ಮುಂಡಗೋಡ-ಪಟ್ಟಣದಲ್ಲಿ ಲಾಕ್ ಡೌನ್ ಸಂಕಷ್ಟದಲ್ಲಿ ಸಿಲುಕಿ ಐದು ಕಾರ್ಮಿಕ ಕುಟುಂಬಗಳು ನರಳುತ್ತಿದ್ದ ಸುದ್ದಿ ಗುರುವಾರ ನಿಮ್ಮ ಪಬ್ಲಿಕ್ ಫಸ್ಟ್ ನ್ಯೂಸ್ ನಲ್ಲಿ ಪ್ರಸಾರವಾಗಿತ್ತು..

ಅಂತಹದ್ದೊಂದು ಸುದ್ದಿ ಪ್ರಸಾರವಾದ ಕೆಲವೇ ಗಂಟೆಗಳಲ್ಲಿ ತಾಲೂಕಿನ ಹಲವು ಹೃದಯವಂತರು ಸ್ಪಂಧಿಸಿದ್ದಾರೆ.. ಟಿಬೇಟಿಯನ್ ಕರ್ಮಾ ಪೌಂಡೇಶನ್ ವತಿಯಿಂದ ಲಾಕ್ ಡೌನ್ ಸಂಕಷ್ಟದಲ್ಲಿ ಸಿಲುಕಿದ್ದ ಆಂದ್ರ ಕುಟುಂಬಗಳಿಗೆ ದಿನಸಿ ಕಿಟ್ ಗಳನ್ನು ವಿತರಿಸಿದ್ದಾರೆ..

ಅಂದಹಾಗೆ, ಗಾರೆ ಕೆಲಸಕ್ಕೆಂದು ಆಂದ್ರ ಪ್ರದೇಶದಿಂದ ಬಂದಿದ್ದ ಕುಟುಂಬ, ಲಾಕ್ ಡೌನ್ ಘೋಷಣೆಯಾದ ನಂತ್ರ ವಾಪಸ್ ತಮ್ಮ ರಾಜ್ಯಕ್ಕೆ ತೆರಳಲು ಆಗದೇ ಮುಂಡಗೋಡಿನಲ್ಲೇ ಸಂಕಷ್ಟಕ್ಕೆ ಸಿಲುಕಿತ್ತು..

ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ದರೂ ಈ ಕಾರ್ಮಿಕರ ಕುಟುಂಬದಲ್ಲಿದ್ದು ಒಂದೊತ್ತಿನ ಊಟಕ್ಕೂ ಪರದಾಡುತ್ತಿವೆ.. ಪಟ್ಟಣದ ಹೊರ ವಲಯದ ಬಯಲಿನಲ್ಲಿ ಪುಟ್ಟ ಪುಟ್ಟ ಗುಡಿಸಲು ಕಟ್ಟಿಕೊಂಡು ಬದುಕುತ್ತಿದ್ದಾರೆ..

ಹೀಗಾಗಿ ಗುರುವಾರ ನಿಮ್ಮ ಪಬ್ಲಿಕ್ ಫಸ್ಟ್ ನ್ಯೂಸ್ ಇಲ್ಲಿನ ಬಡ ಕುಟುಂಬಗಳ ಸಂಕಷ್ಟದ ಕುರಿತು ವರದಿ ಬಿತ್ತರಿಸಿತ್ತು.. ವರದಿಗೆ ಸ್ಪಂಧಿಸಿರೋ ಟಿಬೇಟಿಗರ ಕರ್ಮಾ ಪೌಂಡೇಶನ್ ಎಲ್ಲಾ ಕುಟುಂಬಗಳಿಗೂ ಅಗತ್ಯ ದಿನಸಿ ವಸ್ತುಗಳನ್ನು ನೀಡಿದೆ, ಲಾಕ್ ಡೌನ್ ಮುಗಿಯುವವರೆಗೂ ಆ ಕುಟುಂಬಗಳಿಗೆ ದಿನಸಿ ನೀಡಲು ಭರವಸೆ ನೀಡಿದೆ.
ಹೃದಯವಂತ ಕರ್ಮಾ ಪೌಂಡೇಶನ್ ಗೆ ನಮ್ಮದೊಂದು ಬಿಗ್ ಸೆಲ್ಯೂಟ್..!

error: Content is protected !!