ದಾವಣಗೆರೆ ನಗರ ಹೊರಭಾಗದ ರಾ.ಹೆದ್ದಾರಿ 48 ರಲ್ಲಿ ಭೀಕರ ಅಪಘಾತವಾಗಿದೆ. ಕಾರ್ ಮತ್ತು ಟ್ರ್ಯಾಕ್ಟರ್ ಮಧ್ಯೆ ಸಂಭವಿಸಿರುವ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಏಳು ಜನರಿಗೆ ಗಂಭೀರ ಗಾಯವಾಗಿದೆ. ಓವರ್ ಟೇಕ್ ಮಾಡುತ್ತಿದ್ಧಾಗ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಗೆ ಕಾರ್ ಡಿಕ್ಕಿಯಾಗಿದೆ. ಪರಿಣಾಮ ಕಾರ್ ನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಸಾವು ಕಂಡಿದ್ದಾರೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದೆ. ಹಾವೇರಿ ರಾಣೆಬೆನ್ನೂರು ಮೂಲದ ಅರುಣಕುಮಾರ್ ಶೆಟ್ಟರ್ ಹಾಗೂ ವಿಜಯಕ್ಕ ಶೆಟ್ಟರ್ ಮೃತ ದುರ್ದೈವಿಗಳು. ಇನ್ನುಳಿದಂತೆ ಚಾಲಕ ಸೇರಿ ಏಳು ಜನರಿಗೆ ಗಂಭೀರ ಗಾಯವಾಗಿದೆ, ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಮೂಲದ ಶೆಟ್ಟರ್ ಕುಟುಂಬದ ಸದಸ್ಯರು, ತುಮಕೂರಿನಿಂದ ಮದುವೆ ಮುಗಿಸಿಕೊಂಡು ರಾಣೆಬೆನ್ನೂರಿಗೆ ತೆರಳುತ್ತಿದ್ದರು. ಈ ವೇಳೆ ದಾವಣಗೆರೆ ಹೊರಭಾಗದ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ವಿದ್ಯಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Top Stories
ಹಾವೇರಿ BEO ಮನೆ ಮೇಲೆ ಲೋಕಾಯುಕ್ತ ದಾಳಿ, ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬ್ರಷ್ಟರು..!
CET ಪರೀಕ್ಷಾರ್ಥಿಯ ಜನಿವಾರ ಕತ್ತರಿಸಿದ ವಿಚಾರ, ಶಾಸಕ ಶಿವರಾಮ್ ಹೆಬ್ಬಾರ್ ತೀವ್ರ ಖಂಡನೆ, ತಪ್ಪಿತಸ್ತರ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹ..!!
ಹುಬ್ಬಳ್ಳಿಯ 5 ವರ್ಷದ ಬಾಲಕಿ ಮೇಲೆ ರೇಪ್, ಮರ್ಡರ್ ಕೇಸ್, ಆರೋಪಿಯ ಎನಕೌಂಟರ್..!
ಹುಬ್ಬಳ್ಳಿಯಲ್ಲಿ ಅಮಾನುಷ ಕ್ರೌರ್ಯ, 5 ವರ್ಷದ ಬಾಲಕಿಯನ್ನು ಅಪಹರಿಸಿ, ಭೀಕರ ಹತ್ಯೆ..! ಟಾಯ್ಲೆಟ್ ಹಲೀಜಿನಲ್ಲೇ ಕೊಂದ ಪಾಪಿಗಳು..!
ಬನವಾಸಿಯಲ್ಲಿ ಕದಂಬೋತ್ಸವಕ್ಕೆ ವಿದ್ಯುಕ್ತ ಚಾಲನೆ, ಪಂಪನ ನೆನಪಿನಲ್ಲಿ ಪಂಪ ಭವನ ನಿರ್ಮಾಣಕ್ಕೆ ಪ್ರತಿಜ್ಞೆ..!
“ಭೂ ಸುರಕ್ಷಾ” ಯೋಜನೆಯಲ್ಲಿ ಹೊನ್ನಾವರ ತಾಲೂಕು ರಾಜ್ಯದಲ್ಲೇ ಪ್ರಥಮ..!
ಕಾರವಾರದ ಆಮದಳ್ಳಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಸ್ತ್ರೀ ಚೇತನ ಅಭಿಯಾನ..!
