಲ ಬಾರಿಗೆ ಅನುಷ್ಠಾನಕ್ಕೆ ಬರುತ್ತಿದೆ. ಇಡೀ ಕ್ಷೇತ್ರದ ಹಳ್ಳಿಗಳಲ್ಲಿ ರಸ್ತೆಗಳ ಕಾಂಕ್ರೀಟಿಕರಣ ಮಾಡುತ್ತಿದ್ದೇವೆ. ಹಳ್ಳಿಗಳ ಅಭಿವೃದ್ಧಿ ಮಾಡುತ್ತಿದ್ದೇವೆ ಅಂತಾ ಸಚಿವ ಹೆಬ್ಬಾರ್ ಹೇಳಿದ್ರು. ಇನ್ನು ಬಡ ಕಾರ್ಮಿಕರ ಮಕ್ಕಳಿಗೆ ಐಎಎಸ್, ಕೆಎಎಸ್ ಸೇರಿದಂತೆ ಉನ್ನತ ಹುದ್ದೆಗಳನ್ನು ಪಡೆಯುವಂತಾಗಲು ಕಾರ್ಮಿಕರ ಮಕ್ಕಳಿಗೆ ಕೋಚಿಂಗ್ ವ್ಯವಸ್ಥೆ ಮಾಡಿದ್ದೇವೆ. ಕಾರ್ಮಿಕರ ಸಮಸ್ಯೆಗಳ ಬಗ್ಗೆ ಖುದ್ದು ಅರಿವು ಹೊಂದಿರೋ ನಾನು ಯಾರಿಗೂ ಬೇಡವಾಗಿದ್ದ...
ಶಿಗ್ಗಾವಿ ಯೋಧ ಪಂಜಾಬಿನಲ್ಲಿ ಹುತಾತ್ಮ, ಶೀಲವಂತರ ಸೋಮಾಪುರದಲ್ಲಿ ಮಡುಗಟ್ಟಿದ ಶೋಕ..!
ಶಿಗ್ಗಾವಿ; ತಾಲೂಕಿನ ಶೀಲವಂತ ಸೋಮಾಪುರ ಗ್ರಾಮದ ಯೋಧ ಪಂಜಾಬಿನಲ್ಲಿ ಹುತಾತ್ಮರಾಗಿದ್ದಾರೆ. ಶಿವರಾಜ್ ಗದಿಗೆಪ್ಪ ಗಂಗಮ್ಮನವರ್ (23) ಎಂಬುವ ಯೋಧ ಹುತಾತ್ಮರಾಗಿದ್ದಾರೆ. ಪಂಜಾಬಿನ ಬಟಿಂಡಾ ದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಅಪಘಾತವಾಗಿ ಮರಣ ಹೊಂದಿದ್ದಾರೆ ಅಂತಾ ಮಾಹಿತಿ ಲಭ್ಯವಾಗಿದೆ. ಅಂದಹಾಗೆ ಯೋಧ ಶಿವರಾಜ್, 2016ರಲ್ಲಿ ಇಂಡಿಯನ್ ಆರ್ಮಿಗೆ ಆಯ್ಕೆಯಾಗಿದ್ದರು. ಇನ್ನು ಶಿಗ್ಗಾವಿ ತಾಲೂಕಿನ ಶೀಲವಂತ ಸೋಮಪುರ ಗ್ರಾಮದಲ್ಲಿ ಮೃತನ ಮನೆಯಲ್ಲಿ ತಂದೆ ಗದಿಗೆಪ್ಪ, ತಾಯಿ ಗೌರಮ್ಮ, 02 ಜನ ಹಿರಿಯ ಸಹೋದರರು (ಒಬ್ಬ ಶಿಕ್ಷಕ,ಇನ್ನೊಬ್ಬರು ವ್ಯವಸಾಯ ಮಾಡುತ್ತಿರುತ್ತಾರೆ) ಹಾಗೂ ಓರ್ವ ಸಹೋದರಿಯಿದ್ದಾರೆ. ಮೃತ ಸೈನಿಕ ಕೊನೆಯದಾಗಿ ಆಗಸ್ಟ್ ತಿಂಗಳಲ್ಲಿ ತಮ್ಮ ಗ್ರಾಮಕ್ಕೆ 30 ದಿನ ರಜೆ ಬಂದು ವಾಪಸ್ ಕರ್ತವ್ಯಕ್ಕೆ ಹೋಗಿರುತ್ತಾರೆ. ಹುತಾತ್ಮ ಯೋಧನ ಪಾರ್ಥೀವ ಶರೀರ ಇಂದು ರಾತ್ರಿ ಅಥವಾ ಬೆಳಿಗ್ಗೆ ಸ್ವಗ್ರಾಮಕ್ಕೆ ಆಗಮಿಸೋ ಸಾಧ್ಯತೆಯಿದೆ ಎನ್ನಲಾಗಿದೆ. ಸದ್ಯ ಯೋಧನ ಸಾವಿನ ಸುದ್ದಿ ತಿಳಿದು ಶೀಲವಂತರ ಸೋಮಾಪುರದಲ್ಲಿ ನೀರವ ಮೌನ ಆವರಿಸಿದೆ.
