ಹಾವೇರಿ: ನಗರದ ಹೊರವಲಯದಲ್ಲೊಂದು ಮನಕಲಕುವ ಘಟನೆ ನಡೆದಿದೆ.
ಅಪಘಾತವಾದ ಲಾರಿಯಲ್ಲಿ ಚಾಲಕ ಸಿಲುಕಿಕೊಂಡು ಒಂ ದು ಗಂಟೆಗೂ ಹೆಚ್ಚು ಕಾಲ ನರಳಾಡಿದ್ದಾನೆ.
ಹೌದು,ಹಾವೇರಿ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂತಹದ್ದೊಂದು ಘಟನೆ ನಡೆದಿದ್ದು, ಪೆಟ್ರೋಲ್ ತುಂಬಿಕೊಂಡು ಹೋಗುತ್ತಿದ್ದ ಟ್ಯಾಂಕರ್‌ಗೆ ಹಿಂದಿನಿಂದ ಟ್ಯಾಂಕರ್ ಡಿಕ್ಕಿಯಾಗಿದೆ.
ಪರಿಣಾಮ ಚಾಲಕನ ಎಡಗಾಲು ಸಂಪೂರ್ಣ ನುಜ್ಜು ಗುಜ್ಜಾಗಿದ್ದ ಲಾರಿಯಡಿಯೇ ಸಿಲುಕಿಕೊಂಡಿದೆ. ಹೀಗಾಗಿ ಚಾಲಕ ನೋವಿನಿಂದ ಚೀರಾಡಿದ್ದಾನೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನರಳಾಡಿದ್ದಾನೆ.
ಈ ವೇಳೆ ಹಾವೇರಿ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಬಂದು ಚಾಲಕನ್ನು ರಕ್ಷಿಸಿದ್ದಾರೆ. ಲಾರಿಯಿಂದ ಹೊರತೆಗೆದಾಗ ಚಾಲಕ ನೋವಿನಿಂದ ನರಳಾಡಿದ್ದಾನೆ. ತಕ್ಷಣವೇ ಗಾಯಗೊಂಡಿರೋ ಚಾಲಕನನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಇನ್ನು, ಎರಡು ವಾಹನಗಳು ಹುಬ್ಬಳಿಯಿಂದ ಬೆಂಗಳೂರು ಕಡೆ ಹೊರಟಾಗ ಅಪಘಾತವಾಗಿದ್ದು, ಲಾರಿ ಚಾಲಕನ ನಿರ್ಲಕ್ಷ್ಯವೆ ಘಟನೆಗೆ ಕಾರಣ ಎನ್ನಲಾಗಿದೆ. ಹಾವೇರಿ ನಗರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.