ಕಾತೂರು ಸಮೀಪ ಇಸ್ಪೀಟು ಅಡ್ಡೆಯ ಮೇಲೆ ಪೊಲೀಸರ ದಾಳಿ, ನಾಲ್ವರ ಬಂಧನ, ಮೂವರು ಎಸ್ಕೇಪ್..!?

ಮುಂಡಗೋಡ ಪಿಎಸ್ ಐ ಪರಶುರಾಮ್ ಮತ್ತವರ ಟೀಂ ಮಿಂಚಿನ ಕಾರ್ಯಾಚರಣೆ ನಡೆಸಿದೆ. ಕಾತೂರು ಸಮೀಪ ಇಸ್ಪೀಟು ಅಡ್ಡೆಯ ಮೇಲೆ ದಾಳಿ ನಡೆಸಿ ಆಟದಲ್ಲಿ “ಬ್ಯುಸಿ” ಆಗಿದ್ದ ನಾಲ್ವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಮತ್ತೆ ಮೂವರು ಪರಾರಿಯಾಗಿದ್ದಾರೆ ಅನ್ನೋ ಮಾಹಿತಿ ಪಬ್ಲಿಕ್ ಫಸ್ಟ್ ಗೆ ತಿಳಿದು ಬಂದಿದೆ.

ಅಂದಹಾಗೆ, ತಾಲೂಕಿನ ಕಾತೂರು ಸಮೀಪ ಇಸ್ಪೀಟು ಆಟದಲ್ಲಿ ತೊಡಗಿದ್ದರು. ಈ ವೇಳೆ ದಾಳಿ ನಡೆಸಿರೋ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಇನ್ನುಳಿದಂತೆ ಮೂವರು ಆರೋಪಿಗಳು ಎಸ್ಕೇಪ್ ಆಗಿದ್ದಾರೆ‌. ಇನ್ನು ಆಟದಲ್ಲಿ ತೊಡಗಿಸಿದ್ದ 39 ಸಾವಿರ ರೂ. ಹಣವನ್ನೂ ಜಪ್ತಿ ಮಾಡಲಾಗಿದೆ ಅನ್ನೊ ಮಾಹಿತಿ ಲಭ್ಯವಾಗಿದೆ.

ದಾಳಿ ವೇಳೆ ಮುಂಡಗೋಡ ಸಿಪಿಐ ರಂಗನಾಥ್ ನೀಲಮ್ಮನವರ ನೇತೃತ್ವದಲ್ಲಿ, ಪಿಎಸ್ಐ ಪರಶುರಾಮ್, ಪೇದೆಗಳಾದ ಮಂಜು ಚಿಂಚಲಿ, ಕೋಟೇಶ್ ನಾಗರವಳ್ಳಿ, ಅಣ್ಣಪ್ಪ ಬುಡಿಗೇರ್, ಮಹಾಂತೇಶ್ ಮುಧೋಳ್, ಕೆಂಚೆಪ್ಪ, ರವಿ ಭಾಗಿಯಾಗಿದ್ರು ಎನ್ನಲಾಗಿದೆ.

error: Content is protected !!