ಸಿಪಿಐ ವಾಹನ ಚಾಲಕ ಪೊಲೀಸಪ್ಪ ಲಂಚ ಸ್ವೀಕರಿಸುವಾಗಲೇ ಬಲೆಗೆ, “ಲೋಕಾ” ಕೈಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕ ಇಬ್ಬರು..!
ಕಲಬುರಗಿ: ಸಿನೀಮಯ ರೀತಿಯಲ್ಲಿ ಚೇಸ್ ಮಾಡಿ ಲಂಚ ಸ್ವೀಕರಿಸುತ್ತಿರುವ ಇಬ್ಬರು ಪೇದೆಗಳನ್ನ ಲೋಕಾಯುಕ್ತ ತಂಡ ಹಿಡಿದಿರೋ ಘಟನೆ ಕಲಬುರಗಿಯಲ್ಲಿ ನಡೆದಿದೆ.. ಅಕ್ರಮ ಮರಳು ಸಾಗಾಟ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಜೇವರ್ಗಿ ಠಾಣೆ ಅವಣ್ಣ ಮತ್ತು ಶಿವರಾಯ ಈ ಇಬ್ಬರೂ ಪೇದೆಗಳು ಲೋಕಾ ತಂಡಕ್ಕೆ ಲಾಕ್ ಆಗಿದ್ದಾರೆ. ಶಹಪುರದ ಅಖಿಲ್ ಎಂಬುವವರು ನೀಡಿದ ದೂರಿನ ಮೇರೆಗೆ ಫೀಲ್ಡಿಗಿಳಿದ ಲೋಕಾ ಟೀಂ ದಾಳಿ ಮಾಡಿದೆ. ಹೈವೇ ರೋಡಲ್ಲಿ ವೆಹಿಕಲ್ ಅಡ್ಡಗಟ್ಟಿ ಟ್ರಾಪ್ ಮಾಡಿದ ಹಣದ ಸಮೇತ ಒಬ್ಬ ಹೆಡ್ ಕಾನ್ಟೇಬಲ್ ಮತ್ತೊಬ್ಬ ಪೋಲೀಸ್ ಜೀಪ್ ಚಾಲಕ ಒಟ್ಟು ಇಬ್ಬರನ್ನ ಬಂಧಿಸಿ ಎಫ್ಐಆರ್ ಮಾಡಿದ್ದಾರೆ. ಮರಳು ವ್ಯವಹಾರದಲ್ಲಿ ಲಂಚವಾಗಿ 30 ಸಾವಿರ ಸ್ವೀಕರಿಸುತ್ತಿರುವಾಗ ಜೇವರ್ಗಿಯಲ್ಲಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ತಂಡ ದಾಳಿ ನಡೆಸಿ ಪೊಲೀಸ್ ಪೇದೆ ಶಿವರಾಯ, ಜೇವರ್ಗಿ ಸಿಪಿಐ ವಾಹನ ಚಾಲಕ ಅವ್ವಣ್ಣ ಇವರನ್ನು ತಕ್ಷಣ ಸ್ಥಳದಲ್ಲೇ ವಶಕ್ಕೆ ಪಡೆದಿರುವ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಸಿಪಿಐ ಅವರ ಹೆಸರು ಬಂಧಿತರಿಬ್ಬರೂ ಪ್ರಸ್ತಾಪಿಸಿದ್ದರಿಂದ...
