ಮುಂಡಗೋಡ ತಾಲೂಕಿನ ಕಲಘಟಗಿ ರಸ್ತೆಯಲ್ಲಿ ಅಪಘಾತವಾಗಿದೆ. ಟಿಬೇಟಿಯನ್ ಕ್ಯಾಂಪ್ ನಂ.6 ರ ಕ್ರಾಸ್ ಸಮೀಪ ಬೈಕ್ ಸ್ಕಿಡ್ ಆಗಿ ಬಿದ್ದು ಅಗಡಿಯ ಯುವಕನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಸಂಜು ಸಿದ್ದಪ್ಪ ಗಳಗಿ (23) ಗಂಭೀರ ಗಾಯಗೊಂಡ ಯುವಕನಾಗಿದ್ದಾನೆ. ಈತ ಗದ್ದೆಗೆ ಹೋಗಿ ವಾಪಸ್ ಅಗಡಿಗೆ ಬರುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ಬಿದ್ದಿದ್ದಾನೆ. ಪರಿಣಾಮ ಯುವಕನ ತಲೆಗೆ ಪೆಟ್ಟಾಗಿದ್ದು, ತಕ್ಷಣವೇ ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನಿಡಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ. ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Top Stories
ಮುಂಡಗೋಡ ಪೊಲೀಸರ ಮಿಂಚಿನ ದಾಳಿ, ಪಾಳಾದ ರಾಮಾಪುರ ಕ್ರಾಸ್ ಬಳಿ ಗಾಂಜಾ “ದಂಧೆ” ಗಿಳಿದಿದ್ದ ಓರ್ವ ಅಂದರ್..!
ಚಿಗಳ್ಳಿ ಹಿರಿಕೆರೆಯಲ್ಲಿ ಮೀನುಗಳ ದಾರುಣ ಸಾವು, ಇಡೀ ಕೆರೆಗೇ ವಿಷ ಹಾಕಿದ್ರಾ ದುರುಳರು..?
ಶಿವರಾಮ್ ಹೆಬ್ಬಾರ್ ಅಧ್ಯಕ್ಷತೆಯಲ್ಲಿ, ಮುಂಡಗೋಡ ತಾಲೂಕಾ ತ್ರೈಮಾಸಿಕ ಕೆಡಿಪಿ ಸಭೆ..!
ಇದು 108 ಅಂಬುಲೆನ್ಸ್ ಸಿಬ್ಬಂದಿಯ ಪ್ರಮಾಣಿಕ, ಮಾನವೀಯ ಕಾರ್ಯ.. 6 ತಿಂಗಳ ನಂತ್ರ ವ್ಯಕ್ತಿಯ ವಸ್ತುಗಳು ಮರಳಿದ್ದೇ ರೋಚಕ..?
ನಿವೃತ್ತ IPS ಅಧಿಕಾರಿ DG-IGP ಓಂ ಪ್ರಕಾಶ್ ಬರ್ಬರ ಹತ್ಯೆ..! ಪತ್ನಿಯೇ ಕೊಲೆ ಮಾಡಿರೋ ಶಂಕೆ..!
ಬೆಳ್ಳಂ ಬೆಳಿಗ್ಗೆ ಬೆಚ್ಚಿ ಬಿದ್ದ ಕಾರವಾರ, ನಗರಸಭೆಯ ಮಾಜಿ ಸದಸ್ಯನ ಭೀಕರ ಹತ್ಯೆ, ಸತೀಶ್ ಕೊಳಂಕರ್ ನ ನಡುರಸ್ತೆಯಲ್ಲೇ ಕೊಚ್ಚಿ ಕೊಲೆ..!
ಹಾವೇರಿ BEO ಮನೆ ಮೇಲೆ ಲೋಕಾಯುಕ್ತ ದಾಳಿ, ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬ್ರಷ್ಟರು..!
CET ಪರೀಕ್ಷಾರ್ಥಿಯ ಜನಿವಾರ ಕತ್ತರಿಸಿದ ವಿಚಾರ, ಶಾಸಕ ಶಿವರಾಮ್ ಹೆಬ್ಬಾರ್ ತೀವ್ರ ಖಂಡನೆ, ತಪ್ಪಿತಸ್ತರ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹ..!!
