ಮುಂಡಗೋಡ ಪಟ್ಟಣದ ಹೊರವಲಯದ ಕಲಘಟಗಿ ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷಗೊಂಡಿದೆ. ಮುಸ್ಲಿಂ ಸಮಾಜ ಬಾಂಧವರ ಸ್ಮಶಾನದ ಆಸು ಪಾಸಿನಲ್ಲೇ ಕಳೆದ ಹಲವು ದಿನಗಳಿಂದ ಚಿರತೆಯ ಹೆಜ್ಜೆಗಳು ದಾಖಲಾಗಿವೆ. ಅದ್ರಲ್ಲೂ ನಿನ್ನೆ ಶನಿವಾರ ಸಂಜೆ ಸ್ಮಶಾನದ ಕಂಪೌಂಡಿನ ಮೇಲೆ ಚಿರತೆಯು ಸಂಚರಿಸಿದ್ದು ಬಹುತೇಕ ಪಕ್ಕಾ ಎನ್ನುವಂತಾಗಿದೆ. ಸದ್ಯ ಮಾಹಿತಿ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. RFO ಸುರೇಶ್ ಕುಲ್ಲೊಳ್ಳಿ ತಮ್ಮ ಸಿಬ್ಬಂದಿಗಳೊಂದಿಗೆ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ಶನಿವಾರ ಸಂಜೆ..! ಅಂದಹಾಗೆ, ಶನಿವಾರ ಸಂಜೆ ಚಿರತೆ ಕಂಪೌಂಡಿನ ಮೇಲೆ ಸಂಚರಿಸ್ತಿರೋದನ್ನು ಅಲ್ಲಿನ ರೈತರು ಹಾಗೂ ದಾರಿಹೋಕರು ಕಣ್ಣಾರೆ ಕಂಡಿದ್ದಾರೆ. ತಕ್ಷಣವೇ ತಮ್ಮ ಮೊಬೈಲ್ ಕ್ಯಾಮೆರಾ ಮೂಲಕ ಚಿರತೆಯ ದೃಷ್ಯ ಸೆರೆ ಹಿಡಿದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟಿದ್ದಾರೆ. ಆದ್ರೆ, ಇದು ಎಲ್ಲಿಯದು..? ಅಷ್ಟಕ್ಕೂ ಇದು ಮುಂಡಗೋಡಿನದ್ದೇ ವಿಡಿಯೋನಾ ಅನ್ನೋ ಸಾಕಷ್ಟು ಅನುಮಾನಗಳಿದ್ದವು. ಹೀಗಾಗಿ, ಪಬ್ಲಿಕ್ ಫಸ್ಟ್ ಸ್ಥಳಕ್ಕೆ ಭೇಟಿ ನೀಡಿದಾಗ ಚಿರತೆ ಬಂದಿರೋದಕ್ಕೆ ಪೂರಕವಾದ ಸಾಕ್ಷಿಗಳು ಸಿಕ್ಕಂತಾಗಿದೆ....
Top Stories
ಹಾವೇರಿ BEO ಮನೆ ಮೇಲೆ ಲೋಕಾಯುಕ್ತ ದಾಳಿ, ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬ್ರಷ್ಟರು..!
CET ಪರೀಕ್ಷಾರ್ಥಿಯ ಜನಿವಾರ ಕತ್ತರಿಸಿದ ವಿಚಾರ, ಶಾಸಕ ಶಿವರಾಮ್ ಹೆಬ್ಬಾರ್ ತೀವ್ರ ಖಂಡನೆ, ತಪ್ಪಿತಸ್ತರ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹ..!!
ಹುಬ್ಬಳ್ಳಿಯ 5 ವರ್ಷದ ಬಾಲಕಿ ಮೇಲೆ ರೇಪ್, ಮರ್ಡರ್ ಕೇಸ್, ಆರೋಪಿಯ ಎನಕೌಂಟರ್..!
