ಮಹಾರುದ್ರನಂತೆ ಭಯಂಕರವಾಗಿತ್ತು ಆತನ ಕೋಪಾಗ್ನಿ..! ಕಾಲುಕೆದರಿ ನಿಂತರೆ ಸಾಕು ಎದುರಿಗಿದ್ದವರ ಎದೆಯಲ್ಲೇ ಬಡಿದಂತೆ ನಗಾರಿ..!! ಆದ್ರೆ ಸದ್ಯ ಮೌನಿಯಾಗಿ ಮಲಗಿಬಿಟ್ಟಿದ್ದಾನೆ ಆತ..! ಇನ್ನೆಂದೂ ಆತನ ರೌದ್ರತೆ ಕಾಣಸಿಗೋದೇ ಇಲ್ಲ..! ಯಾಕಂದ್ರೆ ಆತ ಮರಳಿ ಬಾರದೂರಿಗೆ ಪಯಣ ಬೆಳಿಸಿದ್ದಾನೆ..! ಆದ್ರೆ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಮಾತ್ರ ಬಹುದೊಡ್ಡ ಸ್ಥಾನ ಪಡದಿದ್ದಾನೆ “ಮಹಾರಾಜ”ನಂತೆ ಘರ್ಜಿಸಿದ್ದಾನೆ..! ಯಸ್, ಅವನು ಹೋರಿ ಅಭಿಮಾನಿಗಳ ಪಾಲಿನ ಮಹಾದಂಡನಾಯಕ.. ಆತನಿಗೆ ಮುಂಡಗೋಡ ಅಷ್ಟೇ ಅಲ್ಲ ಹೊರ ಜಿಲ್ಲೆಗಳಲ್ಲೂ ಸಾವಿರ ಸಾವಿರ ಸಂಖ್ಯೆಯ ಅಭಿಮಾನಿ ಬಳಗವಿದೆ.. ಹುಚ್ಚರಂತೆ ಆರಾಧಿಸೋ ಯುವ ಪಡೆಯಿದೆ.. ಅಂತಹ ಮಹಾದಂಡನಾಯಕ ಈಗ ಅಕ್ಷರಶಃ ಮೌನಿಯಾಗಿದ್ದಾನೆ.. ಸದಾ ಘರ್ಜನೆಯಲ್ಲಿದ್ದ ಆತ ಈಗ ನಿರ್ಲಿಪ್ತವಾಗಿದ್ದಾನೆ.. ಅಂದಹಾಗೆ, ನಾವಿಲ್ಲಿ ಹೇಳಹೊರಟಿರೋದು ಯಾವುದೇ ರಾಜಕಾರಣಿಯ ಕತೆಯನ್ನಲ್ಲ.. ಯಾವುದೇ ಸಿನಿಮಾ ನಟನ ಸ್ಟೋರಿನೂ ಅಲ್ಲ.. ಬದಲಾಗಿ ಮುಗ್ದ ಮನಸ್ಸಿನ, ಮೂಕ ಭಾವಗಳಲ್ಲೇ ಅಭಿಮಾನಿಗಳನ್ನ ತನ್ನತ್ತ ಸೆಳೆದ ಭಯಂಕರ ಚತುರ, ಮುಟ್ಟಿದರೆ ಮುನಿದು ಚಿಮ್ಮುವ ತಾಕತ್ತಿನ ಸರದಾರ, ಬ್ಯಾಡಗಿಯಲ್ಲಿ ಹುಟ್ಟಿ, ರಾಜ್ಯದ ನಾನಾ ಕಡೆ ಸ್ಪರ್ಧಾ...
Top Stories
ಮಳೆಗಾಳಿಗೆ ರಸ್ತೆ ಮೇಲೆ ಬಿದ್ದ ಬೃಹತ್ ಮಾವಿನ ಮರ, ಶಿರಸಿ-ಹುಬ್ಬಳ್ಳಿ ರಸ್ತೆ ಸಂಪೂರ್ಣ ಸ್ಥಗಿತ..!
ನಂದಿಪುರದಲ್ಲಿ ಬೋರವೆಲ್ ಗೆ ಅನಧೀಕೃತ ವಿದ್ಯುತ್ ಸಂಪರ್ಕ, ಗದ್ದೆಯಲ್ಲಿ ವೈಯರ್ ತುಳಿದು ಸ್ಥಳದಲ್ಲೇ ಸಾವು ಕಂಡ ರೈತ..!
ಮುಂಡಗೋಡ ಪೊಲೀಸರ ಕಾರ್ಯಾಚರಣೆ, IPL ಬೆಟ್ಟಿಂಗ್ ನಡೆಸುತ್ತಿದ್ದ ಓರ್ವ ಆರೋಪಿ ವಶಕ್ಕೆ, ಮೂವರು ಎಸ್ಕೇಪ್..!
