ಉತ್ತರ ಕನ್ಮಡ ಜಿಲ್ಲೆಯಲ್ಲಿ ಸಂಜೆಯವರೆಗೆ ಜಿಲ್ಲೆಯಲ್ಲಿ ಶೇ. 73.52 ರಷ್ಟು ಮತದಾನವಾಗಿದೆ. ಕ್ಷೇತ್ರವಾರು ಮತದಾನದ ವಿವರ ಶಿರಸಿ ಕ್ಷೇತ್ರ- 76.6% ಯಲ್ಲಾಪುರ ಕ್ಷೇತ್ರ-79.95% ಖಾನಾಪುರ ಕ್ಷೇತ್ರ-71.87% ಹಳಿಯಾಳ ಕ್ಷೇತ್ರ-72.35% ಕುಮಟಾ ಕ್ಷೇತ್ರ-70.1 % ಭಟ್ಕಳ ಕ್ಷೇತ್ರ-73% ಕಾರವಾರ ಕ್ಷೇತ್ರ-70.61% ಕಿತ್ತೂರ ಕ್ಷೇತ್ರ- 75.25% ಇದು ಈ ಕ್ಷಣದವರೆಗಿನ ಮತದಾನ ಪ್ರಮಾಣವಾಗಿದ್ದು, ಇನ್ನು ಮತದಾನ ಪ್ರಮಾಣದ ನಿಖರ ವಿವರ ನಾಳೆ ಹೊರಬೀಳಲಿದೆ ಅನ್ನೊ ಮಾಹಿತಿ ಜಿಲ್ಲಾಡಳಿತದಿಂದ ಲಭ್ಯವಾಗಿದೆ.
Top Stories
ಶುದ್ಧ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಎಚ್ಚರಿಕೆ ವಹಿಸಿ : ಈಶ್ವರ್ ಕಾಂದೂ
ಕಲಕೇರಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕಂಚಿನ ಪ್ರತಿಮೆ ಅನಾವರಣ..!
ಉದ್ಯೋಗ ಖಾತರಿಯಲ್ಲಿ ಮಹಿಳಾ ಕಾರ್ಮಿಕರು ಭಾಗವಹಿಸುವಿಕೆ ಹೆಚ್ಚಿಸಲು ಸ್ತ್ರೀ ಚೇತನ ಅಭಿಯಾನ..!
ಯತ್ನಾಳ ಉಚ್ಚಾಟನೆಯ ಪರಿಣಾಮ ಎರಡ್ಮೂರು ದಿನದಲ್ಲಿ ಗೊತ್ತಾಗತ್ತೆ: ಶಿವರಾಮ್ ಹೆಬ್ಬಾರ್
ಮುಂಡಗೋಡ ತಾಲೂಕಿನ ಹಲವು ಕಾರ್ಯಕ್ರಮಗಳಲ್ಲಿ ಶಾಸಕ ಶಿವರಾಮ್ ಹೆಬ್ಬಾರ ಭಾಗಿ..!
ಮಳಗಿ ಬಳಿ KSRTC ಬಸ್ ಮೇಲೆ ಉರುಳಿ ಬಿದ್ದ ಮರ, ರಸ್ತೆ ಸಂಚಾರ ಅಸ್ತವ್ಯಸ್ತ, ತಪ್ಪಿದ ಭಾರೀ ಅನಾಹುತ..!
ಜಿಲ್ಲೆಯಲ್ಲಿ ಗೃಹ ಸಚಿವ: ಗೋವಾ ಗಡಿಯಲ್ಲಿ ಎಚ್ಚರಿಕೆ ವಹಿಸಿ: ಡಾ.ಜಿ. ಪರಮೇಶ್ವರ್
ಯತ್ನಾಳ್ ಉಚ್ಚಾಟನೆ, ಇದು ಅನಿವಾರ್ಯವಾಗಿ ತೆಗೆದು ಕೊಂಡಿರೋ ಕ್ರಮ, ವಿಜಯೇಂದ್ರ ಸ್ಪಷ್ಟನೆ..!
ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿಯಿಂದ ಉಚ್ಚಾಟನೆ..! ಕೊನೆಗೂ ಶಾಕ್ ಕೊಟ್ಟ ಹೈಕಮಾಂಡ್..!
