ಕಾರವಾರ: ಉತ್ತರ ಕನ್ನಡದ ಎಸ್ಪಿ ಡಾ.ವಿಷ್ಣುವರ್ಧನ್ ವರ್ಗವಾಗಿದ್ದಾರೆ. ನೂತನ ಎಸ್ಪಿಯಾಗಿ ನಾರಾಯಣ್ ಎಂ. ಅವರನ್ನು ಸರ್ಕಾರ ನೇಮಕ ಮಾಡಿದೆ. ಅಂದಹಾಗೆ, ರಾಜ್ಯದ 25 ಐಪಿಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಅದ್ರಲ್ಲಿ, ಉತ್ತರಕನ್ನಡ ಎಸ್ಪಿ ಆಗಿದ್ದ ಡಾ. ವಿಷ್ಣುವರ್ಧನ್ ಅವರನ್ನ ಸಹ ವರ್ಗಾವಣೆ ಮಾಡಲಾಗಿದೆ. ಉತ್ತರಕನ್ನಡ ಹಾಲಿ ಎಸ್ಪಿ ಆಗಿದ್ದ ವಿಷ್ಣುವರ್ಧನ್ ಅವರನ್ನ ಮೈಸೂರಿಗೆ ವರ್ಗಾವಣೆ ಮಾಡಲಾಗಿದ್ದು, ಅವರ ಜಾಗಕ್ಕೆ ನಾರಾಯಣ್ ಎಂ ಅವರನ್ನ ನೇಮಕ ಮಾಡಲಾಗಿದೆ. ಇನ್ನು, ನಾರಾಯಣ್ ಎಂ. ರವರು 2012ರಲ್ಲಿ ಭಟ್ಕಳ ಡಿವೈಎಸ್ಪಿ ಆಗಿ ಕಾರ್ಯ ನಿರ್ವಹಿಸಿದ್ದರು. ಈಗ ಉತ್ತರಕನ್ನಡ ಎಸ್ಪಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.
Top Stories
ಯಲ್ಲಾಪುರ ಅರಬೈಲು ಘಟ್ಟದಲ್ಲಿ ಭೀಕರ ಅಪಘಾತ, 10 ಜನ ಸ್ಥಳದಲ್ಲೇ ಸಾವು..! 15 ಜನರಿಗೆ ಗಾಯ..!
ಮಹಾರಾಷ್ಟ್ರದಿಂದ ಕಬ್ಬು ಕಟಾವಿಗೆ ಬಂದಿದ್ದ ಅಪ್ರಾಪ್ತೆಯನ್ನ ಆ ಹುಡುಗ ಅತ್ಯಾಚಾರ ಮಾಡಿದ್ನಾ..? ಹಾಗಿದ್ರೆ ಕೇಸ್ ಏನಾಯ್ತು..?
ಟ್ಯಾಕ್ಸ್ ವಸೂಲಿಯಲ್ಲಿ ಮುಂಡಗೋಡ ತಾಲೂಕು ರಾಜ್ಯಕ್ಕೇ ಪ್ರಥಮ..! ತಾಪಂ ಗ್ರಾಪಂ ಅಧಿಕಾರಿ, ಸಿಬ್ಬಂದಿಗಳ ಸಾಧನೆ..!!
ಮುಂಡಗೋಡ ಬೆಂಡಿಗೇರಿ ಪೆಟ್ರೊಲ್ ಬಂಕ್ ಹತ್ತಿರ ಬೈಕ್ ಅಪಘಾತ, ವೃದ್ದನ ಕಾಲು ಕಟ್..!
ಮಳಗಿ-ಬನವಾಸಿ ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ, ಓರ್ವ ಸ್ಥಳದಲ್ಲೇ ಓರ್ವ ಸಾವು, ಮತ್ತೋರ್ವ ಗಂಭೀರ..!
NMD ಕಿಡ್ನ್ಯಾಪ್ ಕೇಸ್, ಮತ್ತೆ ಐವರು ಆರೋಪಿಗಳು ಅಂದರ್, ಪೊಲೀಸರು ಆರೋಪಿಗಳಮದ್ಯೆ ಭಾರೀ ಕಾಳಗ..! ಗುಂಡೇಟು..!