ಮಾದಕ ವಸ್ತುಗಳಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮ: ನ್ಯಾ. ವಿಜಯ ಕುಮಾರ್
ನಂದಿಕಟ್ಟಾದಲ್ಲಿ ಅರ್ಥಪೂರ್ಣ ಶ್ರೀರಾಮ ನವಮಿ, ಉಚಿತ ಆರೋಗ್ಯ, ಹೃದಯ ತಪಾಸಣಾ ಶಿಬಿರ..!
ಗಾಂಧಿನಗರ “ಸ್ಲಂ” ಬೋರ್ಡ್ ರಂಪಾಟ; ಜಂಟೀ ತನಿಖಾ ತಂಡ ಭೇಟಿ, ಎರಡೂ ತಂಡದಿಂದ ಪರ-ವಿರೋಧದ ಮನವಿ..!
ಅರಣ್ಯ ಇಲಾಖೆಯವ್ರೂ ಉದ್ಯೋಗ ಖಾತ್ರಿ ಯೋಜನೆ ಸದ್ಬಳಕೆ ಮಾಡಿಕೊಳ್ಳಿ: ಮುಂಡಗೋಡಿಗೆ ಭೇಟಿ ನೀಡಿದ ಜಿಪಂ CEO ಈಶ್ವರ ಖಾಂದೂ ಕರೆ..!
ಸುಳ್ಳು ಸುಳ್ಳು ಮಾಹಿತಿ ನೀಡಿ “ಸ್ಲಂ” ಘೋಷಣೆ ಆರೋಪ, ಪ.ಪಂಚಾಯತಿ, ಸ್ಲಂ ಬೋರ್ಡ್ ವಿರುದ್ಧ ಇಂದು ಪ್ರತಿಭಟನೆ..!
ಓಣಿಕೇರಿಯಲ್ಲಿ ಶುಂಠಿ ಕೆಲಸಕ್ಕೆ ಬಂದಿದ್ದ ಇಬ್ಬರು ಕೂಲಿ ಕಾರ್ಮಿಕರಿಗೆ ವಿದ್ಯುತ್ ಆಘಾತ, ಓರ್ವ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ನಂದಿಕಟ್ಟಾದಲ್ಲಿ ಶ್ರೀರಾಮ ನವಮಿ ಸಿದ್ದತೆ, ಎಪ್ರಿಲ್ 6ರಂದು ಉಚಿತ ಆರೋಗ್ಯ, ಹೃದಯ ತಪಾಸಣಾ ಶಿಬಿರ..!
ಮುಂಡಗೋಡ ಪೊಲೀಸ್ರ ದಾಳಿ, ಇಸ್ಪೀಟು ಆಟ ಆಡುತ್ತಿದ್ದವರು ಅಂದರ್, 10 ಜನರಲ್ಲಿ 8 ಜನ ಪರಾರಿ..!
ಶುದ್ಧ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಎಚ್ಚರಿಕೆ ವಹಿಸಿ : ಈಶ್ವರ್ ಕಾಂದೂ
ಕಲಕೇರಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕಂಚಿನ ಪ್ರತಿಮೆ ಅನಾವರಣ..!
ಉದ್ಯೋಗ ಖಾತರಿಯಲ್ಲಿ ಮಹಿಳಾ ಕಾರ್ಮಿಕರು ಭಾಗವಹಿಸುವಿಕೆ ಹೆಚ್ಚಿಸಲು ಸ್ತ್ರೀ ಚೇತನ ಅಭಿಯಾನ..!
ಯತ್ನಾಳ ಉಚ್ಚಾಟನೆಯ ಪರಿಣಾಮ ಎರಡ್ಮೂರು ದಿನದಲ್ಲಿ ಗೊತ್ತಾಗತ್ತೆ: ಶಿವರಾಮ್ ಹೆಬ್ಬಾರ್
ಮುಂಡಗೋಡ ತಾಲೂಕಿನ ಹಲವು ಕಾರ್ಯಕ್ರಮಗಳಲ್ಲಿ ಶಾಸಕ ಶಿವರಾಮ್ ಹೆಬ್ಬಾರ ಭಾಗಿ..!
ಮಳಗಿ ಬಳಿ KSRTC ಬಸ್ ಮೇಲೆ ಉರುಳಿ ಬಿದ್ದ ಮರ, ರಸ್ತೆ ಸಂಚಾರ ಅಸ್ತವ್ಯಸ್ತ, ತಪ್ಪಿದ ಭಾರೀ ಅನಾಹುತ..!