ಪರಿಶಿಷ್ಟ ಪಂಗಡದ ಕ್ರೀಡಾ ವಸತಿ ನಿಲಯಗಳಿಗೆ ಪ್ರತಿಭಾವಂತ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ
12 ವರ್ಷ ಮೇಲ್ಪಟ್ಟ ಬಾಲಕ/ಬಾಲಕಿಯರಿಗೆ ಅಥ್ಲೆಟಿಕ್ ಬೇಸಿಗೆ ಶಿಬಿರ
ಎಪ್ರಿಲ್ 12, 13 ಕ್ಕೆ ಬನವಾಸಿಯಲ್ಲಿ ಕದಂಬೋತ್ಸವ-2025, ಪ್ರತಿಷ್ಠಿತ ಪಂಪ ಪ್ರಶಸ್ತಿ ಪ್ರದಾನ ಸಮಾರಂಭ..!
ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯಡಿ ಸತತ ಎರಡನೇ ವರ್ಷವೂ ಉತ್ತರ ಕನ್ನಡ ಜಿಲ್ಲೆ100% ಗುರಿ ಸಾಧನೆ..!
ಮುಂಡಗೋಡ ಪಟ್ಟಣದಲ್ಲಿ ಭಾರೀ ಮಳೆ ಗಾಳಿಗೆ ಉರುಳಿಬಿದ್ದ ಮೊಬೈಲ್ ಟವರ್..! ಪಟ್ಟಣದ ಹಲವು ಮನೆಗಳಿಗೆ ಹಾನಿ
ಮಳೆಗಾಳಿಗೆ ರಸ್ತೆ ಮೇಲೆ ಬಿದ್ದ ಬೃಹತ್ ಮಾವಿನ ಮರ, ಶಿರಸಿ-ಹುಬ್ಬಳ್ಳಿ ರಸ್ತೆ ಸಂಪೂರ್ಣ ಸ್ಥಗಿತ..!
ನಂದಿಪುರದಲ್ಲಿ ಬೋರವೆಲ್ ಗೆ ಅನಧೀಕೃತ ವಿದ್ಯುತ್ ಸಂಪರ್ಕ, ಗದ್ದೆಯಲ್ಲಿ ವೈಯರ್ ತುಳಿದು ಸ್ಥಳದಲ್ಲೇ ಸಾವು ಕಂಡ ರೈತ..!
ಮುಂಡಗೋಡ ಪೊಲೀಸರ ಕಾರ್ಯಾಚರಣೆ, IPL ಬೆಟ್ಟಿಂಗ್ ನಡೆಸುತ್ತಿದ್ದ ಓರ್ವ ಆರೋಪಿ ವಶಕ್ಕೆ, ಮೂವರು ಎಸ್ಕೇಪ್..!
ಮಾದಕ ವಸ್ತುಗಳಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮ: ನ್ಯಾ. ವಿಜಯ ಕುಮಾರ್
ನಂದಿಕಟ್ಟಾದಲ್ಲಿ ಅರ್ಥಪೂರ್ಣ ಶ್ರೀರಾಮ ನವಮಿ, ಉಚಿತ ಆರೋಗ್ಯ, ಹೃದಯ ತಪಾಸಣಾ ಶಿಬಿರ..!
ಗಾಂಧಿನಗರ “ಸ್ಲಂ” ಬೋರ್ಡ್ ರಂಪಾಟ; ಜಂಟೀ ತನಿಖಾ ತಂಡ ಭೇಟಿ, ಎರಡೂ ತಂಡದಿಂದ ಪರ-ವಿರೋಧದ ಮನವಿ..!
ಅರಣ್ಯ ಇಲಾಖೆಯವ್ರೂ ಉದ್ಯೋಗ ಖಾತ್ರಿ ಯೋಜನೆ ಸದ್ಬಳಕೆ ಮಾಡಿಕೊಳ್ಳಿ: ಮುಂಡಗೋಡಿಗೆ ಭೇಟಿ ನೀಡಿದ ಜಿಪಂ CEO ಈಶ್ವರ ಖಾಂದೂ ಕರೆ..!
ದಾವಣಗೇರೆ ಸಮೀಪ ಭೀಕರ ಅಪಘಾತ, ಸ್ಥಳದಲ್ಲೇ ಇಬ್ಬರು ಸಾವು, 7 ಜನರಿಗೆ ಗಂಭೀರ ಗಾಯ..!
