ಮುಂಡಗೋಡ: ತಾಲೂಕಿನಲ್ಲಿಂದು 21 ಪಾಸಿಟಿವ್ ದೃಢ, 206 ಸಕ್ರೀಯ ಕೇಸ್..!

ಮುಂಡಗೋಡ: ತಾಲೂಕಿನಲ್ಲಿಂದು 21 ಪಾಸಿಟಿವ್ ದೃಢ, 206 ಸಕ್ರೀಯ ಕೇಸ್..!

ಮುಂಡಗೋಡ-ತಾಲೂಕಿನಲ್ಲಿ ಇಂದು 21 ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು ತಾಲೂಕಿನಲ್ಲಿ ಒಟ್ಟೂ 206 ಸಕ್ರೀಯ ಪ್ರಕರಣಗಳಾಂದಂತಾಗಿದೆ. ಇನ್ನು 62 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 164 ಜನ ಸೋಂಕಿತರು ಹೋಂ ಐಸೋಲೇಶನ್ ನಲ್ಲಿದ್ದಾರೆ. ಇಂದು ಯಾವುದೇ ಸೋಂಕಿತರು ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿಲ್ಲ ಅಂತಾ ಮುಂಡಗೋಡ ತಹಶೀಲ್ದಾರ್ ಮಾಹಿತಿ ನೀಡಿದ್ದಾರೆ. ********************** ಪಬ್ಲಿಕ್ ಫಸ್ಟ್ ನ್ಯೂಸ್ ಇಂದಿನ ಪ್ರಮುಖ ಸುದ್ದಿ ನೋಡಲು ಇಲ್ಲಿ ಕ್ಲಿಕ್ ಮಾಡಿ..

ಭಟ್ಕಳದಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನಿ ಮಹಿಳೆ ಪೊಲೀಸರ ವಶಕ್ಕೆ..!

ಭಟ್ಕಳದಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನಿ ಮಹಿಳೆ ಪೊಲೀಸರ ವಶಕ್ಕೆ..!

ಭಟ್ಕಳ: ಭಟ್ಕಳದಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನಿ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿ ಮೇರೆಗೆ ಪರಿಶೀಲನೆ ನಡೆಸಿದ ಪೊಲೀಸರಿಂದ ಮಹಿಳೆ ಬಂಧನವಾಗಿದೆ. ಖತೀಜಾ ಮೆಹರಿನ್ ಬಂಧಿತ ಪಾಕಿಸ್ತಾನಿ ಮಹಿಳೆಯಾಗಿದ್ದು ಭಟ್ಕಳ ಮೂಲದ ಜಾವೀದ್ ಮೊಹಿದ್ದೀನ್ ರುಕ್ನುದ್ದೀನ್‌ ಎಂಬುವನನ್ನು 8 ವರ್ಷದ ಹಿಂದೆ ದುಬೈನಲ್ಲಿವಿವಾಹವಾಗಿದ್ದ ಮಹಿಳೆ, 2014ರಲ್ಲಿ ಪ್ರವಾಸಿ ವೀಸಾ ಪಡೆದು 3 ತಿಂಗಳು ಭಾರತಕ್ಕೆ ಬಂದು ವಾಪಸ್ಸಾಗಿದ್ದಳು. ಆನಂತರ, 2015ರಲ್ಲಿ ಕಳ್ಳಮಾರ್ಗದ ಮೂಲಕ ಯಾವುದೇ ದಾಖಲೆ ನೀಡದೇ ಅಕ್ರಮವಾಗಿ ಭಾರತದೊಳಕ್ಕೆ ಪ್ರವೇಶ ಮಾಡಿದ್ದಳು. ಭಟ್ಕಳದ ನವಾಯತ ಕಾಲೋನಿಯಲ್ಲಿ 2014 ರಿಂದ ಅಂದರೆ, ಕಳೆದ 8 ವರ್ಷಗಳಿಂದ 3 ಮಕ್ಕಳೊಂದಿಗೆ ವಾಸ್ತವ್ಯ ಹೂಡಿದ್ದಳು. ಇನ್ನು, ಈ ಪಾಕಿಸ್ತಾನಿ ಮಹಿಳೆ ಸುಳ್ಳು ದಾಖಲೆ ನೀಡಿ ಓಟರ್ ಐಡಿ, ರೇಷನ್ ಕಾರ್ಡ್, ಜನ್ಮದಾಖಲೆ ಪಡೆದಿದ್ದಾಳೆ. ಹೀಗಾಗಿ, ಐಪಿಸಿ ಸೆಕ್ಷನ್ 468, 471 ಅಡಿ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಘಟನೆ ಬಗ್ಗೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದೇ‌ನು..? ವೀಕ್ಷಿಸಲು...