ಹುಬ್ಬಳ್ಳಿಯಲ್ಲಿ ಅಮಾನುಷ ಕ್ರೌರ್ಯ, 5 ವರ್ಷದ ಬಾಲಕಿಯನ್ನು ಅಪಹರಿಸಿ, ಭೀಕರ ಹತ್ಯೆ..! ಟಾಯ್ಲೆಟ್ ಹಲೀಜಿನಲ್ಲೇ ಕೊಂದ ಪಾಪಿಗಳು..!
ಬನವಾಸಿಯಲ್ಲಿ ಕದಂಬೋತ್ಸವಕ್ಕೆ ವಿದ್ಯುಕ್ತ ಚಾಲನೆ, ಪಂಪನ ನೆನಪಿನಲ್ಲಿ ಪಂಪ ಭವನ ನಿರ್ಮಾಣಕ್ಕೆ ಪ್ರತಿಜ್ಞೆ..!
“ಭೂ ಸುರಕ್ಷಾ” ಯೋಜನೆಯಲ್ಲಿ ಹೊನ್ನಾವರ ತಾಲೂಕು ರಾಜ್ಯದಲ್ಲೇ ಪ್ರಥಮ..!
ಕಾರವಾರದ ಆಮದಳ್ಳಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಸ್ತ್ರೀ ಚೇತನ ಅಭಿಯಾನ..!
ಪರಿಶಿಷ್ಟ ಪಂಗಡದ ಕ್ರೀಡಾ ವಸತಿ ನಿಲಯಗಳಿಗೆ ಪ್ರತಿಭಾವಂತ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ
12 ವರ್ಷ ಮೇಲ್ಪಟ್ಟ ಬಾಲಕ/ಬಾಲಕಿಯರಿಗೆ ಅಥ್ಲೆಟಿಕ್ ಬೇಸಿಗೆ ಶಿಬಿರ
ಎಪ್ರಿಲ್ 12, 13 ಕ್ಕೆ ಬನವಾಸಿಯಲ್ಲಿ ಕದಂಬೋತ್ಸವ-2025, ಪ್ರತಿಷ್ಠಿತ ಪಂಪ ಪ್ರಶಸ್ತಿ ಪ್ರದಾನ ಸಮಾರಂಭ..!
ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯಡಿ ಸತತ ಎರಡನೇ ವರ್ಷವೂ ಉತ್ತರ ಕನ್ನಡ ಜಿಲ್ಲೆ100% ಗುರಿ ಸಾಧನೆ..!
ಮುಂಡಗೋಡ ಪಟ್ಟಣದಲ್ಲಿ ಭಾರೀ ಮಳೆ ಗಾಳಿಗೆ ಉರುಳಿಬಿದ್ದ ಮೊಬೈಲ್ ಟವರ್..! ಪಟ್ಟಣದ ಹಲವು ಮನೆಗಳಿಗೆ ಹಾನಿ
ಮಳೆಗಾಳಿಗೆ ರಸ್ತೆ ಮೇಲೆ ಬಿದ್ದ ಬೃಹತ್ ಮಾವಿನ ಮರ, ಶಿರಸಿ-ಹುಬ್ಬಳ್ಳಿ ರಸ್ತೆ ಸಂಪೂರ್ಣ ಸ್ಥಗಿತ..!
ನಂದಿಪುರದಲ್ಲಿ ಬೋರವೆಲ್ ಗೆ ಅನಧೀಕೃತ ವಿದ್ಯುತ್ ಸಂಪರ್ಕ, ಗದ್ದೆಯಲ್ಲಿ ವೈಯರ್ ತುಳಿದು ಸ್ಥಳದಲ್ಲೇ ಸಾವು ಕಂಡ ರೈತ..!
ಮುಂಡಗೋಡ ಪೊಲೀಸರ ಕಾರ್ಯಾಚರಣೆ, IPL ಬೆಟ್ಟಿಂಗ್ ನಡೆಸುತ್ತಿದ್ದ ಓರ್ವ ಆರೋಪಿ ವಶಕ್ಕೆ, ಮೂವರು ಎಸ್ಕೇಪ್..!