ಹುಬ್ಬಳ್ಳಿಯ 5 ವರ್ಷದ ಬಾಲಕಿ ಮೇಲೆ ರೇಪ್, ಮರ್ಡರ್ ಕೇಸ್, ಆರೋಪಿಯ ಎನಕೌಂಟರ್..!
ಹುಬ್ಬಳ್ಳಿಯಲ್ಲಿ ಅಮಾನುಷ ಕ್ರೌರ್ಯ, 5 ವರ್ಷದ ಬಾಲಕಿಯನ್ನು ಅಪಹರಿಸಿ, ಭೀಕರ ಹತ್ಯೆ..! ಟಾಯ್ಲೆಟ್ ಹಲೀಜಿನಲ್ಲೇ ಕೊಂದ ಪಾಪಿಗಳು..!
ಬನವಾಸಿಯಲ್ಲಿ ಕದಂಬೋತ್ಸವಕ್ಕೆ ವಿದ್ಯುಕ್ತ ಚಾಲನೆ, ಪಂಪನ ನೆನಪಿನಲ್ಲಿ ಪಂಪ ಭವನ ನಿರ್ಮಾಣಕ್ಕೆ ಪ್ರತಿಜ್ಞೆ..!
“ಭೂ ಸುರಕ್ಷಾ” ಯೋಜನೆಯಲ್ಲಿ ಹೊನ್ನಾವರ ತಾಲೂಕು ರಾಜ್ಯದಲ್ಲೇ ಪ್ರಥಮ..!
ಕಾರವಾರದ ಆಮದಳ್ಳಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಸ್ತ್ರೀ ಚೇತನ ಅಭಿಯಾನ..!
ಪರಿಶಿಷ್ಟ ಪಂಗಡದ ಕ್ರೀಡಾ ವಸತಿ ನಿಲಯಗಳಿಗೆ ಪ್ರತಿಭಾವಂತ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ
12 ವರ್ಷ ಮೇಲ್ಪಟ್ಟ ಬಾಲಕ/ಬಾಲಕಿಯರಿಗೆ ಅಥ್ಲೆಟಿಕ್ ಬೇಸಿಗೆ ಶಿಬಿರ
ಎಪ್ರಿಲ್ 12, 13 ಕ್ಕೆ ಬನವಾಸಿಯಲ್ಲಿ ಕದಂಬೋತ್ಸವ-2025, ಪ್ರತಿಷ್ಠಿತ ಪಂಪ ಪ್ರಶಸ್ತಿ ಪ್ರದಾನ ಸಮಾರಂಭ..!
ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯಡಿ ಸತತ ಎರಡನೇ ವರ್ಷವೂ ಉತ್ತರ ಕನ್ನಡ ಜಿಲ್ಲೆ100% ಗುರಿ ಸಾಧನೆ..!
ಮುಂಡಗೋಡ ಪಟ್ಟಣದಲ್ಲಿ ಭಾರೀ ಮಳೆ ಗಾಳಿಗೆ ಉರುಳಿಬಿದ್ದ ಮೊಬೈಲ್ ಟವರ್..! ಪಟ್ಟಣದ ಹಲವು ಮನೆಗಳಿಗೆ ಹಾನಿ
ಮಳೆಗಾಳಿಗೆ ರಸ್ತೆ ಮೇಲೆ ಬಿದ್ದ ಬೃಹತ್ ಮಾವಿನ ಮರ, ಶಿರಸಿ-ಹುಬ್ಬಳ್ಳಿ ರಸ್ತೆ ಸಂಪೂರ್ಣ ಸ್ಥಗಿತ..!
ಟಿಬೇಟಿಯನ್ ಕ್ಯಾಂಪ್ ನಂ.6 ರ ಕ್ರಾಸ್ ಸಮೀಪ ಬೈಕ್ ಸ್ಕಿಡ್, ಅಗಡಿಯ ಯುವಕನಿಗೆ ಗಂಭೀರ ಗಾಯ..!
ಮುಂಡಗೋಡ ಹೊಸ ಓಣಿಯಲ್ಲಿ ಮನೆಗೆ ಆಕಸ್ಮಿಕ ಬೆಂಕಿ, ಅಪಾರ ಹಾನಿ..!
