ಮುಂಡಗೋಡ- ತಾಲೂಕಾಸ್ಪತ್ರೆಯ ಆವರಣದಲ್ಲಿ ಇಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಮುಂಡಗೋಡ ತಾಲೂಕಾ ಆಸ್ಪತ್ರೆಗೆ 2 ಹೊಸ ಅಂಬ್ಯುಲೆನ್ಸ್ ಹಸ್ತಾಂತರ ಹಾಗೂ ಕೋವಿಡ್ ಶಂಕಿತರಿಗೆ ಹೆಬ್ಬಾರ್ ಕೋವಿಡ್ ಕೇರ್ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಸಿರು ನಿಶಾನೆ ತೋರಿಸುವ ಮೂಲಕ ಅಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಿದ ಸಚಿವ ಹೆಬ್ಬಾರ್, ಕೋವಿಡ್ ಶಂಕಿತರಿಗೆ ನೀಡಲಾಗುವ ಕೋವಿಡ್ ಕೇರ್ ಕಿಟ್ ಬಿಡುಗಡೆಗೊಳಿಸಿದ್ರು. ಈ ವೇಳೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ್, ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಜಿಲ್ಲಾ ಪಂಚಾಯಿತಿ ಸಿಇಓ ಪ್ರಿಯಾಂಗ್, ಶಿರಸಿ ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ್, ತಹಶೀಲ್ದಾರ್ ಶ್ರೀಧರ್ ಮುಂದಲಮನಿ, ತಾಲೂಕಾ ಆಡಳಿತ ವೈದ್ಯಾಧಿಕಾರಿ ಡಾ.ಎಚ್.ಎಫ್.ಇಂಗಳೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Top Stories
ಮಹಾರಾಷ್ಟ್ರದಿಂದ ಕಬ್ಬು ಕಟಾವಿಗೆ ಬಂದಿದ್ದ ಅಪ್ರಾಪ್ತೆಯನ್ನ ಆ ಹುಡುಗ ಅತ್ಯಾಚಾರ ಮಾಡಿದ್ನಾ..? ಹಾಗಿದ್ರೆ ಕೇಸ್ ಏನಾಯ್ತು..?
ಟ್ಯಾಕ್ಸ್ ವಸೂಲಿಯಲ್ಲಿ ಮುಂಡಗೋಡ ತಾಲೂಕು ರಾಜ್ಯಕ್ಕೇ ಪ್ರಥಮ..! ತಾಪಂ ಗ್ರಾಪಂ ಅಧಿಕಾರಿ, ಸಿಬ್ಬಂದಿಗಳ ಸಾಧನೆ..!!
ಮುಂಡಗೋಡ ಬೆಂಡಿಗೇರಿ ಪೆಟ್ರೊಲ್ ಬಂಕ್ ಹತ್ತಿರ ಬೈಕ್ ಅಪಘಾತ, ವೃದ್ದನ ಕಾಲು ಕಟ್..!
ಮಳಗಿ-ಬನವಾಸಿ ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ, ಓರ್ವ ಸ್ಥಳದಲ್ಲೇ ಓರ್ವ ಸಾವು, ಮತ್ತೋರ್ವ ಗಂಭೀರ..!
NMD ಕಿಡ್ನ್ಯಾಪ್ ಕೇಸ್, ಮತ್ತೆ ಐವರು ಆರೋಪಿಗಳು ಅಂದರ್, ಪೊಲೀಸರು ಆರೋಪಿಗಳಮದ್ಯೆ ಭಾರೀ ಕಾಳಗ..! ಗುಂಡೇಟು..!
NMD ಜಮೀರ್ ಬಾಯ್ ಸೇಫ್..! ಗದಗ ರಿಂಗ್ ರೋಡಲ್ಲಿ ಬಿಟ್ಟು ಹೋದ ಕಿಡ್ನ್ಯಾಪರ್ಸ್..! ಐವರು ಆರೋಪಿಗಳ ಹೆಡೆಮುರಿ ಕಟ್ಟಿದ್ರಾ ಮುಂಡಗೋಡ ಪೊಲೀಸ್ರು..?