ಮಾದಕ ವಸ್ತುಗಳಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮ: ನ್ಯಾ. ವಿಜಯ ಕುಮಾರ್
ನಂದಿಕಟ್ಟಾದಲ್ಲಿ ಅರ್ಥಪೂರ್ಣ ಶ್ರೀರಾಮ ನವಮಿ, ಉಚಿತ ಆರೋಗ್ಯ, ಹೃದಯ ತಪಾಸಣಾ ಶಿಬಿರ..!
ಗಾಂಧಿನಗರ “ಸ್ಲಂ” ಬೋರ್ಡ್ ರಂಪಾಟ; ಜಂಟೀ ತನಿಖಾ ತಂಡ ಭೇಟಿ, ಎರಡೂ ತಂಡದಿಂದ ಪರ-ವಿರೋಧದ ಮನವಿ..!
ಅರಣ್ಯ ಇಲಾಖೆಯವ್ರೂ ಉದ್ಯೋಗ ಖಾತ್ರಿ ಯೋಜನೆ ಸದ್ಬಳಕೆ ಮಾಡಿಕೊಳ್ಳಿ: ಮುಂಡಗೋಡಿಗೆ ಭೇಟಿ ನೀಡಿದ ಜಿಪಂ CEO ಈಶ್ವರ ಖಾಂದೂ ಕರೆ..!
ಮೂರು ದಿನದ ಹಸುಗೂಸನ್ನು ಆಸ್ಪತ್ರೆ ತೊಟ್ಟಿಲಲ್ಲೇ ಬಿಟ್ಟು ಹೋದ ಹೆತ್ತವರು..!
ಮುಂಡಗೋಡ: ಪಟ್ಟಣದ ಜ್ಯೋತಿ (ಕ್ರಿಶ್ಚಿಯನ್) ಆಸ್ಪತ್ರೆಯಲ್ಲಿ ಮೂರು ದಿನದ ಹಸುಗೂಸನ್ನು ಬಿಟ್ಟು ಹೋಗಿದ್ದಾರೆ. ಆಸ್ಪತ್ರೆಯಲ್ಲಿ ಹಾಕಲಾಗಿರೋ ವಿಶೇಷ ತೊಟ್ಟಿಲಿನಲ್ಲಿ ಮುದ್ದು ಕಂದಮ್ಮನನ್ನು ಹೆತ್ತವರೇ ಬಿಟ್ಟು ಹೋಗಿದ್ದಾರೆ. ಸದ್ಯ ಆ ಹಸುಗೂಸು ಸಂಬಂಧಪಟ್ಟ ಅಧಿಕಾರಿಗಳ ಆರೈಕೆಯಲ್ಲಿದೆ. ಬೆಳ್ಳಂ ಬೆಳಿಗ್ಗೆ..! ಅಂದಹಾಗೆ, ಆಸ್ಪತ್ರೆಯಲ್ಲಿ ಮಕ್ಕಳನ್ನು ಹೆತ್ತು, ಸಾಕಲು ಆಗದವರಿಗಾಗಿ ತೊಟ್ಟಿಲೊಂದನ್ನು ಕಟ್ಟಿಡಲಾಗಿದೆ. ಕಂದಮ್ಮಗಳನ್ನು ಸಾಕಲು ಆಗದವರು, ಆ ತೊಟ್ಟಿಲಿನಲ್ಲಿ ಇಟ್ಟು ಹೋಗಬಹುದಾಗಿದೆ. ಹಾಗಂತ ನಾಮಫಲಕವನ್ನೂ ಹಾಕಲಾಗಿದೆ. ಹೀಗಾಗಿ, ಅದ್ಯಾರೋ ಹೆತ್ತವರು ಪುಟ್ಟ ಹಸುಗೂಸನ್ನು ಶುಕ್ರವಾರ ಬೆಳ್ಳಂ ಬೆಳಿಗ್ಗೆ ತೊಟ್ಟಿಲಲ್ಲಿ ಹಾಕಿ ಹೋಗಿದ್ದಾರೆ. ಇನ್ನು, ಮಗುವನ್ನು ಗಮನಿಸಿದ ಆಸ್ಪತ್ರೆಯವರು ಪೊಲೀಸ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ, ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಮಗುವನ್ನು ಶಿರಸಿಯ ದತ್ತು ಕೇಂದ್ರಕ್ಕೆ ನೀಡಲು ಕ್ರಮ ವಹಿಸಿದ್ದಾರೆ. ಈ ವೇಳೆ ಕ್ರೈಂ ಪಿಎಸ್ಐ ಎಚ್ ಬಿ ಕುಡಗುಂಟಿ, ಹಾಗೂ ಸಿಬ್ಬಂದಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ಮುಂಡಗೋಡ ಠಾಣೆಯಲ್ಲಿ “ಮಂತ್ಲಿ” ಬಾಬತ್ತಿಗಾಗಿ ಬರಗೆಟ್ಟವನ ಕಳ್ಳಾಟಗಳು ಒಂದಾ..? ಎರಡಾ..? ಪಿಐ ಬರಮಪ್ಪ ಸಾಹೇಬ್ರೆ ಕೊಂಚ ಗಮನಿಸಿ..!
