ಮುಂಡಗೋಡ: ರಾಜ್ಯದಲ್ಲಿ ಸದ್ಯ 40% ಪರ್ಸೆಂಟ್ ಸರ್ಕಾರವಿದೆ. ಬಿಜೆಪಿ ಆಡಳಿತಕ್ಕೆ ಬಂದ ನಂತ್ರ ಜಾತಿ ಜಾತಿಗಳ ನಡುವೆ ಗಲಾಟೆ, ವೈರತ್ವ ಬೆಳೆಸಲಾಗ್ತಿದೆ ಹೀಗಾಗಿ, ಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ನೂರಕ್ಕೆ ನೂರರಷ್ಟು ಸತ್ಯ ಅಂತಾ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಆರ್ ವಿ.ದೇಶಪಾಂಡೆ ಭವಿಷ್ಯ ನುಡಿದ್ರು.
ಅವ್ರು, ಪಟ್ಟಣದ ಎಲ್ ವಿ ಕೆ ಕೇಂದ್ರದ ಸಭಾಭವನದಲ್ಲಿ ರವಿವಾರ ಸಂಜೆ ”ಆರ್. ವಿ. ದೇಶಪಾಂಡೆ ಹಾಗೂ ಜಿಲ್ಲಾ ನೂತನ ಅಧ್ಯಕ್ಷ ಸಾಯಿನಾಥ ಗಾಂವಕರ್ ರವರಿಗೆ ನಡೆಸಲಾದ ಅಭಿನಂದನಾ ಕಾರ್ಯಕ್ರಮ ಹಾಗೂ ವಿವಿಧ ಪಕ್ಷದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಸಭಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡುತ್ತಿದ್ದರು.
40% ಸರ್ಕಾರ..!
ಇನ್ನು ಭಾಷಣದುದ್ದಕ್ಕೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ದೇಶಪಾಂಡೆ, ರಾಜ್ಯದಲ್ಲಿರೋದು 40% ಕಮೀಷನ್ ಸರಕಾರ ಅಂತಾ ಆರೋಪಗಳ ಸುರಿಮಳಯೇ ನಡೆಯುತ್ತಿದೆ. ಹಾಗಂತ ಇದನ್ನ ಕಾಂಗ್ರೆಸ್ ಆರೋಪ ಮಾಡಿಲ್ಲ, ಬದಲಾಗಿ, ಗುತ್ತಿಗೆದಾರರ ಸಂಘ . ಲಂಚವಿಲ್ಲದೇ ರಾಜ್ಯದಲ್ಲಿ ಯಾವುದೇ ಕೆಲಸವಾಗುವುದಿಲ್ಲ ಅಂತಾ ಆಕ್ರೋಶ ವ್ಯಕ್ತ ಪಡಿಸಿದ್ರು.
ಸಿದ್ದರಾಮಯ್ಯ ಜನಪರ..!
ನಾನು 50 ವಷ೯ ಕ್ಷೇತ್ರದಲ್ಲಿದ್ದೇನೆ ಯಾವೊಬ್ಬ ಕಾರ್ಯಕರ್ತರನ್ನು ಕಡೆಗಣಿಸಿಲ್ಲ. ಆದರೆ ನಾವು ಕೆಲಸ ಮಾಡಬೇಕು. ಸಿದ್ದರಾಮಯ್ಯ ಅನೇಕ ಯೋಜನೆಗಳು ಜನಪರ ಇದ್ದವು ಆದರೆ ಬಿಜೆಪಿ ಅವರು ಪ್ರತಿದಿನ ಘೋಷಣೆ ಮಾಡುತ್ತಾರೆ. ಆದ್ರೆ, ಅವೇಲ್ಲ ಪೊಳ್ಳು ಘೋಷಣೆಯಾಗಿರುತ್ತದೆ. ನಮ್ಮ ಸರ್ಕಾರ ಬಂದ ತಕ್ಷಣವೇ ಪ್ರತಿ ತಿಂಗಳು ಮನೆಯ ಯಜಮಾನಿಯ ಖಾತೆಯಲ್ಲಿ ಎರಡು ಸಾವಿರ ಹಣ ಹಾಕುತ್ತೇವೆ. ನಾವು ನೀಡುವ ಭರವಸೆಯನ್ನು ನೂರಕ್ಕೆ ನೂರು ಈಡೇರಿಸುತ್ತೇವೆ. ಬಿಜೆಪಿ ಧಮ್ ಮೂಲಕ ಮತ ಕೇಳುತ್ತದೆ. ಆದರೆ ಕಾಂಗ್ರೆಸ್ ಎಲ್ಲರೂ ಒಂದೇ ಭಾವನೆಯಿಂದ ಕಾಣುತ್ತದೆ ಅಂತಾ ಆರ್ವಿಡಿ ಹೇಳಿದ್ರು.
ಯಲ್ಲಾಪುರ ಕ್ಷೇತ್ರದಲ್ಲಿ 50% ಕಮಿಶನ್..!