ಮುಂಡಗೋಡಲ್ಲಿ SSLC ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ ನೇಣಿಗೆ ಶರಣು..! ಫೇಲ್ ಆಗೋ ಆತಂಕದಲ್ಲಿ ಸಾವಿಗೆ ಕೊರಳೊಡ್ಡಿದ ಬಾಲಕ..!
ಭಾರೀ ಮಳೆ ಗಾಳಿಗೆ ಹಾರಿಬಿದ್ದ ಸಿಡ್ಲಗುಂಡಿ ಶಾಲೆಯ ಮೇಲ್ಚಾವಣಿ, ಅದೃಷ್ಟವಶಾತ್ ವಿದ್ಯಾರ್ಥಿಗಳು ಬಚಾವ್..!
ಮಾರ್ಚ 26 ರಿಂದ ಎರಡು ದಿನ ಜಿಲ್ಲೆಯಲ್ಲಿ ಗೃಹ ಸಚಿವರ ಪ್ರವಾಸ..! ಏನೇನು ಕಾರ್ಯಕ್ರಮ..?
ಖಾಸಗಿ ಫೈನಾನ್ಸ್ ಉದ್ಘಾಟನೆಗೆ ಹೋಗಿದ್ದ ಮತ್ತೋರ್ವ ಶಿಕ್ಷಕಗೂ ನೋಟೀಸ್ ಜಾರಿ..!
IPL ಬೆಟ್ಟಿಂಗ್ ದಂಧೆಕೋರರು ಜಿಲ್ಲೆಯಲ್ಲಿ ಬಾಲ ಬಿಚ್ಚಂಗಿಲ್ಲ, ಎಸ್ಪಿ ನಾರಾಯಣ್ ಖಡಕ್ ಸಂದೇಶ..! ದಂಧೆ ಮಟ್ಟ ಹಾಕಲು ಗಟ್ಟಿ ಪ್ಲಾನ್ ರೆಡಿ..!
ಖಾಸಗಿ ಫೈನಾನ್ಸ್ ಉದ್ಘಾಟನೆಯಲ್ಲಿ ಭಾಗಿಯಾಗಿದ್ದ ಮತ್ತೋರ್ವ ಶಿಕ್ಷಕ..! ಹಾಗಿದ್ರೆ ಅವರ ಮೇಲೆ ಕ್ರಮ ಯಾಕಿಲ್ಲ ಬಿಇಓ ಮೇಡಂ..?
ಮಾ.21 ರಿಂದ SSLC ಪರೀಕ್ಷೆ, ಸುಸೂತ್ರವಾಗಿ ನಡೆಸಲು ಸನ್ನದ್ಧ- ಡಿಸಿ ಲಕ್ಷ್ಮೀ ಪ್ರಿಯ
ಖಾಸಗಿ ಫೈನಾನ್ಸ್ ಉದ್ಘಾಟನೆಗೆ ಸರ್ಕಾರಿ ಅಧಿಕಾರಿ ಭಾಗಿ ಕೇಸ್, ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ ಬಿಇಓ..!
ಪ್ರಯಾಣಿಕರ ಚಿನ್ನದ ಒಡವೆ ಕದಿಯುತ್ತಿದ್ದ ಕಳ್ಳಿಯರ ಗ್ಯಾಂಗ್ ಅರೇಸ್ಟ್..
ಪೊಲೀಸ್ ಠಾಣೆಯಲ್ಲಿ ಇಸ್ಪೀಟ್ ಆಟ.. ಐವರು ಪೋಲೀಸರು ಅಮಾನತು..!
ಕೊನೆಗೂ ಮತದಾನಕ್ಕೆ ಒಪ್ಪಿಕೊಂಡ ಬಸಾಪುರ ಗ್ರಾಮಸ್ಥರು, ಶಿರಸಿ ಎಸಿ ಭರವಸೆ ಬಳಿಕ ಮತಗಟ್ಟೆಗೆ ಎಂಟ್ರಿ..!
