ಶಿಗ್ಗಾವಿ ಪುರಸಭೆಯಲ್ಲಿ ಗೋಲಮಾಲ್ ಆರೋಪ, ಸಚಿವ ಶಿವಾನಂದ ಪಾಟೀಲ್ ದಿಢೀರ್ ಭೇಟಿ, ಮುಖ್ಯಾಧಿಕಾರಿಗೆ ತರಾಟೆ..!


ಶಿಗ್ಗಾವಿ ಪುರಸಭೆಗೆ ಇಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ದೀಡೀರ್ ಭೇಟಿ ನೀಡಿದ್ರು. ಶಿಗ್ಗಾವಿ ಪುರಸಭೆಯಲ್ಲಿನ ಅವಾಂತರಗಳ ಬಗ್ಗೆ ಪರಿಶೀಲನೆ ನಡೆಸಿದ್ರು. ಅಲ್ದೆ ಮುಖ್ಯಾಧಿಕಾರಿ ಸೇರಿದಂತೆ ಇನ್ನುಳಿದ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ್ರು.

ಸಮಸ್ಯೆಗಳ ಸರಮಾಲೆ..!
ಇನ್ನು ಸಚಿವ್ರು ಪುರಸಭೆಯ ಅಂಗಳಕ್ಕೆ ಕಾಲಿಡುತ್ತಿದ್ದಂತೆ, ಸಾರ್ವಜನಿಕರಿಂದ ಪುರಾಭೆಯ ದುರಾಡಳಿತದ ಬಗ್ಗೆ ಸಮಸ್ಯೆಗಳ ಸುರಿಮಳೆಯೇ ಸುರಿಸಲಾಯಿತು. ಇನ್ನು ಸ್ಟ್ರೀಟ್ ಲೈಟ್ ಅಳವಡಿಕೆಯಲ್ಲಿ ಭಾರೀ ಗೋಲ್ ಮಾಲ್ ನಡೆದಿದೆ ಅನ್ನೋ ಆರೋಪಕ್ಕೆ ಸಂಬಂಧಿಸಿದಂತೆ ಪುರಸಭೆಯ ಮುಖ್ಯಾಧಿಕಾರಿ ಸಂಗನಬಸಯ್ಯರನ್ನು ತೀವ್ರ ತರಾಟೆಗೆ ಪಡೆದ ಸಚಿವ್ರು ಗರಂ ಆದ್ರು.

ಒಟ್ನಲ್ಲಿ, ಮಾಜಿ ಸಿಎಂ ಬೊಮ್ಮಾಯಿ ತವರು ಕ್ಷೇತ್ರದ ಶಿಗ್ಗಾವಿ ಪುರಸಭೆಯಲ್ಲಿ ಭಾರೀ ಬ್ರಷ್ಟಾಚಾರ, ದುರಾಡಳಿತದ ಆರೋಪಗಳು ಬಂದ ಹಿನ್ನೆಲೆಯಲ್ಲಿ ಉಸ್ತುವಾರಿ ಸಚಿವರು ದಿಢೀರ್ ಭೇಟಿ ನೀಡಿದ್ದು ಸಂಚಲನ ಸೃಷ್ಟಿಸಿದೆ.