ಸನವಳ್ಳಿಯಲ್ಲಿ ನೇಣಿಗೆ ಶರಣಾದ ಪಿಡಿಓ, ತನ್ನ ತೋಟದಲ್ಲೇ ಆತ್ಮಹತ್ಯೆ ಮಾಡಿಕೊಂಡ ನೌಕರ..!
ಮುಂಡಗೋಡ ತಾಲೂಕಿನ ಸನವಳ್ಳಿಯಲ್ಲಿ ಗ್ರಾಮ ಪಂಚಾಯತಿ ನೌಕರ (ಪ್ರಭಾರ ಪಿಡಿಓ) ನೇಣಿಗೆ ಶರಣಾಗಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಸೋಮವಾರ ಬೆಳ್ಳಂ ಬೆಳಿಗ್ಗೆ ತಮ್ಮದೇ ತೋಟದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತಾ ಹೇಳಲಾಗ್ತಿದೆ. ಸನವಳ್ಳಿ ಗ್ರಾಮದ ರಾಮಲಿಂಗ ಶಿವಲಿಂಗಪ್ಪ ಕಳಸಗೇರಿ(39) ಎಂಬುವವರೇ ನೇಣಿಗೆ ಶರಣಾಗಿದ್ದಾರೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹೊನ್ನತ್ತಿ ಗ್ರಾಮ ಪಂಚಾಯತಿಯ ಪ್ರಭಾರ ಪಿಡಿಓ ಆಗಿ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ರವಿವಾರ ರಜೆ ಇದ್ದ ಕಾರಣ ಸ್ವಗ್ರಾಮಕ್ಕೆ ಬಂದಿದ್ದರು. ಆದ್ರೆ, ಇಂದು ಏಕಾಏಕಿ ತೋಟದಲ್ಲೇ ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತರಿಗೆ ಎರಡು ಪುತ್ರಿಯರು ಇದ್ದು ಈಗ ಅನಾಥವಾಗಿವೆ. ಗ್ರಾಮದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ. ಸದ್ಯ ಮುಂಡಗೋಡ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.
ಬೆಳಗಾವಿಯಲ್ಲಿ ಇಂದಿನಿಂದ 12ನೇ ಚಳಿಗಾಲದ ಅಧಿವೇಶನ ಶುರು, ಹೇಗಿದೆ ಗೊತ್ತಾ ಭದ್ರತೆ..!
ಬೆಳಗಾವಿಯಲ್ಲಿ ಇಂದಿನಿಂದ ಚಳಿಗಾಲ ಅಧಿವೇಶನ ಆರಂಭವಾಗಲಿದೆ. ಕುಂದಾನಗರಿ 12ನೇ ಅಧಿವೇಶನಕ್ಕೆ ಸಜ್ಜುಗೊಂಡಿದೆ. ಹೀಗಾಗಿ, ಬೆಳಗಾವಿ ನಗರ ಸೇರಿದಂತೆ, ಸುವರ್ಣ ವಿಧಾನಸೌಧದ ಸುತ್ತಮುತ್ತ ವ್ಯಾಪಕ ಬಂದೋಬಸ್ತ್ ಏರ್ಪಡಿಸಲಾಗಿದೆ. ನಗರ ಪೊಲೀಸ್ ಆಯುಕ್ತ ಸಿದ್ದರಾಮಪ್ಪ ಅವರ ನೇತೃತ್ವದಲ್ಲಿ ಭದ್ರತೆ ಏರ್ಪಡಿಸಲಾಗಿದೆ. ಅಧಿವೇಶನದ ಭದ್ರತೆಗೆ ಐದು ಸಾವಿರ ಜನ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. 2 ಡಿಸಿಪಿ, 5ಜನ ಎಸ್ಪಿ, 12 ಎಎಸ್ಪಿ, 42 ಡಿವೈಎಸ್ಪಿ, 100 ಸಿಪಿಐ, 250 ಪಿಎಸ್ಐ, ಮೂರುವರೆ ಸಾವಿರ ಪೇದೆಗಳು, 35 ಕೆಎಸ್ಆರ್ಪಿ ತುಕಡಿ, ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ನಿಯೋಜನೆ ಮಾಡಲಾಗಿದೆ. ಇನ್ನು, ಸುವರ್ಣ ವಿಧಾನಸೌಧದ ಒಂದು ಕಿಮೀ ವ್ಯಾಪ್ತಿಯಲ್ಲಿ ಸುತ್ತಮುತ್ತ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಅಲ್ಲದೇ 250ಕ್ಕೂ ಹೆಚ್ಚು ಕಡೆಗಳಲ್ಲಿ ಸಿಸಿ ಕ್ಯಾಮರಾಗಳ ಕಣ್ಗಾವಲು ಅಳವಡಿಸಲಾಗಿದೆ. ಮೊದಲ ದಿನವೇ ಪ್ರತಿಭಟನೆ ಬಿಸಿ..! ಅಂದಹಾಗೆ, ಬೆಳಗಾವಿಯಲ್ಲಿ ಇಂದಿನಿಂದ ಚಳಿಗಾಲ ಅಧಿವೇಶನ ಆರಂಭವಾಗುವ ಹಿನ್ನೆಲೆಯಲ್ಲಿ, ಅಧಿವೇಶನದ ಮೊದಲ ದಿನವೇ ಸರ್ಕಾರಕ್ಕೆ ರೈತರ ಬೃಹತ್ ಪ್ರತಿಭಟನೆ...