ಮುಂಡಗೋಡಿನ NMD ಗ್ರೂಪ್ ಮಾಲೀಕನ ಮೇಲೆ ದುಷ್ಕರ್ಮಿಗಳ ಅಟ್ಯಾಕ್
ಟಿಬೇಟಿಯನ್ ಕಾಲೋನಿ ಬಳಿ ಬೈಕ್ ಗಳ ನಡುವೆ ಡಿಕ್ಕಿ, ಓರ್ವ ಸವಾರ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ಮುಂಡಗೋಡಿನ ಮುಲ್ಲಾ ಓಣಿಯ ಬಾವಿಯಲ್ಲಿ ವ್ಯಕ್ತಿಯ ಶವ ಪತ್ತೆ..! ಆತ್ಮಹತ್ಯೆನಾ..?
ಮುಂಡಗೋಡಿನ ಅಂಗನವಾಡಿಯಲ್ಲಿ ಹಾವು ಕಚ್ಚಿದ್ದ ಬಾಲಕಿ ಕಿಮ್ಸ್ ನಲ್ಲಿ ಸಾವು..!
ಮುಂಡಗೋಡಿನಲ್ಲಿ ಅಂಗನವಾಡಿಗೆ ಹೋಗಿದ್ದ ಪುಟ್ಟ ಬಾಲಕಿಗೆ ಕಚ್ಚಿದ ಹಾವು..!
ಹಳೇ ದ್ವೇಷದ ಹಿನ್ನಲೆ ಇಬ್ಬರಿಗೆ ಚಾಕು ಇರಿತ
ಇಂದೂರು ಸೊಸೈಟಿ ಚುನಾವಣೆ: ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತರು..! ರೈತ ಒಕ್ಕೂಟಕ್ಕೆ ಮೂರು ಸ್ಥಾನಗಳು ಮಾತ್ರ..!
ಇಂದೂರು ಸೊಸೈಟಿ ಚುನಾವಣೆ ಅಚ್ಚರಿ ಫಲಿತಾಂಶ: ಮಾಜಿ ಜಿಪಂ ಸದಸ್ಯ ರವಿಗೌಡ ಪಾಟೀಲ್ ಸೋಲು..!
ಚವಡಳ್ಳಿ ಸೊಸೈಟಿ ಚುನಾವಣೆ: 11 ರಲ್ಲಿ ಕಾಂಗ್ರೆಸ್ ಬೆಂಬಲಿತರದ್ದೇ ಭರ್ಜರಿ ಗೆಲುವು..! ಬಿಜೆಪಿಗೆ ದಕ್ಕಿದ್ದು ಒಂದೇ ಒಂದು ಸ್ಥಾನ..!
ಮುಂಡಗೋಡ LSMP ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ, 12 ರ ಪೈಕಿ 9 ರಲ್ಲಿ ಕೈ ಬೆಂಬಲಿತರ ಗೆಲುವು..!
ಹುಬ್ಬಳ್ಳಿ ಸಿಲಿಂಡರ್ ಬ್ಲಾಸ್ಟ್: ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಸಾವು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ ಹಿನ್ನೆಲೆ, ಶುಕ್ರವಾರ ಸರ್ಕಾರಿ ರಜೆ ಘೋಷಣೆ..! ಶಾಲಾ ಕಾಲೇಜುಗಳಿಗೆ ರಜೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ..! ನಾಳೆಯ ಬೆಳಗಾವಿ ಕೈ ಕಾರ್ಯಕ್ರಮ ರದ್ದು..!
ಮುಂಡಗೋಡ ತಾಲೂಕಾಸ್ಪತ್ರೆಗೆ, ಅಂಬ್ಯುಲೆನ್ಸ್, ಕೋವಿಡ್ ಕೇರ್ ಕಿಟ್ ವಿತರಿಸಿದ ಹೆಬ್ಬಾರ್..!