ಅತ್ತಿವೇರಿ, ಗೌಳಿದಡ್ಡಿ ಗ್ರಾಮಗಳಿಗೆ ಬಸ್ ವ್ಯವಸ್ಥೆಗೆ ಆಗ್ರಹ, ಮುಂಡಗೋಡಿನಲ್ಲಿ ವಿದ್ಯಾರ್ಥಿಗಳು, ಗ್ರಾಮಸ್ಥರ ಪ್ರತಿಭಟನೆ..!
ಮುಂಡಗೋಡ: ತಾಲೂಕಿನಲ್ಲಿ ಇದುವರೆಗೂ ಬಸ್ ಮುಖವನ್ನೇ ಕಾಣದ ಅತ್ತಿವೇರಿ, ಗೌಳಿದಡ್ಡಿ ಗ್ರಾಮಗಳ ವಿದ್ಯಾರ್ಥಿಗಳು, ಗ್ರಾಮಸ್ಥರು ಇಂದು ಪ್ರತಿಭಟನೆಗಿಳಿದಿದ್ದಾರೆ. ನಮಗೆ ಬಸ್ ಬೇಕೇ ಬೇಕು ಅಂತಾ ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ರಸ್ತೆ ತಡೆದು ಪ್ರತಿಭಟಿಸಿದ್ದಾರೆ. ಅಂದಹಾಗೆ, ಹುನಗುಂದ ಗ್ರಾಮ ಪಂಚಾಯತಿ ವ್ಯಾಪ್ತಿಯ ಅತ್ತಿವೇರಿ, ಗೌಳಿದಡ್ಡಿ ಗ್ರಾಮಗಳಿಗೆ ಇದುವರೆಗೂ ಬಸ್ ಸೌಲಭ್ಯ ಸಿಕ್ಕೇ ಇಲ್ಲ. ಹೀಗಾಗಿ, ಇಲ್ಲಿ ನಿತ್ಯವೂ ನೂರಾರು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳಬೇಕು ಅಂದ್ರೆ ಏನಿಲ್ಲವೆಂದರೂ ನಾಲ್ಕೈದು ಕೀ.ಮಿ ನಡೆದುಕೊಂಡೇ ಬರಬೇಕು. ಅಲ್ದೆ ಗ್ರಾಮಸ್ಥರು ಕೂಡ ನಿತ್ಯವೂ ಹುನಗುಂದ ಗ್ರಾಮಕ್ಕೆ ಬಂದು ಬಸ್ ಹಿಡಿಯಬೇಕು. ಇನ್ನು ಮಳೆಗಾಲದಲ್ಲಂತೂ ಈ ಭಾಗದ ಜನ್ರು, ಗ್ರಾಮದಿಂದ ತಾಲೂಕಾ ಕೇಂದ್ರಕ್ಕೆ ಬರಲು ಪರದಾಡುವಂತಾಗುತ್ತದೆ. ಹೀಗಾಗಿ ತಕ್ಷಣವೇ ನಮಗೆ ಬಸ್ ವ್ಯವಸ್ಥೆ ಮಾಡಿ ಅಂತಾ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ಕೈಗೊಂಡಿದ್ದಾರೆ. ವಿ.ಎಸ್.ಪಾಟೀಲ್ ಭೇಟಿ..! ಇನ್ನು ಪ್ರತಿಭಟನಾ ಸ್ಥಳಕ್ಕೆ ಮಾಜಿ ಶಾಸಕ, ಮಾಜಿ NWKSRTC ಅಧ್ಯಕ್ಷ ವಿ.ಎಸ್.ಪಾಟೀಲ್ ಭೇಟಿ ನೀಡಿದ್ರು. ಪ್ರತಿಭಟನಾ ನಿರತರ ಜೊತೆ...
ಶಿರಸಿಯಲ್ಲಿ NIA ದಾಳಿ, ಓರ್ವ SDPI ಮುಖಂಡನ ಬಂಧನ, ಬಂಧಿತ ತನ್ನ ಮನೆಯ ಗೋಡೆಯ ಮೇಲೆ ಏನೇಲ್ಲ ಬರೆದಿದ್ದ ಗೊತ್ತಾ..?