ಜಿಲ್ಲೆಯಲ್ಲಿ ಗೃಹ ಸಚಿವ: ಗೋವಾ ಗಡಿಯಲ್ಲಿ ಎಚ್ಚರಿಕೆ ವಹಿಸಿ: ಡಾ.ಜಿ. ಪರಮೇಶ್ವರ್
ಯತ್ನಾಳ್ ಉಚ್ಚಾಟನೆ, ಇದು ಅನಿವಾರ್ಯವಾಗಿ ತೆಗೆದು ಕೊಂಡಿರೋ ಕ್ರಮ, ವಿಜಯೇಂದ್ರ ಸ್ಪಷ್ಟನೆ..!
ಮುಂಡಗೋಡ ಖ್ಯಾತ ಸ್ಪರ್ಧಾ ಹೋರಿ ಇಂದೂರು ಹೊಯ್ಸಳ ಅಸ್ತಂಗತ..! ಬಿಕ್ಕಿ ಬಿಕ್ಕಿ ಅತ್ತ ಅಭಿಮಾನಿಗಳು..!
ಸಾಲಗಾಂವ್ ಕೆರೆಯಲ್ಲಿ ಮೀನು ಹಿಡಿಯಲು ಇಳಿದಿದ್ದವ ಹೆಣವಾದ..!
ಮೀನು ಹಿಡಿಯಲು ಕೆರೆಗೆ ಇಳಿದಿದ್ದ ವ್ಯಕ್ತಿಯೋರ್ವ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸಾಲಗಾಂವ್ ಕೆರೆಯಲ್ಲಿ ನಡೆದಿದೆ. ಗ್ರಾಮಸ್ಥರ ಸಹಕಾರದಿಂದ ಮುಂಡಗೋಡ ಪಿಎಸ್ಐ ಪರಶುರಾಮ್ ಮಿರ್ಜಿಗಿ ಕೆರೆಯಲ್ಲಿ ಇಳಿದು ವ್ಯಕ್ತಿಯ ಶವ ಹೊತೆಗೆದಿದ್ದಾರೆ. ಗುಡ್ಡಪ್ಪ ಜಾಡರ್(58) ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ವ್ಯಕ್ತಿಯಾಗಿದ್ದಾನೆ. ಈತ ಇಂದು ಮೀನು ಹಿಡಿಯಲು ಕೆರೆಯಲ್ಲಿ ಇಳಿದಿದ್ದ. ಈ ವೇಳೆ ಕೆರೆಯ ನೀರಲ್ಲಿ ಮುಳುಗಿ ನಾಪತ್ತೆಯಾಗಿದ್ದ. ಹೀಗಾಗಿ, ಸುದ್ದಿ ತಿಳಿದ ಪಿಎಸ್ಐ ಸ್ಥಳಕ್ಕೆ ಧಾವಿಸಿ ಶವ ಹೊರತೆಗೆದಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮುಂಡಗೋಡ ಅಜಾದ್ ಬ್ಯಾಂಕ್ ಅಧ್ಯಕ್ಷರಾಗಿ ಮಹ್ಮದ್ ಗೌಸ್ ಧುಂಡಸಿ ಆಯ್ಕೆ..!
ಮುಂಡಗೋಡಿನ ಅಜಾದ್ ಕೋ- ಆಪರೇಟಿವ್ ಬ್ಯಾಂಕ್ ನ ನೂತನ ಅಧ್ಯಕ್ಷರಾಗಿ ಮಹ್ಮದ್ ಗೌಸ್ ಧುಂಡಸಿ ಆಯ್ಕೆಯಾಗಿದ್ದಾರೆ. ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರೋ ಧುಂಡಸಿಯವರಿಗೆ ಹಲವು ಮುಖಂಡರು ಆಭಿನಂದಿಸಿದ್ದಾರೆ. ಇನ್ನು ಉಪಾಧ್ಯಕ್ಷರಾಗಿ ನಸೀಮಾಬಾನು ಅವ್ರು ಆಯ್ಕೆಯಾಗಿದ್ದು, ನೂತನ ಆಡಳಿತ ಮಂಡಳಿ ಜಾರಿಗೆ ಬಂದಿದೆ.
ಕುಂಭಮೇಳಕ್ಕೆ ಹೋಗಿದ್ದ ನಾಲ್ವರು ಕನ್ನಡಿಗರು ಕಾಲ್ತುಳಿತಕ್ಕೆ ಬಲಿ..! ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂಧನ..!
