ಹಾವೇರಿ: ಶಿಗ್ಗಾವಿ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆಗೆ ಮಸ್ಲಿಂರಿಗೆ ಕಾಂಗ್ರೆಸ್ ಪಕ್ಷವು ಟಿಕೆಟ್ ನೀಡಬೇಕೆಂದು ಹಾವೇರಿ ಜಿಲ್ಲಾ ಮುಸ್ಲಿಂ ಒಕ್ಕೂಟ ಆಗ್ರಹಿಸಿದೆ.
ಸೋಮವಾರ ನಗರದಲ್ಲಿ ಜರುಗಿದ ಹಾವೇರಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಜಿಲ್ಲಾ ಮಟ್ಟದ ಸಭೆಯಲ್ಲಿ ಭಾಗವಹಿಸಿದ್ದ ಒಕ್ಕೂಟದ ಪದಾಧಿಕಾರಿಗಳು ಈ ಬಗ್ಗೆ ಒಮ್ಮತದ ನಿರ್ಣಯ ಕೈಗೊಂಡಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ 90-95% ಮುಸ್ಲಿಂರು ಮತ ಹಾಕುತ್ತಿದ್ದಾರೆ. ಆದ್ರೆ, ಮುಸ್ಲಿಂರಿಗೆ ಪ್ರಮುಖ ಅಧಿಕಾರ ಸಿಗುತ್ತಿಲ್ಲ. ಅಖಂಡ ಧಾರವಾಡ ಜಿಲ್ಲೆಯಲ್ಲಿ ಸ್ಥಾನಿಕವಾಗಿ ಯಾರೊಬ್ಬ ಎಂಪಿ, ಎಂಎಲ್ಎ ಎಂಎಲ್ಸಿ, ನಿಗಮ ಮಂಡಳಿಗಳ ಅಧ್ಯಕ್ಷರು ಇಲ್ಲದ ಕಾರಣ ಬರುವ ಶಿಗ್ಗಾಂವ್ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿ ಸರ್ಕಾರ ಗೆಲ್ಲಿಸಿಕೊಂಡು ಬರಬೇಕು. ಇಲ್ಲದಿದ್ದರೆ ಮುಸ್ಲಿಂ ಸಮಾಜದ ಹೋರಾಟಕ್ಕೆ ಸಿದ್ದವಾಗಭೇಕಾಗುತ್ತದೆ ಎಂದು ಸಭೆಯು ನಿರ್ಣಯಿಸಿತು.
ಮುಂದಿನ ದಿನಗಳಲ್ಲಿ ಶಿಗ್ಗಾಂವ್ ಸವಣೂರಲ್ಲಿ ಮುಸ್ಲಿಂ ಒಕ್ಕೂಟದ ಸಭೆಗಳನ್ನು ನಡೆಸಿ ಹೋರಾಟಕ್ಕೆ ಸಿದ್ದರಾಗಿ ಕಾಂಗ್ರೆಸ್ ಹೈಕಮಾಂಡಿಗೆ ಮನವಿ ಸಲ್ಲಿಸಬೇಕೆಂದು ಸಭೆಯು ತಿರ್ಮಾನಿಸಿತು.
ಖಬರಸ್ತಾನ, ಮಸಿದಿ, ಮದರಸಾಗಳಿಗೆ ಸರ್ಕಾರದ ಹೆಚ್ಚಿನ ಅನುದಾನ ನೀಡಬೇಕು ಅಭಿವೃದ್ದಿಪಡಿಸಬೇಕು. ಮುಸ್ಲಿಂ ಸಮಾಜ ಒಕ್ಕಟಾಗಿ ಕೆಲಸ ಮಾಡಬೇಕು ಏನೆ ಬಿನ್ನಾಬಿಪ್ರಾಯಗಳಿದ್ದರೂ ನಾವೇ ಸರಿಪಡಿಸಿಕೊಂಡು ಮುಸ್ಲಿಂ ಸಮಾಜದ ಅಭಿವೃದ್ಧಿ ಕಡೆಗೆ ಗಮನ ಹರಿಸಲು ಒಕ್ಕೂಟ ಒಗ್ಗಟ್ಟಾಗಿ ಸಮಾಜದ ಅಭಿವೃದ್ದಿ ಬಡವರ ಪರವಾಗಿ ಹೋರಾಟ ಮಾಡಲು ಮುಖಂಡರು ಕೈ ಜೋಡಿಸಬೇಕೆಂದು ಸಭೆಯಲ್ಲಿ ಮುಖಂಡರಿಗೆ ಒಕ್ಕೂಟ ಮನವಿ ಮಾಡಿತು.
ಸಭೆಯಲ್ಲಿ ಜಿಲ್ಲಾಧ್ಯಕ್ಷ ಡಾ. ಟಿಪ್ಪುಸಾಬ ಕಲಕೋಟಿ, ಗೌರವಾಧ್ಯಕ್ಷ ನಜೀರಸಾಬ ಸವಣೂರ, ಐ.ಎ.ಹವಾಲ್ದಾರ, ಜಿಲ್ಲಾ ವಕ್ಫ ಬೋರ್ಡ ಅಧ್ಯಕ್ಷ ನಾಸೀರಖಾನ ಪಠಾಣ, ಪ್ರಧಾನಕಾರ್ಯದರ್ಶಿ ಬಾಬುಸಾಬ ಮೋಮಿನಗಾ, ಖಲೀಲಅಹ್ಮದ ಖಾಜಿ, ಮಲೀಕ ಬಾಣಿ, ಮಲೀಕರೆಹಾನ ಶಿಗ್ಗಾಂವಿ, ಎಮ್.ಎಮ್ ಮುಲ್ಲಾ, ಜೀಶಾನ್ ಪಠಾಣ, ರಿಯಾಜಅಹ್ಮದ ಶಿಡಗನಾಳ, ಅಲ್ತಾಫ ಬೋರಗಲ್, ಮೋಸಿನ್ ಮುಲ್ಲಾ, ಎಮ್ ಎಫ್. ಹಳ್ಳಿಕೇರಿ, ಎಮ್.ಎಸ್ ಕಲ್ಲಂಗಡಿ, ಖಲೀಲಅಹ್ಮದ ಬಾಲೇಬಾಯಿ ರಿಯಾಜಅಹ್ಮದ ರಾಣೆಬೆನ್ನೂರ ಮತ್ತಿತರರು ಭಾಗವಹಿಸಿದ್ದರು.