ಮುಂಡಗೋಡ:ತಾಲೂಕಿನ ಚೌಡಳ್ಳಿ, ಕ್ಯಾಸನಕೇರಿ ರಸ್ತೆಯಲ್ಲಿ ಅದ್ವಾನ ಶುರುವಾಗಿದೆ. ಚೌಡಳ್ಳಿ, ಕ್ಯಾಸನಕೇರಿ, ಮಲವಳ್ಳಿ, ಲಕ್ಕೊಳ್ಳಿ ಸೇರಿದಂತೆ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸೋ ರಸ್ತೆ ಅಧಿಕಾರಿಗಳ ನಿರ್ಲಕ್ಷದಿಂದ ಮಳೆಗಾಲದಲ್ಲಿ ಎದ್ದು ಬಿದ್ದು ಹೋಗುವ ಸ್ಥಿತಿಗೆ ತಂದಿಟ್ಟಿದೆ.
ಹೌದು, ಮುಂಡಗೋಡ ತಾಲೂಕಿನ ಚೌಡಳ್ಳಿ, ಮಲವಳ್ಳಿ, ಲಕ್ಕೊಳ್ಳಿ, ಕ್ಯಾಸನಕೇರಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸೋ ರಸ್ತೆಯಲ್ಲಿ ನೀರಾವರಿ ಯೋಜನೆಗಾಗಿ ಕಾಮಗಾರಿ ಮಾಡಲಾಗಿತ್ತು. ಪೈಪಲೈನ್ ಅಳವಡಿಸಲು ರಸ್ತೆಯಲ್ಲೇ ಗುಂಡಿ ತೆಗೆದು ಪೈಪಲೈನ್ ಜೋಡಿಸಲಾಗಿದೆ.
ಪೈಪ್ ಲೈನ್ ಕಾಮಗಾರಿ ಎಫೆಕ್ಟ್..!
ಆದ್ರೆ ಹಾಗೆ ಗುಂಡಿ ತೋಡಿ, ಪೈಪುಗಳನ್ನು ಮುಚ್ಚಿದ ನಂತರ ಸಮರ್ಪಕವಾಗಿ ಗುಂಡಿಗಳನ್ನು ಮುಚ್ಚಿಯೇ ಇಲ್ಲ. ಹೀಗಾಗಿ, ಸದ್ಯ ಮಳೆ ಬಂದಿರೋ ಕಾರಣಕ್ಕೆ ಗುಂಡಿಗೆ ಹಾಕಲಾಗಿದ್ದ ಮಣ್ಣು ಸಂಪೂರ್ಣ ಕುಸಿದಿದೆ. ಪರಿಣಾಮ ರಸ್ತೆಯಲ್ಲಿ ವಾಹನಗಳಿರಲಿ, ಜನರೂ ಓಡಾಡದಂತ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸಂಬಂಧ ಪಟ್ಟ ಅಧಿಕಾರಿಗಳ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತ ಪಡಿಸ್ತಿದಾರೆ.
MLC ಗೂ ತಟ್ಟಿದ ಬಿಸಿ..!
ಅಂದಹಾಗೆ, ಇವತ್ತು ಬೆಳಿಗ್ಗೆ ಇದೇ ಮಾರ್ಗದಲ್ಲಿ ಸಂಚರಿಸ್ತಿದ್ದ MLC ಶಾಂತಾರಾಮ್ ಸಿದ್ದಿ ಹಾಗೂ ಮಾಜಿ ಶಾಸಕ ವಿ.ಎಸ್.ಪಾಟೀಲ್ ರಿಗೂ ಈ ರಸ್ತೆಯಲ್ಲಿ ಇಂದು ಕಿರಿಕಿರಿಯಾಗಿತ್ತು. ರಸ್ತೆಯ ಗುಂಡಿಯಲ್ಲಿ ಕಾರು ಇಳಿಯದೇ, ಬಂದ ದಾರಿಗೆ ಸುಂಕ ಇಲ್ಲ ಅಂತಾ ವಾಪಸ್ ತೆರಳಿ, ಬೇರೆ ಮಾರ್ಗದಿಂದ ಸಂಚರಿಸಿದ್ರು.
ಅಧಿಕಾರಿಗಳೇ ಗಮನಿಸಿ..!
ಇನ್ನು, ಇಲ್ಲಿನ ರಸ್ತೆಯಲ್ಲಿ ರಸ್ತೆ ಸಮಸ್ಯೆಯಿಂದ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಆದ್ರೆ ಇದೇಲ್ಲ ಗೊತ್ತಿದ್ದರೂ ಅಧಿಕಾರಿಗಳು ಮಾತ್ರ ಸಮಸ್ಯೆಗೆ ಸ್ಫಂಧಿಸುತ್ತಿಲ್ಲ. ಹೀಗಾಗಿ ಈ ಗ್ರಾಮಗಳ ಜನ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸ್ತಿದಾರೆ. ಹೀಗಾಗಿ ಅಧಿಕಾರಿಗಳು ಇತ್ತ ಸ್ವಲ್ಪ ಗಮನ ಹರಿಸಬೇಕಿದೆ.
ಈ ಸುದ್ದಿಯ ಸಂಪೂರ್ಣ ಚಿತ್ರಣ ಇಲ್ಲಿದೆ ನೋಡಿ..!