ಮುಂಡಗೋಡ ಪಟ್ಟಣದ ಹೊಸ ಓಣಿಯಲ್ಲಿ ಬೆಂಕಿ ಅವಘಡವಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಹಾನಿಯಾಗಿದೆ. ಸ್ಥಳೀಯರು, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳ ಮುಂಜಾಗ್ರತೆಯಿಂದ ಆಗಬಹುದಾಗಿದ್ದ ಭಾರೀ ಅನಾಹುತ ತಪ್ಪಿದಂತಾಗಿದೆ. ಹೊಸ ಓಣಿಯ ರಾಜು ಹಿರೇಮಠ ಎಂಬುವವರಿಗೆ ಸೇರಿದ ಮನೆಯಲ್ಲಿ, ವೀಣಾ ಬಾಳಂಬೀಡ ಎನ್ಹುವವರು ಬಾಡಿಗೆ ಇದ್ದರು. ಇಂದು ಬೆಳಿಗ್ಗೆ ಮನೆಗೆ ಬೀಗ ಹಾಕಿಕೊಂಡು ಕೆಲಸಕ್ಕೆ ಹೋದ ನಂತರ ಕೆಲವೇ ಹೊತ್ತಲ್ಲಿ ಬೆಂಕಿ ತಗುಲಿ ಹೊತ್ತಿ ಉರಿದಿದೆ. ಹೀಗಾಗಿ, ಸ್ಥಳೀಯರು ತಕ್ಷಣವೇ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಪೊಲೀಸರೂ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ನಂತರ ಅಗ್ನಿಶಾಮಕ ಸಿಬ್ಬಂದಿಗಳು ಬಂದು ಬೆಂಕಿ ನಂದಿಸಿದ್ದಾರೆ.
ಸವಣೂರು ಜಿಪಂ AEE ಲೋಕಾಯುಕ್ತ ಬಲೆಗೆ, 30 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಅಧಿಕಾರಿ..!
ಸವಣೂರು: ತಾಲೂಕಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಉಪವಿಭಾಗದ ಎಇಇ ನಿಂಬಣ್ಣ ಹೊಸಮನಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕಾಮಗಾರಿಯ ಹಣ ಬಿಡುಗಡೆಗಾಗಿ ಲಂಚಕ್ಕೆ ಬೇಡಿಕೆಯಿಟ್ಟು ಅಧಿಕಾರಿ ತಗಲಾಕ್ಕೊಂಡಿದ್ದಾರೆ. ಲಚ್ಚಪ್ಪ ದುರ್ಗಪ್ಪ ಕನವಳ್ಳಿ ಎಂಬುವವರಿಂದ ಅವರಿಂದ ರೂ 40, ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟು, ರೂ 30 ಸಾವಿರ ಹಣವನ್ನು ಸ್ವೀಕರಿಸುವಾಗ, ಹಾವೇರಿ ಜಿಲ್ಲೆಯ ಲೋಕಾಯುಕ್ತ ಅಧಿಕಾರಿ ಹಾಗೂ ಸಿಬ್ಬಂದಿಗಳು ಟ್ರ್ಯಾಪ್ ಮಾಡಿ ಬಂಧಿಸಿದ್ದಾರೆ.. ಅಂದಹಾಗೆ, ಲಚ್ಚಪ್ಪ ದುರ್ಗಪ್ಪ ಕನವಳ್ಳಿ RDPR ಸವಣೂರು ಉಪವಿಭಾಗ ವ್ಯಾಪ್ತಿಯಲ್ಲಿ 2 ಕಾಮಗಾರಿಗಳನ್ನು ಮಾಡಿದ್ದರು, ಸದರಿ ಕಾಮಗಾರಿಗಳ ಹಣ ಬಿಡುಗಡೆ ಮಾಡುವಂತೆ AEE ರವರನ್ನು ಕೋರಿಕೊಂಡಾಗ, ಆರೋಪಿತ ಅಧಿಕಾರಿ AEE ನಿಂಬಣ್ಣ ಹೊಸಮನಿ ಅವರು ಕಾಮಗಾರಿ ಹಣ ಬಿಡುಗಡೆ ಮಾಡಲು 40 ಸಾವಿರ ರೂ.ಗೆ ಬೇಡಿಕೆಯೊಟ್ಟಿದ್ದರು. ನಂತರ ಮುಂಗಡವಾಗಿ 30 ಸಾವಿರ ರೂ. ಹಣ ಪಡೆಯುತ್ತಿರುವಾಗಲೇ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸವಣೂರಿನ ಲಚ್ಚಪ್ಪ ಕನವಳ್ಳಿ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಕಾರ್ಯಾಚರಣೆ...
