ಮುಂಡಗೋಡ-ತಹಶೀಲ್ದಾರ ಕಚೇರಿ ಆವರಣದಲ್ಲಿ ಇಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಆರ್.ವಿ.ದೇಶಪಾಂಡೆ, ಹಾಗೂ ಅವರ ಪುತ್ರ ಪ್ರಶಾಂತ್ ದೇಶಪಾಂಡೆ, ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ಮುಂಡಗೋಡ ತಾಲೂಕಿಗೆ ಹಲವು ಸೌಲಭ್ಯಗಳನ್ನು ಒದಗಿಸಿದ್ರು..
ಮುಂಡಗೋಡ ತಾಲೂಕಿನ ತಹಶಿಲ್ದಾರ್ ಶ್ರೀಧರ್ ಮುಂದಲಮನಿಯವರ ಮೂಲಕ 500 ಔಷಧಿ ಕಿಟ್, ಹಾಗೂ 320 ಆಕ್ಸಿ ಮೀಟರ್, 500 n95 ಮಾಸ್ಕ್, 250 ಪಿಪಿಇ ಕಿಟ್ ಹಾಗೂ 1 ಉಚಿತ ಅಂಬ್ಯುಲೆನ್ಸ್ ವಾಹನ ಹಸ್ತಾಂತರಿಸಿದ್ರು..
ಈ ವೇಳೆ ಕಾಂಗ್ರೆಸ್ ಮುಖಂಡರಾದ ಪ್ರಶಾಂತ್ ದೇಶಪಾಂಡೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ್, ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರಳ್ಳಿ, ಮುಖಂಡರಾದ, ಎಚ್. ಎಮ್. ನಾಯ್ಕ ದೀಪಕ್ ದೊಡ್ಡೂರು, ಪಟ್ಟಣ ಪಂಚಾಯತ್ ಸದಸ್ಯ ರಝಾಕ್ ಖಾನ್ ಫಠಾಣ, ಸಂತೋಷ ವಾಸನ್ ಧರ್ಮರಾಜ ನಡಗೇರಿ ಸೇರಿದಂತೆ ಹಲವರು ಹಾಜರಿದ್ದರು,
ಇನ್ನು, ತಹಶೀಲ್ದಾರ್ ಶ್ರೀಧರ್ ಮುಂದಲಮನಿ, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸಂಗನ ಬಸಯ್ಯ ತಾಲೂಕ ಆಡಳಿತ ವೈದ್ಯಾಧಿಕಾರಿ ಡಾ.ಎಚ್.ಎಫ್.ಇಂಗಳೆ ಈ ವೇಳೆ ಹಾಜರಿದ್ದು ಔಷಧಿ ಕಿಟ್ ಹಾಗೂ ಇನ್ನುಳಿದ ಸಾಮಗ್ರಿಗಳನ್ನು ಹಸ್ತಾಂತರಿಸಿಕೊಂಡ್ರು..