ಬೆಂಕಿಯಿಂದ ಮನೆ ಸುಟ್ಟು ಸಂಕಷ್ಟದಲ್ಲಿದ್ದ ಇಂದೂರಿನ ಬಡ ಕುಟುಂಬಕ್ಕೆ ಗ್ರಾಪಂ. ವತಿಯಿಂದ 5 ಸಾವಿರ ರೂ. ಧನಸಹಾಯ..!

ಬೆಂಕಿಯಿಂದ ಮನೆ ಸುಟ್ಟು ಸಂಕಷ್ಟದಲ್ಲಿದ್ದ ಇಂದೂರಿನ ಬಡ ಕುಟುಂಬಕ್ಕೆ ಗ್ರಾಪಂ. ವತಿಯಿಂದ 5 ಸಾವಿರ ರೂ. ಧನಸಹಾಯ..!

ಮುಂಡಗೋಡ: ತಾಲೂಕಿನ ಇಂದೂರು ಗ್ರಾಮದಲ್ಲಿ ಸೋಮವಾರ ತಡರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿ‌ಂದ ಮನೆಗೆ ಬೆಂಕಿ ತಗುಲಿ ಮನೆ ಸುಟ್ಟ ಕರಕಲಾದ ಘಟನೆಗೆ ಸಂಬಂಧಿಸಿದಂತೆ, ಸಂಕಷ್ಟಕ್ಕೊಳಗಾಗಿರೋ ಕುಟುಂಬಕ್ಕೆ ಇಂದೂರು ಗ್ರಾಮ ಪಂಚಾಯತಿ ವತಿಯಿಂದ 5 ಸಾವಿರ ರೂ. ಧನಸಹಾಯ ಮಾಡಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷೆ, ಉಪಾಧ್ಯಕ್ಷರು ಸೇರಿದಂತೆ ಸದಸ್ಯರು ಸಂತ್ರಸ್ತ ಕುಟುಂಬಕ್ಕೆ ಖುದ್ದಾಗಿ ತೆರಳಿ ಹಣ ನೀಡಿ, ಸಾಂತ್ವನ ಹೇಳಿದ್ರು. ಅಲ್ದೆ, ಘಟನೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಬರುವ ಪರಿಹಾರ ಕೊಡಿಸಲು ಹಾಗೂ ಗ್ರಾಮ ಪಂಚಾಯತಿಯಿಂದ ಇನ್ನುಳಿದ ಸೌಲಭ್ಯಗಳನ್ನು ನೀಡುವುದಾಗಿ ಈ ವೇಳೆ ಸಾಂಘಿಕ ಭರವಸೆ ನೀಡಲಾಯಿತು. ******************** ಬೆಂಕಿ ಕೆನ್ನಾಲಿಗೆಗೆ ಇಡೀ ಕುಟುಂಬವೇ ಬೀದಿಗೆ.. ಪಬ್ಲಿಕ್ ಫಸ್ಟ್ ನ್ಯೂಸ್ ಪ್ರಮುಖ ಸುದ್ದಿ ನೋಡಲು, ಇಲ್ಲಿ ಕ್ಲಿಕ್ ಮಾಡಿ.