NMD ಜಮೀರ್ ಬಾಯ್ ಸೇಫ್..! ಗದಗ ರಿಂಗ್ ರೋಡಲ್ಲಿ ಬಿಟ್ಟು ಹೋದ ಕಿಡ್ನ್ಯಾಪರ್ಸ್..! ಐವರು ಆರೋಪಿಗಳ ಹೆಡೆಮುರಿ ಕಟ್ಟಿದ್ರಾ ಮುಂಡಗೋಡ ಪೊಲೀಸ್ರು..?
ಮುಂಡಗೋಡಿನ NMD ಗ್ರೂಪ್ ಮಾಲೀಕನ ಮೇಲೆ ದುಷ್ಕರ್ಮಿಗಳ ಅಟ್ಯಾಕ್
ಟಿಬೇಟಿಯನ್ ಕಾಲೋನಿ ಬಳಿ ಬೈಕ್ ಗಳ ನಡುವೆ ಡಿಕ್ಕಿ, ಓರ್ವ ಸವಾರ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ಮುಂಡಗೋಡಿನ ಮುಲ್ಲಾ ಓಣಿಯ ಬಾವಿಯಲ್ಲಿ ವ್ಯಕ್ತಿಯ ಶವ ಪತ್ತೆ..! ಆತ್ಮಹತ್ಯೆನಾ..?
ಮುಂಡಗೋಡಿನ ಅಂಗನವಾಡಿಯಲ್ಲಿ ಹಾವು ಕಚ್ಚಿದ್ದ ಬಾಲಕಿ ಕಿಮ್ಸ್ ನಲ್ಲಿ ಸಾವು..!
ಮುಂಡಗೋಡಿನಲ್ಲಿ ಅಂಗನವಾಡಿಗೆ ಹೋಗಿದ್ದ ಪುಟ್ಟ ಬಾಲಕಿಗೆ ಕಚ್ಚಿದ ಹಾವು..!
ಹಳೇ ದ್ವೇಷದ ಹಿನ್ನಲೆ ಇಬ್ಬರಿಗೆ ಚಾಕು ಇರಿತ
ಇಂದೂರು ಸೊಸೈಟಿ ಚುನಾವಣೆ: ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತರು..! ರೈತ ಒಕ್ಕೂಟಕ್ಕೆ ಮೂರು ಸ್ಥಾನಗಳು ಮಾತ್ರ..!
ಇಂದೂರು ಸೊಸೈಟಿ ಚುನಾವಣೆ ಅಚ್ಚರಿ ಫಲಿತಾಂಶ: ಮಾಜಿ ಜಿಪಂ ಸದಸ್ಯ ರವಿಗೌಡ ಪಾಟೀಲ್ ಸೋಲು..!
ಚವಡಳ್ಳಿ ಸೊಸೈಟಿ ಚುನಾವಣೆ: 11 ರಲ್ಲಿ ಕಾಂಗ್ರೆಸ್ ಬೆಂಬಲಿತರದ್ದೇ ಭರ್ಜರಿ ಗೆಲುವು..! ಬಿಜೆಪಿಗೆ ದಕ್ಕಿದ್ದು ಒಂದೇ ಒಂದು ಸ್ಥಾನ..!
ಮುಂಡಗೋಡ LSMP ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ, 12 ರ ಪೈಕಿ 9 ರಲ್ಲಿ ಕೈ ಬೆಂಬಲಿತರ ಗೆಲುವು..!
ಹುಬ್ಬಳ್ಳಿ ಸಿಲಿಂಡರ್ ಬ್ಲಾಸ್ಟ್: ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಸಾವು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ ಹಿನ್ನೆಲೆ, ಶುಕ್ರವಾರ ಸರ್ಕಾರಿ ರಜೆ ಘೋಷಣೆ..! ಶಾಲಾ ಕಾಲೇಜುಗಳಿಗೆ ರಜೆ..!
ಅಂದರ್ ಬಾಹರ್ ಅಡ್ಡೆ ಮೇಲೆ ಪೊಲೀಸರ ದಾಳಿ: ಇಸ್ಪೀಟು ಆಡುತ್ತಿದ್ದ ಏಳೇಂಟು ಜನ ನೀರು ಪಾಲು..? ಓರ್ವನ ಶವ ಪತ್ತೆ, ಉಳಿದವರು ನಾಪತ್ತೆ..!
