ಮುಂಡಗೋಡ: ಪಟ್ಟಣದಲ್ಲಿ ಇರೋ ಕಾರ್ಮಿಕ ಇಲಾಖೆಯ ಕಛೇರಿಯಲ್ಲಿನ ಅಧಿಕಾರಿಗಳ ಮೇಲೆ ನೂರಾರು ಕಾರ್ಮಿಕರು ಆಕ್ರೋಶಗೊಂಡಿದ್ದಾರೆ. ಕಾರ್ಪೆಂಟರ್ ಕೆಲಸದವರು, ಗಾರೆ ಕೆಲಸದವರು ಸೇರಿದಂತೆ ಹಲವರು ಕಾರ್ಮಿಕ ಇಲಾಖೆಯ ತಾಲೂಕಾ ಕಚೇರಿಯ ಅಧಿಕಾರಿಗಳಿಗೆ ಹಿಗ್ಗಾ ಮುಗ್ಗಾ ಜಾಡಿಸಿದ್ರು.
ಅಸಮರ್ಪಕ ಕಿಟ್ ಹಂಚಿಕೆ..!
ಇನ್ನು, ಕಾರ್ಮಿಕರ ಆರೋಪದಂತೆ, ಈ ತಾಲುಕಾ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಕಿಟ್ ನೀಡುವಲ್ಲಿ ಬೇಜವಾಬ್ದಾರಿ ತೋರುತ್ತಿದ್ದಾರಂತೆ. ಅರ್ಹರಿಗೆ ಸಿಗಬೇಕಾದ ಕಾರ್ಪೆಂಟರ್ ಕಿಟ್, ಗಾರೆ ಕೆಲಸದ ಕಿಟ್ ಗಳನ್ನು ಸಮರ್ಪಕವಾಗಿ ಹಂಚಿಕೆ ಮಾಡುತ್ತಿಲ್ಲವಂತೆ. ತಿಂಗಳುಟ್ಟಲೇ ಅಲೆದಾಡಿಸಿ ಕಾರ್ಮಿಕರ ಜೀವ ಹಿಂಡುತ್ತಿದ್ದಾರೆ ಅನ್ನೋದು ನೊಂದ ಕಾರ್ಮಿಕರ ಆಕ್ರೋಶ. ಹೀಗಾಗಿ, ಇವತ್ತು ಕಾರ್ಮಿಕ ಇಲಾಖೆಯ ಕಚೇರಿಯಲ್ಲಿ ಕಾರ್ಮಿಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸಮರ್ಪಕವಾಗಿ ಕಿಟ್ ಹಂಚಿ..!
ಅಸಲು, ಇಲ್ಲಿನ ಕಾರ್ಮಿಕ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿ ಹೇಳತೀರದ್ದಾಗಿದೆ. ಕಾರ್ಮಿಕ ಸಚಿವರ ತವರು ಕ್ಷೇತ್ರದಲ್ಲೇ ಇಂತಹ ಬೇಜವಾಬ್ದಾರಿಗಳು ನಡಿತಿರೋದು ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದ್ರೂ ಸಮರ್ಪಕವಾಗಿ ಅರ್ಹ ಫಲಾನುಭವಿಗಳಿಗೆ ಕಿಟ್ ವಿತರಿಸಲಿ ಅನ್ನೋದು ಸಾರ್ವಜನಿಕರ ಆಗ್ರಹವಾಗಿದೆ.