ಶಿರಸಿ: ರಾಜ್ಯದ ವಿವಿಧೆಡೆ ರಾಷ್ಟ್ರೀಯ ತನಿಖಾ ಪಡೆಗಳಿಂದ ದಾಳಿಯಾಗಿದೆ. ಈ ನಡುವೆ ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲೂ ಎನ್ಐಎ ಹಾಗೂ ಐಬಿ ತಂಡದಿಂದ ದಾಳಿ ನಡೆದಿದೆ. ಪರಿಣಾಮ, ಶಿರಸಿ ತಾಲೂಕಿನ ಟಿಪ್ಪು ನಗರದಲ್ಲಿ ಸ್ಥಳೀಯ ಪೊಲೀಸರ ಸಹಾಯದಿಂದ ಓರ್ವ ಎಸ್ಡಿಪಿಐ ಮುಖಂಡನನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಎಸ್ಡಿಪಿಐ ಮುಖಂಡ ಹಝೀಝ್ ಅಬ್ದುಲ್ ಶುಕುರ್ ಹೊನ್ನಾವರ್ (45) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಬೆಳಿಗ್ಗೆ 3.30ರಿಂದಲೇ ಹಝೀಝ್ ಮನೆಯ ಮೇಲೆ ದಾಳಿ ನಡೆಸಲು ಪೊಲೀಸರ ದಂಡೇ ನೆರೆದಿತ್ತು ಆದ್ರೆ ಬೆಳ್ಳಂ ಬೆಳಿಗ್ಗೆ ಸುಮಾರು 6 ಗಂಟೆಯ ವೇಳೆಗೆ ಅಝೀಝ್ ಅಬ್ದುಲ್ ಮನೆಗೆ ಅಧಿಕಾರಿಗಳ ತಂಡ ಹೊಕ್ಕಿದೆ. ಒಂದು ಲ್ಯಾಪ್ ಟಾಪ್, 2ಮೊಬೈಲ್, ಪುಸ್ತಕ ಹಾಗೂ ಒಂದು ಸಿಡಿ ಜಪ್ತಿ ಮಾಡಲಾಗಿದೆ. ಪತ್ನಿ ಹಾಗೂ ಮೂವರು ಮಕ್ಕಳ ಜೊತೆ ವಾಸಿಸುತ್ತಿದ್ದ ಅಝೀಝ್ ನನ್ನು ವಶಕ್ಕೆ ಪಡೆಯಲಾಗಿದೆ. ಅಂದಹಾಗೆ, ಅಝೀಝ್ ಸಹೋದರ ಎಸ್ಡಿಪಿಐ ಪ್ರಾಂತೀಯ ಅಧ್ಯಕ್ಷನಾಗಿರುವ ಮೌಸಿನ್ ಅಬ್ದುಲ್ ಶುಕುರ್ ಹೊನ್ನಾವರ ಎಂಬಾತನನ್ನು ವಶಕ್ಕೆ ಪಡೆಯಲು ಯೋಜನೆ ಹಾಕಲಾಗಿತ್ತು....
ಬರಗೆಟ್ಟವನ ಲಂಚದಾಸೆಗೆ ಬೀದಿಗೆ ಬಿದ್ಲಾ ಆ ವೃದ್ದೆ..? ಅಸಲು, ಆ ವೃದ್ದೆಗೆ ಆಗಿರೋ ಅನ್ಯಾಯ ಎಂಥಾದ್ದು ಗೊತ್ತಾ..?