ಮುಂಡಗೋಡ ತಾಲೂಕಿನ ನಂದಿಕಟ್ಟಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸಾಪುರ ಗ್ರಾಮಸ್ಥರು ಕೊನೆಗೂ ಮತದಾನಕ್ಕೆ ಒಪ್ಪಿಕೊಂಡಿದ್ದಾರೆ. ವಿವಿಧ ಬೇಡಿಕೆಗೆ ಆಗ್ರಹಿಸಿ ಇಡೀ ಗ್ರಾಮಕ್ಕೆ ಗ್ರಾಮವೇ ಮತದಾನ ಬಹಿಷ್ಕಾರ ಮಾಡಿ ಪ್ರತಿಭಟನೆ ಮಾಡಿದ್ರು. ಹೀಗಾಗಿ, ಪಬ್ಲಿಕ್ ಫಸ್ಟ್ ನ್ಯೂಸ್ ಈ ಕುರಿತು ವಿಸ್ತೃತ ವರದಿ ಬಿತ್ತರಿಸಿತ್ತು. ಬೆಳಿಗ್ಗೆಯಿಂದಲೂ ತಾಲೂಕಾಡಳಿತಕ್ಕೆ ಎಚ್ಚರಿಕೆ ನೀಡಿ, ಮತದಾನ ಬಹಿಷ್ಕಾರ ಮಾಡಿದ್ದ ಗ್ರಾಮಸ್ಥರು, ತಹಶೀಲ್ದಾರ್ ಮುಖಾಂತರ ಮನವಿ ಅರ್ಪಿಸಿದ್ದರು. ಆದ್ರೆ, ತಹಶೀಲ್ದಾರ್ ಸಾಹೇಬ್ರು ಗ್ರಾಮಸ್ಥರ ಮನವಿ ಸ್ವೀಕರಿಸಿ ಮತದಾನ ಮಾಡುವಂತೆ ಗ್ರಾಮಸ್ಥರಿಗೆ ಮನವಿ ಮಾಡಿ ಬಂದಿದ್ದರು. ಆದ್ರೆ, ಗ್ರಾಮಸ್ಥರು ನಮಗೆ ಪಕ್ಕಾ ಭರವಸೆ ನೀಡುವಂತೆ ಪಟ್ಟು ಹಿಡಿದು ಸಂಜೆವರೆಗೂ ಮತದಾನ ಬಹಿಷ್ಕರಿಸಿಯೇ ಕುಳಿತಿದ್ರು. ಯಾವಾಗ, ಈ ಸುದ್ದಿ ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದಿತೊ ಆವಾಗ ಶಿರಸಿ ಸಹಾಯಕ ಕಮೀಶನರ್ ರವರ ಮೂಲಕ ಗ್ರಾಮಸ್ಥರಿಗೆ ಖಚಿತ ಭರವಸೆ ಕೊಟ್ಟು ಮತದಾನ ಮಾಡುವಂತೆ ಮನ ಒಲಿಸಿದ್ರು. ನಂತರ 4.30 ನಂತರ ಗ್ರಾಮಸ್ಥರು ಮತದಾನಕ್ಕೆ ತೆರಳಿದ್ರು.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮದ್ಯಾನ 1 ಗಂಟೆವರೆಗೆ ಮತದಾನ ಪ್ರಮಾಣ ಎಷ್ಟು ಗೊತ್ತಾ..?
ಮದ್ಯಾನ 1 ಗಂಟೆಗೆ ಜಿಲ್ಲೆಯಲ್ಲಿ ಶೇ. 43.31 ರಷ್ಟು ಮತದಾನ ಕ್ಷೇತ್ರವಾರು ಮತದಾನದ ವಿವರ ಮದ್ಯಾನ 1 ಗಂಟೆಗೆ ಶಿರಸಿ ಕ್ಷೇತ್ರ- 49.51% ಯಲ್ಲಾಪುರ ಕ್ಷೇತ್ರ-47.63% ಖಾನಾಪುರ ಕ್ಷೇತ್ರ-45.96% ಹಳಿಯಾಳ ಕ್ಷೇತ್ರ-44.79% ಕುಮಟಾ ಕ್ಷೇತ್ರ-45.64 % ಭಟ್ಕಳ ಕ್ಷೇತ್ರ-43.52% ಕಾರವಾರ ಕ್ಷೇತ್ರ-43.67% ಕಿತ್ತೂರ ಕ್ಷೇತ್ರ- 40.42%
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬೆಳಿಗ್ಗೆ 11 ಗಂಟೆವರೆಗೆ ಮತದಾನ ಪ್ರಮಾಣ ಎಷ್ಟು ಗೊತ್ತಾ..?
