ಮುಂಡಗೋಡ ತಾಲೂಕಿನಲ್ಲಿ ಜಿಪಂ, ತಾಪಂ ಕ್ಷೇತ್ರಗಳ ಮರುವಿಂಗಡನೆ, 4 ಜಿಪಂ ಕ್ಷೇತ್ರಗಳು ಚಾಲ್ತಿಗೆ..?

ಮುಂಡಗೋಡ ತಾಲೂಕಿನಲ್ಲಿ ಜಿಪಂ, ತಾಪಂ ಕ್ಷೇತ್ರಗಳ ಮರುವಿಂಗಡನೆ, 4 ಜಿಪಂ ಕ್ಷೇತ್ರಗಳು ಚಾಲ್ತಿಗೆ..?

ಮುಂಡಗೋಡ; ತಾಲೂಕಿನಲ್ಲಿ ಈಗ ಬದಲಾವಣೆ ಗಾಳಿ ಬೀಸಿದೆ. ಬಹುತೇಕ ಕೋರ್ಟ್ ಆದೇಶದಂತೆ ಇನ್ನೇರಡು ತಿಂಗಳಲ್ಲಿ ಜಿಪಂ, ತಾಪಂ ಚುನಾವಣೆ ನಡಿಯೋದು ಬಹುತೇಕ ಫಿಕ್ಸ್ ಆದಂತಾಗಿದೆ. ಈ ಕಾರಣಕ್ಕಾಗೇ ಮುಂಡಗೋಡ ತಾಲೂಕಿನಲ್ಲಿ ಮೂರು ಇದ್ದ ಜಿಪಂ ಕ್ಷೇತ್ರಗಳನ್ನ ಮರು ವಿಂಗಡನೆ ಮಾಡಲಾಗಿದೆ. ಮತ್ತೊಂದು ಕ್ಷೇತ್ರವನ್ನು ಹುಟ್ಟು ಹಾಕುವ ಕಾರ್ಯ ಚಾಲ್ತಿ ಪಡೆದುಕೊಂಡಿದೆ. ಹಾಗಂತ, ಬಲ್ಲ ಮೂಲಗಳಿಂದ ಪಬ್ಲಿಕ್ ಫಸ್ಟ್ ಗೆ ಮಾಹಿತಿ ಸಿಕ್ಕಿದೆ. ಮುಂಡಗೋಡ ತಾಲೂಕಿನಲ್ಲಿ ಒಟ್ಟೂ 16 ಗ್ರಾಮ ಪಂಚಾಯತಿಗಳಿವೆ. ಇದುವರೆಗೂ ಚಿಗಳ್ಳಿ, ಪಾಳಾ ಹಾಗೂ ಇಂದೂರು, ಹೀಗೆ ಮೂರು ಜಿಲ್ಲಾ ಪಂಚಾಯತ ಕ್ಷೇತ್ರಗಳಿದ್ದವು, ಜೊತೆಗೆ 11 ತಾಲೂಕು ಪಂಚಾಯತಿ ಕ್ಷೇತ್ರಗಳಿದ್ದವು. ಆದ್ರೆ, ಸದ್ಯ ಈ ಎಲ್ಲಾ ಕ್ಷೇತ್ರಗಳ ಮರುವಿಂಗಡನೆಗೆ ಶಿಫಾರಸ್ಸು ಮಾಡಲಾಗಿದೆ. ಮೂರು ಇದ್ದ ಜಿಪಂ ಕ್ಷೇತ್ರಗಳನ್ನು ಮರುವಿಂಗಡಿಸಿ 4 ಕ್ಷೇತ್ರಗಳನ್ನಾಗಿ ಮಾಡಲಾಗಿದೆ. ಹಾಗೆನೇ 11 ಇದ್ದ ತಾಪಂ ಕ್ಷೇತ್ರಗಳನ್ನು 9 ಕ್ಕೆ ಇಳಿಸಲಾಗಿದೆ. ಹಾಗಂತ, ಶಿಫಾರಸ್ಸು ಮಾಡಿದ್ದು ಇನ್ನೆರಡು ದಿನಗಳಲ್ಲಿ ಸರ್ಕಾರ ಮರುವಿಂಗಡನೆಯ ಆದೇಶ ಹೊರಡಿಸೋ ಸಾಧ್ಯತೆ ಇದೆ...