ಮುಂಡಗೋಡ ಪೊಲೀಸ್ ಠಾಣೆಗೆ ನೂತನ ಪಿಐ ಆಗಿ ಬರಮಪ್ಪ ಲೋಕಾಪುರ ಅಧಿಕಾರ ಸ್ವೀಕರಿಸಿದ್ದಾರೆ. ಜೊತೆಗೆ ತಮ್ಮ ಹೊಸ ಠಾಣೆಯ ಜವಾಬ್ದಾರಿ ಹೊತ್ತಿದ್ದಾರೆ. ಇದ್ರೊಂದಿಗೆ ಮುಂಡಗೋಡಿಗರು ಮತ್ತೊಮ್ಮೆ ಮೂಟೆ ಮೂಟೆಗಳಷ್ಟು ಭರವಸೆ ಹೊತ್ತು, ಬೆರಗುಗಣ್ಣಿನಿಂದ ಹೊಸ ಅಧಿಕಾರಿಯತ್ತ ನೋಡುತ್ತಿದ್ದಾರೆ. ಯಾಕಂದ್ರೆ, ಇತ್ತಿತ್ತಲಾಗಿ ನಮ್ಮ ಮುಂಡಗೋಡ ಪೊಲೀಸ್ ಠಾಣೆ ಅನ್ನೋದು ಅದ್ಯಾರ್ಯಾರದ್ದೋ “ರಾಜೀ” ಲೆಕ್ಕಗಳ ಅಡ್ಡೆಯಾದಂತಾಗಿತ್ತು. ಹಾಗಂತ, ನಾವು ಹೇಳ್ತಿಲ್ಲ, ಅದನ್ನೇಲ್ಲ ಕಣ್ಣಾರೆ ಕಂಡಿದ್ದ ಸಾರ್ವಜನಿಕರ ಬಹುದೊಡ್ಡ ಆರೋಪವಾಗಿತ್ತು. ಹಾಗಿದ್ರೆ ಅದೀಗ, ಬದಲಾಗತ್ತಾ..? ಬದಲಾಗಬೇಕಾದ್ರೆ ಸದ್ಯ ಮುಂಡಗೋಡ ಠಾಣೆಯಲ್ಲಿ ಏನೇನು ಬದಲಾವಣೆ ಆಗಬೇಕು..? ಇದೇಲ್ಲ ನೂತನ ಪಿಐ ಸಾಹೇಬ್ರು ಗಮನಿಸಲೇಬೇಕಿದೆ. ಇದು FIR..! ಬರಮಪ್ಪ ಲೋಕಾಪುರ, ಈಗಷ್ಟೆ ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಯಶಸ್ವಿಯಾಗಿ ಕರ್ತವ್ಯ ನಿಭಾಯಿಸಿಕೊಂಡು ಬಂದಿರೋ ಪಿಐ. ಸದ್ಯ ಮುಂಡಗೋಡಿಗೆ ವರ್ಗವಾಗಿ ಬಂದಿದ್ದಾರೆ. ಹೀಗಾಗಿ, ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಜವಾಬ್ದಾರಿ ವಹಿಸಿಕೊಂಡ ಸಾಹೇಬ್ರಿಗೆ ಇಲ್ಲಿನ ಕೆಲವೊಂದಿಷ್ಟು ಒಳ ಹೊರಗಿನ ಮಾಹಿತಿಗಳನ್ನು ನೀಡಲೇ ಬೇಕಿದೆ. ತಾಲೂಕಿನ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ನೂತನ ಪಿಐ ಸಾಹೇಬ್ರು...