ಮುಂಡಗೋಡ ಪಟ್ಟಣ ಪಂಚಾಯತಿಯಲ್ಲಿ “ಮುಚ್ಚಿ” ಉಂಡವನದ್ದೇ ಕಾರುಬಾರು, ಹಾಗಿದ್ರೆ, ಗಾಂಧಿನಗರ ನಿವಾಸಿಗಳ ಗೋಳು ಕೇಳೋರ್ಯಾರು..?
ಮುಂಡಗೋಡ ಪಟ್ಟಣ ಪಂಚಾಯತಿ ಅಧಿಕಾರಿಗಳಿಗೆ ಅದೇನಾಗಿದೆಯೊ ಒಂದೂ ಅರ್ಥ ಆಗ್ತಿಲ್ಲ. ಇಡೀ ಪಟ್ಟಣದ ಜನ ಒಂದರ್ಥದಲ್ಲಿ ಇಲ್ಲಿನ ಬ್ರಷ್ಟಾಚಾರ ಕಂಡು ಎಲೆ ಎಡಿಕೆ ಸೇವೆ ಮಾಡೋದಷ್ಟೇ ಬಾಕಿ ಉಳಿದಿದೆ. ಯಾಕಂದ್ರೆ, ಈ ಕಚೇರಿಯಲ್ಲಿನ ಕೆಲವು ನುಂಗಣ್ಣರುಗಳ ಕರಾಮತ್ತು ಹಲವರ ಬದುಕಿನ ಜೊತೆ ಚೆಲ್ಲಾಟಕ್ಕಿಳಿದಂತಾಗಿದೆ. ಬ್ರಷ್ಟರ ಬಂಡವಾಳವಾಯ್ತಾ..? ಫಾರ್ಮ್ ನಂ.3 ಅನ್ನೋ “ಬಂಡವಾಳ” ಇಟ್ಕೊಂಡು ಅಕ್ಷರಶಃ ವ್ಯವಹಾರಕ್ಕಿಳಿದಿರೋ ಪಟ್ಟಣ ಪಂಚಾಯತಿಯ ಕೆಲವು ನುಂಗಣ್ಣರುಗಳಿಗೆ ಇದೊಂದು ರೊಕ್ಕ ಗಳಿಸುವ ಅಡ್ಡ ದಂಧೆಯಾಯ್ತಾ ಅನ್ನೋ ಅನುಮಾನ ಶುರುವಾಗಿದೆ. ಈ ಕಾರಣಕ್ಕಾಗೇ ಮುಂಡಗೋಡಿನ ಅದೊಂದು ಏರಿಯಾದ ಹಿರಿಯ ನಾಗರೀಕರು ಹಿಡಿಶಾಪ ಹಾಕ್ತಿದಾರೆ. ನಿತ್ಯವೂ ಈ ಪಟ್ಟಣ ಪಂಚಾಯತಿಗೆ ಅಲೆದಾಡಿ, ಅಲೆದಾಡಿ ಸುಸ್ತಾಗಿದ್ದಾರೆ. ಇಲ್ಲಿನ ಅಧಿಕಾರಿಗಳಿಗೆ ಕ್ಯಾಕರಿಸಿ ಉಗಿತಿದಾರೆ. ಆದ್ರೂ ನುಂಗಣ್ಣರುಗಳಿಗೆ ಬುದ್ದಿ ಬರುತ್ತಿಲ್ಲವಂತೆ. ಹಾಗಂತ, ಗಾಂಧಿನಗರದ ಹಿರಿಯ ಜೀವಗಳು ನೊಂದು ನುಡಿಯುತ್ತಿದ್ದಾರೆ. ಗಾಂಧಿನಗರ ನಿವಾಸಿಗಳ ಗೋಳು..! ಅಸಲು, ಫಾರ್ಮ ನಂ 3 ನ್ನು ಪಡೆಯುವ ಸಲುವಾಗಿ, ವರ್ಷಗಟ್ಟಲೇ ಅಲೆದಾಡಿರೋ ಮುಂಡಗೋಡಿನ ಗಾಂಧಿನಗರ ಅಭಿವೃದ್ಧಿ ಸಮಿತಿಯ...
ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗಾಗಿ ಒತ್ತಾಯ, ಶಿಗ್ಗಾವಿ ವಕೀಲರಿಂದ ಕೋರ್ಟ್ ಕಲಾಪ ಬಹಿಷ್ಕರಿಸಿ ಆಕ್ರೋಶ..!
ಶಿಗ್ಗಾವಿ: ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗಾಗಿ ಇಂದು ಶಿಗ್ಗಾವಿ ತಹಶೀಲ್ದಾರ ಕಛೇರಿಯಲ್ಲಿ ಶಿಗ್ಗಾವಿ ವಕೀಲರ ಸಂಘದಿಂದ ಒಂದು ದಿನ ಕೋರ್ಟ್ ಕಲಾಪದಿಂದ ದೂರ ಉಳಿದು ತಹಶೀಲ್ದಾರರಿಗೆ ಮನವಿ ನೀಡಿ ಸರಕಾರಕ್ಕೆ ಒತ್ತಾಯಿಸಿದರು. ಕೋರ್ಟ್ ನಿಂದ ಘೋಷಣೆ ಕೂಗುತ್ತ ಆಗಮಿಸಿದ ವಕೀಲರು ತಹಶಿಲ್ದಾರ ಸಂತೋಷ ಹಿರೇಮಠ ಅವರಿಗೆ ಮನವಿ ಅರ್ಪಿಸಿದರು. ಈ ಸಂದರ್ಭದಲ್ಲಿ ವಕೀಲರಾದ ಜಿ.ಎಸ್. ಅಂಕಲಕೋಟಿ, ಕೃಷ್ಣ ಎಸ್. ಜೋಷಿ, ಕೆ. ಎನ್. ಹುತ್ತನಗೌಡ್ರ, ಕೆ.ಎಸ್. ಪಾಟೀಲ, ಎಂ. ಎಚ್. ಬೆಂಡಿಗೇರಿ, ವಿ. ಕೆ. ಕೊಣಪ್ಪನವರ, ಬಿ. ಜಿ. ಕೂಲಿ, ವಿ. ಎಸ್. ನಲವಾಲ, ಬಿ. ಎನ್. ಕೊಣನವರ, ಎಂ. ಎನ್. ಕ್ಯಾಲಕೊಂಡ, ಎ. ಎ. ಗಂಜೇನವರ, ಎಸ್. ಎಸ್. ಪೂಜಾರ, ಎಂ. ಜಿ. ವಿಜಾಪೂರ, ಎಸ್. ಬಿ. ಲಕ್ಕಣ್ಣವರ, ಬಿ. ಕೆ. ಮತ್ತಿಗಟ್ಟಿ, ಎಸ್. ಜಿ. ಟೋಪಣ್ಣವರ, ಕೆ. ಎಸ್. ಧರ್ಮಪ್ಪನವರ, ಎಸ್. ಜಿ. ಅಂಕಲಕೋಟಿ, ವಿ. ಸಿ. ಪಾಟೀಲ, ಬಿ. ಜಿ. ರಾಗಿ, ವಿ. ಸಿ. ಪಾಟೀಲ, ಪಿ....