ಅತ್ತಿವೇರಿ ಬಸವಧಾಮದಲ್ಲಿ ಉ.ಕ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ ಯಶಸ್ವಿ..! ಹಸಿರ ಸಿರಿಯ ನಡುವೆ ಭೋರ್ಗರೆದ ವಚನಾಮೃತ..!!
ಮುಂಡಗೋಡ ತಾಲೂಕಿನ ಅತ್ತಿವೇರಿ ಬಸವಧಾಮದಲ್ಲಿ ಉತ್ತರ ಕನ್ನಡ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಭಾಗಿಯಾಗಿದ್ದ ವಚನ ಸಾಹಿತ್ಯ ಪ್ರಿಯರ ಸಮ್ಮುಖದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಿಜಗುಣಾನಂದ ಶ್ರೀಗಳು ತಮ್ಮ ಆಶೀರ್ವಚನದಲ್ಲಿ ಶರಣರ ವಚನಗಳ ಕುರಿತು ಮನಮುಟ್ಟುವ ಹಾಗೆ ವರ್ಣಿಸಿದ್ರು. ನಮ್ಮ ದೇಶದಲ್ಲಿ ಎಲ್ಲರೂ ಬರೀ ದೇವರ ಬಗ್ಗೆ ಮಾತಾಡಿದ್ರು, ಆದ್ರೆ ಬಸವಣ್ಣನವರು ಮಾತ್ರ ಮನುಷ್ಯರ ಬಗ್ಗೆ ಮಾತಾಡಿದ್ರು. ಹೀಗಾಗಿ, ಶರಣರ ವಚನಗಳು ಇಂದಿಗೂ ಜನಸಾಮಾನ್ಯರ ನಡುವೆ ನಿಚ್ಚಳವಾಗಿವೆ ಅಂತಾ ತಿಳಿಸಿದ್ರು. ಶರಣರ ವಚನಗಳನ್ನು ಮನೆ ಮನೆಗೂ ತಲುಪಿಸುವ ಕೆಲಸವಾಗಬೇಕು ಅಂತಾ ಆಶಿಸಿದ್ರು. ಬಸವಧಾಮದ ಮಾತೆ ಬಸವೇಶ್ವರಿಯವರಿಗೆ ವಚನ ಸಾಹಿತ್ಯ ಹರಡಲು ಎಲ್ಲರೂ ಕೈ ಜೋಡಿಸಬೇಕು ಅಂತಾ ಕರೆ ನೀಡಿದ್ರು. ಇನ್ನು ಗದುಗಿನ ತೋಂಟದಾರ್ಯ ಮಠದ ಸಿದ್ದರಾಮ ಶ್ರೀಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ್ರು. ಅದ್ರಂತೆ, ಬಸವಧಾಮದ ಮಾತೆ ಬಸವೇಶ್ವರಿಯವರು ಆಶೀರ್ವಚನ ನೀಡಿದ್ರು. ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಸುಮಂಗಲಾ ಅಂಗಡಿ ಅಧ್ಯಕ್ಷೀಯ ಭಾಷಣ...