ಶಂಕರ್ ಗೌಡಿ ಮುಂಡಗೋಡಿನ ನೂತನ ತಹಶೀಲ್ದಾರ್ ಆಗಿ ವರ್ಗಾವಣೆ..!

ಶಂಕರ್ ಗೌಡಿ ಮುಂಡಗೋಡಿನ ನೂತನ ತಹಶೀಲ್ದಾರ್ ಆಗಿ ವರ್ಗಾವಣೆ..!

ಮುಂಡಗೋಡಿಗೆ ನೂತನ ತಹಶೀಲ್ದಾರ್ ಆಗಿ ಶಂಕರ ಗೌಡಿ ವರ್ಗಾವಣೆಯಾಗಿದ್ದಾರೆ. ಸದ್ಯ ಬಾಗಲಕೋಟೆ ಜಿಲ್ಲೆ ಬೀಳಗಿ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದ ಶಂಕರ್ ಗೌಡಿಯವರನ್ನು ಮುಂಡಗೋಡಿಗೆ ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಶ್ರೀಧರ್ ಮುಂದಲಮನಿಯವರನ್ನು ಶಿರಸಿಗೆ ವರ್ಗಾವಣೆಗೊಳಿಸಿದ್ದರಿಂದ ಮುಂಡಗೋಡ ತಹಶೀಲ್ದಾರ್ ಹುದ್ದೆ ಖಾಲಿಯಾಗಿತ್ತು. ನಿನ್ನೆಯಷ್ಟೇ ಶ್ರೀಧರ್ ಮುಂದಲಮನಿ ಮುಂಡಗೋಡಿನಿಂದ ಬಿಡುಗಡೆಗೊಂಡು ಶಿರಸಿಗೆ ವರ್ಗಾವಣೆಯಾಗಿದ್ದರು. ಹೀಗಾಗಿ, ಇಂದು ನೂತನ ತಹಶಿಲ್ದಾರ್ ಶಂಕರ್ ಗೌಡಿಯವರನ್ನು ಸರ್ಕಾರ ಮುಂಡಗೋಡಿಗೆ ವರ್ಗಾವಣೆಗೊಳಿಸಿ ಆದೇಶಿಸಿದೆ.

ತಹಶೀಲ್ದಾರ್ ಶ್ರೀಧರ್ ಮುಂದಲಮನಿ ಮುಂಡಗೋಡಿನಿಂದ ಇಂದು ಬಿಡುಗಡೆ, ಡೀಸಿ ಆದೇಶ..!

ತಹಶೀಲ್ದಾರ್ ಶ್ರೀಧರ್ ಮುಂದಲಮನಿ ಮುಂಡಗೋಡಿನಿಂದ ಇಂದು ಬಿಡುಗಡೆ, ಡೀಸಿ ಆದೇಶ..!

