ಯಲ್ಲಾಪುರ: ಎಣ್ಣೆ ಹೊಡೆದು ಟೈಟ್ ಆಗಿ ಮಲಗಿದ್ದವನ ಜೇಬಿನಿಂದ ವೃದ್ದೆಯೋರ್ವಳು ಹಣ ಎಗರಿಸಿದ್ದಾಳೆ. ಹಾಡಹಗಲೇ ಯಲ್ಲಾಪುರ ಪಟ್ಟಣದ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದ್ದು ಸ್ಥಳೀಯರ ಮೊಬೈಲ್ ಕೆಮೇರಾದಲ್ಲಿ ಸೆರೆಯಾಗಿದೆ.

ಯಲ್ಲಾಪುರ ಬಸ್ ನಿಲ್ದಾಣದ ನಂದಿನ ಹಾಲಿನ ಕೌಂಟರ್ ಬಳಿ ಓರ್ವ ವ್ಯಕ್ತಿ, ಫುಲ್ ಟೈಟ್ ಆಗಿ ನಶೆಯಲ್ಲೇ ಮಲಗಿರ್ತಾನೆ. ಈ ವೇಳೆ ಅಲ್ಲಿಗೆ ಬಂದ ವೃದ್ದೆಯೋರ್ವಳು, ಏಕಾಏಕಿ ನಶೆಯಲ್ಲಿ ಮಲಗಿದ್ದವನ ಜೇವಿಗೆ ಕೈ ಹಾಕಿದ್ದಾಳೆ. ಕೈಗೆ ಸಿಕ್ಕಷ್ಟು ಹಣ ಎಗರಿಸಿಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾಳೆ‌. ಇದನ್ನೇಲ್ಲ ಅಲ್ಲೇ ನೋಡುತ್ತ ನಿಂತಿದ್ದ ಯುವಕರು ಮೊಬೈಲ್ ನಲ್ಲಿ ಚಿತ್ರಿಸಿಕೊಂಡಿದ್ದಾರೆ.

ಸದ್ಯ, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ವೈರಲ್ ಆಗಿದ್ದು, ಕುಡಿದ ನಶೆಯಲ್ಲಿ ಎಲ್ಲೆಂದರಲ್ಲಿ ಮಲಗುವರಿಗೆ ಎಚ್ಚರಿಕೆ ಎನ್ನುವಂತಾಗಿದೆ.

error: Content is protected !!