ನಂದಿಕಟ್ಟಾ, ಹುಲಿಹೊಂಡ ಭಾಗದಲ್ಲಿ ಕಾಡಾನೆಗಳ ಹಿಂಡು, ರೈತರ ತೋಟ, ಗದ್ದೆಗಳಲ್ಲಿ ಹಾನಿ..!
ಮುಂಡಗೋಡ ತಾಲೂಕಿನ ಹುಲಿಹೊಂಡ, ಬಸಾಪುರ, ನಂದಿಕಟ್ಟಾ ಭಾಗದಲ್ಲಿ ಕಾಡಾನೆಗಳು ಹಿಂಡು ದಾಂಗುಡಿ ಇಟ್ಟಿದೆ. ಕಾಡಂಚಿನ ಗ್ರಾಮಗಳ ರೈತರ ಗದ್ದೆಗಳು, ತೋಟಗಳಿಗೆ ದಾಳಿ ಮಾಡಿ ಬೆಳೆ ನಾಶ ಮಾಡಿವೆ. ಶನಿವಾರ ರಾತ್ರಿ ಹುಲಿಹೊಂಡ ಗ್ರಾಮದ ಕಾಡಂಚಿನ ಗದ್ದೆ ತೋಟಗಳಿಗೆ ದಾಳಿ ಮಾಡಿರೋ ಗಜರಾಜನ ಹಿಂಡು, ರೈತರ ಅಡಿಕೆ ಗಿಡ, ಕಬ್ಬು, ಬಾಳೆ ಫಸಲನ್ನು ತಿಂದು, ತುಳಿದು ಹಾನಿಮಾಡಿವೆ. ಹುಲಿಹೊಂಡ ಗ್ರಾಮದ ನಾಗಪ್ಪ ಅಲ್ಲಾಪುರ, ರಾಜು ಕಂಬಾರ, ಮಂಜುನಾಥ್ ರಾಯ್ಕರ್, ಈಶ್ವರ ಅಲ್ಲಾಪುರ ಎಂಬುವ ರೈತರ ಕಬ್ಬಿನ ಬೆಳೆ ಹಾಳು ಮಾಡಿವೆ. ಅದ್ರಂತೆ, ರಾಜು ವೆಂಕಪ್ಪ ಹರಿಕೇರಿ ಎಂಬುವವರ ಅಡಿಕೆ ತೋಟದಲ್ಲಿ 10 ಸಸಿಗಳನ್ನು ನೆಲಸಮ ಮಾಡಿವೆ. ಹಾಗೇ ಉಳುವಪ್ಪ ಯಲ್ಲಪ್ಪ ಅಲ್ಲಾಪುರ ಎಂಬುವವರ ಅಡಿಕೆ ತೋಟಕ್ಕೆ ನುಗ್ಗಿ 40 ರಿಂದ 50 ಅಡಿಕೆ ಸಸಿಗಳನ್ನು ನೆಲಸಮ ಮಾಡಿವೆ. ಆದ್ರೆ ಇಷ್ಟೇಲ್ಲ ಆದ್ರೂ ಅರಣ್ಯ ಅಧಿಕಾರಿಗಳು ಮಾತ್ರ ಯಾರೂ ಇತ್ತ ಸುಳಿದೇ ಇಲ್ಲ ಅಂತಿದಾರೆ ಅನ್ನದಾತರು.
ಗೋಂಜ್ಯಾಳ ಬೆಳೆದ ರೈತನಿಗೆ ಮಹಾಮೋಸ, ಅರಶಿಣಗೇರಿಯಲ್ಲಿ ರೆಡ್ ಹ್ಯಾಂಡಾಗೇ ಹಿಡಿದ್ರು ರೈತರು..!