ಮೌನಿ ಅಮವಾಸ್ಯೆ ದಿನ ಪ್ರಯಾಗರಾಜ್ ಕುಂಭಮೇಳದ ಸಂಗಮದಲ್ಲಿ ಪುಣ್ಯಸ್ನಾನಕ್ಕೆ ಹೋಗಿದ್ದ ನಾಲ್ವರು ಕನ್ನಡಿಗರು ಕಾಲ್ತುಳಿತಕ್ಕೆ ಬಲಿಯಾಗಿದ್ದಾರೆ. ಬೆಳಗಾವಿ ನಗರದಿಂದ 30 ಜನರ ತಂಡ ಕುಂಭಮೇಳಕ್ಕೆ ಹೋಗಿದ್ದರು. ಐತಿಹಾಸಿಕ ಪುಣ್ಯಸ್ನಾನಕ್ಕೆ ಹೋದವರೀಗ ಹೆಣವಾಗಿದ್ದು ಈವರೆಗೂ ಜಿಲ್ಲಾಡಳಿತದಿಂದ ಅಧಿಕೃತವಾಗಿ ಸಾವಿನ ಖಚಿತತೆಯನ್ನು ದೃಢಪಡಿಸಲಿಲ್ಲ. ಆದ್ರೆ ಮೃತರೊಂದಿಗೆ ಹೋಗಿದ್ದವರು ಕೊಟ್ಟ ಮಾಹಿತಿ ಕುಟುಂಬಸ್ಥರಿಗೆ ಬರ ಸಿಡಿಲು ಬಡಿದಂತಾಗಿದೆ. ಸಾವಿಗಿಡಾದ ಕುಟುಂಬಸ್ಥರ ಮನೆಗೆ ಸ್ಥಳೀಯ ಶಾಸಕರು ಭೇಟಿ ನೀಡಿ ಸಾಂತ್ವನ ಹೇಳಿದ್ದು, ಮೃತದೇಹವನ್ನ ಬೆಳಗಾವಿಗೆ ಕರೆ ತರಲು ಉತ್ತರ ಪ್ರದೇಶ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದಾರೆ. ಉತ್ತರ ಪ್ರದೇಶದ ಪ್ರಯಾಗರಾಜ್ ಮಹಾ ಕುಂಭಮೇಳದಲ್ಲಿ ಮೌನಿ ಅಮವಾಸ್ಯೆ ದಿನವೇ ಪುಣ್ಯಸ್ನಾನಕ್ಕೆ ಹೋಗಿದ್ದ ನಾಲ್ವರು ಕನ್ನಡಿಗರು ಸಾವನ್ನಪ್ಪಿದ್ದಾರೆ. ಬೆಳಗಿನ ಜಾವ ಸಂಭವಿಸಿದ ಕಾಲ್ತುಳಿದಲ್ಲಿ ಕುಂದಾನಗರಿ ಬೆಳಗಾವಿಯ ನಾಲ್ವರು ದಾರುಣ ಸಾವು ಕಂಡಿದ್ದಾರೆ. ಕಳೆದ ಭಾನುವಾರ ಬೆಳಗಾವಿಯಿಂದ ಪ್ರಯಾಗರಾಜ್ ಕ್ಕೆ 30 ಜನರ ತಂಡ ಪ್ರಯಾಣ ಬೆಳೆಸಿತ್ತು. ಇದರಲ್ಲಿ ಬೆಳಗಾವಿಯ ವಡವಾಗಿಯ ನಿವಾಸಿಗಳಾದ ತಾಯಿ ಜ್ಯೋತಿ ಹತ್ತರವಾಠ, ಮಗಳು ಮೇಘನಾ ಹತ್ತರವಾಠ ಮೃತಪಟ್ಟಿದ್ದಾರೆ....
ಮುಂಡಗೋಡ ಶಿವಾಜಿ ಸರ್ಕಲ್, ಕೋರ್ಟ ಬಳಿಯೇ ನಡೀತು ಮತ್ತೊಂದು ಅಮಾನುಷ ಹಲ್ಲೆ..! ಅಷ್ಟಕ್ಕೂ, ಆ ವ್ಯಕ್ತಿಗೆ ಅಟ್ಟಾಡಿಸಿ, ಚಪ್ಪಲಿಯಿಂದ ಹೊಡೆದದ್ದು ಯಾರು..?