ವಿಜಯಪುರ: ಅಂದರಬಾಹರ್( ಇಸ್ಪೀಟ್) ಆಡುವಾಗ ಪೊಲೀಸರು ದಾಳಿ ನಡೆಸಿದ ಪರಿಣಾಮ, ಕೃಷ್ಣಾ ನದಿಯಲ್ಲಿ ತೆಪ್ಪದ ಮೂಲಕ ಎಸ್ಕೇಪ್ ಆಗಲು ಯತ್ನಿಸಿದ ಬರೋಬ್ಬರಿ 7 ರಿಂದ 8 ಜನರು ನೀರು ಪಾಲಾಗಿದ್ದಾರೆ ಅನ್ನೋ ಶಂಕೆ ವ್ಯಕ್ತವಾಗಿದೆ. ಪೊಲೀಸರ ದಾಳಿಗೆ ಹೆದರಿ ಎಸ್ಕೇಪ್ ಆಗಲು ಕೃಷ್ಣಾ ನದಿಯಲ್ಲಿ ತೆಪ್ಪದ ಮೂಲಕ ತೆರಳುತ್ತಿದ್ದಾಗ, ತೆಪ್ಪ ಮುಗುಚಿ ಬಿದ್ದು ಏಳೆಂಟು ಜನರು ನೀರುಪಾಲು ಆಗಿದ್ದಾರೆ ಎನ್ನಲಾಗಿದೆ. ಅದರಲ್ಲಿ ಓರ್ವನ ಮೃತದೇಹ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಕೊಲಾರ್ ಮೂಲದ ಪುಂಡಲೀಕ ಯಂಕಂಚಿ(35) ಅಂತಾ ಗುರುತಿಸಲಾಗಿದೆ. ಅದೃಷ್ಟವಶಾತ್ ಓರ್ವ ನದಿಯಿಂದ ಹೊರಗೆ ಬಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ತೆಪ್ಪದಲ್ಲಿ ತೆರಳಿದವರು ಕೊಲ್ಹಾರ ಹಾಗೂ ಬಳೂತಿ ಗ್ರಾಮದವರು ಎನ್ನಲಾಗಿದೆ. ಕೋಲ್ಹಾರ ತಾಲೂಕಿನ ಬಳೂತಿ ಜಾಕವೆಲ್ ಬಳಿ ಕೃಷ್ಣಾ ನದಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಶಂಕರ ಮಾರಿಹಾಳ ಭೇಟಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನೊರ್ಮಾಣವಾಗಿದೆ. ಕೊಲ್ಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಶಿಗ್ಗಾವಿ ಕ್ಷೇತ್ರಕ್ಕೆ ಮುಸ್ಲಿಂ ಅಭ್ಯರ್ಥಿಯನ್ನೇ ಹಾಕಿ, ಕಾಂಗ್ರೆಸ್ ಗೆ ಹಾವೇರಿ ಮುಸ್ಲಿಂ ಒಕ್ಕೂಟ ಆಗ್ರಹ..!
ಹಾವೇರಿ: ಶಿಗ್ಗಾವಿ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆಗೆ ಮಸ್ಲಿಂರಿಗೆ ಕಾಂಗ್ರೆಸ್ ಪಕ್ಷವು ಟಿಕೆಟ್ ನೀಡಬೇಕೆಂದು ಹಾವೇರಿ ಜಿಲ್ಲಾ ಮುಸ್ಲಿಂ ಒಕ್ಕೂಟ ಆಗ್ರಹಿಸಿದೆ. ಸೋಮವಾರ ನಗರದಲ್ಲಿ ಜರುಗಿದ ಹಾವೇರಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಜಿಲ್ಲಾ ಮಟ್ಟದ ಸಭೆಯಲ್ಲಿ ಭಾಗವಹಿಸಿದ್ದ ಒಕ್ಕೂಟದ ಪದಾಧಿಕಾರಿಗಳು ಈ ಬಗ್ಗೆ ಒಮ್ಮತದ ನಿರ್ಣಯ ಕೈಗೊಂಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ 90-95% ಮುಸ್ಲಿಂರು ಮತ ಹಾಕುತ್ತಿದ್ದಾರೆ. ಆದ್ರೆ, ಮುಸ್ಲಿಂರಿಗೆ ಪ್ರಮುಖ ಅಧಿಕಾರ ಸಿಗುತ್ತಿಲ್ಲ. ಅಖಂಡ ಧಾರವಾಡ ಜಿಲ್ಲೆಯಲ್ಲಿ ಸ್ಥಾನಿಕವಾಗಿ ಯಾರೊಬ್ಬ ಎಂಪಿ, ಎಂಎಲ್ಎ ಎಂಎಲ್ಸಿ, ನಿಗಮ ಮಂಡಳಿಗಳ ಅಧ್ಯಕ್ಷರು ಇಲ್ಲದ ಕಾರಣ ಬರುವ ಶಿಗ್ಗಾಂವ್ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿ ಸರ್ಕಾರ ಗೆಲ್ಲಿಸಿಕೊಂಡು ಬರಬೇಕು. ಇಲ್ಲದಿದ್ದರೆ ಮುಸ್ಲಿಂ ಸಮಾಜದ ಹೋರಾಟಕ್ಕೆ ಸಿದ್ದವಾಗಭೇಕಾಗುತ್ತದೆ ಎಂದು ಸಭೆಯು ನಿರ್ಣಯಿಸಿತು. ಮುಂದಿನ ದಿನಗಳಲ್ಲಿ ಶಿಗ್ಗಾಂವ್ ಸವಣೂರಲ್ಲಿ ಮುಸ್ಲಿಂ ಒಕ್ಕೂಟದ ಸಭೆಗಳನ್ನು ನಡೆಸಿ ಹೋರಾಟಕ್ಕೆ ಸಿದ್ದರಾಗಿ ಕಾಂಗ್ರೆಸ್ ಹೈಕಮಾಂಡಿಗೆ ಮನವಿ ಸಲ್ಲಿಸಬೇಕೆಂದು ಸಭೆಯು ತಿರ್ಮಾನಿಸಿತು. ಖಬರಸ್ತಾನ, ಮಸಿದಿ, ಮದರಸಾಗಳಿಗೆ...
ಜೋಯಿಡಾದಲ್ಲಿ ಪತ್ರಕರ್ತರ ಕಾರಿನಡಿ ನಾಡಬಾಂಬ್ ಸ್ಪೋಟ, ಕಾರಿಗೆ ಹಾನಿ..!
ಜೊಯಿಡಾ: ಪತ್ರಕರ್ತರು ತೆರಳುತ್ತಿದ್ದ ಕಾರಿನಡಿ ನಾಡ ಬಾಂಬ್ ಸ್ಫೋಟವಾದ ಘಟನೆ ಜೊಯಿಡಾದಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಅಂದಹಾಗೆ, ಜೋಯಿಡಾದಲ್ಲಿ ನಡೆಯತ್ತಿದ್ದ ಜನ ಸಂಪರ್ಕ ಸಭೆಗೆ ಗುಂದದಿಂದ ಆಗಮಿಸುತ್ತಿದ್ದ ಪತ್ರಕರ್ತರ ಕಾರಿನಡಿ ನಾಡಬಾಂಬ್ ಬ್ಲಾಸ್ಟ್ ಆಗಿದೆ. ಪರಿಣಾಮ ಕಾರಿನ ಹಿಂಭಾಗಕ್ಕೆ ಹಾನಿಯಾಗಿದೆ. ಅದೃಷ್ಟವಶಾತ್ ಮೂವರು ಪತ್ರಕರ್ತರು ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ ಅಂತಾ ಮಾಹಿತಿ ಲಭ್ಯವಾಗಿದೆ. ಕಾಡು ಪ್ರಾಣಿಗಳನ್ನು ಬೇಟೆಯಾಡಲು ಬಳಸುವ ನಾಡ ಬಾಂಬ್ ರಸ್ತೆಯಲ್ಲಿ ಬಿದ್ದಿದ್ದು, ಅದರ ಮೇಲೆ ಕಾರಿನ ಟಯರ್ ಹತ್ತಿ ಸ್ಫೋಟ ಸಂಭವಿಸಿದೆ. ಜೊಯಿಡಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಬಾಡಿಗೆಗೆ ಇಳಿಯುವ ವೈಟ್ ಬೋರ್ಡ್ ಟ್ಯಾಕ್ಸಿಗಳ ವಿರುದ್ಧ ಕ್ರಮ ಕೈಗೊಳ್ಳಿ- ಟ್ಯಾಕ್ಸಿ ಮಾಲೀಕರ ಸಂಘದ ಆಗ್ರಹ..!