ರಾಜ್ಯದಲ್ಲಿರೋದು 40% ಪರ್ಸೆಂಟ್ ಸರ್ಕಾರ, ಬಿಜೆಪಿ ಜಾತಿಗಳ ನಡುವೆ ಗಲಾಟೆ ನಡೆಸುತ್ತಿದೆ- ಮುಂಡಗೋಡಿನಲ್ಲಿ ಆರ್.ವಿ.ದೇಶಪಾಂಡೆ ಆರೋಪ
ಮುಂಡಗೋಡ: ರಾಜ್ಯದಲ್ಲಿ ಸದ್ಯ 40% ಪರ್ಸೆಂಟ್ ಸರ್ಕಾರವಿದೆ. ಬಿಜೆಪಿ ಆಡಳಿತಕ್ಕೆ ಬಂದ ನಂತ್ರ ಜಾತಿ ಜಾತಿಗಳ ನಡುವೆ ಗಲಾಟೆ, ವೈರತ್ವ ಬೆಳೆಸಲಾಗ್ತಿದೆ ಹೀಗಾಗಿ, ಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ನೂರಕ್ಕೆ ನೂರರಷ್ಟು ಸತ್ಯ ಅಂತಾ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಆರ್ ವಿ.ದೇಶಪಾಂಡೆ ಭವಿಷ್ಯ ನುಡಿದ್ರು. ಅವ್ರು, ಪಟ್ಟಣದ ಎಲ್ ವಿ ಕೆ ಕೇಂದ್ರದ ಸಭಾಭವನದಲ್ಲಿ ರವಿವಾರ ಸಂಜೆ ”ಆರ್. ವಿ. ದೇಶಪಾಂಡೆ ಹಾಗೂ ಜಿಲ್ಲಾ ನೂತನ ಅಧ್ಯಕ್ಷ ಸಾಯಿನಾಥ ಗಾಂವಕರ್ ರವರಿಗೆ ನಡೆಸಲಾದ ಅಭಿನಂದನಾ ಕಾರ್ಯಕ್ರಮ ಹಾಗೂ ವಿವಿಧ ಪಕ್ಷದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಸಭಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡುತ್ತಿದ್ದರು. 40% ಸರ್ಕಾರ..! ಇನ್ನು ಭಾಷಣದುದ್ದಕ್ಕೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ದೇಶಪಾಂಡೆ, ರಾಜ್ಯದಲ್ಲಿರೋದು 40% ಕಮೀಷನ್ ಸರಕಾರ ಅಂತಾ ಆರೋಪಗಳ ಸುರಿಮಳಯೇ ನಡೆಯುತ್ತಿದೆ. ಹಾಗಂತ ಇದನ್ನ ಕಾಂಗ್ರೆಸ್ ಆರೋಪ ಮಾಡಿಲ್ಲ, ಬದಲಾಗಿ, ಗುತ್ತಿಗೆದಾರರ ಸಂಘ . ಲಂಚವಿಲ್ಲದೇ ರಾಜ್ಯದಲ್ಲಿ...
ಗರಗದ ಮಡಿವಾಳೇಶ್ವರ ಮಠದ ಪೀಠಾಧಿಪತಿ ಲಿಂಗೈಕ್ಯ..!
ಧಾರವಾಡ: ಗರಗದ ಶ್ರೀ ಗುರು ಮಡಿವಾಳೇಶ್ವರ ಮಠದ ಪೀಠಾಧಿಪತಿ ಶ್ರೀ ಚನ್ನಬಸವ ಮಹಾಸ್ವಾಮೀಜಿ (89) ಅನಾರೋಗ್ಯದಿಂದ ಲಿಂಗೈಕ್ಯರಾಗಿದ್ದಾರೆ. ಧಾರವಾಡ ತಾಲೂಕಿನ ಗರಗದ ಪ್ರಸಿದ್ಧ ಮಠವಾಗಿರೋ ಮಡಿವಾಳೇಶ್ವರ ಮಠದಲ್ಲಿ ಕಳೆದ 55 ವರ್ಷಗಳಿಂದ ಶ್ರೀಗಳು ಮಠದಲ್ಲಿದ್ದರು. ಅನಾರೋಗ್ಯದ ಹಿನ್ನೆಲೆ ಇಂದು ನಿಧನರಾಗಿದ್ದಾರೆ. ಇನ್ನು, ಕಳೆದ ವಾರವಷ್ಟೇ ಗರಗದ ಮಡಿವಾಳೇಶ್ವರರ ಜಾತ್ರೆ ಅದ್ದೂರಿಯಾಗಿ ನಡೆದಿತ್ತು. ಲಕ್ಷಾಂತರ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.
“ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್” ಇದು ಕ್ಷೇತ್ರ ಮೈಲಾರ ಕಾರ್ಣೀಕ..!