ಸಿಎಂ ಬದಲಾವಣೆ ಯಾವ ಕಾರಣಕ್ಕೂ ಇಲ್ಲ: ಸಿ.ಪಿ.ಯೋಗೀಶ್ವರ್ ಗೆ ಸಚಿವ ಹೆಬ್ಬಾರ್ ಟಾಂಗ್..!
ಯಲ್ಲಾಪುರ: ಮುಖ್ಯಮಂತ್ರಿ ಬದಲಾವಣೆ ಯಾವ ಕಾರಣಕ್ಕೂ ಇಲ್ಲ ಅಂತಾ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ. ಯಲ್ಲಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಬ್ಬಾರ್, ಸಿಎಂ ಬದಲಾವಣೆ ವಿಚಾರವಾಗಿ, ಸಚಿವ ಸಿ.ಪಿ.ಯೋಗೀಶ್ವರ ಹೇಳಿಕೆಗೆ ನನ್ನ ಸಹಮತ ಇಲ್ಲ ಅಂತಾ ಖಡಕ್ಕಾಗಿ ಅಭಿಪ್ರಾಯ ವ್ಯಕ್ತ ಪಡಿಸಿದ್ರು. ಸರಕಾರದಲ್ಲಿ ಇದ್ದುಕೊಂಡು ಈ ರೀತಿಯ ಹೇಳಿಕೆ ನೀಡುವುದು ಯೋಗೀಶ್ವರಗೆ ಶೋಭೆ ತರುವುದಿಲ್ಲ ಅಂತಾ ಹೆಬ್ಬಾರ್ ಕಿಡಿ ಕಾರಿದ್ರು. ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆ ನಡೆದಿದ್ದಾಗಿ ಸಚಿವ ಅಶೋಕ್ ಹೇಳಿದ್ದು ನಿಜ, ಆದ್ರೆ ಮುಖ್ಯಮಂತ್ರಿ ಬದಲಾವಣೆ ಮಾಡುತ್ತೇವೆ ಅಂತಾ ಹೇಳಿಲ್ಲ. ಮುಂದಿನ ಚುನಾವಣೆ ಕೂಡಾ ಯಡಿಯೂರಪ್ಪ ನೇತೃತ್ವದಲ್ಲಿಯೇ ನಡೆಯಲಿದೆ ಅಂತಾ ಶಿವರಾಮ್ ಹೆಬ್ಬಾರ್ ವಿಶ್ವಾಸ ವ್ಯಕ್ತ ಪಡಿಸಿದ್ರು.
ಮುಂಡಗೋಡ ತಾಲೂಕಾಸ್ಪತ್ರೆಗೆ 1.33 ಲಕ್ಷ ರೂ. ವೈದ್ಯಕೀಯ ಸಲಕರಣೆ ನೀಡಿದ, ಟಿಬೇಟಿಗರ ಕರ್ಮಾ ಪೌಂಡೇಶನ್..!
