ಇಂದೂರು ಗ್ರಾ.ಪಂಚಾಯತಿಯಲ್ಲಿ ಪಿಡಿಓ ಮೇಡಂ ಕಚೇರಿಗೆ ಬರೋ ಟೈಮಿಂಗ್ ಎಷ್ಟು..? ಸೂಚನಾ ಫಲಕವನ್ನಾದ್ರೂ ಹಾಕಿ‌ ಮೇಡಂ..!

ಮುಂಡಗೋಡ ತಾಲೂಕಿನಲ್ಲಿ ಬಹುಶಃ ಇಂದೂರು ಗ್ರಾಮ ಪಂಚಾಯತಿಯ ಪಿಡಿಓ ಮೇಡಂ ನಷ್ಟು ಬ್ಯುಸಿ ಯಾರೂ ಇರಲಿಕ್ಕಿಲ್ವೇನೊ..? ಯಾಕಂದ್ರೆ, ಈ ಮೇಡಮ್ಮು ಇಂದೂರು ಪಂಚಾಯತಿಯಲ್ಲಿ ಸಿಗೋದೇ ಅಪರೂಪ ಅಂತಾ ಜನ ಹೇಳ್ತಿದಾರೆ. ತಮ್ಮ ಪಂಚಾಯತಿ ಅಡಿಯಲ್ಲಿ ಏನೇನೇಲ್ಲ ನಡೀತಿವೆ ಅನ್ನೊ ಕನಿಷ್ಟ ಖಬರೂ ಇಲ್ಲದಂತಾಗಿದೆ. ಯಾರ್ಯಾರು ಎಲ್ಲೇಲ್ಲಿ ಏನೇನು ಕಾಮಗಾರಿ ಮಾಡ್ತಿದಾರೆ, ಹೇಗೇ ಹೇಗೆ ನಡಿತಿವೆ ಅನ್ನೊ ಉಸಾಬರಿ ಬಹುತೇಕ ಪಿಡಿಓ ಮೇಡಂಗೆ ಇದೆಯೊ ಇಲ್ವೋ ಅರ್ಥವಾಗಬೇಕಿದೆ.

ಬರೋದೇ ಮದ್ಯಾಹ್ನ..!
ಅಸಲು, ಇಂದೂರು ಗ್ರಾಮ ಪಂಚಾಯತಿಗೆ ಪಿಡಿಓ ಆಗಿ ಬಂದಿರೋ ಮೇಡಮ್ಮು, ದಿನಾಲು ಆಫೀಸಿಗೆ ಬರೋದೇ ಮದ್ಯಾಹ್ನದ ನಂತರ, ಹೀಗಾಗಿ, ಅದೇಷ್ಟೋ ಸಾರ್ವಜನಿಕರು ಬೆಳಿಗ್ಗೆ ಮೇಡಂ ದರ್ಶನಕ್ಕಾಗಿ ಅಲೆದಾಡುವ ಪರಿಸ್ಥಿತಿ ಇದೆ. ಸಣ್ಣದೊಂದು ಪ್ರಮಾಣ ಪತ್ರ ಪಡೆಯಲೂ ಅಲೆದಾಡುವ ಅನಿವಾರ್ಯತೆ ಇದೆ. ಹೀಗಾಗಿ, ಕೆಲಸ ಬಿಟ್ಟು ಪಿಡಿಓ ಸಾಹೇಬ್ರ ದರ್ಶನಕ್ಕಾಗಿ ಕಾದು ಕುಳಿತುಕೊಳ್ಳೊ ಹಣೆಬರಹ ನಮ್ಮ‌ ಗ್ರಾಮಸ್ಥರದು. ಹೀಗಾಗಿ, ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಗಮನ ಕೊಡಬೇಕಿದೆ.