ಅದೇನಾಗಿದೆ ಮುಂಡಗೋಡಿಗೆ..? ಇಲ್ಲಿ ಯಾವ ಕ್ಷಣದಲ್ಲಿ ಏನಾಗತ್ತೋ ಯಾರಿಗೂ ಅರ್ಥ ಆಗ್ತಿಲ್ಲ..! ನೀವೇ ಒಮ್ಮೆ ಯೋಚಿಸಿ, ಕಳೆದ ಕೆಲ ತಿಂಗಳ ಹಿಂದಷ್ಟೇ ಪಟ್ಟಣದ ಹೃದಯ ಭಾಗ, ಅದೂ ಕೂಡ ಮಾನ್ಯ ನ್ಯಾಯಾಧೀಶರು ಇರುವ ಕೋರ್ಟ್ ಆವರಣದಲ್ಲೇ ಅದೇಲ್ಲಿಂದಲೋ ಬಂದಿದ್ದ “ರೌಡಿ”ಗಳ ತಂಡ ಅದ್ಯಾರನ್ನೋ ಟಾರ್ಗೆಟ್ ಮಾಡಿ, ಮಚ್ಚು ಝಳಪಿಸಿ ಇಡೀ ಮುಂಡಗೋಡಿನ ಜನರಲ್ಲಿ ಆತಂಕ ಹುಟ್ಟಿಸಿತ್ತು. ಅದಿನ್ನು ಯಾರೂ ಮರೆತಿಲ್ಲ ಅಲ್ವಾ..? ಮತ್ತದೇ “ನ್ಯಾಯ”ದ ಅಂಗಳ..! ಇನ್ನು ಅದಾಗಿ, ಕೆಲ ದಿನಗಳಲ್ಲೇ ಇದೇ ಶಿವಾಜಿ ಸರ್ಕಲ್, ಇದೇ ಮಾನ್ಯ ಕೋರ್ಟಿನ ಕೂಗಳತೆ ದೂರದಲ್ಲಿ, ಮಂಗಳಮುಖಿಯರು ಹಾಡಹಗಲೇ ಪಾನ್ ಶಾಪಿಗೆ ನುಗ್ಗಿ ಹಲವರನ್ನು ಮನಬಂದಂತೆ ಥಳಿಸಿ ಹೋಗಿದ್ರು, ಅದ್ರಲ್ಲೂ ಪುಟ್ಟ ಮಗುವನ್ನೂ ಲೆಕ್ಕಿಸದೇ ಅವತ್ತು ನಡೆದಿದ್ದ ಹಲ್ಲೆ ನಿಜಕ್ಕೂ ಇಡೀ ಮುಂಡಗೋಡಿಗರ ಎದೆ ನಡುಗಿಸಿತ್ತು. ಅದಾದ ನಂತರ NMD ಜಮೀರನ ಕಿಡ್ನ್ಯಾಪ್ ಕೇಸು ಬಹುತೇಕ ಇಡೀ ಜಿಲ್ಲೆಯೇ ದೃಷ್ಟಿ ನೆಡುವಂತೆ ಮಾಡಿತ್ತು. ಅವತ್ತೂ ಕೂಡ..! ಅದಾದ ನಂತರ, ಬಂಕಾಪುರ ರಸ್ತೆಯ ಖಾಸಗಿ...
ಹುಬ್ಬಳ್ಳಿಯಲ್ಲಿ ಮತ್ತೆ ಹರಿದ ನೆತ್ತರು, 24 ವರ್ಷದ ಹುಡುಗನ ಬರ್ಬರ ಹತ್ಯೆ..! ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ ಪೊಲೀಸ್ರು..!
ಹುಬ್ಬಳ್ಳಿಯಲ್ಲಿ ಮತ್ತೆ ನೆತ್ತರು ಹರಿದಿದೆ. ಹಳೆ ವೈಷಮ್ಯಕ್ಕೆ ಯುವಕನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಚಾಕುವಿನಿಂದ ಇರಿದು ಹತ್ಯೆಗೈದಿದ್ದಾರೆ ದುಷ್ಕರ್ಮಿಗಳು. ಹುಬ್ಬಳ್ಳಿಯ ಲಿಂಗರಾಜ ನಗರದಲ್ಲಿರುವ ಗೋಲ್ಡನ್ ಹೈಟ್ಸ್ ಬಾರ್ ಪಾರ್ಕಿಂಗ್ನಲ್ಲಿ ಘಟನೆ ನಡೆದಿದೆ ಆಕಾಶ ವಾಲ್ಮೀಕಿ(24) ಕೊಲೆಯಾದ ಯುವಕನಾಗಿದ್ದು, ಮೂವರಿಂದ ಯುವಕನ ಕೊಲೆಯಾಗಿದೆ ಅನ್ನೊ ಮಾಹಿತಿ ಇದೆ. ಸ್ಥಳಕ್ಕೆ ವಿದ್ಯಾನಗರ ಪೊಲೀಸರು ಭೇಟಿ ಪಾರಿಶೀಲನೆ ನಡೆಸಿದ್ದಾರೆ. ಕೊಲೆ ಆರೋಪಿಗಳ ಕಾಲಿಗೆ ಗುಂಡು..! ಅಂದಹಾಗೆ, ಆಕಾಶ್ ವಾಲ್ಮೀಕಿ ಕೊಲೆ ಆರೋಪಿಗಳನ್ನು ಬೆನ್ನತ್ತಿದ ಹುಬ್ಬಳ್ಳಿ ಪೊಲೀಸ್ರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಪರಾರಿಯಾಗಲು ಯತ್ನಿಸಿದ ಹಿನ್ನೆಲೆ ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ. ಹೀಗಾಗಿ, ಸದ್ಯ ಆರೋಪಿಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.