ಮುಂಡಗೋಡ-ತಾಲೂಕಿನಲ್ಲಿ ನೊಂದವರ ಕಣ್ಣೀರು ಒರೆಸುತ್ತಿರೋ ಟಿಬೇಟಿಗರ ಕರ್ಮಾ ಪೌಂಡೇಶನ್ ಈಗ ಮತ್ತೊಂದು ಮಹತ್ತರ ಕಾರ್ಯ ಮಾಡಿ ಆದರ್ಶ ತೋರಿದೆ. ಬುದ್ದ ಪೂರ್ಣಿಮೆಯ ಅಂಗವಾಗಿ, ಮುಂಡಗೋಡ ತಾಲೂಕಾಸ್ಪತ್ರೆಗೆ ಒಟ್ಟೂ 1,33,280 ರೂ. ಮೌಲ್ಯದ ವೈದ್ಯಕೀಯ ಸಲಕರಣೆ ನೀಡಿದ್ದಾರೆ. ಅದ್ರಲ್ಲಿ, 49280 ರೂ.ಮೌಲ್ಯದ NIBP patient monitor machine, 84,000 ರೂ. ಮೌಲ್ಯದ oxygen concentrator ಸೆರಿದ್ದು ಮುಂಡಗೋಡ ತಾಲೂಕಾ ಆಡಳಿತ ವೈದ್ಯಾಧಿಕಾರಿ ಡಾ.ಎಚ್.ಎಫ್.ಇಂಗಳೆಯವರಿಗೆ ಶುಕ್ರವಾರ ಹಸ್ತಾಂತರಿಸಿದ್ದಾರೆ. ಇನ್ನು ಟಿಬೇಟಿಯನ್ ಕಾಲೋನಿಯ ಡಿಟಿಆರ್ ಆಸ್ಪತ್ರೆಗೂ ಕೂಡ 84 ಸಾವಿರ ರೂ. ಮೌಲ್ಯದ oxygen concetratore machine ನೀಡಿದ್ದಾರೆ. ಅಂದಹಾಗೆ, ಅಮೇರಿಕದಲ್ಲಿ ವಾಸವಾಗಿರೋ ಯೊಂಗಚೆನ್ ಕುಟುಂಬ ಹಾಗೂ ಲೋಬ್ಚಾಂಗ್ ಚೋದೇನ್ ಕುಟುಂಬ ಕರ್ಮಾ ಪೌಂಡೇಶನ್ ಗೆ ಈ ವೈದ್ಯಕೀಯ ಸಲಕರಣೆಗಳನ್ನು ದೇಣಿಗೆ ನೀಡಿತ್ತು, ಹೀಗಾಗಿ ಕರ್ಮಾ ಪೌಂಡೇಶನ್ ತಾಲೂಕಾಸ್ಪತ್ರೆಗೆ ಹಾಗೂ ಡಿಟಿಆರ್ ಆಸ್ಪತ್ರೆಗೆ ಹಸ್ತಾಂತರಿಸಿದೆ
4 ದಿನದ ಹಿಂದೆಯಷ್ಟೇ ಮದುವೆಯಾದ ನವ ವಿವಾಹಿತೆ ಕೊರೋನಾಗೆ ಬಲಿ..!
ಶಿವಮೊಗ್ಗ: ಕಳೆದ ನಾಲ್ಕು ದಿನದ ಹಿಂದೆ ಮದುವೆಯಾಗಿದ್ದ ನವ ವಿವಾಹಿತೆ ಕೊರೊನಾಗೆ ಬಲಿಯಾದ ದಾರುಣ ಘಟನೆ ಶಿವಮೊಗ್ಗ ಜಿಲ್ಲೆಯ ಮಲವಗೊಪ್ಪದಲ್ಲಿ ನಡೆದಿದೆ. ಪೂಜಾ ಎಂಬುವವರೇ ಕೊರೋನಾಗೆ ಬಲಿಯಾದ ನವವಧು ಆಗಿದ್ದಾರೆ.. ಪೂಜಾ ಅವರ ವಿವಾಹ ಕಳೆದ ನಾಲ್ಕು ದಿನದ ಹಿಂದೆ ಅಂದರೆ ಮೇ 24 ರಂದು ಹರಿಗೆಯ ಮಹೇಶ್ ಅವರೊಂದಿಗೆ ನಡೆದಿತ್ತು. ಮದುವೆಯ ಮರು ದಿನದಿಂದಲೇ ಪೂಜಾಗೆ ಜ್ವರ ಕಾಣಿಸಿಕೊಂಡಿತ್ತು. ಆದರೆ ಸ್ಥಳೀಯ ಕ್ಲಿನಿಕ್ ನಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ಪೂಜಾಗೆ, ಇಂದು ಜ್ವರ ಜಾಸ್ತಿಯಾದ ಹಿನ್ನೆಲೆಯಲ್ಲಿ ಪೂಜಾ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆತರುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಹೀಗಾಗಿ, ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಇದೀಗ ಸೂತಕ ಆವರಿಸಿದೆ.
