ಮುಂಡಗೋಡ ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರೋ ಮಳೆ, ಗಾಳಿ ಅವಾಂತರ ತಂದಿಟ್ಟಿದೆ‌. ತಾಲೂಕಿನಲ್ಲಿ ಮಳೆ ಗಾಳಿಗೆ ಒಟ್ಟೂ 12 ಮನೆಗಳಿಗೆ ಹಾನಿಯಾಗಿದ್ದು ಸಂಕಷ್ಟ ತಂದೊಡ್ಡಿದೆ.


ಮಳೆಯಿಂದ ಹಾನಿ ಎಲ್ಲೇಲ್ಲಿ..?
ಮುಂಡಗೋಡ ತಾಲೂಕಿನಲ್ಲಿ ಒಟ್ಟೂ 12 ಮನೆಗಳಿಗೆ ಮಳೆ, ಗಾಳಿಯಿಂದ ಹಾನಿಗೊಳಗಾಗಿದ್ದು, ಹುನಗುಂದ, ಹರಗನಳ್ಳಿ, ಭದ್ರಾಪುರ, ಶ್ಯಾನವಳ್ಳಿ, ಇಂದೂರು, ಗಣೇಶಪುರ, ಚಿಗಳ್ಳಿಯಲ್ಲಿ ತಲಾ ಒಂದು ಮನೆಗಳಿಗೆ ಹಾನಿಯಾಗಿದೆ. ಇನ್ನು ಮುಂಡಗೋಡ ಪಟ್ಟಣ ಹಾಗೂ ಸನವಳ್ಳಿ ಗ್ರಾಮದಲ್ಲಿ ತಲಾ ಎರಡು ಮನೆಗಳು ಜಖಂಗೊಂಡಿವೆ ಅಂತಾ ಮುಂಡಗೋಡ ತಹಶೀಲ್ದಾರ್ ಮಾಹಿತಿ‌ ನೀಡಿದ್ದಾರೆ.

ಇನ್ನು ಹಾನಿಗೊಳಗಾದ ಸಂತ್ರಸ್ತ ಕುಟುಂಬಗಳು ಶೀಘ್ರವೇ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.

error: Content is protected !!