ಮುಂಡಗೋಡ ನೂತನ ಸಿಪಿಐ ಆಗಿ ಬಿ.ಎಸ್. ಲೋಕಾಪುರ್ ಅಧಿಕಾರ ಸ್ವೀಕಾರ..!
ಮುಂಡಗೋಡ ಪೊಲೀಸ್ ಠಾಣೆಯ ನೂತನ ಸಿಪಿಐ ಆಗಿ ಬಿ.ಎಸ್. ಲೋಕಾಪುರ ಮಂಗಳವಾರ ರಾತ್ರಿಯೇ ಅಧಿಕಾರ ಸ್ವೀಕರಿಸಿದ್ದಾರೆ. ಇಲ್ಲಿ ಸಿಪಿಐ ಆಗಿದ್ದ ಸಿದ್ದಪ್ಪ ಸಿಮಾನಿಯವರಿಗೆ ಸರ್ಕಾರ ವರ್ಗಾವಣೆಗೊಳಿಸಿ ಆ ಸ್ಥಾನಕ್ಕೆ ಲೋಕಾಪುರ್ ರವರನ್ನು ನೇಮಕಗೊಳಿಸಿದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಅಧಿಕಾರ ವಹಿಸಿಕೊಂಡರು. ಈ ವೇಳೆ ಪಿಎಸ್ಐ ಯಲ್ಲಾಲಿಂಗ್ ಕುನ್ನೂರ್, ಕ್ರೈಂ ಪಿಎಸ್ಐ ಸೇರಿದಂತೆ ಠಾಣೆಯ ಸಿಬ್ಬಂದಿಗಳು ಹಾಜರಿದ್ದರು.
ಹಳೂರಿನಲ್ಲಿ ಬೆಂಕಿ ಅವಘಡದಿಂದ 7 ಹಸುಗಳನ್ನು ಕಳೆದುಕೊಂಡಿದ್ದ ಮಾಲೀಕರಿಗೆ ಪರಿಹಾರದ ಚೆಕ್ ವಿತರಣೆ..!
ಮುಂಡಗೋಡ ಪಟ್ಟಣದ ಹಳೂರು ಓಣಿಯಲ್ಲಿ ಸಂಭವಿಸಿದ್ದ ಅಗ್ನಿ ಅನಾಹುತದಲ್ಲಿ ನೊಂದವರಿಗೆ ಪರಿಹಾರ ವಿತರಿಸಲಾಯಿತು. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡು ಬರೋಬ್ಬರಿ 7 ಜಾನುವಾರುಗಳು ಸಜೀವ ದಹನಗೊಂಡ ಹಿನ್ನೆಲೆಯಲ್ಲಿ, ಹಸುಗಳ ಮಾಲೀಕರಿಗೆ ಶಾಸಕ ಶಿವರಾಮ್ ಹೆಬ್ಬಾರ್ ಚೆಕ್ ವಿತರಿಸಿದ್ರು. ಅಂದಹಾಗೆ, ಬುಧವಾರ ಬೆಳಿಗ್ಗೆ ಹಳೂರಿನ ಹಸುಗಳ ಮಾಲೀಕ ಮಂಜುನಾಥ್ ಶೇಟ್ ಮನೆಗೆ ತೆರಳಿದ ಶಾಸಕರು, ಕೆ.ಡಿ.ಸಿ.ಸಿ ಬ್ಯಾಂಕ್ ನ ರೈತ ಕಲ್ಯಾಣ ನಿಧಿಯಿಂದ 1 ಲಕ್ಷ ರೂಪಾಯಿಗಳ ಪರಿಹಾರ ಧನದ ಚೆಕ್ ಅನ್ನು ಹಸ್ತಾಂತರಿಸಿದರು.