ಇಂದೂರು ಪ್ರಾಥಮಿಕ ಶಾಲೆಯಲ್ಲಿ ಕಳ್ಳತನಕ್ಕೆ ವಿಫಲ ಯತ್ನ: CCTV ಕ್ಯಾಮೆರಾ ಕದ್ದೊಯ್ದ ಕಳ್ಳರು..!
ಮುಂಡಗೋಡ: ತಾಲೂಕಿನ ಇಂದೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳ್ಳರು ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದಾರೆ. ಇಂದೂರು ಗ್ರಾಮವನ್ನು ವಿಶೇಷ ಕಂಟೈನ್ ಮೆಂಟ್ ವಲಯವನ್ನಾಗಿ ಮಾಡಿ, ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಹೀಗಾಗಿ ಇದೇ ಸಮಯವನ್ನೇ ಉಪಯೋಗಿಸಿಕೊಂಡಿರೋ ಕಳ್ಳರು, ಶಾಲೆಯಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದಾರೆ.. ಅಂದಹಾಗೆ, ಶಾಲೆಯ ವರಾಂಡದಲ್ಲಿ ಹಾಕಲಾಗಿದ್ದ ಎರಡು CCTV ಕ್ಯಾಮೆರಾಗಳನ್ನು ಕಿತ್ತೊಯ್ದಿರೋ ಕಳ್ಳರು, ಶಾಲೆಯ 5 ಕೊಠಡಿಗಳ ಬಾಗಿಲಿಗೆ ಹಾಕಿದ್ದ ಬೀಗ ಮುರಿದಿದ್ದಾರೆ, ಅಲ್ದೆ ಬಾತ್ ರೂಮಿನ ಬೀಗವನ್ನೂ ಮುರಿದಿದ್ದಾರೆ. ಆದ್ರೆ ಯಾವುದೇ ವಸ್ತುಗಳನ್ನೂ ಮುಟ್ಟಿಲ್ಲ. ಇನ್ನು ಶುಕ್ರವಾರ ಅಂಗನವಾಡಿ ಕಾರ್ಯಕರ್ತೆ ಶಾಲೆಯ ಬಳಿ ಹೋದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣವೇ ಶಾಲಾ ಆಡಳಿತ ಸಮಿತಿಗೆ ಮಾಹಿತಿ ನೀಡಿದಾಗ, SDMC ಅಧ್ಯಕ್ಷ ಹಾಗೂ ಗ್ರಾಮಸ್ಥರು ಬಂದು ಪರಿಶೀಲಿಸಿದ್ದಾರೆ. ಆ ನಂತರ ಮುಂಡಗೋಡ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಜೂನ್ ಮೊದಲ ವಾರವೇ ರಾಜ್ಯಕ್ಕೆ ಮುಂಗಾರು..!
ಬೆಂಗಳೂರು : ರಾಜ್ಯಕ್ಕೆ ಜೂನ್ ಮೊದಲ ವಾರದಲ್ಲಿ ಮುಂಗಾರು ಆಗಮನವಾಗುವ ಸಾಧ್ಯತೆಯಿದೆ. ಕೇರಳಕ್ಕೆ 31 ರಂದು ಪ್ರವೇಶಿಸಲಿರುವ ಮುಂಗಾರಿನಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜೂನ್ 1 ರಂದು ನೈಋತ್ಯ ಮುಂಗಾರು ಕೇರಳ ರಾಜ್ಯ ಪ್ರವೇಶಿಸಲಿದ್ದು, ಕರ್ನಾಟಕಕ್ಕೆ ಜೂನ್ 5 ರಂದು ಪ್ರವೇಶಿಸುವ ನಿರೀಕ್ಷೆ ಇದೆ.ರಾಜ್ಯದಲ್ಲಿ ಮೇ. 29 ರವರೆಗೆ ಮಳೆ ಮುಂದುವರೆಯಲಿದ್ದು, ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವು ಕಡೆ ಮಾತ್ರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಚಂಡಮಾರುತದ ಹಿನ್ನೆಲೆಯಲ್ಲಿ ಕಾಣಿಸಿಕೊಂಡ ಮಳೆಯಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ರೈತರು ಕೃಷಿ ಕಾಯಕಲ್ಲಿ ತೊಡಗಿಕೊಂಡಿದ್ದು, ಮುಂಗಾರು ಆಗಮನದ ನಿರೀಕ್ಷೆಯಲ್ಲಿದ್ದಾರೆ.