ಮೈಲಾರ: “ಅಂಬಲಿ ಹಳಸಿತು ಕಂಬಳಿ ಬಿಸಿತಲೆ ಪರಾಕ್” ಇದು ಪ್ರಸಕ್ತ ವರ್ಷದ ಐತಿಹಾಸಿಕ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿ. ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದಲ್ಲಿ ನಡೆದ ಕಾರ್ಣಿಕೋತ್ಸವದಲ್ಲಿ, ವೃತಾದಾರಿ ಗೊರವಯ್ಯ ನುಡಿದ ಕಾರ್ಣಿಕ ನುಡಿ. ಗೊರವಯ್ಯ ರಾಮಪ್ಪ ಎಂಬುವವರು 14 ಅಡಿ ಎತ್ತರದ ಬಿಲ್ಲನ್ನೇರಿ ಪ್ರಸಕ್ತ ವರ್ಷದ ಕಾರ್ಣಿಕ ಭವಿಷ್ಯ ನುಡಿದಿದ್ದಾರೆ. ಅಂಬಲಿ ಹಳಸಿತು ಕಂಬಳಿ ಬಿಸಿತಲೆ ಎಂಬ ಕಾರ್ಣಿಕ ವಿಶ್ಲೇಷಣೆ ಮಾಡಲಾಗಿದೆ. ಡೆಂಕಣಮರಡಿಯಲ್ಲಿ ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಕಾರ್ಣಿಕ ವಿಶ್ಲೇಷಣೆ ಮಾಡಿದ್ದಾರೆ. ರಾಜಕೀಯ, ಕೃಷಿ ಈ ಬಾರಿಯ ಕಾರ್ಣಿಕ ನುಡಿಯ ಪ್ರಕಾರ, ಪ್ರಾಮಾಣಿಕವಾಗಿ, ನಿಷ್ಠೆಯಿಂದ ಇರುವವರೊಬ್ಬರು ರಾಜ್ಯವನ್ನು ಆಳುತ್ತಾರೆ ಎಂಬ ಭವಿಷ್ಯ ನುಡಿದಿದ್ದಾರೆ. ಇನ್ನು ಪ್ರಸಕ್ತ ವರ್ಷವೂ ಮಳೆಯ ಪ್ರಮಾಣ ಜಾಸ್ತಿಯಾಗಲಿದೆ. ಬೆಳೆಯೂ ಜಾಸ್ತಿ ಆಗಲಿದೆ, ರೈತರಿಗೆ ಒಳ್ಳೆಯದಾಗುತ್ತದೆ. ಇದರ ಜೊತೆಗೆ ಮಳೆ ಜಾಸ್ತಿಯಾಗಿ ಬೆಳೆ ಹಾನಿಯೂ ಆಗಲಿದೆ ಅನ್ನೋ ತಾತ್ಪರ್ಯವನ್ನು ವಿವರಿಸಲಾಗಿದೆ.
ಎಣ್ಣೆ ಏಟಲ್ಲಿ ಮಲಗಿದ್ದವನ ಜೇಬಿಗೆ ಕನ್ನ ಹಾಕಿದ ಅಜ್ಜಿ, ಹಣ ಎಗರಿಸಿ ಪರಾರಿ..!
ಯಲ್ಲಾಪುರ: ಎಣ್ಣೆ ಹೊಡೆದು ಟೈಟ್ ಆಗಿ ಮಲಗಿದ್ದವನ ಜೇಬಿನಿಂದ ವೃದ್ದೆಯೋರ್ವಳು ಹಣ ಎಗರಿಸಿದ್ದಾಳೆ. ಹಾಡಹಗಲೇ ಯಲ್ಲಾಪುರ ಪಟ್ಟಣದ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದ್ದು ಸ್ಥಳೀಯರ ಮೊಬೈಲ್ ಕೆಮೇರಾದಲ್ಲಿ ಸೆರೆಯಾಗಿದೆ. ಯಲ್ಲಾಪುರ ಬಸ್ ನಿಲ್ದಾಣದ ನಂದಿನ ಹಾಲಿನ ಕೌಂಟರ್ ಬಳಿ ಓರ್ವ ವ್ಯಕ್ತಿ, ಫುಲ್ ಟೈಟ್ ಆಗಿ ನಶೆಯಲ್ಲೇ ಮಲಗಿರ್ತಾನೆ. ಈ ವೇಳೆ ಅಲ್ಲಿಗೆ ಬಂದ ವೃದ್ದೆಯೋರ್ವಳು, ಏಕಾಏಕಿ ನಶೆಯಲ್ಲಿ ಮಲಗಿದ್ದವನ ಜೇವಿಗೆ ಕೈ ಹಾಕಿದ್ದಾಳೆ. ಕೈಗೆ ಸಿಕ್ಕಷ್ಟು ಹಣ ಎಗರಿಸಿಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾಳೆ. ಇದನ್ನೇಲ್ಲ ಅಲ್ಲೇ ನೋಡುತ್ತ ನಿಂತಿದ್ದ ಯುವಕರು ಮೊಬೈಲ್ ನಲ್ಲಿ ಚಿತ್ರಿಸಿಕೊಂಡಿದ್ದಾರೆ. ಸದ್ಯ, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ವೈರಲ್ ಆಗಿದ್ದು, ಕುಡಿದ ನಶೆಯಲ್ಲಿ ಎಲ್ಲೆಂದರಲ್ಲಿ ಮಲಗುವರಿಗೆ ಎಚ್ಚರಿಕೆ ಎನ್ನುವಂತಾಗಿದೆ.