ಮುಂಡಗೋಡ: ಶಿರಸಿಗೆ ವರ್ಗಾವಣೆಗೊಂಡಿರೋ ತಹಶೀಲ್ದಾರ್ ಶ್ರೀಧರ್ ಮುಂದಲಮನಿ ಮುಂಡಗೋಡದಿಂದ ಬಿಡುಗಡೆಗೊಂಡಿದ್ದಾರೆ. ಬಿಡುಗಡೆಗೊಳಿಸಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲಿನ್ ಆದೇಶ ಹೊರಡಿಸಿದ್ದಾರೆ. ಇವತ್ತೇ ಮುಂಡಗೋಡದಿಂದ ಶಿರಸಿಗೆ ತಹಶೀಲ್ದಾರ್ ಶ್ರೀಧರ್ ಮುಂದಲಮನಿ ಬಿಡುಗಡೆಗೊಂಡಿದ್ದು, ಮುಂದಿನ ತಹಶೀಲ್ದಾರ್ ಹುದ್ದೆ ಭರ್ತಿ ಆಗುವವರೆಗೂ ಮುಂಡಗೋಡಿಗೆ ಹೆಚ್ಚುವರಿ ಪ್ರಭಾರಿಯಾಗಿ ಶ್ರೀಧರ್ ಮುಂದಲಮನಿಯವರೇ ಕಾರ್ಯ ನಿರ್ವಹಿಸಲಿದ್ದಾರೆ ಅಂತಾ ಜಿಲ್ಲಾಧಿಕಾರಿಗಳು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಮುಂಡಗೋಡ ತಾಲೂಕಿನ ಗಲ್ಲಿಗಳಲ್ಲಿ ಅಕ್ರಮ ಮದ್ಯ‌ಮಾರಾಟ, ಅಬಕಾರಿಗಳ ನೆರಳಲ್ಲೇ ನಡಿತಿದೆಯಾ ದಂಧೆ..?

ಮುಂಡಗೋಡ ತಾಲೂಕಿನ ಗಲ್ಲಿಗಳಲ್ಲಿ ಅಕ್ರಮ ಮದ್ಯ‌ಮಾರಾಟ, ಅಬಕಾರಿಗಳ ನೆರಳಲ್ಲೇ ನಡಿತಿದೆಯಾ ದಂಧೆ..?

ಮುಂಡಗೋಡ: ತಾಲೂಕಿನಲ್ಲಿ ಈಗ ಎಲ್ಲೆಂದರಲ್ಲಿ ಸರಾಯಿ ಮಾರಾಟದ ಅಕ್ರಮ ಅಡ್ಡೆಗಳು ತಲೆ ಎತ್ತಿವೆ. ಅಧಿಕೃತ ಮದ್ಯದಂಗಡಿಗಳು ಮುಂಡಗೋಡಿಗಷ್ಟೇ ಸೀಮಿತವಾಗಿವೆ. ಆದ್ರೆ ಅದ್ಯಾರ ಕೃಪಾಕಟಾಕ್ಷವೋ ಗೊತ್ತಿಲ್ಲ, ಇಡೀ ತಾಲೂಕಿನ ಗಲ್ಲಿ ಗಲ್ಲಿಗಳಲ್ಲಿ ಅಕ್ರಮ ದಂಧೆಕೋರರನ್ನು ಹುಟ್ಟು ಹಾಕಲಾಗಿದೆ. ಹೀಗಾಗಿ, ತಾಲೂಕಿನ ಮಹಿಳೆಯರು, ಪ್ರಜ್ಞಾವಂತರು ಸಂಬಂಧಪಟ್ಟವರಿಗೆ ಹಿಡಿಶಾಪ ಹಾಕ್ತಿದಾರೆ. ಅದ್ರಲ್ಲೂ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಮಹಾಮಂಗಳಾರತಿ ಮಾಡ್ತಿದಾರೆ. ಅಬಕಾರಿಗಳದ್ದೇ ಆಟ..? ನಿಜ ಅಂದ್ರೆ ಮುಂಡಗೋಡ ತಾಲೂಕಿನಲ್ಲಿ ಈಗ ಕೆಲವು ಕಿರಾಣಿ ಅಂಗಡಿಗಳಲ್ಲೂ ಮದ್ಯ ಹೇರಳವಾಗಿ ಸಿಗುತ್ತಿದೆ. ಇನ್ನು ತಾಲೂಕಿನ ಟಿಬೇಟಿಯನ್ ಕಾಲೋನಿಗಳ ಅಕ್ಕಪಕ್ಕದಲ್ಲೇ ಹತ್ತಾರು ಅಂಗಡಿಗಳು ಬಿಂಧಾಸ್ ಆಗಿ ಸರಾಯಿ ಮಾರಾಟ ಮಾಡ್ತಿವೆ. ಟಿಬೇಟಿಯನ್ ಕಾಲೋನಿಯ ಕ್ಯಾಂಪ್ ನಂಬರ್ 6 ರ ಕ್ರಾಸ್ ಬಳಿ, ಕ್ಯಾಂಪ್ ನಂಬರ್ 8 ಬಳಿ ಅಕ್ರಮವಾಗಿ ಯಾವುದೇ ಪರ್ಮಿಟ್ ಇಲ್ಲದೇ ಸರಾಯಿ ಮಾರಾಟ ಮಾಡಲಾಗ್ತಿದೆ. ಹೀಗಾಗಿ, ಈ ಭಾಗದ ಹಲವು ಯುವಕರು ಮದ್ಯದ ದಾಸರಾಗ್ತಿದಾರೆ. ಈ ನಶೆಯಲ್ಲೇ ಹಲವು ಬಗೆಯ ಕ್ರೈಂ ಗಳು ನಡೆಯುತ್ತಿವೆ. ಅವ್ರು ಹೇಳಿದ್ದೇ ರೇಟು..!...