ಲಾಕ್ ಡೌನ್ ಸಂಕಷ್ಟಕ್ಕೆ ಸಿಲುಕಿದ್ದ ಕುಟುಂಬಗಳಿಗೆ ದಿನಸಿ ವಿತರಣೆ..! ಇದು ಪಬ್ಲಿಕ್ ಫಸ್ಟ್ ನ್ಯೂಸ್ ಇಂಪ್ಯಾಕ್ಟ್..!!
ಮುಂಡಗೋಡ-ಪಟ್ಟಣದಲ್ಲಿ ಲಾಕ್ ಡೌನ್ ಸಂಕಷ್ಟದಲ್ಲಿ ಸಿಲುಕಿ ಐದು ಕಾರ್ಮಿಕ ಕುಟುಂಬಗಳು ನರಳುತ್ತಿದ್ದ ಸುದ್ದಿ ಗುರುವಾರ ನಿಮ್ಮ ಪಬ್ಲಿಕ್ ಫಸ್ಟ್ ನ್ಯೂಸ್ ನಲ್ಲಿ ಪ್ರಸಾರವಾಗಿತ್ತು.. ಅಂತಹದ್ದೊಂದು ಸುದ್ದಿ ಪ್ರಸಾರವಾದ ಕೆಲವೇ ಗಂಟೆಗಳಲ್ಲಿ ತಾಲೂಕಿನ ಹಲವು ಹೃದಯವಂತರು ಸ್ಪಂಧಿಸಿದ್ದಾರೆ.. ಟಿಬೇಟಿಯನ್ ಕರ್ಮಾ ಪೌಂಡೇಶನ್ ವತಿಯಿಂದ ಲಾಕ್ ಡೌನ್ ಸಂಕಷ್ಟದಲ್ಲಿ ಸಿಲುಕಿದ್ದ ಆಂದ್ರ ಕುಟುಂಬಗಳಿಗೆ ದಿನಸಿ ಕಿಟ್ ಗಳನ್ನು ವಿತರಿಸಿದ್ದಾರೆ.. ಅಂದಹಾಗೆ, ಗಾರೆ ಕೆಲಸಕ್ಕೆಂದು ಆಂದ್ರ ಪ್ರದೇಶದಿಂದ ಬಂದಿದ್ದ ಕುಟುಂಬ, ಲಾಕ್ ಡೌನ್ ಘೋಷಣೆಯಾದ ನಂತ್ರ ವಾಪಸ್ ತಮ್ಮ ರಾಜ್ಯಕ್ಕೆ ತೆರಳಲು ಆಗದೇ ಮುಂಡಗೋಡಿನಲ್ಲೇ ಸಂಕಷ್ಟಕ್ಕೆ ಸಿಲುಕಿತ್ತು.. ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ದರೂ ಈ ಕಾರ್ಮಿಕರ ಕುಟುಂಬದಲ್ಲಿದ್ದು ಒಂದೊತ್ತಿನ ಊಟಕ್ಕೂ ಪರದಾಡುತ್ತಿವೆ.. ಪಟ್ಟಣದ ಹೊರ ವಲಯದ ಬಯಲಿನಲ್ಲಿ ಪುಟ್ಟ ಪುಟ್ಟ ಗುಡಿಸಲು ಕಟ್ಟಿಕೊಂಡು ಬದುಕುತ್ತಿದ್ದಾರೆ.. ಹೀಗಾಗಿ ಗುರುವಾರ ನಿಮ್ಮ ಪಬ್ಲಿಕ್ ಫಸ್ಟ್ ನ್ಯೂಸ್ ಇಲ್ಲಿನ ಬಡ ಕುಟುಂಬಗಳ ಸಂಕಷ್ಟದ ಕುರಿತು ವರದಿ ಬಿತ್ತರಿಸಿತ್ತು.. ವರದಿಗೆ ಸ್ಪಂಧಿಸಿರೋ ಟಿಬೇಟಿಗರ ಕರ್ಮಾ ಪೌಂಡೇಶನ್ ಎಲ್ಲಾ ಕುಟುಂಬಗಳಿಗೂ ಅಗತ್ಯ...