ಮುಂಡಗೋಡ ತಾಲೂಕಿನ ಅರಶಿಣಗೇರಿಯ ಗೋವಿನಜೋಳ ಬೆಳೆದ ರೈತರು ಭಾರೀ ಮೋಸಕ್ಕೆ ಬಲಿಯಾಗ್ತಿದಾರಾ..? ತೀವ್ರ ಬರದ ಮದ್ಯೆಯೂ ಸಾಲಸೋಲ ಮಾಡಿ ಗೋವಿನಜೋಳ ಬೆಳೆದ ರೈತನಿಗೆ ಸದ್ಯ ವ್ಯಾಪಾರದ ಹೆಸ್ರಲ್ಲಿ ಮೋಸ ಮಾಡ್ತಿದಾರೆ ಜನ. ಅರಶಿಣಗೇರಿಯಲ್ಲಿ ಇವತ್ತು ಅಂತಹ ಹಲಾಲುಕೋರ ವ್ಯಾಪಾರಿಗಳ ಏಜೆಂಟರುಗಳನ್ನು ರೈತರೇ ಹಿಡಿದು ಜಾಡಿಸಿದ್ದಾರೆ. ಅಂದಹಾಗೆ, ಬರೋಬ್ಬರಿ ಒಂಬತ್ತು ಜನ ದಂಧೆಕೋರರು ರೆಡ್ ಹ್ಯಾಂಡಾಗೇ ರೈತರಿಗೆ ಸಿಕ್ಕು, ಮೋಸ ಬಯಲಿಗೆ ಬರುತ್ತಿದ್ದಂತೆ ಪರಾರಿಯಾಗಿದ್ದಾರೆ. ಅಸಲು, ಇವ್ರೇಲ್ಲ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದವರಂತೆ…! ಅಂದಹಾಗೆ, ಭಾರಿ ವ್ಯವಸ್ಥಿತವಾಗಿ ನಡಿಯೋ ಈ ಮಹಾಮೋಸದಿಂದ ಅನ್ನದಾತ ಕಂಗೆಟ್ಟು ಹೋಗಿದ್ದಾನೆ. ಕ್ವಿಂಟಾಲುಗಟ್ಟಲೇ ಗೋವಿನಜೋಳವನ್ನು ಮೋಸದಿಂದಲೇ ಕದಿಯುವ ವ್ಯಾಪಾರಿಗಳು ಸದ್ಯ ಅರಶಿಣಗೇರಿ ರೈತರ ಕೈಗೆ ಸಿಕ್ಕಿಬಿದ್ದಿದ್ದಾರೆ. ಅಂದಹಾಗೆ, ಈ ಖತರ್ನಾಕ ದಂಧೆಕೋರರು ಹೇಗೇಲ್ಲ ಮೋಸ ಮಾಡ್ತಾರೆ ಗೊತ್ತಾ..? ಹಮಾಲರಿಂದಲೇ ಕೃತ್ಯ..? ಅಸಲು, ಮುಂಡಗೋಡ ತಾಲೂಕಿನಾದ್ಯಂತ ಸದ್ಯ ಗೋವಿನಜೋಳ ಬೆಳೆದ ರೈತ ತಾನು ಕಷ್ಟಪಟ್ಟು ಬೆಳೆದ ಬೆಳೆಯನ್ನು ಮಾರಾಟ ಮಾಡಿ ಅಷ್ಟೊ ಇಷ್ಟೊ ಬದುಕು ಕಟ್ಟಿಕೊಳ್ಳುವ ಧಾವಂತದಲ್ಲಿದ್ದಾನೆ. ಮೊದಲೇ...
ಟಿಬೇಟಿಯನ್ ಕ್ಯಾಂಪ್ ನಂ.1 ಕ್ರಾಸ್ ಬಳಿ ಮೊಬೈಲ್ ಶಾಪ್ ಕಳ್ಳತನ, ಬೆಲೆ ಬಾಳುವ ಮೊಬೈಲ್ ಎಗರಿಸಿದ ಕಳ್ಳರು..!