ಉದಾಸಿ ಅಂತಿಮ ದರ್ಶನದ ವೇಳೆ ಮೊಬೈಲ್ ಕಳ್ಳರ ಕೈಚಳಕ: ಸಿಕ್ಕಿಬಿದ್ದು ಒದೆ ತಿಂದ ಯುವಕ.‌!

ಉದಾಸಿ ಅಂತಿಮ ದರ್ಶನದ ವೇಳೆ ಮೊಬೈಲ್ ಕಳ್ಳರ ಕೈಚಳಕ: ಸಿಕ್ಕಿಬಿದ್ದು ಒದೆ ತಿಂದ ಯುವಕ.‌!

ಹಾನಗಲ್: ಬಿಜೆಪಿ ಹಿರಿಯ ಶಾಸಕ ಸಿ.ಎಂ. ಉದಾಸಿ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದು ಬಂದಿದೆ. ಈ ವೇಳೆ ಜೇಬುಗಳ್ಳರು ಕೈ ಚಳಕ ತೋರಿದ್ದಾರೆ. ಎಷ್ಟೊ ಜನರ ಮೊಬೈಲ್ ಎಗರಿಸಿದ್ದಾರೆ. ಇನ್ನು ಹೀಗೆ ಜೇಬಿಗೆ ಕತ್ತರಿ ಹಾಕುತ್ತಿರುವಾಗಲೇ, ರೆಡ್ ಹ್ಯಾಂಡ್ ಆಗಿ ಓರ್ವ ಖತರ್ನಾಕ ಜೇಬುಗಳ್ಳ ತಗಲಾಕ್ಕೊಂಡಿದ್ದ‌. ಜೇಬು ಕತ್ತರಿಸುವಾಗಲೆ ಕಳ್ಳನನ್ನು ಹಿಡಿದು ಸಾರ್ವಜನಿಕರು ಛಳಿ ಬಿಡಿಸಿದ್ದಾರೆ. ನಂತರ ಪೊಲೀಸರಿಗೆ ಕಳ್ಳನನ್ನು ಒಪ್ಪಿಸಿದ್ದಾರೆ. ಹಾನಗಲ್ ಪೊಲೀಸ್ರು ಕಳ್ಳನನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಜನಸಂದಣಿಯಲ್ಲಿ ಜೇಬಿಗೆ ಕತ್ತರಿ ಹಾಕಿಸಿಕೊಂಡವರ ಗೋಳು ಯಾರಿಗೂ ಬೇಡ. ಕೆಲವೊಬ್ರು ಹಣ ಕಳೆದುಕೊಂಡಿದ್ರೆ, ಇನ್ನೂ ಕೆವ್ರು ಮೊಬೈಲ್ ಕಳೆದುಕೊಂಡು ಬೆಪ್ಪು ಮೋರೆ ಹಾಕಿಕೊಂಡು ಮನೆ ಕಡೆ ನಡೆದಿದ್ದಾರೆ. ******************* ಪಬ್ಲಿಕ್ ಫಸ್ಟ್ ನ್ಯೂಸ್ ನ ಯೂಟ್ಯೂಬ್ ಸುದ್ದಿ ನೋಡಲು ಈ ಲಿಂಕ್ ಕ್ಲಿಕ್ ಮಾಡಿ.. SUBSCRIBE ಆಗಿ ಬೆಂಬಲಿಸಿ..  

ಸಿ.ಎಂ.ಉದಾಸಿ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಅಪಾರ ಅಭಿಮಾನಿಗಳು..!

ಸಿ.ಎಂ.ಉದಾಸಿ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಅಪಾರ ಅಭಿಮಾನಿಗಳು..!