ತಾಪಂ ನಲ್ಲಿ ಕೆಲಸವಂತೆ..!
ಅಷ್ಟಕ್ಕೂ, ನಿತ್ಯವೂ ತಮಗಿಚ್ಚೆ ಬಂದಾಗ ಆಫೀಸಿಗೆ ಬರುವ ಪಿಡಿಒ ಮೇಡಂ ಸಲುವಾಗಿ ಪಂಚಾಯತಿಗೆ ಬರುವ ಸಾರ್ವಜನಿಕರು ಕಾದು ಕುಳಿತಿರುತ್ತಾರೆ. ಹಾಗೆ ಬರುವ ಸಾರ್ವಜನಿಕರಿಗೆ ಪಾಪ ಅಲ್ಲಿನ ಸಿಬ್ಬಂದಿಗಳು ಸಿದ್ದ ಉತ್ತರ ಹೇಳಿ ಕಳಿಸ್ತಾರೆ. “ತಾಲೂಕಾ ಪಂಚಾಯತಿಯಲ್ಲಿ ಕೆಲಸ ಇದೆ ಅಲ್ಲಿಗೆ ಹೋಗಿದ್ದಾರೆ” ಅಂತಾರೆ.. ಹಾಗಿದ್ರೆ ಪಿಡಿಓ ಮೇಡಂ ನಿತ್ಯವೂ ತಾಲೂಕಾ ಪಂಚಾಯತಿಗೆ ಹೋಗಲೇ ಬೇಕಾ..? ಹಾಗೊಂದುವೇಳೆ ನಿತ್ಯವೂ ಇಲ್ಲಿನ ಪಿಡಿಓ ಮೇಡಮ್ಮು ತಾಲೂಕಾ ಪಂಚಾಯತಿಗೆ ಹೋಗಲೇಬೇಕು ಅನ್ನೋದಾದ್ರೆ, ಅಲ್ಲಿ ಬಹುಮುಖ್ಯ ಕೆಲಸ ಇದ್ದಿರಲೇ ಬೇಕು. ನಾವು ಅದನ್ನ ಪ್ರಶ್ನೆ ಮಾಡಲ್ಲ. ಆದ್ರೆ, ನಿತ್ಯವೂ ಪಿಡಿಓ‌ ಮೇಡಂ ಗಾಗಿ ಕಚೇರಿಗೆ ಅಲೆದಾಡುವ ಸಾರ್ವಜನಿಕರಿಗೆ ಆ ಬಗ್ಗೆ ಮಾಹಿತಿ ನೀಡಿದರೆ ಸೂಕ್ತ ಅಲ್ವಾ..?

ಪಿಡಿಓ ದರ್ಶನ ಸಮಯವೇನು..?
ಇಂದೂರು, ಪಂಚಾಯತಿಯಲ್ಲಿ ಪಿಡಿಓ ಮೇಡಮ್ಮು ಕಚೇರಿಗೆ ಬರುವ ಸಮಯವನ್ನು ನಿತ್ಯವೂ ನೋಟೀಸ್ ಬೋರ್ಡಿಗೆ ಅಂಟಿಸಲಿ. ಅಥವಾ ಒಂದು ಭೇಟಿಯ ಸಮಯದ ಫಲಕವನ್ನಾದ್ರೂ ಹಾಕಲಿ. ಇಂದೂರು ಗ್ರಾಮ ಪಂಚಾಯತಿಯಲ್ಲಿ ಇಂದು ಪಿಡಿಒ ಮೇಡಂ ರವರ ದರ್ಶನಕ್ಕೆ ಇಂತಹ ಸಮಯದಲ್ಲಿ ಅವಕಾಶ ಇದೆ ಅಂತಾ ಟೈಮಿಂಗು ಬರೆದು ಹಾಕಲಿ, ಅಂದಾಗ ಮಾತ್ರ ಪಾಪ ಸಾರ್ವಜನಿಕರು ತಮ್ಮ ಕೆಲಸ ಬಿಟ್ಟು ಸುಖಾಸುಮ್ಮನೇ ಅಲೆದಾಡೋದಾದ್ರೂ ತಪ್ಪತ್ತೆ. ಅಲ್ವಾ ಮೇಡಮ್ಮು..?

 

error: Content is protected !!