ಮುಂಡಗೋಡ ಟಿಬೇಟಿಯನ್ ಕ್ಯಾಂಪ್ ನಂಬರ್ 1 ರ ಕ್ರಾಸ್ ಬಳಿ ಮೊಬೈಲ್ ಅಂಗಡಿ ಕಳ್ಳತನವಾಗಿದೆ. ಯಲ್ಲಾಪುರ ರಸ್ತೆಯ ಟಿಬೇಟಿಯನ್ ಕ್ಯಾಂಪ್ ಕ್ರಾಸ್ ಬಳಿ ಮೊಬೈಲ್ ಅಂಗಡಿ ಮೇಲಿನ ಸೀಟ್ ಕೊರೆದು ಕಳ್ಳರು ಒಳ ನುಗ್ಗಿದ್ದು ಬೆಲೆಬಾಳುವ ಮೊಬೈಲ್ ಗಳನ್ನು ಎಗರಿಸಿಕೊಂಡು ಹೋಗಿದ್ದಾರೆ. ಸುರೇಶ್ ಶೇಟ್ ಎಂಬುವವರಿಗೆ ಸೇರಿದ ಮೊಬೈಲ್ ಶಾಪ್ ನಲ್ಲಿ ಹತ್ತಕ್ಕೂ ಹೆಚ್ಚು ಬೆಲೆಬಾಳುವ ಮೊಬೈಲ್ ಗಳನ್ನು ಕಳ್ಳರು ಎಗರಿಸಿದ್ದಾರೆ ಎನ್ನಲಾಗಿದೆ. ಏನಿಲ್ಲವೆಂದರೂ ಈ ಮೊಬೈಲ್ ಗಳ ಮೌಲ್ಯ ಒಂದು ಲಕ್ಷ ರೂ. ಗೂ ಹೆಚ್ಚು ಅಂತಾ ಅಂಗಡಿ ಮಾಲೀಕರು ಅಳಲು ತೋಡಿಕೊಂಡಿದ್ದಾರೆ. ಇನ್ನು ಸ್ಥಳಕ್ಕೆ ಮುಂಡಗೋಡ ಪೊಲೀಸರು ಭೇಟಿ ನೀಡಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಾತೂರಿನ ಅಟ್ಟಣಗಿ ಬಳಿ ಬೈಕ್ ಅಪಘಾತ, ತಾಯಿ ಮಗನಿಗೆ ಗಂಭೀರ ಗಾಯ..!
ಮುಂಡಗೋಡ ತಾಲೂಕಿನ ಕಾತೂರು ಉಮ್ಮಚಗಿ ರಸ್ತೆಯ ಅಟ್ಟಣಗಿ ಬಳಿ ಬೈಕ್ ಅಪಘಾತವಾಗಿದೆ. ಪರಿಣಾಮ ಬೈಕ್ ಮೇಲೆ ತೆರಳುತ್ತಿದ್ದ ತಾಯಿ ಮಗನಿಗೆ ಗಂಭೀರ ಗಾಯವಾಗಿದೆ. ಹಿಂದಿನಿಂದ ಬೈಕ್ ಗೆ ಲಾರಿ ಗುದ್ದಿದ ಪರಿಣಾಮ ಅಪಘಾತ ಸಂಭವಿಸಿದೆ ಅಂತಾ ಮಾಹಿತಿ ಲಭ್ಯವಾಗಿದೆ. ಘಟನೆಯಲ್ಲಿ ಅಟ್ಟಣಗಿ ಗ್ರಾಮದ ಶಿವಪುತ್ರ ರಾಮಣ್ಣ ಹೋತ್ನಳ್ಳಿ (45) ಹಾಗೂ ಆತನ ತಾಯಿ ದೇವಕ್ಕ ರಾಮಣ್ಣ ಹೋತ್ನಳ್ಳಿ(70) ಗಾಯಗೊಂಡಿದ್ದಾರೆ. ಇನ್ನು, ಸ್ಥಳಕ್ಕೆ ಬಂದ 108 ಅಂಬ್ಯುಲೆನ್ಸ್ ಸಿಬ್ಬಂದಿ, ವೈದ್ಯಕೀಯ ತಂತ್ರಜ್ಞ ಧನರಾಜ್ ಮತ್ತು ಚಾಲಕ ಕೆಂಚೇಶ್ ತಕ್ಷಣ ಧಾವಿಸಿ ರೋಗಿಗಳಿಗೆ ಪ್ರಥಮ ಚಿಕಿತ್ಸೆ ಕೊಟ್ಟು ತಾಲ್ಲೂಕು ಆಸ್ಪತ್ರೆ ಮುಂಡಗೋಡಿಗೆ ದಾಖಲಿಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಶಿಗ್ಗಾವಿ ಪುರಸಭೆಯಲ್ಲಿ ಗೋಲಮಾಲ್ ಆರೋಪ, ಸಚಿವ ಶಿವಾನಂದ ಪಾಟೀಲ್ ದಿಢೀರ್ ಭೇಟಿ, ಮುಖ್ಯಾಧಿಕಾರಿಗೆ ತರಾಟೆ..!