ಹಾನಗಲ್: ಮಾಜಿ ಸಚಿವ, ಬಿಜೆಪಿ ಹಿರಿಯವಹಾಲಿ ಶಾಸಕ ಸಿ.ಎಂ.ಉದಾಸಿ ನಿಧನರಾದ ಹಿನ್ನೆಲೆ ಅವ್ರ ಪಾರ್ಥೀವ ಶರೀರದ ದರ್ಶನಕ್ಕೆ ಅಪಾರ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಹಾನಗಲ್ ಕುಮಾರೇಶ್ವರ ಮಠದ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಅಪಾರ ಅಭಿಮಾನಿಗಳು ತನ್ನ ನೆಚ್ಚಿನ ನಾಯಕನಿಗೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಹೂಮಾಲೆ ಹಿಡಿದು ಸಾಲು ಸಾಲಾಗಿ ಬರುತ್ತಿರೋ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. ಇನ್ನು ಸಿ.ಎಂ.ಉದಾಸಿ ಪುತ್ರ ಸಂಸದ ಶಿವಕುಮಾರ್ ಉದಾಸಿ, ತಂದೆಯ ಪಾರ್ಥೀವ ಶರೀರದ ಪಕ್ಕದಲ್ಲೇ ನಿಂತು ಕಂಬನಿ ಮಿಡಿಯುತ್ತಿದ್ದಾರೆ.  

ಛತ್ರಪತಿ ಶಿವಾಜಿ ಬ್ಯಾಂಕ್ ವತಿಯಿಂದ ವೈದ್ಯಕೀಯ ಸಲಕರಣೆ ಕೊಡುಗೆ..!

ಛತ್ರಪತಿ ಶಿವಾಜಿ ಬ್ಯಾಂಕ್ ವತಿಯಿಂದ ವೈದ್ಯಕೀಯ ಸಲಕರಣೆ ಕೊಡುಗೆ..!

ಮುಂಡಗೋಡ: ತಾಲೂಕಿನ ನಂದಿಕಟ್ಟಾ ಗ್ರಾಮದ ಆರೋಗ್ಯ ವಿಸ್ತರಣಾ ಕೇಂದ್ರಕ್ಕೆ ಮುಂಡಗೋಡಿನ ಛತ್ರಪತಿ ಶಿವಾಜಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ವತಿಯಿಂದ ಇಂದು ಬಿಪಿ ಮಷೀನ್, ಶುಗರ್ ಮಷೀನ್ ಪಲ್ಸ ಆಕ್ಸಿ ಮೀಟರ್ ಗಳನ್ನು ಕೊಡುಗೆ ನೀಡಲಾಯಿತು. ಗ್ರಾಮೀಣ ಭಾಗದ ಜನರಿಗೆ ಸಹಕಾರ ವಾಗಲಿ ಅಂತಾ ವೈದ್ಯಕೀಯ ಸಲಕರಣೆ ನೀಡಿರೋ ಸೊಸೈಟಿ ಆಡಳಿತ ಮಂಡಳಿ, ನಂದಿಕಟ್ಟಾ ಗ್ರಾಮ ಪಂಚಾಯತ ಮೂಲಕ ಹಸ್ತಾಂತರಿಸಿದ್ರು. ಬೆಳೆಸಾಲಕ್ಕಾಗಿ ರೈತರ ಪರದಾಟ.. ಪಬ್ಲಿಕ್ ಫಸ್ಟ್ ನ್ಯೂಸ್ ಪ್ರಮುಖ ಸುದ್ದಿ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ.. https://youtu.be/b6XTNoYGJdM

ಹಾವೇರಿಗೆ ಆಗಮಿಸಿದ ಉದಾಸಿ ಪಾರ್ಥೀವ ಶರೀರ, ಅಭಿಮಾನಿಗಳಿಂದ ಅಂತಿಮ ದರ್ಶನ..!

