ವಿಜಯಪುರ: ಅಂದರಬಾಹರ್( ಇಸ್ಪೀಟ್) ಆಡುವಾಗ ಪೊಲೀಸರು ದಾಳಿ ನಡೆಸಿದ ಪರಿಣಾಮ, ಕೃಷ್ಣಾ ನದಿಯಲ್ಲಿ ತೆಪ್ಪದ ಮೂಲಕ ಎಸ್ಕೇಪ್ ಆಗಲು ಯತ್ನಿಸಿದ ಬರೋಬ್ಬರಿ 7 ರಿಂದ 8 ಜನರು ನೀರು ಪಾಲಾಗಿದ್ದಾರೆ ಅನ್ನೋ ಶಂಕೆ ವ್ಯಕ್ತವಾಗಿದೆ.
ಪೊಲೀಸರ ದಾಳಿಗೆ ಹೆದರಿ ಎಸ್ಕೇಪ್ ಆಗಲು ಕೃಷ್ಣಾ ನದಿಯಲ್ಲಿ ತೆಪ್ಪದ ಮೂಲಕ ತೆರಳುತ್ತಿದ್ದಾಗ, ತೆಪ್ಪ ಮುಗುಚಿ ಬಿದ್ದು ಏಳೆಂಟು ಜನರು ನೀರುಪಾಲು ಆಗಿದ್ದಾರೆ ಎನ್ನಲಾಗಿದೆ. ಅದರಲ್ಲಿ ಓರ್ವನ ಮೃತದೇಹ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಕೊಲಾರ್ ಮೂಲದ ಪುಂಡಲೀಕ ಯಂಕಂಚಿ(35) ಅಂತಾ ಗುರುತಿಸಲಾಗಿದೆ.
ಅದೃಷ್ಟವಶಾತ್ ಓರ್ವ ನದಿಯಿಂದ ಹೊರಗೆ ಬಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ತೆಪ್ಪದಲ್ಲಿ ತೆರಳಿದವರು ಕೊಲ್ಹಾರ ಹಾಗೂ ಬಳೂತಿ ಗ್ರಾಮದವರು ಎನ್ನಲಾಗಿದೆ. ಕೋಲ್ಹಾರ ತಾಲೂಕಿನ ಬಳೂತಿ ಜಾಕವೆಲ್ ಬಳಿ ಕೃಷ್ಣಾ ನದಿಯಲ್ಲಿ ಘಟನೆ ನಡೆದಿದೆ.
ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಶಂಕರ ಮಾರಿಹಾಳ ಭೇಟಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನೊರ್ಮಾಣವಾಗಿದೆ. ಕೊಲ್ಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.