ಶಿಗ್ಗಾವಿ ಕುಸ್ತಿ ಹಬ್ಬದಲ್ಲಿ 800 ಪೈಲ್ವಾನರ, 5 ದಿನಗಳ ಕಾದಾಟಕ್ಕೆ ವಿದ್ಯುಕ್ತ ತೆರೆ..!

ಶಿಗ್ಗಾವಿ: ಅದೊಂದು ಅಪ್ಪಟ ದೇಸೀ ಗ್ರಾಮೀಣ ಕ್ರೀಡೆ.. ಅಲ್ಲಿನ ಅಖಾಡದಲ್ಲಿ ಧೂಳೆಬ್ಬಿಸುವ ಕುಸ್ತಿ ಕಲಿಗಳು ತೊಡೆ ತಟ್ಟಿ ನಿಂತಿದ್ರು. ನೀನಾ..? ನಾನಾ..? ಅಂತಾ ಕಣದಲ್ಲಿ ಕೇಕೆ ಹಾಕಿದ್ರು. ಇದು, ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ಕಳೆದ ಐದು ದಿನಗಳಿಂದ ನಡೆದ ಕುಸ್ತಿ ಹಬ್ಬದ ರಣರೋಚಕ ದೃಷ್ಯಗಳು.

ಹಾವೇರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವಜನ ಕ್ರೀಡಾ ಸಬಲೀಕರಣ ಇಲಾಖೆ ವತಿಯಿಂದ ಶಿಗ್ಗಾವಿಯಲ್ಲಿ ಏರ್ಪಡಿಸಿದ್ದ ಕರ್ನಾಟಕ ಕುಸ್ತಿ ಹಬ್ಬ 2022-23 ಸಮಾರೋಪ ಸಮಾರಂಭ ರವಿವಾರ ನಡೆಯಿತು.

ವಿವಿಧ ರಾಜ್ಯಗಳ ಕುಸ್ತಿಪಟುಗಳು..!
ಅಂದಹಾಗೆ, ಶಿಗ್ಗಾವಿಯ ಕುಸ್ತಿ ಅಖಾಡಕ್ಕೆ ಕರ್ನಾಟಕ ಅಷ್ಟೇ ಅಲ್ಲದೇ ಹರಿಯಾಣ, ಮಧ್ಯಪ್ರದೇಶ, ತೆಲಂಗಾಣ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಪೈಲ್ವಾನರು ಆಗಮಿಸಿದ್ದರು. ಬರೋಬ್ಬರಿ 1 ಕೋಟಿ 38 ಲಕ್ಷ ಮೊತ್ತದ ಬಹುಮಾನ ಗೆಲ್ಲುವುದಕ್ಕಾಗಿ ಜಗಜಟ್ಟಿಗಳು ಹೋರಾಡಿದ ಪರಿ ಕಂಡು ಅಭಿಮಾನಿಗಳು ಸಂಭ್ರಮಿಸಿದರು.

800 ಕ್ಕೂ ಹೆಚ್ಚು ಪೈಲ್ವಾನರು.‌!
ಇನ್ನು ಕುಸ್ಯಿ ಹಬ್ಬದಲ್ಲಿ 800 ಕ್ಕೂ ಅಧಿಕ ಪೈಲ್ವಾನರ ಕಾದಾಟ ಜೋರಾಗಿತ್ತು. 80 ಕೆಜಿ, 60 ಕೆಜಿ, 30-40 ಕೆಜಿ ತೂಕದ ಪೈಲ್ವಾನರು ಅಖಾಡಕ್ಕೆ ಧುಮುಕಿದರು. ಫಿಟ್ ಆ್ಯಂಡ್ ಫೈನ್ ಆಗಿದ್ದ ಕಟ್ಟುಮಸ್ತಾದ ಪಟುಗಳು ತಿಂಗಳುಗಳ ಕಾಲ ದೇಹ ದಂಡಿಸಿ ಈ ಪಂದ್ಯಾಟದಲ್ಲಿ ಸೆಣಸಾಡಿದರು.

ಒಟ್ಬಲ್ಲಿ, ಸಿಎಂ ಹಾಗೂ ಶಾಸಕರು, ಪುರಸಭೆಯ ಸದಸ್ಯರುಗಳು ಸೇರಿದಂತೆ ಹಾವೇರಿ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿದ್ರು.

ಮಂಜು ಪಾಟೀಲ್

error: Content is protected !!