ಮುಂಡಗೋಡ ಸಿಪಿಐ ಸಿದ್ದಪ್ಪ ಸಿಮಾನಿ ಎತ್ತಂಗಡಿ..! ಹೊಸ ಸಿಪಿಐ ಯಾರು ಗೊತ್ತಾ..?
ಮುಂಡಗೋಡ ಪೊಲೀಸ್ ಠಾಣೆಯ ಸಿಪಿಐ ಸಿದ್ದಪ್ಪ ಸಿಮಾನಿ ಎತ್ತಂಗಡಿಯಾಗಿದ್ದಾರೆ. ನೂತನ ಸಿಪಿಐ ಆಗಿ ಬಿ.ಎಸ್. ಲೋಕಾಪುರ ಆಗಮಿಸುತ್ತಿದ್ದಾರೆ. ಹಾಗಂತ ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶ ಮಾಡಿದೆ.
ಮುಂಡಗೋಡ ಲೊಯೋಲಾ ಶಾಲೆಯಲ್ಲಿ ಪಾಲಕ ಸಂತ ಇಗ್ನಾಶಿಯಸ್ ರವರ ಸಂಭ್ರಮದ ಮಹೋತ್ಸವ..!
ಮುಂಡಗೋಡ: ಲೊಯೋಲ ಶಿಕ್ಷಣ ಸಂಸ್ಥೆಯ ಲೊಯೋಲ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಯಲ್ಲಿ ಸಂತ ಇಗ್ನಾಶಿಯವರ ಮಹೋತ್ಸವ ಸಮಾರಂಭ ವಿಜೃಂಭಣೆಯಿಂದ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಜಕಣಾಚಾರಿ ಮಾತನಾಡುತ್ತ, ಈ ಶಿಕ್ಷಣ ಸಂಸ್ಥೆ ಮುಂಡಗೋಡ ತಾಲೂಕಿನಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಮಾಡಿದೆ. ಇಂಥಾ ಶಾಲೆಯಲ್ಲಿ ಓದಿದ ನೀವು ಧನ್ಯರು .ಸಾಧನೆ ಮಾಡಲು ನನಗೆ ಈ ಶಾಲೆಯ ವೇದಿಕೆ ಅವಕಾಶ ಕಲ್ಪಿಸಿಕೊಟ್ಟಿದೆ ಎಂಬುದರ ಬಗ್ಗೆ ಪ್ರೌಢಿಮೆ ಇರಬೇಕು ಎಂದರು. ಲಯೋಲದ ಶಿಸ್ತು -ಶಿಕ್ಷಣ- ಸಂಸ್ಕಾರ ವನ್ನು ಕಾರ್ಯಕ್ರಮದ ಅಚ್ಚುಕ್ಕಟ್ಟಿನ ತಯಾರಿಯಿಂದ ಗೊತ್ತಾಗುತ್ತದೆ ಹಾಗೂ ಇನ್ನೊಬ್ಬರಿಗೆ ಮಾದರಿಯಾಗಿದೆ ಅಂತಾ ಶ್ಲಾಘಿಸಿದ್ರು. ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಕ್ಷೇತ್ರದಲ್ಲಿ ಅಥ್ಲೀಟ್ಸ್ ವಿಭಾಗದಲ್ಲಿ ಸಾಧನೆ ಮಾಡಿದ ಶಾಲೆಯ ವಿದ್ಯಾರ್ಥಿನಿ ಕು.ನಯನ ಕೊಕರೆ ಇವರಿಗೆ ಗೌರವ ಪೂರ್ವಕವಾಗಿ ಸನ್ಮಾನಿಸಿ ಮುಂದಿನ ಕ್ರೀಡಾ ಭವಿಷ್ಯಕ್ಕೆ ಶುಭ ಕೋರಲಾಯಿತು. ತಾಲೂಕಿನಲ್ಲಿ ಶಾಲೆಯು ಶೈಕ್ಷಣಿಕ ಚಟುವಟಿಕೆ ಹಾಗೂ ಶೈಕ್ಷಣಿಕೇತರ ಚಟುವಟಿಕೆಗೂ ಹೆಚ್ಚಿನ ಮಹತ್ವವನ್ನು ನೀಡುತ್ತಿದೆ. ಬ್ರೀಜಸ್ ಆಫ್ ಸ್ಪೋರ್ಟ್ಸ್ ಸಂಸ್ಥೆಯೊಂದಿಗೆ ಅನ್ಯೋನ್ಯತೆ ಹೊಂದಿರುವ...