ಹಾವೇರಿಗೆ ಆಗಮಿಸಿದ ಉದಾಸಿ ಪಾರ್ಥೀವ ಶರೀರ, ಅಭಿಮಾನಿಗಳಿಂದ ಅಂತಿಮ ದರ್ಶನ..!

ಹಾವೇರಿ: ಮಾಜಿ ಸಚಿವ ಹಾಗೂ ಹಾಲಿ ಶಾಸಕ ಸಿ. ಎಂ. ಉದಾಸಿ ನಿಧನ ಹಿನ್ನಲೆ, ಹಾವೇರಿ ನಗರಕ್ಕೆ ಪಾರ್ಥೀವ ಶರೀರ ಆಗಮಿಸಿದೆ. ಹಾವೇರಿ ನಗರದ ಹೊಸಮನಿ ಸಿದ್ದಪ್ಪ ಸರ್ಕಲ್ ಬಳಿ ಶಾಸಕರು ಹಾಗೂ ಕಾರ್ಯಕರ್ತರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ್ರು. ಹಾವೇರಿಯಲ್ಲಿ ನೂರಾರು ಆಭಿಮಾನಿಗಳ ಅಂತಿಮ ದರ್ಶನದ ಬಳಿಕ ಹಾನಗಲ್ ಕಡೆಗೆ ಪಾರ್ಥೀವ ಶರೀರ ಸಾಗಿಸಲಾಗುತ್ತಿದೆ.

ಸಿ.ಎಂ.ಉದಾಸಿ ವಿಧಿವಶ ಹಿನ್ನೆಲೆ: ವಿವಿಧ ಮಠಾಧೀಶರ ಸಾನಿಧ್ಯದಲ್ಲಿ ಇಂದು ಅಂತ್ಯಕ್ರಿಯೆ..!

ಸಿ.ಎಂ.ಉದಾಸಿ ವಿಧಿವಶ ಹಿನ್ನೆಲೆ: ವಿವಿಧ ಮಠಾಧೀಶರ ಸಾನಿಧ್ಯದಲ್ಲಿ ಇಂದು ಅಂತ್ಯಕ್ರಿಯೆ..!

ಹಾನಗಲ್: ಮಾಜಿ ಸಚಿವ ಹಾಗೂ ಹಾಲಿ ಶಾಸಕ ಸಿ. ಎಂ.ಉದಾಸಿ ನಿಧನರಾದ ಹಿನ್ನಲೆಯಲ್ಲಿ ಇಂದು ಹುಟ್ಟೂರು ಹಾನಗಲ್ಲಿನಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ, ಅಂತ್ಯಕ್ರಿಯೆಯಲ್ಲಿ ವಿವಿಧ ಗಣ್ಯ ಮಠಾಧೀಶರು ಸಾನಿಧ್ಯವಹಿಸಲಿದ್ದಾರೆ. ಹುಬ್ಬಳ್ಳಿಯ ಮೂರು ಸಾವಿರ ಮಠದ ಗುರಸಿದ್ದ ರಾಜಯೋಗೆಂದ್ರ ಸ್ವಾಮೀಜಿ, ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ, ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು ಮಂತ್ರಘೋಷಣೆ, ಕ್ರೀಯಾ ಸಮಾಧಿಯ ವೇಳೆ ಮೋಕ್ಷ ಮಂತ್ರಪಠಣ ಉಚ್ಚರಿಸಲಿದ್ದಾರೆ. ಕುಮಾರೇಶ್ವರ ಮಠದ ಹಿಂಭಾಗದ ರುದ್ರಭೂಮಿಯಲ್ಲಿ ಸಿ.ಎಂ.ಉದಾಸಿ ಸಮಾಧಿ ಕಾರ್ಯ ನಡೆಯಲಿದ್ದು, ಸಮಾಧಿ ಗುಂಡಿಯೊಳಗೆ ವಿಭೂತಿ ಹಾಗೂ ವೀರಶೈವ ಲಿಂಗಾಯತ ಸಂಪ್ರದಾಯದಂತೆ ವಿವಿಧ ವಸ್ತುಗಳಿಂದ ಸಿಂಗರಿಸಲಾಗುತ್ತಿದೆ. ಮಠಾಧೀಶರ ಸಾನಿಧ್ಯದಲ್ಲಿ ವಿಶೇಷ ಪೂಜೆ, ನಂತರ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ ಅಂತಾ ಮೂಲಗಳು ಮಾಹಿತಿ ನೀಡಿವೆ. ****************** ಬೆಂಕಿಯ ಕೆನ್ನಾಲಿಗೆಗೆ ಬಡಕುಟುಂಬವೇ ಬೀದಿಗೆ.. ಪಬ್ಲಿಕ್ ಫಸ್ಟ್ ನ್ಯೂಸ್ ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.. https://youtu.be/9EuO4Ibd8dU