ಡೀಸೆಲ್ ಟ್ಯಾಂಕರ್ ಪಲ್ಟಿ, ರಸ್ತೆಗೆ ಹರಿದ ಡೀಸೆಲ್, ತುಂಬಿಕೊಳ್ಳಲು ಮುಗಿಬಿದ್ದ ಜನ..!

ಡೀಸೆಲ್ ಟ್ಯಾಂಕರ್ ಪಲ್ಟಿ, ರಸ್ತೆಗೆ ಹರಿದ ಡೀಸೆಲ್, ತುಂಬಿಕೊಳ್ಳಲು ಮುಗಿಬಿದ್ದ ಜನ..!

ವಿಜಯಪುರ: ಚಾಲಕನ ನಿಯಂತ್ರಣ ತಪ್ಪಿ ಡೀಸೆಲ್ ಸಾಗಾಟ ಮಾಡುತ್ತಿದ್ದ ಟ್ಯಾಂಕರ್ ಪಲ್ಟಿಯಾದ ಘಟನೆ, ವಿಜಯಪುರದ ಹೊರವಲಯದಲ್ಲಿ ನಡೆದಿದೆ. ಟ್ಯಾಂಕರ್ ಪಲ್ಟಿಯಾದ ಪರಿಣಾಮ, ಡೀಸೆಲ್ ರಸ್ತೆಗೆ ಹರಿದಿದೆ. ಹೀಗಾಗಿ, ಟ್ಯಾಂಕರ್ ನಿಂದ ಸೋರುತ್ತಿದ್ದ ಡಿಸೈಲ್ ತುಂಬಿಕೊಳ್ಳಲು ಜನರು ಮುಗಿ ಬಿದ್ದಿದ್ದರು. ವಿಜಯಪುರ ನಗರದ ಹೊರ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ 50 ರಹೈಪರ್ ಮಾರ್ಟ್ ಬಳಿ ಡೀಸೆಲ್ ಟ್ಯಾಂಕರ್ ಉರುಳಿಬಿದ್ದಿದ್ದು, ವಾಟರ್ ಬಾಟಲ್ ಹಾಗೂ ಇತರ ವಸ್ತುಗಳಲ್ಲಿ ಜನರು, ಡೀಸೆಲ್ ತುಂಬಿಕೊಂಡು‌ ಹೋಗ್ತಿದಾರೆ. ಟ್ಯಾಂಕರ್ ನಿಂದ ಅಪಾರ ಪ್ರಮಾಣದ ಡಿಸೈಲ್ ಸೋರಿಕೆಯಾಗಿದೆ. ರಸ್ತೆ ಪಕ್ಕದ ಗುಂಡಿಯಲ್ಲಿ ಹರಿದು‌ ಡೀಸೆಲ್ ತುಂಬಿಕೊಂಡಿದೆ. ಹೀಗಾಗಿ, ಆ ಗುಂಡಿಗಳಿಂದಲೂ ಜನರು ಡೀಸೆಲ್ ತುಂಬಿಕೊಳ್ಳುತ್ತಿದ್ದಾರೆ. ಸ್ಥಳಕ್ಕೆ ಗೋಲಗುಮ್ಮಟ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿದ್ದಾರೆ. ಜನರನ್ನು ಪೊಲೀಸರು ಚದುರಿಸಿದ್ದಾರೆ. ಗೋಲಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ‌.

