ಮುಂಡಗೋಡ: ಲೊಯೋಲ ಶಿಕ್ಷಣ ಸಂಸ್ಥೆಯ ಲೊಯೋಲ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಯಲ್ಲಿ ಸಂತ ಇಗ್ನಾಶಿಯವರ ಮಹೋತ್ಸವ ಸಮಾರಂಭ ವಿಜೃಂಭಣೆಯಿಂದ ನಡೆಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಜಕಣಾಚಾರಿ ಮಾತನಾಡುತ್ತ, ಈ ಶಿಕ್ಷಣ ಸಂಸ್ಥೆ ಮುಂಡಗೋಡ ತಾಲೂಕಿನಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಮಾಡಿದೆ. ಇಂಥಾ ಶಾಲೆಯಲ್ಲಿ ಓದಿದ ನೀವು ಧನ್ಯರು .ಸಾಧನೆ ಮಾಡಲು ನನಗೆ ಈ ಶಾಲೆಯ ವೇದಿಕೆ ಅವಕಾಶ ಕಲ್ಪಿಸಿಕೊಟ್ಟಿದೆ ಎಂಬುದರ ಬಗ್ಗೆ ಪ್ರೌಢಿಮೆ ಇರಬೇಕು ಎಂದರು. ಲಯೋಲದ ಶಿಸ್ತು -ಶಿಕ್ಷಣ- ಸಂಸ್ಕಾರ ವನ್ನು ಕಾರ್ಯಕ್ರಮದ ಅಚ್ಚುಕ್ಕಟ್ಟಿನ ತಯಾರಿಯಿಂದ ಗೊತ್ತಾಗುತ್ತದೆ ಹಾಗೂ ಇನ್ನೊಬ್ಬರಿಗೆ ಮಾದರಿಯಾಗಿದೆ ಅಂತಾ ಶ್ಲಾಘಿಸಿದ್ರು.
ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಕ್ಷೇತ್ರದಲ್ಲಿ ಅಥ್ಲೀಟ್ಸ್ ವಿಭಾಗದಲ್ಲಿ ಸಾಧನೆ ಮಾಡಿದ ಶಾಲೆಯ ವಿದ್ಯಾರ್ಥಿನಿ ಕು.ನಯನ ಕೊಕರೆ ಇವರಿಗೆ ಗೌರವ ಪೂರ್ವಕವಾಗಿ ಸನ್ಮಾನಿಸಿ ಮುಂದಿನ ಕ್ರೀಡಾ ಭವಿಷ್ಯಕ್ಕೆ ಶುಭ ಕೋರಲಾಯಿತು. ತಾಲೂಕಿನಲ್ಲಿ ಶಾಲೆಯು ಶೈಕ್ಷಣಿಕ ಚಟುವಟಿಕೆ ಹಾಗೂ ಶೈಕ್ಷಣಿಕೇತರ ಚಟುವಟಿಕೆಗೂ ಹೆಚ್ಚಿನ ಮಹತ್ವವನ್ನು ನೀಡುತ್ತಿದೆ. ಬ್ರೀಜಸ್ ಆಫ್ ಸ್ಪೋರ್ಟ್ಸ್ ಸಂಸ್ಥೆಯೊಂದಿಗೆ ಅನ್ಯೋನ್ಯತೆ ಹೊಂದಿರುವ ಫಲವಾಗಿ ನಯನ ಕೊಕರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು .ಹೀಗೆ ನಮ್ಮ ಶಾಲೆಯ ಹಲವಾರು ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ- ರಾಷ್ಟ್ರ- ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಲೇ ಇದ್ದಾರೆ. ಸಂಸ್ಥೆಯ ಪಾಲಕರಾದ ಇಗ್ನಾಶಿಯವರ ಕನಸು ಕೂಡಾ ಇದೇ ಆಗಿತ್ತು , ಅಷ್ಟೇ ಅಲ್ಲದೆ ದೀನ ದಲಿತ ದುರ್ಬಲ ವರ್ಗದವರಿಗೆ ಶಿಕ್ಷಣದ ನೀಡಿ ಅಭ್ಯುದಯವನ್ನು ಸಾಧಿಸುವುದು ಕೂಡ ಅವರ ಕನಸಾಗಿತ್ತೆಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಫಾದರ್ ಜಾನ್ಸನ್ ಪಿಂಟೋ ಮಾಹಿತಿ ನೀಡಿದ್ರು.
ಕಾರ್ಯಕ್ರಮದಲ್ಲಿ ಹೆಚ್ಚು ಅಂಕಗಳಿಸಿದ್ದ ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು . ಪ್ರಾಥಮಿಕ ವಿಭಾಗದ ಮುಖ್ಯೋ ಪಾಧ್ಯಾಯನಿ ಸಿಸ್ಟರ್ ಮರಿನಾ, ಕಾಲೇಜ್ ವಿಭಾಗದ ಮಾದೇವ ರಾಠೋಡ, ವಿ.ವಿ. ಮಲ್ಲನಗೌಡರ, ವಿನಾಯಕ ಶೇಟ್, ರೇಷ್ಮಾ ಗೊನ್ಸಾಲ್ಪಿಸ ಲ್ಲಾದ್ರೂ ಅಲ್ಮೇಡ, ರಶ್ಮೀ ಎನ್ ಆರ್, ಹೊನ್ನಮ್ಮ ಗುತ್ತಲ್, ಸಂತೋಷ್ ಕುಸ್ನೂರ್, ಅರುಣ್ ಕುಮಾರ್, ಇನ್ನೂ ಮುಂತಾದ ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.