ಮುಂಡಗೋಡ ತಾಲೂಕಿನ ಅತ್ತಿವೇರಿ ಬಸವಧಾಮದಲ್ಲಿ ಉತ್ತರ ಕನ್ನಡ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಭಾಗಿಯಾಗಿದ್ದ ವಚನ ಸಾಹಿತ್ಯ ಪ್ರಿಯರ ಸಮ್ಮುಖದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಿಜಗುಣಾನಂದ ಶ್ರೀಗಳು ತಮ್ಮ ಆಶೀರ್ವಚನದಲ್ಲಿ ಶರಣರ ವಚನಗಳ ಕುರಿತು ಮನಮುಟ್ಟುವ ಹಾಗೆ ವರ್ಣಿಸಿದ್ರು. ನಮ್ಮ‌ ದೇಶದಲ್ಲಿ ಎಲ್ಲರೂ ಬರೀ ದೇವರ ಬಗ್ಗೆ ಮಾತಾಡಿದ್ರು, ಆದ್ರೆ ಬಸವಣ್ಣನವರು ಮಾತ್ರ ಮನುಷ್ಯರ ಬಗ್ಗೆ ಮಾತಾಡಿದ್ರು. ಹೀಗಾಗಿ, ಶರಣರ ವಚನಗಳು ಇಂದಿಗೂ ಜನಸಾಮಾನ್ಯರ ನಡುವೆ ನಿಚ್ಚಳವಾಗಿವೆ ಅಂತಾ ತಿಳಿಸಿದ್ರು. ಶರಣರ ವಚನಗಳನ್ನು ಮನೆ ಮನೆಗೂ ತಲುಪಿಸುವ ಕೆಲಸವಾಗಬೇಕು ಅಂತಾ ಆಶಿಸಿದ್ರು. ಬಸವಧಾಮದ ಮಾತೆ ಬಸವೇಶ್ವರಿಯವರಿಗೆ ವಚನ ಸಾಹಿತ್ಯ ಹರಡಲು ಎಲ್ಲರೂ ಕೈ ಜೋಡಿಸಬೇಕು ಅಂತಾ ಕರೆ ನೀಡಿದ್ರು.

ಇನ್ನು ಗದುಗಿನ ತೋಂಟದಾರ್ಯ ಮಠದ ಸಿದ್ದರಾಮ ಶ್ರೀಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ್ರು. ಅದ್ರಂತೆ, ಬಸವಧಾಮದ ಮಾತೆ ಬಸವೇಶ್ವರಿಯವರು ಆಶೀರ್ವಚನ ನೀಡಿದ್ರು.

ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಸುಮಂಗಲಾ ಅಂಗಡಿ ಅಧ್ಯಕ್ಷೀಯ ಭಾಷಣ ಮಾಡಿದ್ರು. ಮಾಜಿ ಶಾಸಕ ವಿ.ಎಸ್. ಪಾಟೀಲ್ ಸಮ್ಮೇಳನ ಉದ್ದೇಶಿಸಿ ಮಾತನಾಡಿದ್ರು. ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶಿವದೇವ ದೇಸಾಯಿಸ್ವಾಮಿ ಮಾತನಾಡಿದ್ರು.

ಕಾರ್ಯಕ್ರಮಕ್ಕೂ ಮೊದಲು ಶರಣ ಸಾಹಿತ್ಯ ಸಮ್ಮೇಳನದ ಧ್ವಜಾರೋಹಣ, ಶರಣರ ಭಾವಚಿತ್ರದ ಮೆರವಣಿಗೆ ನಡೆಯಿತು.

ಸಮ್ಮೇಳನದ ವೇದಿಕೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ, ಮಾಜಿ ಜಿಪಂ ಸದಸ್ಯ ಎಲ್.ಟಿ.ಪಾಟೀಲ್, ಅರಣ್ಯ ಇಲಾಖೆ ಅಧಿಕಾರಿ ಶ್ರೀಶೈಲ್ ವಾಲಿ, RFO ವಾಗೀಶ್, ಆರ್.ಜೆ.ಬೆಳ್ಳೆನವರ್, ರವಿಗೌಡ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

error: Content is protected !!