ಮುಂಡಗೋಡಿನ NMD ಜಮೀರ್ ಕಿಡ್ನ್ಯಾಪ್ ಕೇಸ್: ಮತ್ತಿಬ್ಬರು ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸ್ರು..!
ಮುಂಡಗೋಡಿನ NMD ಜಮೀರ್ ಕಿಡ್ನ್ಯಾಪ್ ಕೇಸಲ್ಲಿ ಪೊಲೀಸ್ರು ಮತ್ತಿಬ್ಬರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಕೇಸಿನ ಬಹುತೇಕ ಮಾಸ್ಟರ್ ಮೈಂಡ್ ಅಂತಲೇ ಹೇಳಲಾಗಿರೋ ಇಬ್ಬರು ಆರೋಪಿಗಳನ್ನು ದೂರದ ಮುಂಬಯಿಂದ ಎಳೆದು ತಂದಿದ್ದಾರೆ. ಈ ಮೂಲಕ ಕೇಸಿನ ಬಹುತೇಕ ಎಲ್ಲಾ ಆರೋಪಿಗಳನ್ನು ಬಂಧಿಸಿದಂತಾಗಿದೆ. ಅಂದಹಾಗೆ, ಫಯಾಜ್ ಬಿಜಾಪುರ್ ಹಾಗೂ ಸಾದಿಕ್ ವಾಲಿಕಾರ್ ಬಂಧಿತರು. ಸಣ್ಣದೊಂದು ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿರೋ ಮುಂಡಗೋಡ ಪೊಲೀಸ್ರು ಮಹಾರಾಷ್ಟ್ರದ ಮುಂಬಯಿಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ದಿನಾಂಕ:-11/01/2024 ರಂದು ಆರೋಪಿರಾದ 1].ಅಲ್ಲಾಹುದ್ದೀನ್ @ ರಹೀಮ್ ತಂದೆ ಮಹಮ್ಮದ್ ಜಾಪರ್ ರಜ್ಜಬಅಲಿ 2].ಅಜಯ @ ಅಜ್ಯಾ ತಂದೆ ಪಕ್ಕೀರಪ್ಪ ಮಡ್ಲಿ (ದಿನಾಂಕ:-20/01/2025) G].ಸಾಗರ ತಂದೆ ನಾಗರಾಜ ಕಲಾಲ್ 4) ಹನನ್ ತಂದೆ ಮೈನುದ್ದಿನ ಕಿಲ್ಲೆದಾರ 5).ದಾದಾಪೀರ ತಂದೆ ಅಲ್ಲಾಭಕ್ಷ ಬಿಜಾಪೂರ 6].ಖಾಜಾಮೊಹಿದ್ದಿನ ತಂದೆ ಮಹಮ್ಮದಹನೀಪ್ ಬೀಜಾಪೂರ 7].ಉಮೇಜ್ವುಲ್ಲಾ ತಂದೆ ಪೈಜುಲ್ಲಾ ಬೇಪಾರಿ 8].ಅಲ್ತಾಪ್ ತಂದೆ ರಿಯಾಜ್ ಅಹ್ಮದ್ ಬೇಪಾರಿ 9].ರಹಮತ್ ತಂದೆ ಮೆಹಬೂಬಸಾಬ ಧಾರವಾಡ 10]ಅವೇಜ್ ತಂದೆ ಪೈಜುಲ್ಲಾ ಬೇಪಾರಿ 13].ಸಂಜು ತಂದೆ...
ನ್ಯಾಸರ್ಗಿಯಲ್ಲಿ ಶ್ರೀಗಂಧದ ಮರ ಕಡಿದುಕೊಂಡು ಹೋದ್ರು ಕಳ್ಳರು, ಆಮೇಲೆ ಓಡೋಡಿ ಬಂದ್ರು “ಅ”ರಣ್ಯ ಅಧಿಕಾರಿಗಳು..!
