ಮುಂಡಗೋಡ: ಪಟ್ಟಣದ ಜ್ಯೋತಿ (ಕ್ರಿಶ್ಚಿಯನ್) ಆಸ್ಪತ್ರೆಯಲ್ಲಿ ಮೂರು ದಿನದ ಹಸುಗೂಸನ್ನು ಬಿಟ್ಟು ಹೋಗಿದ್ದಾರೆ. ಆಸ್ಪತ್ರೆಯಲ್ಲಿ ಹಾಕಲಾಗಿರೋ ವಿಶೇಷ ತೊಟ್ಟಿಲಿನಲ್ಲಿ ಮುದ್ದು ಕಂದಮ್ಮನನ್ನು ಹೆತ್ತವರೇ ಬಿಟ್ಟು ಹೋಗಿದ್ದಾರೆ. ಸದ್ಯ ಆ ಹಸುಗೂಸು ಸಂಬಂಧಪಟ್ಟ ಅಧಿಕಾರಿಗಳ ಆರೈಕೆಯಲ್ಲಿದೆ.
ಬೆಳ್ಳಂ ಬೆಳಿಗ್ಗೆ..!
ಅಂದಹಾಗೆ, ಆಸ್ಪತ್ರೆಯಲ್ಲಿ ಮಕ್ಕಳನ್ನು ಹೆತ್ತು, ಸಾಕಲು ಆಗದವರಿಗಾಗಿ ತೊಟ್ಟಿಲೊಂದನ್ನು ಕಟ್ಟಿಡಲಾಗಿದೆ. ಕಂದಮ್ಮಗಳನ್ನು ಸಾಕಲು ಆಗದವರು, ಆ ತೊಟ್ಟಿಲಿನಲ್ಲಿ ಇಟ್ಟು ಹೋಗಬಹುದಾಗಿದೆ. ಹಾಗಂತ ನಾಮಫಲಕವನ್ನೂ ಹಾಕಲಾಗಿದೆ. ಹೀಗಾಗಿ, ಅದ್ಯಾರೋ ಹೆತ್ತವರು ಪುಟ್ಟ ಹಸುಗೂಸನ್ನು ಶುಕ್ರವಾರ ಬೆಳ್ಳಂ ಬೆಳಿಗ್ಗೆ ತೊಟ್ಟಿಲಲ್ಲಿ ಹಾಕಿ ಹೋಗಿದ್ದಾರೆ.
ಇನ್ನು, ಮಗುವನ್ನು ಗಮನಿಸಿದ ಆಸ್ಪತ್ರೆಯವರು ಪೊಲೀಸ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ, ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಮಗುವನ್ನು ಶಿರಸಿಯ ದತ್ತು ಕೇಂದ್ರಕ್ಕೆ ನೀಡಲು ಕ್ರಮ ವಹಿಸಿದ್ದಾರೆ.
ಈ ವೇಳೆ ಕ್ರೈಂ ಪಿಎಸ್ಐ ಎಚ್ ಬಿ ಕುಡಗುಂಟಿ, ಹಾಗೂ ಸಿಬ್ಬಂದಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಜರಿದ್ದರು.