ಹಳಿಯಾಳ: ಗುಂಡಳ್ಳಿ ಗ್ರಾಪಂ ವ್ಯಾಪ್ತಿಯ ತಾಂಡಾದಲ್ಲಿ ಮಾಸ್ಕ್ ಸ್ಯಾನಿಟೈಸರ್ ವಿತರಣೆ..!
ಹಳಿಯಾಳ: ತಾಲೂಕಿನ ಗುಂಡಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಯಜಮಾನ ತಾಂಡಾ ವಾರ್ಡಿನಲ್ಲಿ ಮಾಸ್ಕ್, ಸ್ಯಾನಿಟೈಸರ್, ದಿನನಿತ್ಯದ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು. ಮಾಜಿ ಶಾಸಕ ಹಾಗೂ ಬಿಜೆಪಿ ಮುಖಂಡ ಸುನಿಲ್ ಹೆಗಡೆಯವರ ಸಲಹೆ ಮೇರೆಗೆ ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಎಂ.ಪಾಟೀಲ್ ಹಾಗೂ ಪಂಚಾಯತಿ ಸದಸ್ಯೆ ಪುಷ್ಪಾ ಪಾಟೀಲ್ ವಾರ್ಡಿನ ಜನರಿಗೆ ಮಾಸ್ಕ್ ಸ್ಯಾನಿಟೈಸರ್ ವಿತರಿಸಿದ್ರು.. ಅತಿಹೆಚ್ಚು ಕೂಲಿ ಕಾರ್ಮಿಕರು, ದಲಿತರು, ಲಂಬಾಣಿಗಳು ವಾಸಿಸುತ್ತಿರುವ ಗುಂಡಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಯಜಮಾನ ತಾಂಡಾ ವಾರ್ಡಿನಲ್ಲಿ ಜನರಿಗೆ ವಿತರಿಸಿದ್ರು.. ಈ ಸಂದರ್ಭದಲ್ಲಿ ವಾರ್ಡಿನ ಪಕ್ಷದ ಕಾರ್ಯಕರ್ತರು, ಗ್ರಾಮ ಪಂಚಾಯತಿ ಸದಸ್ಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಿಬ್ಬಂದಿಗಳು, ವಾರ್ಡಿನ ಪಂಚಾಯತಿ ಸಿಬ್ಬಂದಿಗಳು ಹಾಜರಿದ್ದರು..
ಮುಂಡಗೋಡಿಗೆ ದೇಶಪಾಂಡೆಯವರ ಗಿಫ್ಟ್..! PPE ಕಿಟ್, ಔಷಧಿ, ಮಾಸ್ಕ್, ಅಂಬ್ಯುಲೆನ್ಸ್ ಹಸ್ತಾಂತರ..!