ಮುಂಡಗೋಡ ತಾಲೂಕಿನಲ್ಲಿ ಮತ್ತೆ ಶ್ರೀಗಂಧದ ಮರಗಳ್ಳರು ತಮ್ಮ ಕರಾಮತ್ತು ಶುರು ಮಾಡಿದ್ದಾರೆ. ರಾತ್ರಿ ನ್ಯಾಸರ್ಗಿಯಲ್ಲಿ ಕಳ್ಳರು ಮನೆಯ ಹಿತ್ತಲಿನಲ್ಲಿ ಇದ್ದ ಬೆಲೆಬಾಳುವ ಶ್ರೀಗಂಧದ ಮರ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ನಿತ್ಯ ನಿರಂತರವೆಂಬಂತೆ ಅರಣ್ಯ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಗೆ ತಾಲೂಕಿನಲ್ಲಿ ಅರಣ್ಯ ಸಂಪತ್ತು ಲೂಟಿಯಾಗ್ತಿದೆ. ಅಂದಹಾಗೆ, ನ್ಯಾಸರ್ಗಿ ಗ್ತಾಮದ ಪಿಎಸ್ ಸದಾನಂದ ಎಂಬುವವರ ಮನೆ ಪಕ್ಕದಲ್ಲಿನ ಶ್ರೀಗಂಧದ ಮರ ದೋಚಿದ್ದಾರೆ ಖದೀಮರು. ಲಕ್ಷ ಲಕ್ಷ ಬೆಲೆ ಬಾಳುವ ಗಂಧದ ಮರ ಕಡಿದುಕೊಂಡು ಹೋಗಿರೊ ಸುದ್ದಿಯಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಆದ್ರೆ, ಎಂದಿನಂತೆ, ಸುದ್ದಿ ತಿಳಿದ “ಅ”ರಣ್ಯ ಅಧಿಕಾರಿಗಳು ಚಳಿಯನ್ನೂ ಲೆಕ್ಕಿಸದೇ ಓಡೋಡಿ ಬಂದಿದ್ದಾರೆ. ಕೇಸು ದಾಖಲಿಸಿಕೊಂಡಿದ್ದಾರೆ. ಅದು ಇದು ಅಂತೇಲ್ಲ ಕೇಳಾಡಿಕೊಂಡು ಕಳ್ಳರನ್ನು ಹಿಡಿಯಲೇ ಬೇಕು ಅಂತಾ ಪಣ ತೊಟ್ಟು ಕೂತಿದ್ದಾರಂತೆ.. ಅದ್ರಲ್ಲೂ ನಮ್ಮ ಮುಂಡಗೋಡಿನ “ಅರಣ್ಯ” ಸಾಹೇಬ್ರು ಈ ಕೇಸನ್ನು ಹೇಗಾದ್ರೂ ಸರಿ ಪೂರ್ತಿ ಒಂದು ಗತಿ ಕಾಣಿಸಲೇಬೇಕು ಅಂತಾ ತೀರ್ಮಾನಿಸಿದ್ದಾರಂತೆ. ಅದಕ್ಕಾಗಿನೇ, ನ್ಯಾಸರ್ಗಿಯ ಮಂದಿಯ ಜೊತೆ ಇಡೀ ತಾಲೂಕಿನ ಪರಿಸರ...
ಯಲ್ಲಾಪುರ ಅರಬೈಲು ಘಟ್ಟದಲ್ಲಿ ಭೀಕರ ಅಪಘಾತ, 10 ಜನ ಸ್ಥಳದಲ್ಲೇ ಸಾವು..! 15 ಜನರಿಗೆ ಗಾಯ..!