ಮುಂಡಗೋಡ: ಖಾಸಗಿ ಮಾಲೀಕತ್ವದ (ವೈಟ್ ಬೋರ್ಡ್) ಟ್ಯಾಕ್ಸಿ ವಾಹನಗಳನ್ನು ಬಾಡಿಗೆ ಆಧಾರದ ಮೇಲೆ ಉಪಯೋಗಿಸುತ್ತಿರುವ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಟ್ಯಾಕ್ಸಿ ಮಾಲೀಕರ ಸಂಘದ ಸದಸ್ಯ ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಮನವಿ ಅರ್ಪಿಸಿದ್ದಾರೆ. ಮುಂಡಗೋಡ ತಾಲೂಕಿನಲ್ಲಿ ಖಾಸಗೀ ಮಾಲೀಕತ್ವದ ಟ್ಯಾಕ್ಸಿ ವಾಹನಗಳನ್ನು ಬೇಕಾಬಿಟ್ಟಿ ದರಗಳಲ್ಲಿ ಬಾಡಿಗೆಗೆ ಬಿಡುತ್ತಿದ್ದಾರೆ. ಇದ್ರಿಂದ ನಮ್ಮ ಬದುಕೇ ಮೂರಾಬಟ್ಟೆಯಾಗ್ತಿದೆ. ನಾವು ಸರ್ಕಾರಕ್ಕೆ ಕಾಲ ಕಾಲಕ್ಕೆ ಟ್ಯಾಕ್ಸ್ ಕಟ್ಟಿ, ಬಾಡಿಗೆಗಾಗಿ ವಾಹನಗಳನ್ನು ಬಿಡುತ್ತಿದ್ದೇವೆ. ಅದ್ರಿಂದ ಬಂದ ಬಾಡಿಗೆಯಲ್ಲೇ ಬದುಕು ನಡೆಸುತ್ತಿದ್ದೇವೆ ಹೀಗಿರುವಾಗ, ಖಾಸಗಿ (ವೈಟ್ ಬೋರ್ಡ್) ಮಾಲೀಕರು ನಮ್ಮ ಉದ್ಯೋಗವನ್ನು ಕಿತ್ತುಕೊಳ್ಳುತ್ತಿದ್ದಾರೆ. ಈ ಕುರಿತು ಸಾಕಷ್ಟು ಬಾರಿ ಅಧಿಕಾರಿಗಳನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ, ಹೀಗಾಗಿ, ತಕ್ಷಣವೇ ಕ್ರಮ ಕೈಗೊಳ್ಳಬೇಕು ಅಂತಾ ಮನವಿಯಲ್ಲಿ ಆಗ್ರಹಿಸಿದ್ದಾರೆ. ಜುಲೈ 3 ರಿಂದ ಅನಿರ್ಧಿಷ್ಟಾವಧಿ ಧರಣಿ..! ಈ ಸಂಬಂಧ ಜುಲೈ 3 ರಿಂದ, ಮುಂಡಗೋಡ ತಹಶಿಲ್ದಾರರ ಕಚೇರಿ ಎದುರು, ಅನಿರ್ಧಿಷ್ಠಾವಧಿ ಧರಣಿ ನಡೆಸಲು ತೀರ್ಮಾನಿಸಿದ್ದಾಗಿ, ಟ್ಯಾಕ್ಸಿ ಮಾಲೀಕರು,...
ನ್ಯಾಸರ್ಗಿ ಗೌಳಿ ದಡ್ಡಿ ಬಳಿ ಬೈಕ್ ಅಪಘಾತ ಹೊಸೂರಿನ ವ್ಯಕ್ತಿ ಸ್ಥಳದಲ್ಲೇ ಸಾವು..!