ವರೂರು ಬಳಿ ಸರಣಿ ಅಪಘಾತ, ಓರ್ವ ಸ್ಥಳದಲ್ಲೇ ಸಾವು, ಐವರಿಗೆ ಗಂಭೀರ ಗಾಯ..!

ವರೂರು ಬಳಿ ಸರಣಿ ಅಪಘಾತ, ಓರ್ವ ಸ್ಥಳದಲ್ಲೇ ಸಾವು, ಐವರಿಗೆ ಗಂಭೀರ ಗಾಯ..!

 ಹುಬ್ಬಳ್ಳಿ ಸಮೀಪದ ವರೂರಿನ ವಿಆರ್ ಎಲ್ ಬಳಿ ರಾ.ಹೆದ್ದಾರಿ 4 ರಲ್ಲಿ, ಭೀಕರ ಸರಣಿ ಅಪಘಾತವಾಗಿದೆ‌. ಸ್ಥಳದಲ್ಲೇ ಓರ್ವ ಸಾವನ್ನಪ್ಪಿದ್ದು, ಐವರಿಗೆ ಗಂಭೀರ ಗಾಯವಾಗಿದೆ. ವರೂರಿನ VRL ಬಳಿ, ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ವ್ಯಕ್ತಿಯೊರ್ವ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಪಘಾತ ಕಂಡು ಮೃತ ವ್ಯಕ್ತಿಯನ್ನು ನೋಡಲು ಬಂದ ಐವರಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದು ಪರಾರಿಯಾಗಿದೆ. ಹೀಗಾಗಿ ಐವರಿಗೆ ಗಂಭೀರ ಗಾಯವಾಗಿದೆ. ಇದ್ರಲ್ಲಿ ಗಾಯಾಳುವನ್ನು ಸಾಗಿಸಲು ಬಂದಿದ್ದ ಅಂಬ್ಯುಲೆನ್ಸ್ ಸಿಬ್ಬಂದಿಗೂ ಗಾಯವಾಗಿದೆ. ಗಾಯಾಳುಗಳನ್ನು ಹುಬ್ಬಳ್ಳಿಗೆ ರವಾನಿಸಲಾಗಿದೆ. ಮೃತ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಹುಬ್ಬಳ್ಳಿ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕೆಂದಲಗೇರಿಯಲ್ಲಿ ಇಸ್ಪೀಟು ಅಡ್ಡೆಯ ಮೇಲೆ ಪೊಲೀಸರ ದಾಳಿ, ಮೂವರು ವಶಕ್ಕೆ..!

ಕೆಂದಲಗೇರಿಯಲ್ಲಿ ಇಸ್ಪೀಟು ಅಡ್ಡೆಯ ಮೇಲೆ ಪೊಲೀಸರ ದಾಳಿ, ಮೂವರು ವಶಕ್ಕೆ..!