ಮುಂಡಗೋಡ: ಪ್ರಿಯ ವೀಕ್ಷಕರೇ, ನಿನ್ನೆ ನಿಮಗೆ ಮುಂಡಗೋಡ ತಾಲೂಕಿನಲ್ಲಿ ಬಡವ್ರಿಗೆ ಹಂಚಿಕೆಯಾಗೋ ಮನೆಗಳಲ್ಲಿ ನಡೆಯುತ್ತಿರೋ ಎತ್ತುವಳಿ ಪುರಾಣದ ಬಗ್ಗೆ ಹೇಳಿದ್ವಿ. ನೊಂದ ಸಂತ್ರಸ್ಥ ಕುಟುಂಬಗಳ ಆರ್ತನಾದ ಕೇಳಿಸಿದ್ವಿ. ಇವತ್ತೂ ಕೂಡ ಅದರದ್ದೇ ಮುಂದುವರಿದ ಭಾಗವಾಗಿ ಅದೊಂದು ಮನಕಲುಕುವ ಹಕೀಕತ್ತು ತಮ್ಮ ಮುಂದೆ ಇಡ್ತಿದಿವಿ. ರೊಕ್ಕ ಗಳಿಸಲೆಂದೇ ಬಾಯ್ತೆರೆದು ಕೂತಿರೋ, ಮನುಷ್ಯತ್ವವನ್ನೇ ಮರೆತಿರೋ ಕೆಲವು ಸರ್ಕಾರಿ ಸಿಬ್ಬಂದಿಗಳು ಹೇಗೇಲ್ಲ ಅಮಾನುಷವಾಗಿ ನಡೆದುಕೊಳ್ತಾರೆ ಅನ್ನೋದನ್ನ ಇವತ್ತು ಹೇಳ್ತಿವಿ. ವೇದಿಕೆಯಷ್ಟೇ..! ಯಸ್, ನಾವೀಗ ಮುಂಡಗೋಡಿನ ತಹಶೀಲ್ದಾರ್ ಕಚೇರಿಯ ಅವನೊಬ್ಬನ ಗತ್ತು, ಗಮ್ಮತ್ತುಗಳು ಅದೇಷ್ಟು ಬಡವರಿಗೆ ಮಾರಕವಾಗಿದೆ ಅನ್ನೋದನ್ನ ಹೇಳೋಕೆ ಹೊರಟಿದ್ದಿವಿ. ಅಸಲು, ಇಲ್ಲಿ ನಾವು ಏನನ್ನೂ ಹೇಳ್ತಿಲ್ಲ. ಬದಲಾಗಿ ನೊಂದವರೇ ಅಸಲೀ ಹಕೀಕತ್ತುಗಳನ್ನು ಹೇಳಿಕೊಂಡಿದ್ದಾರೆ. ಇಲ್ಲಿ ನಮ್ಮದೇನೂ ಇಲ್ಲ. ನೊಂದವರು ಆಡಿರೋ ನೋವಿನ ಕಹಾನಿಗಳನ್ನೇಲ್ಲ ತಮ್ಮ ಮುಂದೆ ಯಥಾವತ್ತಾಗಿ ತೆರೆದಿಡಲು ನಾವು ಜಸ್ಟ್ ವೇದಿಕೆಯನ್ನಷ್ಟೇ ಒದಗಿಸಿದ್ದಿವಿ. ಕಳಕಳಿ..! ನಮ್ಮ ಹೆಮ್ಮೆಯ ದಕ್ಷ ತಹಶೀಲ್ದಾರ್ ಶಂಕರ್ ಗೌಡಿಯವರೇ, ಇದನ್ನೇಲ್ಲ ನೋಡಿದ ಮೇಲೆ ತಾವು ತಮ್ಮ...
ಮುಂಡಗೋಡ ತಾಲೂಕಿನಲ್ಲಿ ಮನೆ ಕಳೆದುಕೊಂಡ ಬಡವ್ರಿಗೆ ಲಂಚಬಾಕರದ್ದೇ ಕಾಟ, ಸಚಿವರ ಪಿಎ ಹೆಸರಲ್ಲೂ ವಸೂಲಿ..? ಹಿಂಗಾದ್ರೆ ಹೆಂಗೆ ಗುರೂ..?