ಮುಂಡಗೋಡ ತಾಲೂಕಿನ ನ್ಯಾಸರ್ಗಿಯ ಗೌಳಿದಡ್ಡಿ ಬಳಿ ಬೈಕ್ ಅಪಘಾತವಾಗಿದೆ. ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವು ಕಂಡಿದ್ದಾನೆ. ಮೃತನು ಶಿಗ್ಗಾವಿ ತಾಲೂಕಿನ ಹೊಸುರು ಗ್ರಾಮದವನು ಅಂತಾ ತಿಳಿದು ಬಂದಿದೆ. ಹೊಸೂರಿನ ವೀರಭದ್ರಪ್ಪ ಶೇಖರಯ್ಯ ಹಿರೇಮಠ(48), ಎಂಬುವವರೇ ಮೃತಪಟ್ಟ ಬೈಕ್ ಸವಾರನಾಗಿದ್ದಾನೆ. ಈತ ಮುಂಡಗೋಡಿನಿಂದ ನ್ಯಾಸರ್ಗಿ ಮಾರ್ಗವಾಗಿ ಹೊಸೂರಿಗೆ ಬೈಕ್ ಮೂಲಕ ಹೊರಟಿದ್ದ. ಈ ವೇಳೆ ನ್ಯಾಸರ್ಗಿ ಸಮೀಪದ ಗೌಳಿದಡ್ಡಿಯ ರಸ್ತೆ ತಿರುವಿನಲ್ಲಿ ಅಪಘಾತವಾಗಿದೆ ಅನ್ನೊ ಮಾಹಿತಿ ತಿಳಿದುಬಂದಿದೆ. ತಡಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡದಿದೆ.
ಕೊಪ್ಪದ ಕುಟ್ರಿಯವರ ಹುಡುಗ “ಅಭಿ” ಇನ್ನು ನೆನಪು ಮಾತ್ರ..! ಕ್ರೂರ ವಿಧಿಯೇ ಧಿಕ್ಕಾರವಿರಲಿ
ಮುಂಡಗೋಡ ತಾಲೂಕಿನ ಕೊಪ್ಪ ಗ್ರಾಮದ ಅಭಿಷೇಕ ಬಸವಂತಪ್ಪ ಕುಟ್ರಿ ಮೃತಪಟ್ಟಿದ್ದಾನೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅಭಿಷೇಕಙ್ನು ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ, ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಅಂದಹಾಗೆ, ಸದಾ ಹಸನ್ಮಖಿಯಾಗಿದ್ದ ಹುಡುಗ ಅಭಿಷೇಕ ಮುಂಡಗೋಡಿನ ಮಹಾರಾಜಾ ಮೊಬೈಲ್ಸ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ. ಕಳೆದ ಎರಡು ಮೂರು ದಿನಗಳಿಂದ ಕೊಂಚ ಜ್ವರದಿಂದ ಬಳಲುತ್ತಿದ್ದ ಅಭಿಷೇಕ ಗೆ ಹುಬ್ಬಳ್ಳಿ ಕೀಮ್ಸ್ ಗೆ ರವಾನಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಎರಡು ದಿನಗಳ ನಂತ್ರ ಇಂದು ರವಿವಾರ ರಾತ್ರಿ ಸಾವನ್ನಪ್ಪಿದ್ದಾನೆ. ಅಭಿಷೇಕ ಕುಟ್ರಿ ಸಾವಿಗೆ, ಪಬ್ಲಿಕ್ ಫಸ್ಟ್ ನ್ಯೂಸ್ ಬಳಗ ಸೇರಿ ಮುಂಡಗೋಡ ತಾಲೂಕಿನ ಹಲವು ಸ್ನೇಹಿತರು ಕಂಬನಿ ಮಿಡಿದಿದ್ದಾರೆ.
ಕಾತೂರು ಸಮೀಪ ಇಸ್ಪೀಟು ಅಡ್ಡೆಯ ಮೇಲೆ ಪೊಲೀಸರ ದಾಳಿ, ನಾಲ್ವರ ಬಂಧನ, ಮೂವರು ಎಸ್ಕೇಪ್..!?
