ಪಾಳಾ ಬಳಿ ಭೀಕರ ಅಪಘಾತ, ಮುಂಡಗೋಡಿನ ಇಬ್ಬರು ಸ್ಥಳದಲ್ಲೇ ಸಾವು..! ಮತ್ತಿಬ್ಬರಿಗೆ ಗಾಯ

ಮುಂಡಗೋಡ ತಾಲೂಕಿನ ಪಾಳಾ ಸಮೀಪ ಭೀಕರ ಅಪಘಾತವಾಗಿದೆ‌. ಐ20 ಕಾರ್ ಪಲ್ಟಿಯಾದ ಪರಿಣಾಮ ಇಬ್ಬರು ಮುಂಡಗೋಡಿನ ಯುವಕರು ಸ್ಥಳದಲ್ಲೇ ದಾರುಣ ಸಾವು ಕಂಡಿದ್ದಾರೆ. ಮತ್ತಿಬ್ಬರಿಗೆ ಗಾಯವಾಗಿದೆ.

ಮುಂಡಗೋಡಿನ ಗಣೇಶ್ ಗಾಣಿಗೇರ್, ಮಹೇಶ ಗಾಣಿಗೇರ ಮೃತ ದುರ್ದೈವಿಗಳು. ಪಾಳಾದಿಂದ ಮುಂಡಗೋಡಿಗೆ ಬರುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕಾರ್ ಪಲ್ಟಿಯಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಸದ್ಯ ಮುಂಡಗೋಡ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

error: Content is protected !!