ಮುಂಡಗೋಡ: ತಾಲೂಕಿನಲ್ಲಿ ಮಹಾಮಳೆ ಅನ್ನೋದು ಅದೇಷ್ಟೋ ಬಡವರನ್ನು ಬೀದಿಗೆ ತಂದಿದೆ. ಗ್ರಾಮೀಣ ಭಾಗದಲ್ಲಿ ಮಹಾಮಳೆಯಿಂದ ಅದೇಷ್ಟೋ ಬಡಕುಟುಂಬಗಳು ಸೂರು ಕಳೆದುಕೊಂಡು ಅಕ್ಷರಶಃ ನಲುಗಿ ಹೋಗಿವೆ. ಹೀಗಿದ್ದಾಗ, ಸರ್ಕಾರ ಅಂತಹ ಕುಟುಂಬಗಳಿಗೆ ಆಸರೆಯಾಗಲು, ಪರಿಹಾರದ ರೂಪದಲ್ಲಿ ಮನೆಕಳೆದುಕೊಂಡವರಿಗೆ ಮನೆ ಕಟ್ಟಿಸಿಕೊಳ್ಳಲು ನೆರವು ನೀಡ್ತಿದೆ. ಸಂಪೂರ್ಣವಾಗಿ ಮನೆ ಕಳೆದುಕೊಂಡ ಕುಟುಂಬಗಳಿಗೆ 5 ಲಕ್ಷ ರೂಪಾಯಿ ಹಣ ಕಂತುಗಳ ಮೂಲಕ ಬಿಡುಗಡೆ ಮಾಡ್ತಿದೆ. ಆದ್ರೆ, ಹೀಗೆ ಬರುವ ಹಣದಲ್ಲಿ ಕೆಲವು ಬ್ರಷ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪರಿಹಾರದ ಹಣದಲ್ಲೂ ವ್ಯವಹಾರಕ್ಕಿಳಿದಿದ್ದಾರೆ ಅನ್ನೋದೇ ಬಹುದೊಡ್ಡ ದುರಂತ, ನಾಚಿಗ್ಗೇಡು..! ದಕ್ಷ ತಹಶೀಲ್ದಾರ್..! ಅಸಲು, ನಾವಿಲ್ಲಿ ಒಂದು ವಿಷಯ ತಮಗೇಲ್ಲ ಹೇಳಲೇ ಬೇಕಿದೆ. ಮುಂಡಗೋಡ ತಾಲೂಕಿಗೆ ತಹಶೀಲ್ದಾರ್ ಆಗಿ ಬಂದಿರೋ ಶಂಕರ್ ಗೌಡಿ ನಿಜಕ್ಕೂ ಅಪ್ಪಟ ದಕ್ಷ ಅಧಿಕಾರಿ, ಯಾವತ್ತೂ ತಮ್ಮ ಕಚೇರಿಯಲ್ಲಿ ಬ್ರಷ್ಟರಿಗೆ ಜಾಗವಿಲ್ಲ ಅಂತಾ ಖಡಾಖಂಡಿತ ಆಡಳಿತ ನಡೆಸ್ತಿರೋರು ಇವ್ರು. ಹೀಗಾಗಿನೇ ಇಡೀ ತಾಲೂಕಿನ ಜನ ನೂತನ ತಹಶೀಲ್ದಾರರ ಮೇಲೆ ಸಾಕಷ್ಟು ಭರವಸೆ,...
ಮುಂಡಗೋಡಿನಲ್ಲಿ ವೆಲ್ಡಿಂಗ್ ವರ್ಕ್ ಶಾಪ್ ದೋಚಿದ ಕಳ್ಳರು, 1.30 ಲಕ್ಷ ಮೌಲ್ಯದ ವಸ್ತುಗಳ ಕಳ್ಳತನ..!
ಮುಂಡಗೋಡ: ಪಟ್ಟಣದ ಶಿರಸಿ ರಸ್ತೆಯ ವೆಲ್ಡಿಂಗ್ ವರ್ಕ್ ಶಾಪ್ ನಲ್ಲಿ ಕಳ್ಳತನವಾಗಿದೆ. ಒಟ್ಟೂ 1 ಲಕ್ಷ 30 ಸಾವಿರ ಮೌಲ್ಯದ ಕಬ್ಬಿಣದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ ಖದೀಮರು. ವೆಲ್ಡಿಂಗ್ ವರ್ಕ್ ಶಾಪ್ ನ ಮಾಲೀಕ ಎಜಾಜ್ ನವಾಜ ಮಹ್ಮದ್ ರಫೀಕ ನರೇಗಲ್ ಎಂಬುವವರು ಮುಂಡಗೋಡ ಪೊಲೀಸ್ ಠಾಣೆಗೆ ಈ ಕುರಿತು ದೂರು ನೀಡಿದ್ದಾರೆ. ಸೆಪ್ಟೆಂಬರ್ 16 ರಂದು ರಾತ್ರಿ ಘಟನೆ ನಡೆದಿದ್ದು, ನವರಂಗ್ ವೆಲ್ಡಿಂಗ ವರ್ಕ್ಸ್ ಶಾಪ್ ನ ಮುಂದೆ ಇಟ್ಟಿದ್ದ ಕಬ್ಬಿಣದ ಟೇಬಲ್ಲುಗಳು, ದೊಡ್ಡದಾದ ಕಬ್ಬಿಣದ ಗೇಟು, ಸಣ್ಣ ಗೇಟುಗಳು, ಕಬ್ಬಿಣದ ಸಾದಾ ಬೀಮ್ ಗಳು, ಕಬ್ಬಿಣದ ಟ್ರೆಸ್ಗಳು, ತಯಾರಿಸುವ ಹಂತದಲ್ಲಿದ್ದ ದೂಡುವ ಗಾಡಿಗಳು, ಕಬ್ಬಿಣದ ಏಣಿಗಳು, ಕಬ್ಬಿಣದ ಲಾಡರಗಳು ಸೇರೊದಂತೆ ಇತರೇ ಕೆಲವು ಕಬ್ಬಿಣದ ಸಮಾನುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಇವುಗಳ ಒಟ್ಟೂ ಮೌಲ್ಯ ಸುಮಾರು 1,30,000/- ಆಗಿದೆ ಅಂತಾ ಅಂದಾಜಿಸಲಾಗಿದ್ದು. ಠಾಣೆಗೆ ಸಲ್ಲಿಸಿರೋ ದೂರಿನಲ್ಲಿ ವಿವರಿಸಿದ್ದಾರೆ. ಮುಂಡಗೋಡ ಪೊಲೀಸರು ಸದ್ಯ ದೂರು ದಾಖಲಿಸಿಕೊಂಡು ಕಳ್ಳರ ಹೆಡೆಮುರಿ ಕಟ್ಟಲು ಬಲೆ...
ಪಂಚಮಸಾಲಿ 2ಎ ಮೀಸಲಾತಿ ವಿಚಾರ: ಸೆ.20 ರಂದು ಶಿಗ್ಗಾವಿ ಸಿಎಂ ನಿವಾಸದ ಎದುರು ಹಕ್ಕೊತ್ತಾಯ- ಮೃತ್ಯುಂಜಯ ಶ್ರೀ ಘೋಷಣೆ..!
ಹಾವೇರಿ: ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿ ನೀಡುವ ಹಕ್ಕೊತ್ತಾಯ ಹಿನ್ನಲೆಯಲ್ಲಿ, ಹಾವೇರಿಯಲ್ಲಿ ಜಯಮೃತ್ಯುಂಜಯ ಸ್ವಾಮೀಜಿ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಇದೆ ಸೆಪ್ಟೆಂಬರ್ 20 ರಂದು ಶಿಗ್ಗಾವಿಯ ಸಿಎಂ ನಿವಾಸದ ಎದುರು ಹಕ್ಕೊತ್ತಾಯ ಪ್ರತಿಭಟನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಶಿಗ್ಗಾವಿಯ ಚನ್ನಮ್ಮ ವೃತ್ತದಲ್ಲಿ ಮಾಲಾರ್ಪಾಣೆ ಮಾಡುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಿ, ಚನ್ನಮ್ಮ ವೃತ್ತದಿಂದ ಸಿಎಂ ನಿವಾಸದ ವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯುತ್ತದೆ. ಪ್ರತಿಭಟನೆಯಲ್ಲಿ 1 ಲಕ್ಷಕ್ಕೂ ಅಧಿಕ ಸಮಾಜದ ಬಂಧುಗಳು ಭಾಗಿಯಾಗಲಿದ್ದಾರೆ. ಸದನದ ಒಳಗೆ, ಹೊರಗೆ..! ಇನ್ನು ಸದನದ ಒಳಗೆ ಪಂಚಮಸಾಲಿ ಸಮಾಜ ಶಾಸಕರು, ಸಚಿವರು ಹಕ್ಕೋತ್ತಾಯ ಮಾಡಿದರೆ, ಹೊರಗೆ ಸಮಾಜದ ಬಂಧುಗಳ ಪ್ರತಿಭಟನೆ ನಡೆಸಲಿದ್ದಾರೆ. ಯಾವುದೇ ಕಾರಣಕ್ಕೂ ಪ್ರತಿಭಟನಾ ಹಾದಿಯಿಂದ ಹಿಂದೆ ಸರಿಯಲ್ಲಾ ಅಂತಾ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ಪಂಚಮಸಾಲಿಗಳಿಗೆ ಸಿಎಂ ದ್ರೋಹ..! ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಾಕಷ್ಟು ಸಮಯವನ್ನು ತೆಗೆದುಕೊಂಡು ಹೋರಾಟದ ಕಾಲ ಹರಣ ಮಾಡಿದ್ದಾರೆ. ಸಿಎಂ ಅವರು ಪದೇ...