ಇನ್ನು ಇದೇ ವೇಳೆ ಬಿಜೆಪಿಯಿಂದ ಕಾಂಗ್ರೆಸ್ ಗೆ ಸೇರ್ಪಡೆಗೊಂಡ ಯಲ್ಲಾಪುರದ ಮಾಜಿ ಬಿಜೆಪಿ ಜಿಪಂ ಸದಸ್ಯ ರಾಘು ಭಟ್ ಮಾತನಾಡಿ, ನಮ್ಮ ಯಲ್ಲಾಪುರ ಕ್ಷೇತ್ರದಲ್ಲಿ ಅರಣ್ಯ ಇಲಾಖೆ ಹಾಗೂ ವಿವಿಧ ಇಲಾಖೆಯಿಂದ ಬಡವರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ರಾಜ್ಯದಲ್ಲಿ 40% ಕಮೀಷನ್ ನಡೆದರೆ ನಮ್ಮ ಕ್ಷೇತ್ರದಲ್ಲಿ 50% ಕಮೀಷನ್ ನಡೆಯುತ್ತಿದೆ. ಜಾತಿ ವಿಷ ಬೀಜ ಬಿಟ್ಟು ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಸಾಗಬೇಕಿದೆ. ಇಂದು ಈ ಕಾರ್ಯಕ್ರಮದಲ್ಲಿ 15 ಜನ ಪ್ರಮುಖರು ಸೇರ್ಪಡೆ ಗೊಂಡಿದ್ದೇವೆ ಮುಂದಿನ ದಿನದಲ್ಲಿ ಬೂತ ಮಟ್ಟದ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರನ್ನು ಕಾಂಗ್ರೆಸ್ ಗೆ ಕರೆತರುತ್ತೇವೆ ಎಂದರು.
“ಧಾತ್ರಿ” ಉವಾಚ..!
ಇನ್ನು ಕಾಂಗ್ರೆಸ್ ಮುಖಂಡ ಶ್ರೀನಿವಾಸ ಧಾತ್ರಿ ಮಾತನಾಡಿ ಜಿಲ್ಲೆಯ 6 ಕ್ಷೇತ್ರವನ್ನು ಗೆಲ್ಲುತ್ತೇವೆ. ಈ ಗೆಲುವಿನ ಮೂಲಕ ಆರ್ ವಿ ದೇಶಪಾಂಡೆ ಅವರು ಮುಂದಿನ ಮುಖ್ಯಮಂತ್ರಿ ಆಗಲು ಸಹಕಾರ ಆಗುತ್ತೆ. ಕ್ಷೇತ್ರದಲ್ಲಿ ಭ್ರಷ್ಟಾಚಾರವನ್ನು ಪ್ರಶ್ನೆ ಮಾಡಿದರೆ ಯಾರು ಬಂದು ನಮ್ಮ ಮೇಲೆ ಹಲ್ಲೆ ಮಾಡುತ್ತಾರೋ ಎಂಬ ಭಯ ಜನರಲ್ಲಿ ಉಂಟಾಗಿದೆ. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೇ ಅದರಲ್ಲಿ ಯಲ್ಲಾಪುರ ಕ್ಷೇತ್ರದಿಂದ ಗೆದ್ದ ಅಭ್ಯರ್ಥಿ ಇರುತ್ತಾರೆ. ಕಲುಷಿತವಾದ ಕ್ಷೇತ್ರವನ್ನು ಸ್ವಚ್ಛ ಗೋಳಿಸುವ ಕೆಲಸವನ್ನು ನಮ್ಮ ಕಾರ್ಯಕರ್ತರು ಮಾಡಲಿದ್ದಾರೆ. ನಮ್ಮಲ್ಲಿರುವ ನ್ಯೂನ್ಯತೆ ಬದಿಗಿಟ್ಟು, ಈ ಚುನಾವಣೆಯಲ್ಲಿ ಮುಂದೆ ಸಾಗಿ ಮುಂದಿನ ತಲೆಮಾರಿನ ಬದುಕಿಗೆ ಬದುಕು ನೀಡುವಂತಾಗೋಣ ಎಂದು ಕರೆ ನೀಡಿದರು.
ಮಾಜಿ ಶಾಸಕ ವಿ. ಎಸ್. ಪಾಟೀಲ್ ಮಾತನಾಡಿ ಈ ಕ್ಷೇತ್ರದಲ್ಲಿ ಯಾವ ಪಕ್ಷ ಆಯ್ಕೆ ಆಗುತ್ತೋ, ರಾಜ್ಯದಲ್ಲಿ ಅದೇ ಪಕ್ಷದ ಸರ್ಕಾರ ರಚನೆ ಆಗುತ್ತದೆ. 2008ರಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಿದಲ್ಲಿದ್ದರು ಸಹ ಜಿ.ಪಂನಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರ ಹಿಡಿಯಿತು. ಇದಕ್ಕೆ ಕಾರಣ ಜಿಲ್ಲೆಯ ಹಿಡಿತ ದೇಶಪಾಂಡೆ ಅವರ ಕೈಲಿದೆ ಅಂತಾ ತಿಳಿಸಿದ್ರು.
ಸಮಾರಂಭದಲ್ಲಿ ಬ್ಲಾಕ್ ಕಾಂಗ್ರೆಸ ಅಧ್ಯಕ್ಷ ಜ್ಞಾನದೇವ ಗುಡಿಹಾಳ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಸಿ.ಎಫ್ ನಾಯ್ಕ, ಅಶೋಕ ಶಿರ್ಶಿಕರ, ಲಕ್ಷ್ಮಣ ಬನ್ಸೋಡೆ, ಎಚ್ ಎಮ್ ನಾಯ್ಕ, ಕೃಷ್ಣ ಹಿರೇಹಳ್ಳಿ ರಾಮಕೃಷ್ಣ ಮೂಲಿಮನಿ, ಎಮ್.ದುಂಡಿಸಿ ಮಂಜುನಾಥ ಪಾಟೀಲ್, ಧರ್ಮರಾಜ ನಡಗೇರಿ, ಬಸವರಾಜ್ ನಡುವಿನಮನಿ, ಬಸವರಾಜ್ ಸಂಗಮೇಶ್ವರ, ರಝಾ ಖಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.