ಮುಂಡಗೋಡ ತಾಲೂಕಿನ ಉಗ್ನಿಕೇರಿಯ ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ‌. ಯಾವುದೋ ಕಾರಣಕ್ಕೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾನೆ‌.

 

ರಾಮು ಮಾಕು ಕೊಕರೆ (23) ಎಂಬುವ ಯುವಕನೇ ಆತ್ಮಹತ್ಯೆಗೆ ಯತ್ನಿಸಿದವನಾಗಿದ್ದು, ವಿಷ ಸೇವಿಸಿ ನರಳುತ್ತಿದ್ದ ವೇಳೆ ತಕ್ಷಣವೇ ಕುಟುಂಬಸ್ಥರು 108 ಅಂಬ್ಯಲೆನ್ಸ್ ಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ, ಸ್ಥಳಕ್ಕೆ ಆಗಮಿಸಿದ ಅಂಬ್ಯಲೆನ್ಸ್ ಸಿಬ್ಬಂದಿ ಧನರಾಜ್ ಹಾಗೂ ಚಾಲಕ ವಿಜಯ್ ಪಾಟೀಲ್ ಯುವಕನಿಗೆ ಪ್ರಥಮ ಚಿಕಿತ್ಸೆ ನೀಡಿ ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

error: Content is protected !!