ಮುಂಡಗೋಡ: ತಾಲೂಕಿನ ಕೆಂದಲಗೇರಿಯಲ್ಲಿ ಇಸ್ಪೀಟು ಆಟದಲ್ಲಿ ತೊಡಗಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಇಸ್ಪೀಟು ಆಡುತ್ತಿದ್ದ ಮೂವರನ್ನು ವಶಕ್ಕೆ ಪಡೆದು, ಐವರ ಮೇಲೆ ಕೇಸು ದಾಖಲಿಸಲಾಗಿದೆ. ನಾಗರಾಜ ಹನುಮಂತ ಚವ್ಹಾಣ(45), ಆಶೋಕ ನಿಂಗಪ್ಪ ಮಂಜಣ್ಣನವರ್(28), ಫಕ್ಕೀರಾ ಸಾಕಪ್ಪ ಕಟ್ಟಿಮನಿ(30), ರುದ್ರಪ್ಪ ತಂದೆ ಗುಳುವಪ್ಪ ಸುಣಗಾರ(38) ಹಾಗೂ ಅಲಿ ಹುಸನ್‌ ಸಾಬ ಮುಜಾವರ್(35) ಎಂಬುವವರ ಮೇಲೆ ಕೇಸು ದಾಖಲಿಸಲಾಗಿದೆ. ಇದ್ರಲ್ಲಿ ಮೂವರು ಆರೋಪಿಗಳು ಪೊಲೀಸರ ದಾಳಿ ವೇಳೆ ಸಿಕ್ಕಿಬಿದ್ದಿದ್ದಾರೆ, ಇನ್ನುಳಿದವರು ಪರಾರಿಯಾಗಿದ್ದಾರೆ.

ನ್ಯಾಸರ್ಗಿಯಲ್ಲಿ ಪಿಐ ಸಿದ್ದಪ್ಪ ಸಿಮಾನಿ ನೇತೃತ್ವದಲ್ಲಿ ಓಸಿ ಅಡ್ಡೆಯ ಮೇಲೆ ಪೊಲೀಸರ ದಾಳಿ, ಓರ್ವ ವಶಕ್ಕೆ..!

ನ್ಯಾಸರ್ಗಿಯಲ್ಲಿ ಪಿಐ ಸಿದ್ದಪ್ಪ ಸಿಮಾನಿ ನೇತೃತ್ವದಲ್ಲಿ ಓಸಿ ಅಡ್ಡೆಯ ಮೇಲೆ ಪೊಲೀಸರ ದಾಳಿ, ಓರ್ವ ವಶಕ್ಕೆ..!

ಮುಂಡಗೋಡ: ತಾಲೂಕಿನ ನ್ಯಾಸರ್ಗಿಯಲ್ಲಿ ಮಟ್ಕಾ ಅಡ್ಡೆಯ ಮೇಲೆ ಪಿಐ ಸಿದ್ದಪ್ಪ ಸಿಮಾನಿ ನೇತೃತ್ವದ ತಂಡ ದಾಳಿ ಮಾಡಿದೆ. ಮಟ್ಕಾ ದಂಧೆ ನಡೆಸುತ್ತಿದ್ದ ಓರ್ವನನ್ನು ವಶಕ್ಕೆ ಪಡೆದು ಕೇಸು ದಾಖಲಿಸಿದ್ದಾರೆ ಪೊಲೀಸ್ರು. ನ್ಯಾಸರ್ಗಿಯ ಪ್ರಕಾಶ ಉದಯ ಹರಿಜನ(32) ಎಂಬುವವನ ಮೇಲೆ ಕೇಸು ದಾಖಲಿಸಲಾಗಿದೆ. ಈತ ನ್ಯಾಸರ್ಗಿ ಗ್ರಾಮದ ಕಲಿಯಮ್ಮಾ ದೇವಸ್ಥಾನದ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಓಸಿ ಬರೆಯುತ್ತಿದ್ದ, ಅದೇ ವೇಳೆ ದಾಳಿ ಮಾಡಿರೋ ಪಿಐ ಸಿದ್ದಪ್ಪ ಸಿಮಾನಿ ಮತ್ತವರ ತಂಡ, ಮಟ್ಕಾ ನಡೆಸುತ್ತಿದ್ದವರ ಛಳಿ ಬಿಡಿಸಿದೆ. ದಾಳಿ ವೇಳೆ ನಗದು 410 ರೂ. ಜಪ್ತಿ ಮಾಡಲಾಗಿದೆ. ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತಿಯ ಕಿರುಕುಳ ಆರೋಪ, ಬಾಚಣಕಿಯಲ್ಲಿ 6 ತಿಂಗಳ ಗರ್ಭಿಣಿ ನೇಣಿಗೆ ಶರಣು..!

