ಮುಂಡಗೋಡ:ತಾಲೂಕಿನ ಮಟ್ಟಿಗೆ ಇದು ಸಂತಸದ ಸುದ್ದಿ. ತಾಲೂಕಿನಲ್ಲಿ ಇಂದು ಹೊಸತಾಗಿ ಯಾವುದೇ ಕೊರೋನಾ ಪಾಸಿಟಿವ್ ಸೋಂಕಿತರು ಪತ್ತೆಯಾಗಿಲ್ಲ.

ಸದ್ಯ ತಾಲೂಕಿನಲ್ಲಿ ಒಟ್ಟೂ 105 ಸಕ್ರೀಯ ಪ್ರಕರಣಗಳಿದ್ದು, ಆಸ್ಪತ್ರೆಯಲ್ಲಿ 41 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 64 ಜನ ಸೋಂಕಿತರು ಹೋಂ ಐಸೋಲೇಶನ್ ನಲ್ಲಿದ್ದಾರೆ. 21 ಜನ ಸೋಂಕಿತರು ಇಂದು ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
ಇನ್ನು, ಮುಂಡಗೋಡಿನ ಕೋವಿಡ್ ಕೇರ್ ಸೆಂಟರ್ ಖಾಲಿ ಖಾಲಿಯಾಗಿದೆ.

ದುರಂತದ ಸಂಗತಿಯೆಂದ್ರೆ, ಇಂದು ತಾಲೂಕಿನಲ್ಲಿ ಒಟ್ಟು 2 ಜನ ಸೋಂಕಿತರು ಮೃತ ಪಟ್ಟಿದ್ದಾರೆ. ಟಿಬೇಟಿಯನ್ ಕಾಲೋನಿಯ 80 ವರ್ಷದ ಓರ್ವರು, ಹಾಗೂ ಮುಂಡಗೋಡ ಹಳೂರು ಓಣಿಯ 65 ವರ್ಷದ ಓರ್ವರು ಮೃತಪಟ್ಟಿದ್ದಾರೆ ಅಂತಾ ಮುಂಡಗೋಡ ತಹಶೀಲ್ದಾರರು ಮಾಹಿತಿ ನೀಡಿದ್ದಾರೆ.

error: Content is protected !!