ಮುಂಡಗೋಡ ಪಿಎಸ್ ಐ ಪರಶುರಾಮ್ ಮತ್ತವರ ಟೀಂ ಮಿಂಚಿನ ಕಾರ್ಯಾಚರಣೆ ನಡೆಸಿದೆ. ಕಾತೂರು ಸಮೀಪ ಇಸ್ಪೀಟು ಅಡ್ಡೆಯ ಮೇಲೆ ದಾಳಿ ನಡೆಸಿ ಆಟದಲ್ಲಿ “ಬ್ಯುಸಿ” ಆಗಿದ್ದ ನಾಲ್ವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಮತ್ತೆ ಮೂವರು ಪರಾರಿಯಾಗಿದ್ದಾರೆ ಅನ್ನೋ ಮಾಹಿತಿ ಪಬ್ಲಿಕ್ ಫಸ್ಟ್ ಗೆ ತಿಳಿದು ಬಂದಿದೆ. ಅಂದಹಾಗೆ, ತಾಲೂಕಿನ ಕಾತೂರು ಸಮೀಪ ಇಸ್ಪೀಟು ಆಟದಲ್ಲಿ ತೊಡಗಿದ್ದರು. ಈ ವೇಳೆ ದಾಳಿ ನಡೆಸಿರೋ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಇನ್ನುಳಿದಂತೆ ಮೂವರು ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಇನ್ನು ಆಟದಲ್ಲಿ ತೊಡಗಿಸಿದ್ದ 39 ಸಾವಿರ ರೂ. ಹಣವನ್ನೂ ಜಪ್ತಿ ಮಾಡಲಾಗಿದೆ ಅನ್ನೊ ಮಾಹಿತಿ ಲಭ್ಯವಾಗಿದೆ. ದಾಳಿ ವೇಳೆ ಮುಂಡಗೋಡ ಸಿಪಿಐ ರಂಗನಾಥ್ ನೀಲಮ್ಮನವರ ನೇತೃತ್ವದಲ್ಲಿ, ಪಿಎಸ್ಐ ಪರಶುರಾಮ್, ಪೇದೆಗಳಾದ ಮಂಜು ಚಿಂಚಲಿ, ಕೋಟೇಶ್ ನಾಗರವಳ್ಳಿ, ಅಣ್ಣಪ್ಪ ಬುಡಿಗೇರ್, ಮಹಾಂತೇಶ್ ಮುಧೋಳ್, ಕೆಂಚೆಪ್ಪ, ರವಿ ಭಾಗಿಯಾಗಿದ್ರು ಎನ್ನಲಾಗಿದೆ.
ಹಾವೇರಿ ಸಮೀಪ ಭೀಕರ ಅಪಘಾತ ಮಕ್ಕಳೂ ಸೇರಿ 13 ಜನರ ದುರ್ಮರಣ..!
ಹಾವೇರಿ: ಇಲ್ಲಿಗೆ ಸಮೀಪದ ಗುಂಡನಹಳ್ಳಿ ಕ್ರಾಸ್ ಬಳಿರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಶುಕ್ರವಾರ ಬೆಳಗಿನ ಜಾವ 3.40ರ ಸುಮಾರಿಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮಕ್ಕಳೂ ಸೇರಿ13 ಜನರು ಸಾವನ್ನಪ್ಪಿದ್ದಾರೆ. ನಿಂತಿದ್ದ ಲಾರಿಗೆ ಟಿಟಿ ವಾಹನ ಡಿಕ್ಕಿ ಹೊಡೆದು ಈ ಅಪಘಾತ ನಡೆದಿದ್ದು, ವಾಹನದಲ್ಲಿದ್ದ ಚಾಲಕ ಸೇರಿ ನಾಲ್ವರು ಪುರುಷರು, ಏಳುಜನ ಮಹಿಳೆಯರು, ಮಗು, ಓರ್ವ ಅಜ್ಜಿ, ಓರ್ವ ವಿಕಲಚೇತನ ಯುವತಿ ಸೇರಿದ್ದು, ಶವಗಳನ್ನು ಇಲ್ಲಿ ನ ಜಿಲ್ಲಾ ಆಸ್ಪತ್ರೆ ಗೆ ಸಾಗಿಸಲಾಗಿದೆ. ಅಪಘಾತ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ 108ರ ವಾಹನದ ಸ್ಟಾಪ್ ನರ್ಸ ಶಂಕರ್ ಲಮಾಣಿ, ಚಾಲಕರು ಟಿಟಿ ವಾಹನದಲ್ಲಿ ಸಿಲುಕಿದ್ದ ಮೂವರನ್ನು ರಕ್ಷಣೆ ಮಾಡಿ ಅವರಿಗೆ ಚಿಕಿತ್ಸೆ ನೀಡಿ ಜಿಲ್ಲಾ ಆಸ್ಪತ್ರೆ ಗೆ ದಾಖಲಿಸಿದ್ದಾರೆ. ಈ ಮೂವರು ತೀವ್ರವಾಗಿ ಗಾಯಗೊಂಡಿದ್ದು ಇವರನ್ನು ಚಿಕಿತ್ಸೆಗೆ ಇಲ್ಲಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಬಳಿಯ ಎಮ್ಮೆ ಹಟ್ಟಿ ಗಂಗಾಮದವರನ್ನು ತಿಳಿದು ಬಂದಿದೆ ಟಿಟಿ...
