ಶಿಗ್ಗಾವಿ ವಾರ್ಡ್ ನಂ.21 ರ ಜಯನಗರದಲ್ಲಿ ಸಮಸ್ಯೆಗಳದ್ದೇ ಕಾರುಬಾರು, ಅಧ್ಯಕ್ಷೆ ಮೇಡಮ್ಮು ಕೊಂಚ ಕಣ್ಣೆತ್ತಿ ನೋಡಿ ತಾಯಿ..!

ಶಿಗ್ಗಾವಿ: ಪುರಸಭೆ, ವಾರ್ಡ್‌ ನಂ.21 ರ ಜನ ರೋಸಿ ಹೋಗಿದ್ದಾರೆ. ಇಲ್ಲಿ ಆಡಳಿತ ವ್ಯವಸ್ಥೆ ಅನ್ನೋದು ಇದೆಯೊ ಇಲ್ಲವೋ ಅಂತಾ ನಿತ್ಯವೂ ಹಿಡಿಶಾಪ ಹಾಕ್ತಿದಾರೆ. ಯಾಕಂದ್ರೆ, ಈ ವಾರ್ಡಿನ ರಸ್ತೆಗಳು ಇವತ್ತು ನಡೆದಾಡಲೂ ಆಗದ ಸ್ಥಿತಿಯಲ್ಲಿವೆ. ಚರಂಡಿ ವ್ಯವಸ್ಥೆ ಅನ್ನೋದು ಗಬ್ಬೇದ್ದು ಹೋಗಿದೆ. ಈ ಕಾರಣಕ್ಕಾಗಿ ಈ ವಾರ್ಡಿನ ಜನರಿಗೆ ಸಾಂಕ್ರಾಮಿಕ ರೋಗಗಳ ಭೀತಿ ಶುರುವಾಗಿದೆ. ಹೀಗಾಗಿನೇ ಇಲ್ಲಿನ ಜನ ನಮ್ಮ ಕಡೆ ಗಮನವಹಿಸಿ ಅಂತಾ ಪುರಸಭೆಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಅಂದಹಾಗೆ, ಇದು ಸಿಎಂ ತವರುಕ್ಷೇತ್ರ..!
ನಿಜ, ಶಿಗ್ಗಾವಿಯ ಜಯನಗರದಲ್ಲಿ ಒಳಚರಂಡಿ ಹಾಗೂ ಹಾಳಾದ ರಸ್ತೆಗಳನ್ನು ನೋಡಿದ್ರೆ ಎಂಥವರಿಗೂ ಅಸಹ್ಯ ಅನಿಸತ್ತೆ. ಇಲ್ಲಿನ ಪುರಸಭೆಯ ಅಧಿಕಾರಿಗಳು ಅದೇನು ಕಡೆದು ಗುಡ್ಡೆ ಹಾಕ್ತಿದಾರೋ ಒಂದೂ ಅರ್ಥ ಆಗ್ತಿಲ್ಲ. ಈ ವಾರ್ಡಿನ ಜನರಿಗೆ ಮೂಲಭೂತ ಸಮಸ್ಯೆಗಳದ್ದೇ ಹಾಸುಹೊಕ್ಕಾಗಿದೆ. ಇನ್ನು ಈ ವಾರ್ಡಿನ ಜನಪ್ರತಿನಿಧಿಗಳು ಅದ್ಯಾಕೆ ಈ ಬಗ್ಗೆ ಗಮನ ಹರಿಸ್ತಿಲ್ವೋ ಯಾರಿಗೂ ತಿಳಿದಿಲ್ಲ.

ರೋಗಗಳ ಕಾರ್ಖಾನೆ..!
ಅಂದಹಾಗೆ, ಶಿಗ್ಗಾವಿ ಪುರಸಭೆ ವ್ಯಾಪ್ತಿಯಲ್ಲಿ ಬರುವ 21ನೇ ವಾರ್ಡಿನ ಜಯನಗರದಲ್ಲಿ  1998 ರಲ್ಲಿ ನಿರ್ಮಿಸಲಾದ ರಸ್ತೆ ಹಾಗೂ ಒಳಪರಂಡಿಗಳು ತೀರ ಹದಗೆಟ್ಟಿವೆ, ಒಳಚರಂಡಿ ತ್ಯಾಜ್ಯ ಸರಾಗವಾಗಿ ಮುಂದೆ ಹೋಗದೆ ಸೊಳ್ಳೆಗಳು ಮತ್ತು ರೋಗಕಾರಕ ಜೀವಿಗಳ ಉತ್ಪಾದನಾ ತಾಣವಾಗಿದೆ. ಅಲ್ಲಿಂದ ಇಲ್ಲಿವರೆಗೂ ಯಾವೊಬ್ಬ ಅಧಿಕಾರಿಗಳೂ ಈ ಕಡೆ ತಿರುಗಿಯೂ ನೋಡಿಲ್ಲವಂತೆ.