ಬೆಂಗಳೂರಿನಿಂದ ಹಾನಗಲ್ ಗೆ ಬರುತ್ತಿರೋ ಉದಾಸಿ ಪಾರ್ಥೀವ ಶರೀರ..! ಸಾರ್ವಜನಿಕ ದರ್ಶನಕ್ಕೆ ಸಕಲ ಸಿದ್ಧತೆ..!

ಬೆಂಗಳೂರಿನಿಂದ ಹಾನಗಲ್ ಗೆ ಬರುತ್ತಿರೋ ಉದಾಸಿ ಪಾರ್ಥೀವ ಶರೀರ..! ಸಾರ್ವಜನಿಕ ದರ್ಶನಕ್ಕೆ ಸಕಲ ಸಿದ್ಧತೆ..!

ಹಾನಗಲ್: ಮಾಜಿ ಸಚಿವ ಹಾಗೂ ಹಾಲಿ ಬಿಜೆಪಿ ಹಿರಿಯ ಶಾಸಕ ಸಿ. ಎಂ. ಉದಾಸಿ ನಿಧನರಾದ ಹಿನ್ನೆಲೆಯಲ್ಲಿ ಇಂದು ಹುಟ್ಟೂರು ಹಾನಗಲ್ ಗೆ ಪಾರ್ಥಿವ ಶರೀರ ಬರಲಿದೆ. ಈಗಾಗಲೇ ಬೆಳಿಗ್ಗೆ 6 ಗಂಟೆಗೆ ಬೆಂಗಳೂರು ಬಿಟ್ಟಿರುವ ಸಿ ಎಮ್ ಉದಾಸಿ ಪಾರ್ಥಿವ ಶರೀರ, ಜಿಲ್ಲೆಯ ಮೊದಲ ಗ್ರಾಮ ಕುಮಾರಪಟ್ಟಣಂ ಗೆ ಆಗಮಿಸಲಿದೆ. ಅಲ್ಲಿಯ ಕಾರ್ಯಕರ್ತರಿಂದ ಅಂತಿಮ ದರ್ಶನ, ನಂತರ ರಾಣೇಬೆನ್ನೂರು, ಮೋಟೆಬೆನ್ನೂರು, ಹಾವೇರಿಯಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಾರ್ಗ ಮಧ್ಯದ ಗ್ರಾಮಗಳ ಕಾರ್ಯಕರ್ತರಿಗೆ ಅಂತಿಮ ದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.ಇನ್ನು ಕೆಲವು ಕಡೆ ರಾಷ್ಟ್ರೀಯ ಹೆದ್ದಾರಿಯಲ್ಲೇ ನಿಲ್ಲಿಸಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ನಂತರ ಹಾನಗಲ್ ಗೆ 12 ಗಂಟೆಗೆ ಪಾರ್ಥಿವ ಶರೀರ ಆಗಮಿಸೋ ಸಾಧ್ಯತೆಯಿದ್ದು, ಮದ್ಯಾಹ್ನ 1 ಗಂಟೆಗೆ ಸ್ವಗೃಹಕ್ಕೆ ತೆರಳಿ ಪಾರ್ಥಿವ ಶರೀರಕ್ಕೆ ಕುಟುಂಬಸ್ಥರಿಂದ ಪೂಜೆ ಸಲ್ಲಿಸಿ, ಕುಟುಂಬಸ್ಥರಿಂದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮದ್ಯಾಹ್ನ 2 ಗಂಟೆ ನಂತರ ಕುಮಾರೇಶ್ವರ ಮಠದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಹಾನಗಲ್...