ಉಗ್ನಿಕೇರಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕ..!
ಮುಂಡಗೋಡ ತಾಲೂಕಿನ ಉಗ್ನಿಕೇರಿಯ ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಯಾವುದೋ ಕಾರಣಕ್ಕೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ರಾಮು ಮಾಕು ಕೊಕರೆ (23) ಎಂಬುವ ಯುವಕನೇ ಆತ್ಮಹತ್ಯೆಗೆ ಯತ್ನಿಸಿದವನಾಗಿದ್ದು, ವಿಷ ಸೇವಿಸಿ ನರಳುತ್ತಿದ್ದ ವೇಳೆ ತಕ್ಷಣವೇ ಕುಟುಂಬಸ್ಥರು 108 ಅಂಬ್ಯಲೆನ್ಸ್ ಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ, ಸ್ಥಳಕ್ಕೆ ಆಗಮಿಸಿದ ಅಂಬ್ಯಲೆನ್ಸ್ ಸಿಬ್ಬಂದಿ ಧನರಾಜ್ ಹಾಗೂ ಚಾಲಕ ವಿಜಯ್ ಪಾಟೀಲ್ ಯುವಕನಿಗೆ ಪ್ರಥಮ ಚಿಕಿತ್ಸೆ ನೀಡಿ ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮುಂಡಗೋಡ ಗೊಟಗೋಡಿಕೊಪ್ಪದಲ್ಲಿ ಹಾಡಹಗಲೇ ತಾಯಿ ಮಗಳ ಮೇಲೆ ಕುಡುಗೋಲಿನಿಂದ ಮಾರಣಾಂತಿಕ ಹಲ್ಲೆ..!
ಮುಂಡಗೋಡ ತಾಲೂಕಿನ ಗೊಟಗೋಡಿಕೊಪ್ಪದಲ್ಲಿ ತಾಯಿ ಮಗಳ ಮೇಲೆ ಹಾಡಹಗಲೇ ಮಾರಣಾಂತಿಕ ಹಲ್ಲೆಯಾಗಿದೆ. ಖುದ್ದು ಅಳಿಯನೇ ಅತ್ತೆ ಹಾಗೂ ಹೆಂಡತಿಯ ಮೇಲೆ ಕುಡುಗೋಲಿನಿಂದ ಮಾರಣಾಂತಿಕವಾಗಿ ಎರ್ರಾಬಿರ್ರಿ ಕೊಚ್ಚಿದ್ದಾನೆ ಅನ್ನೋ ಅರೋಪ ಕೇಳಿ ಬಂದಿದೆ, ಅಕ್ಷರಶಃ ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿ ಮಗಳನ್ನು ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗೋಟಗೋಡಿಕೊಪ್ಪದ ಹೊನ್ನಮ್ಮ ಬಸವರಾಜ್ ಚಿನ್ನಳ್ಳಿ ಹಾಗೂ ಮಗಳು ಅನ್ನಪೂರ್ಣ ಎಂಬುವವರೇ ಕುಡುಗೋಲಿನಿಂದ ಹಲ್ಲೆಗೆ ಒಳಗಾದವರಾಗಿದ್ದಾರೆ. ಘಟನೆ ಏನು..? ಮುಂಡಗೋಡ ತಾಲೂಕಿನ ಗೋಟಗೋಡಿಕೊಪ್ಪದಲ್ಲಿ ಅನ್ನಪೂರ್ಣ ಎಂಬುವ ಯುವತಿಯನ್ನು ಅದೇ ಗ್ರಾಮದ ನಾಗರಾಜ್ ವಡಲಣ್ಣವರ್ ಎಂಬುವ ಯುವಕನಿಗೆ ಕಳೆದ 10 ವರ್ಷದ ಹಿಂದೆ ಮದುವೆ ಮಾಡಿ ಕೊಡಲಾಗಿತ್ತು. ಆದ್ರೆ ಮದುವೆ ಆದಾಗಿನಿಂದ ಗಂಡನ ಕಿರುಕುಳ ವಿಪರೀತವಾಗಿತ್ತಂತೆ. ನಿತ್ಯವೂ ಕುಡಿದು ಬಂದು ಪತ್ನಿಯನ್ನು ಹೊಡೆಯುವ ಹೀನ ಚಾಳಿಯಿತ್ತಂತೆ. ಇದರ ನಡುವೆಯೇ ಅದು ಹೇಗೋ ಹೊಂದಿಕೊಂಡು ಸಂಸಾರ ಮಾಡಿದ್ದರ ಫಲವಾಗಿ ಇಬ್ಬರು ಮುದ್ದಾದ ಗಂಡು ಮಕ್ಕಳು ಹುಟ್ಟಿದ್ದಾರೆ. ಆದ್ರೆ, ಇದರ ಮೇಲೆಯೂ ಗಂಡನ ಕಿರುಕುಳ ನಿರಂತರವಾಗಿಯೇ ಇತ್ತು ಅನ್ನೋ ಆರೋಪ...
ಮುಂಡಗೋಡ ಹಳೂರಿನಲ್ಲಿ ಭಾರೀ ಬೆಂಕಿ ಅನಾಹುತ, ಏಳು ಆಕಳುಗಳು ಸಜೀವ ದಹನ..!
ಮುಂಡಗೋಡ ಪಟ್ಟಣದ ಹಳೂರಿನಲ್ಲಿ ಭಾರೀ ಬೆಂಕಿ ಅನಾಹುತವಾಗಿದೆ. ದನದ ಕೊಟ್ಟಿಗೆಗೆ ಬೆಂಕಿ ತಗುಲಿ ಬರೋಬ್ಬರಿ 7 ಆಕಳುಗಳು ಸಜೀವ ದಹನವಾಗಿ ಸುಟ್ಟು ಕರಕಲಾಗಿವೆ. ಆದ್ರೆ, ಬೆಂಕಿ ತಗುಲಿದ್ದು ಹೇಗೆ ಅಂತಾ ಇನ್ನು ಖಚಿತತೆ ಸಿಕ್ಕಿಲ್ಲ. ಹಳೂರಿನ ಮಂಜುನಾಥ್ ನಾಗೇಶ್ ಶೇಟ್ ಎಂಬುವವರಿಗೆ ಸೇರಿದ, ದನದ ಕೊಟ್ಟಿಗೆಯಲ್ಲಿ ದುರಂತ ಸಂಭವಿಸಿದೆ. ತಡರಾತ್ರಿ ನಡೆದಿರೋ ಘಟನೆಯಲ್ಲಿ ಇಡೀ ದನದ ಕೊಟ್ಟಿಗೆ ಆಕಳುಗಳ ಸಮೇತವಾಗಿಯೇ ಸುಟ್ಟು ಕರಕಲಾಗಿದೆ. ದುರಂತ ಅಂದ್ರೆ ಘಟನೆ ನಡೆದಾಗ ರಾತ್ರಿ ಯಾರಿಗೂ ಗಮನಕ್ಕೆ ಬಂದಿಲ್ಲ, ಬೆಳಿಗ್ಗೆಯಷ್ಟೇ ಘಟನೆ ಬೆಳಕಿಗೆ ಬಂದಿದೆ. ಈ ಅನಾಹುತದಲ್ಲಿ ಹಾನಿಯಾದ ಅಂದಾಜು ಇನ್ನು ಲಭ್ಯವಾಗಿಲ್ಲ. ಸದ್ಯ ಮುಂಡಗೋಡ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.