ಎಷ್ಟು ಬಾರಿ ಮನವಿ ನೀಡೋದು ಸ್ವಾಮಿ..?
ಹೀಗಾಗಿ, ಇಲ್ಲಿನ ನಿವಾಸಿಗಳಿಗೆ ಮತ್ತು ಚಿಕ್ಕ ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳು ಬೀರುತ್ತಿವೆ. ಇದಕ್ಕೆ ಸಂಬಂಧಿಸಿದಂತೆ ಈ ಹಿಂದೆ ಹಲವು ಬಾರಿ ಸಂಬಂಧಿಸಿದ ಈ ವಾರ್ಡಿನ ಸದಸ್ಯರಿಗೆ ಹಾಗೂ ಪುರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಅವ್ರು ಕ್ಯಾರೇ ಅಂದಿಲ್ಲ. ಹೀಗಾಗಿ, ಅದೇಷ್ಟು ಅಂತಾ ಮನವಿ ನೀಡೋದು ಸ್ವಾಮಿ..? ಅಂತಾ ಪ್ರಶ್ನಿಸ್ತಿದಾರೆ ಇಲ್ಲಿನ ನಿವಾಸಿಗಳು.

ರಸ್ತೆಗಳ ಪಾಡು..!
ಇನ್ನು, ರಾಷ್ಟ್ರೀಯ ಹೆದ್ದಾರಿ ಎನ್. ಹೆಚ್‌-4 ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಎನ್. ಹೆಚ್-4, ರಸ್ತೆಗೆ ಹೊಂದಿಕೊಂಡ ದೊಡ್ಡ ಕಾಲುವೆಗಳು ಕಾಮಗಾರಿ 21ನೇ ವಾರ್ಡಿನ 1ನೇ ಮತ್ತು 2ನೇ ಕ್ರಾಸ್ ನ ಕಾಲುವೆಗಳು ಮೊದಲೆ ಚಿಕ್ಕದಾಗಿದ್ದು ಕೊಳಚೆ ನೀರು ಸರಾಗವಾಗಿ ಹರಿಯದೆ ರಸ್ತೆಯ ಮೇಲೆ ನಿಂತು ರಸ್ತೆಗಳು ಹಾಳಾಗಿವೆ. ಹೀಗಾಗಿ, ವಾರ್ಡಿನ ನಿವಾಸಿಗಳಿಗೆ ವಾಸಿಸಲು ಕಷ್ಟವಾಗಿದೆ.

ಈ ಕಾರಣಕ್ಕಾಗಿ, ಇಲ್ಲಿನ ಜ್ವಲಂತ ಸಮಸ್ಯೆಗಳ ಬಗ್ಗೆ ತಕ್ಷಣವೇ ಪುರಸಭೆಯ ಅಧಿಕಾರಿಗಳು ಗಮನ ನೀಡಬೇಕಿದೆ. ಅಂದಾಗ ಮಾತ್ರ ಇಲ್ಲಿನ ನಿವಾಸಿಗಳು ನೆಮ್ಮದಿಯಾಗಿ ಇರಬಹುದು. ಸದ್ಯ ಜಯನಗರ ನಿವಾಸಿಗಳು ಮತ್ತೊಮ್ಮೆ ಪುರಸಭೆಯ ಅಧಿಕಾರಿಗಳಿಗೆ ಮನವಿ ನೀಡಿದ್ದಾರೆ. ಆದ್ರೆ, ದಪ್ಪ ಚರ್ಮದ ಅಧಿಕಾರಿಗಳು ಈ‌ ಮನವಿಗೂ ಸ್ಪಂಧಿಸೋದು ಅನುಮಾನವಾಗಿದೆ. ಮಾನ್ಯ ಅಧ್ಯಕ್ಷೆ ಮೇಡಮ್ಮುರವರಿಗೆ ಈ ನಿವಾಸಿಗಳು ಗೋಳು ಕೇಳಲು ಬಹುಶಃ ಪುರುಸೋತ್ತು ಇಲ್ಲ ಅನಿಸತ್ತೆ. ಮಾನ್ಯ ಅಧ್ಯಕ್ಷರೆ, ಈಗಲಾದ್ರೂ ಪಾಪ ಈ ನಿವಾಸಿಗಳ ಗೋಳು ಆಲಿಸಿ ಕೃಪೆ ತೋರುತ್ತಿರಾ..?

ವರದಿ: ಮಂಜು ಪಾಟೀಲ್

**********

error: Content is protected !!