ಪಾಳಾ ಸಮೀಪ ಕಾರು ದುರಂತ ಕೇಸ್: ಕೊನೆಗೂ ಫಲಿಸಲಿಲ್ಲ ಚಿಕಿತ್ಸೆ.. ಗಾಯಗೊಂಡಿದ್ದ ಶಂಕರಯ್ಯಾ ಸಾವು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ..!

ಮುಂಡಗೋಡ ತಾಲೂಕಿನ ಪಾಳಾ ಸಮೀಪ ಬುಧವಾರ ರಾತ್ರಿ ನಡೆದಿದ್ದ ಭೀಕರ ಅಪಘಾತದಲ್ಲಿ ಗಾಯಗೊಂಡಿದ್ದ ಮತ್ತೋರ್ವ ಯುವಕ ಈಗಷ್ಟೇ ಮೃತಪಟ್ಟಿದ್ದಾನೆ. ಈ ಮೂಲಕ ಅಪಘಾತದಲ್ಲಿ ಸಾವಿನ ಸಂಖ್ಯೆ ಮೂರಕ್ಕೆ ಏರಿದಂತಾಗಿದೆ. ಮತ್ತಿಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ.

ಶಂಕರಯ್ಯ ಮಲ್ಲಯ್ಯ ಹಿರೇಮಠ್, ಮೃತಪಟ್ಟ ಮತ್ತೋರ್ವ ಯುವಕನಾಗಿದ್ದು, ನಿನ್ನೆ ರಾತ್ರಿ ಪಾಳಾ ಜಾತ್ರೆ ಮುಗಿಸಿ ಮುಂಡಗೋಡಿಗೆ ವಾಪಸ್ ಬರುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಐ20 ಕಾರು ಅಪಘಾತಕ್ಕೀಡಾಗಿ ಸ್ಥಳದಲ್ಲೇ ಮುಂಡಗೋಡಿನ ಇಬ್ಬರು ಸಹೋದರರು ಮೃತಪಟ್ಟಿದ್ದರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶಂಕರ್ ಹಿರೇಮಠನನ್ನು ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಅಂತಾ ಮಾಹಿತಿ ಲಭ್ಯವಾಗಿದೆ.

ಅಪಘಾತದ ಭೀಕರತೆ..!
ಇನ್ನು ಪಾಳಾ ಸಮೀಪದ ಕಾರು ಅಪಘಾತ ನಿಜಕ್ಕೂ ಭೀಕರವಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನುಜ್ಜು ಗುಜ್ಜಾಗಿದೆ. ಜಾತ್ರೆಯ ಸಡಗರಕ್ಕೆ ತೆರಳಿದ್ದ ಅವಳೀ ಸಹೋದರರಾದ ಗಣೇಶ್ ಗಾಣಿಗೇರ್ ಹಾಗೂ ಮಹೇಶ್ ಗಾಣಿಗೇರ್ ಎಂಬುವ ಇಬ್ಬರನ್ನು ಈ ಅಪಘಾತ ಬಲಿ ಪಡೆಯುವುದಲ್ಲದೇ, ಶಂಕರಯ್ಯ ಅನ್ನೋ ಮತ್ತೋರ್ವ ಯುವಕನ ಪ್ರಾಣವನ್ನೂ ಈಗ ಬಲಿ ಪಡೆದಿದೆ.

ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!