ಹಾನಗಲ್ ಬಳಿಯ ಜಿಗಳಿಕೊಪ್ಪದಲ್ಲಿ ಭೀಕರ ಹತ್ಯೆ, ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಕೊಲೆ, ಬೆಚ್ಚಿಬಿದ್ದ ಗ್ರಾಮಸ್ಥರು..!
ಬೆಳ್ಳಂಬೆಳಿಗ್ಗೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಜಿಗಳಿಕೊಪ್ಪ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ವ್ಯಕ್ತಿಯೋರ್ವನನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಹತ್ಯೆಮಾಡಿ, ಚಾಪೆ, ಹಾಗೂ ರಗ್ಗಿನಲ್ಲಿ ಸುತ್ತಿ ಗೋವಿನಜೋಳದ ಜಮೀನಿನಲ್ಲಿ ಬಿಸಾಕಿ ಹೋಗಿದ್ದಾರೆ ದುಷ್ಕರ್ಮಿಗಳು. ಮೃತ ವ್ಯಕ್ತಿ ಸುಮಾರು 35 ವರ್ಷ ಪ್ರಾಯದವನಾಗಿದ್ದು, ಯಾರು, ಎಲ್ಲಿಯವನು ಅನ್ನೊ ಮಾಹಿತಿ ಇನ್ನೂ ಸಿಕ್ಕಿಲ್ಲ. ಗುಪ್ತಾಂಗಕ್ಕೆ ಹೊಡೆದು ಕೊಲೆ..! ಇನ್ನು ಅದೇಲ್ಲೊ ಕೊಲೆ ಮಾಡಿ, ಶವವನ್ನು ಚಾಪೆಯಲ್ಲಿ ಸುತ್ತಿ, ಜಿಗಳಿಕೊಪ್ಪ ಗ್ರಾಮದ ಹೊರವಲಯದಲ್ಲಿ ಬೀಸಾಕಿ ಹೋಗಿರೋ ಶವದ ಮುಖ, ತಲೆ ಹಾಗೂ ಗುಪ್ತಾಂಗಕ್ಕೆ ಏಟುಗಳು ಬಿದ್ದು ರಕ್ತಸಿಕ್ತವಾಗಿದೆ. ಹೀಗಾಗಿ, ಮೇಲ್ನೊಟಕ್ಕೆ ಇದೊಂದು ಭಾರೀ ಸೇಡಿನಿಂದ ನಡೆದಿರೋ ಕೊಲೆ ಅಂತಾ ಅನ್ನಲಾಗ್ತಿದೆ. ಬೆಚ್ಚಿ ಬಿದ್ದ ಜನ..! ಭೀಕರವಾಗಿ ಕೊಲೆಗೈದು ಬಿಸಾಡಿರುವ ಮೃತದೇಹ ಕಂಡು ಜಮೀನು ಮಾಲೀಕ ಹಾಗೂ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಹಾನಗಲ್ ತಾಲೂಕಿನ ಜಿಗಳಿಕೊಪ್ಪ ಗ್ರಾಮದ ಬಳಿ ಚಂದ್ರಕಾಂತ ಕುಬಿಹಾಳ ಎಂಬುವವರ ಜಮೀನಿನಲ್ಲಿ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಹಾನಗಲ್ ಪೊಲೀಸರು ಭೇಟಿ ನೀಡಿದ್ದಾರೆ. ಕೊಲೆಗಾರರ ಬಂಧನಕ್ಕೆ ಬಲೆ ಬೀಸಿದ್ದಾರೆ. ಹಾನಗಲ್ ಪೊಲೀಸ್...