ಯಲ್ಲಾಪುರದ ಅರಬೈಲು ಘಟ್ಟದ ಗುಳ್ಳಾಪುರ ಬಳಿ ಭೀಕರ ಅಪಘಾತವಾಗಿದೆ. ತರಕಾರಿ ಸಾಗಿಸುತ್ತಿದ್ದ ಅಶೋಕ ಲೈಲ್ಯಾಂಡ್ ವಾಹನ ರಸ್ತೆಬದಿಯ ಕಂಬಕ್ಕೆ ಡಿಕ್ಕಿ ಹೊಡೆದು ಉರುಳಿಬಿದ್ದಿದೆ. ಪರಿಣಾಮ 10 ಜನ ಸ್ಥಳದಲ್ಲೇ ಸಾವು ಕಂಡಿದ್ದಾರೆ, 15 ಜನರಿಗೆ ಗಾಯವಾಗಿದೆ. ಇದ್ರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಮೃತರೇಲ್ಲರೂ ಹಾವೇರಿ ಜಿಲ್ಲೆಯ ಸವಣೂರಿನವರು ಎನ್ನಲಾಗಿದ್ದು. ಕುಮಟಾಗೆ ತರಕಾರಿ ಸಾಗಿಸುತ್ತಿದ್ದರು ಎನ್ನಲಾಗಿದೆ. 15 ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಅದ್ರಲ್ಲಿ ಹಲವರ ಸ್ಥಿತಿ ಗಂಭಿರವಾಗಿದ್ದು ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಇದೆ ಎನ್ನಲಾಗಿದೆ. ಸ್ಥಳಕ್ಕೆ ಯಲ್ಲಾಪುರ ಪೊಲೀಸರು ಭೇಟಿ ನೀಡಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮಹಾರಾಷ್ಟ್ರದಿಂದ ಕಬ್ಬು ಕಟಾವಿಗೆ ಬಂದಿದ್ದ ಅಪ್ರಾಪ್ತೆಯನ್ನ ಆ ಹುಡುಗ ಅತ್ಯಾಚಾರ ಮಾಡಿದ್ನಾ..? ಹಾಗಿದ್ರೆ ಕೇಸ್ ಏನಾಯ್ತು..?
ಮಹಾರಾಷ್ಟ್ರದಿಂದ ಕಬ್ಬು ಕಡಿಯಲು ಮುಂಡಗೋಡ ತಾಲೂಕಿಗೆ ಬಂದಿರೋ ಬಡ ಕಾರ್ಮಿಕರ ಗುಂಪಿನಲ್ಲಿದ್ದ 13 ವರ್ಷದ ಅಪ್ರಾಪ್ತ ಬಾಲಕಿಯನ್ನು ಯುವಕನೋರ್ವ ಅತ್ಯಾಚಾರ ಮಾಡಿ, ಎಲ್ಲಿಗೋ ಕರೆದೊಯ್ದಿದ್ದ ಅನ್ನೋ ಬಗ್ಗೆ ಆ ಬಾಲಕಿಯ ಪೋಷಕರು ಮುಂಡಗೋಡ ಠಾಣೆಗೆ ಮಾಹಿತಿ ನೀಡಿದ್ದರು ಎನ್ನಲಾಗಿದ್ದು, ಅಲ್ಲದೇ ದೂರು ಕೊಡಲು ರೆಡಿಯಾಗಿದ್ದರಂತೆ, ಆದ್ರೆ ಆ ಪ್ರಕರಣ ಏನಾಯ್ತು ಅನ್ನೊ ಬಗ್ಗೆ ತಾಲೂಕಿನಾದ್ಯಂತ ಈಗ ಚರ್ಚೆ ಆಗ್ತಿದೆ. ದೂರು ಕೊಡಲು ಬಂದಿದ್ರು..! ಯಾವಾಗ, ಸಂತ್ರಸ್ಥ ಬಾಲಕಿಯ ಪೋಷಕರು ಮುಂಡಗೋಡ ಠಾಣೆಯ ಮೆಟ್ಟಿಲೇರಿ, ನನ್ನ ಮಗಳಿಗೆ ಹೀಗೇಲ್ಲ ಆಗಿದೆ. ನಮಗೆ ನ್ಯಾಯ ಕೊಡಿ ಅಂತಾ ಪೊಲೀಸರಿಗೆ ಅಲವತ್ತು ಕೊಂಡಿದ್ದರು. ಈ ಮಾಹಿತಿ ಆದರಿಸಿ ಅವತ್ತು ಬೆಳಿಗ್ಗೆ ಮುಂಡಗೋಡ ಪೊಲೀಸ್ ಠಾಣೆಯ ಸಿಬ್ಬಂದಿ ಸಂತ್ರಸ್ತ ಬಾಲಕಿ ಹಾಗೂ ಆರೋಪಿ ಹುಡುಗನನ್ನು ಠಾಣೆಗೆ ಕರೆತಂದಿದ್ದರು ಅನ್ನೋ ಮಾಹಿತಿ ಕೂಡ ಲಭಿಸಿದೆ. ಆದ್ರೆ, ಆ ಕೇಸು ಮಾತ್ರ ದಾಖಲಾಗಿಲ್ಲ ಯಾಕೆ ಅದರ ಹಿನ್ನೆಲೆ ಏನು..? ಯಾವ ಕಾರಣಕ್ಕೆ ಫೋಕ್ಸೋ ಕೇಸು ದಾಖಲಿಸಲಿಲ್ಲ ಇಲ್ಲಿನ ಪೊಲೀಸ್ರು ಅನ್ನೋ...