ಮುಂಡಗೋಡ-ತಹಶೀಲ್ದಾರ ಕಚೇರಿ ಆವರಣದಲ್ಲಿ ಇಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಆರ್.ವಿ.ದೇಶಪಾಂಡೆ, ಹಾಗೂ ಅವರ ಪುತ್ರ ಪ್ರಶಾಂತ್ ದೇಶಪಾಂಡೆ, ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ಮುಂಡಗೋಡ ತಾಲೂಕಿಗೆ ಹಲವು ಸೌಲಭ್ಯಗಳನ್ನು ಒದಗಿಸಿದ್ರು.. ಮುಂಡಗೋಡ ತಾಲೂಕಿನ ತಹಶಿಲ್ದಾರ್ ಶ್ರೀಧರ್ ಮುಂದಲಮನಿಯವರ ಮೂಲಕ 500 ಔಷಧಿ ಕಿಟ್, ಹಾಗೂ 320 ಆಕ್ಸಿ ಮೀಟರ್, 500 n95 ಮಾಸ್ಕ್, 250 ಪಿಪಿಇ ಕಿಟ್ ಹಾಗೂ 1 ಉಚಿತ ಅಂಬ್ಯುಲೆನ್ಸ್ ವಾಹನ ಹಸ್ತಾಂತರಿಸಿದ್ರು.. ಈ ವೇಳೆ ಕಾಂಗ್ರೆಸ್ ಮುಖಂಡರಾದ ಪ್ರಶಾಂತ್ ದೇಶಪಾಂಡೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ್, ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರಳ್ಳಿ, ಮುಖಂಡರಾದ, ಎಚ್. ಎಮ್. ನಾಯ್ಕ ದೀಪಕ್ ದೊಡ್ಡೂರು, ಪಟ್ಟಣ ಪಂಚಾಯತ್ ಸದಸ್ಯ ರಝಾಕ್ ಖಾನ್ ಫಠಾಣ, ಸಂತೋಷ ವಾಸನ್ ಧರ್ಮರಾಜ ನಡಗೇರಿ ಸೇರಿದಂತೆ ಹಲವರು ಹಾಜರಿದ್ದರು, ಇನ್ನು, ತಹಶೀಲ್ದಾರ್ ಶ್ರೀಧರ್ ಮುಂದಲಮನಿ, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸಂಗನ ಬಸಯ್ಯ ತಾಲೂಕ ಆಡಳಿತ ವೈದ್ಯಾಧಿಕಾರಿ ಡಾ.ಎಚ್.ಎಫ್.ಇಂಗಳೆ ಈ ವೇಳೆ ಹಾಜರಿದ್ದು...
ಮುಂಡಗೋಡ: 18 ವರ್ಷ ಮೇಲ್ಪಟ್ಟ ವಿಕಲಚೇತನರಿಗೆ ಉಚಿತ ಕೋವಿಡ್ ಲಸಿಕಾ ಅಭಿಯಾನ..!
ಮುಂಡಗೋಡ- ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇಂದು 18 ವರ್ಷ ಮೇಲ್ಪಟ್ಟ ವಿಕಲಚೇತನರಿಗೆ ಕೋವಿಡ್ ಲಸಿಕೆ ನೀಡುವ ಅಭಿಯಾನ ಹಮ್ಮಿಕೊಳ್ಳಲಾಗಿತ್ತು..! ಬೆಳಿಗ್ಗೆ ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಆಯಾ ವ್ಯಾಪ್ತಿಯ ಗ್ರಾಮಗಳ 18 ವರ್ಷ ಮೇಲ್ಪಟ್ಟ ವಿಕಲಚೇತನರು ಲಸಿಕೆ ಪಡೆದರು.. ತಮ್ಮ ವಿಕಲಚೇತನದ ಗುರುತಿನ ಪ್ರಮಾಣಪತ್ರ, ಆಧಾರ್ ಕಾರ್ಡ್ ನೊಂದಿಗೆ ಬಂದು 18 ವರ್ಷ ಮೇಲ್ಪಟ್ಟ ವಿಕಲಚೇತನರು ಲಸಿಕೆ ಪಡೆದ್ರು.. ತಾಲೂಕಾಡಳಿತ ಶುಕ್ರವಾರದ ಇಡೀ ದಿನ ಮುಂಡಗೋಡ ತಾಲೂಕಿನಲ್ಲಿ ಕೋವಿಡ್ ಉಚಿತ ಲಸಿಕಾ ಅಭಿಯಾನ ಹಮ್ಮಿಕೊಂಡಿದೆ..