ಮುಂಡಗೋಡ ಪಟ್ಟಣದ ಹಳೂರು ಓಣಿಯಲ್ಲಿ ಸಂಭವಿಸಿದ್ದ ಅಗ್ನಿ ಅನಾಹುತದಲ್ಲಿ ನೊಂದವರಿಗೆ ಪರಿಹಾರ ವಿತರಿಸಲಾಯಿತು. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡು ಬರೋಬ್ಬರಿ 7 ಜಾನುವಾರುಗಳು ಸಜೀವ ದಹನಗೊಂಡ ಹಿನ್ನೆಲೆಯಲ್ಲಿ, ಹಸುಗಳ ಮಾಲೀಕರಿಗೆ ಶಾಸಕ ಶಿವರಾಮ್ ಹೆಬ್ಬಾರ್ ಚೆಕ್ ವಿತರಿಸಿದ್ರು.
ಅಂದಹಾಗೆ, ಬುಧವಾರ ಬೆಳಿಗ್ಗೆ ಹಳೂರಿನ ಹಸುಗಳ ಮಾಲೀಕ ಮಂಜುನಾಥ್ ಶೇಟ್ ಮನೆಗೆ ತೆರಳಿದ ಶಾಸಕರು, ಕೆ.ಡಿ.ಸಿ.ಸಿ ಬ್ಯಾಂಕ್ ನ ರೈತ ಕಲ್ಯಾಣ ನಿಧಿಯಿಂದ 1 ಲಕ್ಷ ರೂಪಾಯಿಗಳ ಪರಿಹಾರ ಧನದ ಚೆಕ್ ಅನ್ನು ಹಸ್ತಾಂತರಿಸಿದರು.