ಮುಂಡಗೋಡ: ತಾಲೂಕಿನಾಧ್ಯಂತ ಮಳೆರಾಯನ ಅರ್ಭಟ ಜೋರಾಗಿದೆ. ಬಿಟ್ಟೂ ಬಿಡದೇ ಸುರಿಯುತ್ತಿರೋ ಮಳೆಯ ಕಾರಣಕ್ಕೆ ತಾಲೂಕಿನಲ್ಲಿ ಅವಾಂತರಗಳು ಸೃಷ್ಟಿಯಾಗಿವೆ.

ಇನ್ನು, ನಿನ್ನೆ ಸುರಿದ ಧಾರಾಕಾರ ಮಳೆಯಿಂದ ಸನವಳ್ಳಿ ಗ್ರಾಮದಲ್ಲಿ ಅವಘಡ ಸಂಭವಿಸಿದೆ.
ಮನೆಯ ಮುಂದೆ ಶೆಡ್ ನಲ್ಲಿ ನಿಂತಿದ್ದ ಟ್ರಾಕ್ಟರ್ ಮೇಲೆ ಮನೆಯ ಮೇಲ್ಚಾವಣಿ ಕಿಸಿದು ಬಿದ್ದಿದೆ. ಪರಿಣಾಮ ಟ್ರಾಕ್ಟರ್ ಮೇಲ್ಭಾಗ ಸಂಪೂರ್ಣ ಜಖಂ ಗೊಂಡಿದೆ.

ಸನವಳ್ಳಿಯ ಶಿವಾನಂದ್ ನಾಗಪ್ಪ ಕೇರಿಹೊಲದವರ ಎಂಬುವರಿಗೆ ಸೇರಿದ ಟ್ರಾಕ್ಟರ್ ಇದಾಗಿದ್ದು, ಗ್ರಾಮ ಪಂಚಾಯತಿ ಸಿಬ್ಬಂದಿಗಳು ಬಂದು ಸ್ಥಳ ಪರಿಶೀಲನೆ ಕೈಗೊಂಡಿದ್ದಾರೆ. ಸೂಕ್ತ ಪರಿಹಾರದ ವ್ಯವಸ್ಥೆ‌ ಮಾಡಿಸುವುದಾಗಿ ಭರವಸೆ ನೀಡಿದ್ದಾರೆ.

error: Content is protected !!