ಶಿಗ್ಗಾವಿ ಪುರಸಭೆಗೆ ಇಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ದೀಡೀರ್ ಭೇಟಿ ನೀಡಿದ್ರು. ಶಿಗ್ಗಾವಿ ಪುರಸಭೆಯಲ್ಲಿನ ಅವಾಂತರಗಳ ಬಗ್ಗೆ ಪರಿಶೀಲನೆ ನಡೆಸಿದ್ರು. ಅಲ್ದೆ ಮುಖ್ಯಾಧಿಕಾರಿ ಸೇರಿದಂತೆ ಇನ್ನುಳಿದ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ್ರು. ಸಮಸ್ಯೆಗಳ ಸರಮಾಲೆ..! ಇನ್ನು ಸಚಿವ್ರು ಪುರಸಭೆಯ ಅಂಗಳಕ್ಕೆ ಕಾಲಿಡುತ್ತಿದ್ದಂತೆ, ಸಾರ್ವಜನಿಕರಿಂದ ಪುರಾಭೆಯ ದುರಾಡಳಿತದ ಬಗ್ಗೆ ಸಮಸ್ಯೆಗಳ ಸುರಿಮಳೆಯೇ ಸುರಿಸಲಾಯಿತು. ಇನ್ನು ಸ್ಟ್ರೀಟ್ ಲೈಟ್ ಅಳವಡಿಕೆಯಲ್ಲಿ ಭಾರೀ ಗೋಲ್ ಮಾಲ್ ನಡೆದಿದೆ ಅನ್ನೋ ಆರೋಪಕ್ಕೆ ಸಂಬಂಧಿಸಿದಂತೆ ಪುರಸಭೆಯ ಮುಖ್ಯಾಧಿಕಾರಿ ಸಂಗನಬಸಯ್ಯರನ್ನು ತೀವ್ರ ತರಾಟೆಗೆ ಪಡೆದ ಸಚಿವ್ರು ಗರಂ ಆದ್ರು. ಒಟ್ನಲ್ಲಿ, ಮಾಜಿ ಸಿಎಂ ಬೊಮ್ಮಾಯಿ ತವರು ಕ್ಷೇತ್ರದ ಶಿಗ್ಗಾವಿ ಪುರಸಭೆಯಲ್ಲಿ ಭಾರೀ ಬ್ರಷ್ಟಾಚಾರ, ದುರಾಡಳಿತದ ಆರೋಪಗಳು ಬಂದ ಹಿನ್ನೆಲೆಯಲ್ಲಿ ಉಸ್ತುವಾರಿ ಸಚಿವರು ದಿಢೀರ್ ಭೇಟಿ ನೀಡಿದ್ದು ಸಂಚಲನ ಸೃಷ್ಟಿಸಿದೆ.
ಮುಂಡಗೋಡ PWD ಇಂಜಿನೀಯರ್ ಆಗಿದ್ದ ಎಂ.ರಾಮರಾವ್ ಹೃದಯಾಘಾತದಿಂದ ವಿಧಿವಶ..!
ಮುಂಡಗೋಡಿನ ಲೋಕೋಪಯೋಗಿ ಇಲಾಖೆಯ ಇಂಜಿನೀಯರ್ ಆಗಿ ಕಾರ್ಯನಿರ್ವಹಿಸಿದ್ದ, ಸದ್ಯ ಕಲಘಟಗಿ PWD ಉಪವಿಭಾಗದ ಸಹಾಯಕ ಇಂಜಿನೀಯರ್ ಆಗಿ ಕಾರ್ಯ ನಿರ್ವಹಿಸ್ತಿದ್ದ ಎಂ.ರಾಮರಾವ್ ವಿಧಿವಶರಾಗಿದ್ದಾರೆ. ಇಂದು ಬೆಳಿಗ್ಗೆ ಹೃದಯಾಘಾತದಿಂದ ವಿಧಿವಶರಾಗಿದ್ದು, ಹುಬ್ಬಳ್ಳಿಯ ಸನ್ಪೋಲ್ ಚರ್ಚ್ ಹತ್ತಿರ ಮೃತರ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇನ್ನು ಎಂ.ರಾಮರಾವ್ ರವರ ಅಂತಿಮ ಸಂಸ್ಕಾರ ನಾಳೆ ದಿನಾಂಕ 28 ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ. ಹುಬ್ಬಳ್ಳಿಯ ಗದಗ ರಸ್ತೆಯ ಸನ್ ಪೀಟರ್ ಚರ್ಚನಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಅಂತಾ ಕುಟುಂಬದವರು ಮಾಹಿತಿ ನೀಡಿದ್ದಾರೆ.