ಪತಿಯ ಕಿರುಕುಳ ಆರೋಪ, ಬಾಚಣಕಿಯಲ್ಲಿ 6 ತಿಂಗಳ ಗರ್ಭಿಣಿ ನೇಣಿಗೆ ಶರಣು..!

ಮುಂಡಗೋಡ: ತಾಲೂಕಿನ ಬಾಚಣಕಿಯಲ್ಲಿ ಆರು ತಿಂಗಳ ಗರ್ಭಿಣಿ ನೇಣಿಗೆ ಶರಣಾಗಿರೋ ಘಟನೆ ನಡೆದಿದೆ. ಚೇತನಾ ಗುತ್ತೆಪ್ಪ ಸಣ್ಣಮನಿ(32) ನೇಣಿಗೆ ಶರಣಾದ ಗರ್ಭಿಣಿಯಾಗಿದ್ದು ಪತಿಯ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾಗಿರೋ ಆರೋಪ ಕೇಳಿ ಬಂದಿದೆ. ಪತಿ ಗುತ್ತೆಪ್ಪ ಸಣ್ಣಮನಿ ಎಂಬುವವನ ವಿರುದ್ಧ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 2 ಮಕ್ಕಳ ತಾಯಿಯಾಗಿದ್ದ ಚೇತನಾ, ಈಗ ಮತ್ತೆ 6 ತಿಂಗಳ ಗರ್ಭಿಣಿಯಾಗಿದ್ದಾಳೆ. ಆದ್ರೆ ಪತಿ ಗುತ್ತೆಪ್ಪ ಮಾನಸಿಕ ಹಾಗೂ ದೈಹಿಕ ಕಿರುಕುಳ‌ನೀಡುತ್ತಿದ್ದ ಕಾರಣದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತಾ ಆರೋಪಿಸಲಾಗಿದ್ದು, ಸದ್ಯ ಪ್ರಕರಣ ದಾಖಲಿಸಿಕೊಂಡಿರೋ ಮುಂಡಗೋಡ ಪೊಲೀಸರು ಪತಿ ಗುತ್ತೆಪ್ಪನನ್ನು ವಶಕ್ಕೆ ಪಡೆದಿದ್ದಾರೆ. ************************* ಪಬ್ಲಿಕ್ ಫಸ್ಟ್ ನ್ಯೂಸ್ ವಾಟ್ಸಾಪ್ ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿ, ತಾಜಾ ಸುದ್ದಿಗಳನ್ನು ಕ್ಷಣಮಾತ್ರದಲ್ಲೇ ಪಡೆಯಿರಿ.. https://chat.whatsapp.com/KgL6z5JiAvsBtN9kzBSXRD

ಮುಂಡಗೋಡ ಪೊಲೀಸರ ಭರ್ಜರಿ ಕಾರ್ಯಾಚರಣೆ, ಗೋಮಾಂಸ ಸಾಗಿಸುತ್ತಿದ್ದ ವಾಹನ ಸಮೇತ, ಓರ್ವ ವಶಕ್ಕೆ..!

