ಮುಂಡಗೋಡ: ಖಾಸಗಿ ಮಾಲೀಕತ್ವದ (ವೈಟ್ ಬೋರ್ಡ್) ಟ್ಯಾಕ್ಸಿ ವಾಹನಗಳನ್ನು ಬಾಡಿಗೆ ಆಧಾರದ ಮೇಲೆ ಉಪಯೋಗಿಸುತ್ತಿರುವ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಟ್ಯಾಕ್ಸಿ ಮಾಲೀಕರ ಸಂಘದ ಸದಸ್ಯ ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಮನವಿ ಅರ್ಪಿಸಿದ್ದಾರೆ.
ಮುಂಡಗೋಡ ತಾಲೂಕಿನಲ್ಲಿ ಖಾಸಗೀ ಮಾಲೀಕತ್ವದ ಟ್ಯಾಕ್ಸಿ ವಾಹನಗಳನ್ನು ಬೇಕಾಬಿಟ್ಟಿ ದರಗಳಲ್ಲಿ ಬಾಡಿಗೆಗೆ ಬಿಡುತ್ತಿದ್ದಾರೆ. ಇದ್ರಿಂದ ನಮ್ಮ ಬದುಕೇ ಮೂರಾಬಟ್ಟೆಯಾಗ್ತಿದೆ. ನಾವು ಸರ್ಕಾರಕ್ಕೆ ಕಾಲ ಕಾಲಕ್ಕೆ ಟ್ಯಾಕ್ಸ್ ಕಟ್ಟಿ, ಬಾಡಿಗೆಗಾಗಿ ವಾಹನಗಳನ್ನು ಬಿಡುತ್ತಿದ್ದೇವೆ. ಅದ್ರಿಂದ ಬಂದ ಬಾಡಿಗೆಯಲ್ಲೇ ಬದುಕು ನಡೆಸುತ್ತಿದ್ದೇವೆ ಹೀಗಿರುವಾಗ, ಖಾಸಗಿ (ವೈಟ್ ಬೋರ್ಡ್) ಮಾಲೀಕರು ನಮ್ಮ ಉದ್ಯೋಗವನ್ನು ಕಿತ್ತುಕೊಳ್ಳುತ್ತಿದ್ದಾರೆ. ಈ ಕುರಿತು ಸಾಕಷ್ಟು ಬಾರಿ ಅಧಿಕಾರಿಗಳನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ, ಹೀಗಾಗಿ, ತಕ್ಷಣವೇ ಕ್ರಮ ಕೈಗೊಳ್ಳಬೇಕು ಅಂತಾ ಮನವಿಯಲ್ಲಿ ಆಗ್ರಹಿಸಿದ್ದಾರೆ.
ಜುಲೈ 3 ರಿಂದ ಅನಿರ್ಧಿಷ್ಟಾವಧಿ ಧರಣಿ..!
ಈ ಸಂಬಂಧ ಜುಲೈ 3 ರಿಂದ, ಮುಂಡಗೋಡ ತಹಶಿಲ್ದಾರರ ಕಚೇರಿ ಎದುರು, ಅನಿರ್ಧಿಷ್ಠಾವಧಿ ಧರಣಿ ನಡೆಸಲು ತೀರ್ಮಾನಿಸಿದ್ದಾಗಿ, ಟ್ಯಾಕ್ಸಿ ಮಾಲೀಕರು, ಚಾಲಕರ ಸಂಘದ ಪದಾಧಿಕಾರಿಗಳು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.