ಇಂದೂರು ಗ್ರಾಪಂ ನಲ್ಲಿ ಉದ್ಯೋಗ ಖಾತ್ರಿಯಲ್ಲಿ ಚೊಂಬಾಟ..! ತಾಲೂಕಿನಲ್ಲಿ ಅವನೊಬ್ಬ ನುಂಗಣ್ಣನಿಂದ ಇಡೀ ಯೋಜನೆಯೇ ಉಳ್ಳವರ ಪಾಲಾಗ್ತಿದೆಯಾ..?
ಮುಂಡಗೋಡ ತಾಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆ ಬಹುತೇಕ ಹಳ್ಳ ಹಿಡಿತಿದೆಯಾ..? ಅವನೊಬ್ಬ ಬಕಾಸುರ ಬಗಬಂಡಿಯಿಂದ ಬಡ ಕೂಲಿ ಕಾರ್ಮಿಕರಿಗೆ ಬದುಕಾಗಬೇಕಿದ್ದ ಉದ್ಯೋಗ ಖಾತ್ರಿ ಯೋಜನೆ, ಕೆಲ ಆಸೆ ಬುರುಕ ಗ್ರಾಮ ಪಂಚಾಯತಿ ಮೆಂಬರುಗಳಿಗೆ ರೊಕ್ಕ ಗಳಿಸುವ ಅಡ್ಡ ಕಸುಬು ಆಗ್ತಿದೆಯಾ..? ಇಂತಹದ್ದೊಂದು ಅನುಮಾನ ಇಂದೂರಿನ ಈ ಗ್ರಾಮ ಪಂಚಾಯತಿ ಸದಸ್ಯನ ಮಾತುಗಳನ್ನು ಕೇಳಿದ್ರೆ ಎಂತವರಿಗೂ ಅರ್ಥವಾಗ್ತಿದೆ. ಅದು ಇಂದೂರು ಪಂಚಾಯತಿ..! ಯಸ್, ಇಂದೂರು ಗ್ರಾಮ ಪಂಚಾಯತಿ ತಾಲೂಕಿನಲ್ಲಿ ಇದುವರೆಗೂ ಒಂದಿಷ್ಟು ಮಾನ ಮರ್ಯಾದೆ ಅಂತಾ ಇಟ್ಕೊಂಡು ಹೆಸರುವಾಸಿಯಾಗಿತ್ತು. ಆದ್ರೆ, ಈಗ ಅದೇ ಗ್ರಾಮ ಪಂಚಾಯತಿಯ ಗೌರವಾನ್ವಿತ ಸದಸ್ಯರುಗಳು, ಸಿಬ್ಬಂದಿಗಳೇ ಅಲ್ಲಿನ ಅಸಲೀ ಹೂರಣ ಬಿಚ್ಚಿಟ್ಟಿದ್ದಾರೆ. ಬಡ ಕೂಲಿ ಕಾರ್ಮಿಕರಿಗಾಗಿ ಸರ್ಕಾರ ರೂಪಿಸಿರೋ ಮಹತ್ವಾಕಾಂಕ್ಷೆಯ ಉದ್ಯೋಗ ಖಾತ್ರಿ ಯೋಜನೆಯನ್ನು ಹೇಗೇಲ್ಲ ಹಳ್ಳಹಿಡಿಸಿದ್ದಾರೆ ಅಂತಾ ಖುದ್ದು, ಪಂಚಾಯತಿ ಸದಸ್ಯರೇ ಆರೋಪಿಸಿದ್ದಾರೆ. ಅಸಲು, ಸರ್ಕಾರ ಬಡ ಕೂಲಿ ಕಾರ್ಮಿಕರಿಗಾಗೇ ರೂಪಿಸಿರೋ ಮಹತ್ವದ ಈ ಯೋಜನೆ, ಬಡ ಕೂಲಿ ಕಾರ್ಮಿಕರ ಬದಲಾಗಿ ಜೆಸಿಬಿ ಮಾಲೀಕರ ಪಾಲಾಗುತ್ತಿದೆ. ಅದ್ರಲ್ಲೂ...