ಮುಂಡಗೋಡ ಪೊಲೀಸರ ಭರ್ಜರಿ ಕಾರ್ಯಾಚರಣೆ, ಗೋಮಾಂಸ ಸಾಗಿಸುತ್ತಿದ್ದ ವಾಹನ ಸಮೇತ, ಓರ್ವ ವಶಕ್ಕೆ..!

ಮುಂಡಗೋಡ:ಪಿಎಸ್ಐ ಬಸವರಾಜ್ ಮಬನೂರು ಮತ್ತವರ ತಂಡ ಬೆಳ್ಳಂ ಬೆಳಿಗ್ಗೆ ಮತ್ತೊಂದು ಭರ್ಜರಿ ಕಾರ್ಯಾಚರಣೆ ನಡೆಸಿದೆ. ಅಕ್ರಮವಾಗಿ ಬಂಕಾಪುರದಿಂದ ಗೋಮಾಂಸ ಸಾಗಾಟ ಮಾಡುತ್ತಿದ್ದ ಓಮಿನಿ ವಾಹನ ಸಮೇತ ಓರ್ವ ಆರೋಪಿಯ ಹೆಡೆಮುರಿ ಕಟ್ಟಲಾಗಿದೆ. ಟಿಬೇಟಿಯನ್ ಕಾಲೋನಿಗೆ..? ಇಂದು ಬೆಳಿಗ್ಗೆ, ಹಾವೇರಿ ಜಿಲ್ಲೆಯ ಬಂಕಾಪುರದಿಂದ ಓಮಿನಿ ವಾಹನದಲ್ಲಿ ಗೋಮಾಂಸ ಸಾಗಾಟ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಆಧಾರದಲ್ಲಿ ಬಂಕಾಪುರ ರಸ್ತೆಯಲ್ಲಿ ದಾಳಿ ಮಾಡಿರೋ ಪೊಲೀಸರು, ಬರೋಬ್ಬರಿ 2 ಕ್ವಿಂಟಾಲ್ ಗೋಮಾಂಸ ವಶಕ್ಕೆ ಪಡೆಸಿಕೊಂಡಿದ್ದಾರೆ. ಜೊತೆಗೆ ಅಕ್ರಮ ದಂಧೆ ನಡೆಸುತ್ತಿದ್ದ ಆರೋಪಿ ಸಮೇತ ವಾಹನ ಜಪ್ತಿ ಪಡಿಸಿಕೊಂಡಿದ್ದಾರೆ. ಕೇಸು ಜಡೆದಿದ್ದಾರೆ. ನಿತ್ಯದ ಆಟ..! ಅಸಲು, ಮುಂಡಗೋಡ ತಾಲೂಕಿನ ಟಿಬೇಟಿಯನ್ ಕಾಲೋನಿಗೆ ನಿತ್ಯವೂ ಟನ್ನುಗಟ್ಟಲೇ ಗೋಮಾಂಸ ಬಂದು ಬೀಳುತ್ತಿದೆ. ಹುಬ್ಬಳ್ಳಿ, ಬಂಕಾಪುರ, ಸವಣೂರು ಸೇರಿದಂತೆ ಹಲವು ಕಡೆಗಳಿಂದ ಟಾಟಾ ಎಸ್, ಓಮಿನಿಗಳಲ್ಲಿ, ಹಳೆಯ ಕಾರುಗಳಲ್ಲಿ ಸ್ಕೂಟಿಗಳಲ್ಲಿ ಕ್ವಿಂಟಾಲುಗಟ್ಟಲೇ ಗೋಮಾಂಸ ತಂದು ಬಿಕರಿ ಮಾಡಿಕೊಂಡು ಹೋಗ್ತಿದಾರೆ ಅಕ್ರಮಿಗಳು. ನಿಜ ಅಂದ್ರೆ ಇದೇಲ್ಲ ಗಪ್ ಚುಪ್ ಆಗೇ, ಬೆಳಕು ಹರಿಯುವುದೊರಳಗಾಗಿ ಕೈ...

error: Content is protected !!