ಬಿಜೆಪಿ ಹಿರಿಯ ಶಾಸಕ ಉದಾಸಿ ಅಸ್ತಂಗತ: ಹಾನಗಲ್ ನಲ್ಲಿ ಬುಧವಾರ ಸಂಜೆ 4 ಕ್ಕೆ ಅಂತ್ಯಕ್ರಿಯೆ

ಬಿಜೆಪಿ ಹಿರಿಯ ಶಾಸಕ ಉದಾಸಿ ಅಸ್ತಂಗತ: ಹಾನಗಲ್ ನಲ್ಲಿ ಬುಧವಾರ ಸಂಜೆ 4 ಕ್ಕೆ ಅಂತ್ಯಕ್ರಿಯೆ

ಹಾನಗಲ್: ಬಿಜೆಪಿಯ ಹಿರಿಯ ಶಾಸಕ ಮಾಜಿ ಸಚಿವ ಸಿ.ಎಂ.ಉದಾಸಿ ನಿಧನರಾದ ಹಿನ್ನೆಲೆಯಲ್ಲಿ, ನಾಳೆ ಬುಧವಾರ ಸಂಜೆ 4 ಗಂಟೆಗೆ ಹಾವೇರಿ ಜಿಲ್ಲೆ ಹಾನಗಲ್ ಪಟ್ಟಣದ ವಿರಕ್ತಮಠದ ರುದ್ರಭೂಮಿಯಲ್ಲಿ ಅವರ ಅಂತ್ಯಕ್ರಿಯೆ‌ ನಡೆಯಲಿದೆ ಅಂತಾ ಆಪ್ತ ಮೂಲಗಳು ತಿಳಿಸಿವೆ. ನಾಳೆ ಮಧ್ಯಾಹ್ನ 12 ಗಂಟೆಗೆ ಹಾನಗಲ್ ಪಟ್ಟಣಕ್ಕೆ ಆಗಮಿಸಲಿರೋ ಶಾಸಕ ಉದಾಸಿಯವರ ಪಾರ್ಥೀವ ಶರೀರವನ್ನು, ಮಧ್ಯಾಹ್ನ 1 ಗಂಟೆಗೆ ಪಟ್ಟಣದ ಗೌಳಿ ಗಲ್ಲಿಯಲ್ಲಿರೋ ಅವರ ನಿವಾಸಕ್ಕೆ ತರಲಾಗುತ್ತದೆ. ಮದ್ಯಾಹ್ನ 2 ಗಂಟೆ ನಂತರ ಪಟ್ಟಣದ ವಿರಕ್ತಮಠದ ಆವರಣದಲ್ಲಿ ಪಾರ್ಥೀವ ಶರೀರದ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಜೆ 4 ಗಂಟೆಗೆ ಲಿಂಗಾಯತ ವಿಧಿ ವಿಧಾನದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಅಂತಾ ಮಾಹಿತಿ ಲಭ್ಯವಾಗಿದೆ. ******************* ಪಬ್ಲಿಕ್ ಫಸ್ಟ್ ನ್ಯೂಸ್ ನ ಇಂದಿನ ಪ್ರಮುಖ ಸುದ್ದಿ ನೋಡಲು ಇಲ್ಲಿ ಕ್ಲಿಕ್ ಮಾಡಿ.. https://youtu.be/9EuO4Ibd8dU

error: Content is protected !!