ಬೆಳಿಗ್ಗೆ 11 ಗಂಟೆಗೆ ಜಿಲ್ಲೆಯಲ್ಲಿ ಶೇ.27.58 ರಷ್ಟು ಮತದಾನ ಕ್ಷೇತ್ರವಾರು ಮತದಾನದ ವಿವರ 11 ಗಂಟೆಗೆ ಶಿರಸಿ ಕ್ಷೇತ್ರ- 31.86% ಯಲ್ಲಾಪುರ ಕ್ಷೇತ್ರ-29.4% ಖಾನಾಪುರ ಕ್ಷೇತ್ರ-28.37% ಹಳಿಯಾಳ ಕ್ಷೇತ್ರ-26.84 % ಕುಮಟಾ ಕ್ಷೇತ್ರ- 30.03% ಭಟ್ಕಳ ಕ್ಷೇತ್ರ-27.41% ಕಾರವಾರ ಕ್ಷೇತ್ರ-28.01% ಕಿತ್ತೂರ ಕ್ಷೇತ್ರ- 23.31%
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬೆಳಿಗ್ಗೆ 9 ಗಂಟೆವರೆಗೆ ಮತದಾನ ಪ್ರಮಾಣ ಎಷ್ಟು ಗೊತ್ತಾ..?
ಬೆಳಿಗ್ಗೆ 9 ಗಂಟೆಗೆ ಜಿಲ್ಲೆಯಲ್ಲಿ ಶೇ.11.42 ಮತದಾನ ಕ್ಷೇತ್ರವಾರು ಮತದಾನದ ವಿವರ 9 ಗಂಟೆಗೆ ಶಿರಸಿ ಕ್ಷೇತ್ರ- 13.66% ಯಲ್ಲಾಪುರ ಕ್ಷೇತ್ರ-12.05% ಖಾನಾಪುರ ಕ್ಷೇತ್ರ-11.45% ಹಳಿಯಾಳ ಕ್ಷೇತ್ರ- 10.82% ಕುಮಟಾ ಕ್ಷೇತ್ರ- 12.98% ಭಟ್ಕಳ ಕ್ಷೇತ್ರ- 11.64% ಕಾರವಾರ ಕ್ಷೇತ್ರ- 10.97% ಕಿತ್ತೂರ ಕ್ಷೇತ್ರ- 8.32%
ಕಾಂಗ್ರೆಸ್ ಕುತಂತ್ರದಿಂದ ಮತ ಪಡೆಯಲು ಹಣ ಹಂಚಿಕೆ ಮಾಡುತ್ತಿದೆಯಂತೆ- ರೂಪಾಲಿ ನಾಯ್ಕ್
ಮುಂಡಗೋಡ: ಉತ್ತರ ಕನ್ನಡ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವೂ ಕುತಂತ್ರದಿಂದ ಮತ ಪಡೆಯಲು ಹಣ ಹಂಚಿಕೆ ಮಾಡುತ್ತಿದೆ ಅಂತಾ ಜನರು ಮಾತಾಡಿಕೊಳ್ತಿದಾರೆ. ಗ್ಯಾರಂಟಿಗಿಂತ ಬದುಕಿಗೆ ಸ್ವಾಸ್ಥ್ಯ ಮುಖ್ಯ. ಗ್ಯಾರಂಟಿಯಿಂದ ಕಾಂಗ್ರೆಸ್ ಜನರನ್ನು ದಾರಿ ತಪ್ಪಿಸುತ್ತಿದೆ. ವಿಧಾನಸಭಾ ಚುನಾವಣೆಯ ತಂತ್ರವನ್ನೇ ಲೋಕಸಭಾ ಚುನಾವಣೆಯಲ್ಲಿ ಮಾಡುತ್ತಿದ್ದಾರೆ. ಇವುಗಳನ್ನು ಜನರು ನಂಬುವುದಿಲ್ಲ. ವಿಶ್ವೇಶ್ವರ ಹೆಗಡೆ ಕಾಗೇರಿಯವರು 3 ಲಕ್ಷ ಮತಗಳ ಅಂತರದಿಂದ ಗೆಲವು ಸಾಧಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಹೇಳಿದರು. ಶನಿವಾರ ತಾಲೂಕು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಸಮಾಜದಲ್ಲಿ ಮಹಿಳೆಯರಿಗೆ ಮೊದಲು ಜೀವರಕ್ಷಣೆ ಗ್ಯಾರಂಟಿ ನೀಡುವುದು ಅವಶ್ಯವಿದೆ. ನೇಹಾ ಹಿರೇಮಠ ಹತ್ಯೆ ಮಾಡಿದವನಿಗೆ ಕಠಿಣ ಶಿಕ್ಷೆ ನೀಡುವ ಬದಲಾಗಿ ಕಾಂಗ್ರೆಸ್ ಅಪರಾಧಿಗೆ ರಕ್ಷಣೆ ನೀಡಿದೆ. ಮಹಿಳೆಯರಿಗೆ ಜೀವ ರಕ್ಷಣೆ ಇಲ್ಲ. ಹಿಂದು ಮುಸ್ಲಿಮರ ನಡುವೆ ಭೇದ ಹುಟ್ಟಿಸಿ ರಾಜಕಾರಣ ಮಾಡುತ್ತಿದ್ದಾರೆ. ತಮ್ಮ ಓಲೈಕೆ ರಾಜಕಾರಣದಿಂದ ಕಾಂಗ್ರೆಸ್ ಜನರನ್ನು ಮರಳು ಮಾಡುತ್ತಿದ್ದಾರೆ. ಮೋದಿಯವರು ಬಂದ ನಂತರ ದೇಶ...
ಶಿರಸಿಯಲ್ಲಿ ಬೆಳ್ಳಂ ಬೆಳಿಗ್ಗೆ IT ದಾಳಿ, ನಾಲ್ವರು ಕೈ ಮುಖಂಡರ ಮನೆ ಮೇಲೆ ದಾಳಿ..! ಚುನಾವಣೆ ಹೊತ್ತಲ್ಲಿ ಕಾಂಗ್ರೆಸ್ ಗೆ ಶಾಕ್..!
ಶಿರಸಿಯಲ್ಲಿ ಬೆಳ್ಳಂಬೆಳಿಗ್ಗೆ IT ದಾಳಿಯಾಗಿದೆ. ನಾಲ್ವರು ಕಾಂಗ್ರೆಸ್ ಮುಖಂಡರ ಮನೆ ಮೇಲೆ ದಾಳಿ ನಡೆದಿದ್ದು, ಚುನಾವಣೆ ಹೊತ್ತಲ್ಲಿ ಕಾಂಗ್ರೆಸ್ ಗೆ ಶಾಕ್ ನೀಡಿದೆ. ಕಾಂಗ್ರೆಸ್ ಯುವ ನಾಯಕ ಹಾಗು ಜಿಲ್ಲಾ ಮಾದ್ಯಮ ವಕ್ತಾರ ದೀಪಕ್ ದೊಡ್ಡೂರ್.. ಅನಿಲ್ ಮುಷ್ಟಗಿ ಹಾಗೂ ಶಿವರಾಮ್ ಹೆಗಡೆ ಮನೆ ಮೇಲೆ ಐಟಿ ದಾಳಿ ನಡೆದಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ನಾಲ್ಕು ಕಾರಿನಲ್ಲಿ ಬಂದಿರುವ ಅದಿಕಾರಿಗಳು, ದೀಪಕ ದೊಡ್ಡೂರ್ ಮನೆಯಲ್ಲಿ ದಾಖಲೆ ಪತ್ರ ಇನ್ನಿತರ ಆಸ್ತಿಯ ಮಾಹಿತಿಯನ್ನು ಅದಿಕಾರಿಗಳು ಪಡೆಯುತ್ತಿದ್ದಾರೆ ಅಂತಾ ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ. ಇನ್ನು ಕಾಂಗ್ರೆಸ್ ಪಕ್ಷದ ಮುಖಂಡರನ್ನೇ ಗುರಿಯಾಗಿಸಿ IT ದಾಳಿ ನಡಿದಿದೆಯಾ ಅನ್ನೋ ಪ್ರಶ್ನೆ ಎದುರಾಗಿದೆ.
ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಕಾಂಗ್ರೆಸ್ ರಾಜಕಾರಣಕ್ಕೆ ಬಳಸಿಕೊಳ್ಳಲ್ಲ: ಕೈ ಸಮಾವೇಶದ ತಯಾರಿ ವೀಕ್ಷಿಸಿ ದೇಶಪಾಂಡೆ ಹೇಳಿಕೆ
ಮುಂಡಗೋಡ: ಪ್ರಜ್ವಲ್ ರೇವಣ್ಣನವರ ಪ್ರಕರಣವನ್ನು ಕಾಂಗ್ರೆಸ್ ರಾಜಕೀಯಕ್ಕೆ ಬಳಸಿಕೊಳ್ಳಲ್ಲ ಅಂತಾ ಮುಂಡಗೋಡಿನಲ್ಲಿ ಕಾಂಗ್ರೆಸ್ ಮುಖಂಡ ಆರ್.ವಿ.ದೇಶಪಾಂಡೆ ತಿಳಿಸಿದ್ರು. ಅವ್ರು, ಮುಂಡಗೋಡ ತಾಲೂಕು ಕ್ರೀಡಾಂಗಣದಲ್ಲಿ ನಾಳೆ ಶುಕ್ರವಾರ ನಡೆಯುತ್ತಿರುವ ಕಾಂಗ್ರೆಸ್ ಸಮಾವೇಶದ ತಯಾರಿ ಕುರಿತು ವೀಕ್ಷಿಸಿ ಗುರುವಾರ ಸಂಜೆ ಮಾತನಾಡಿದ್ರು. ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ್ರು. ಈಗಾಗಲೇ ರಾಜ್ಯದ ಮುಖ್ಯಮಂತ್ರಿಗಳು ಎಸ್ ಐಟಿಯನ್ನು ರಚನೆ ಮಾಡಿದ್ದಾರೆ. ತನಿಖೆಯಿಂದ ಸತ್ಯಾಂಶ ಹೊರಬರಲಿದೆ ಎಂದರು. ಇನ್ನು ಶುಕ್ರವಾರ ನಡೆಯಲಿರೋ ಕಾಂಗ್ರೆಸ್ ಸಮಾವೇಶದಲ್ಲಿ ಕೆನರಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ ಅವರ ಪರ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಪ್ರಚಾರ ನಡೆಸಲಿದ್ದಾರೆ. ಚುನಾವಣೆ ಉಸ್ತುವಾರಿ ಸಚಿವ ಕೆ. ಎ. ಜಾರ್ಜ್, ಹಾಗೂ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ಶಾಸಕರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದರು. ನಾವೇ ಗೆಲ್ತಿವಿ..! ಈ ಸಮಾರಂಭದಲ್ಲಿ ಇಪ್ಪತೈದು ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ. ಲೋಕಸಭಾ ಕ್ಷೇತ್ರವನ್ನು ಈಗಾಗಲೇ ಓಡಾಡಿದ್ದೇನೆ. ಈ ಬಾರಿ ನಮ್ಮ ಅಭ್ಯರ್ಥಿ ಗೆಲವು ಸಾಧಿಸಲಿದ್ದಾರೆ....
ಪಕ್ಷ ಬಿಡುವವರು ರಾಜೀನಾಮೆ ನೀಡ್ಲಿ, ಚುನಾವಣೆ ಎದುರಿಸ್ಲಿ- ಬನವಾಸಿಯಲ್ಲಿ ಶಿವರಾಂ ಹೆಬ್ಬಾರ್ ವಿರುದ್ಧ ಕಾರ್ಕಳ ಶಾಸಕ ಸುನಿಲ್ ಕುಮಾರ್ ಗುಡುಗು
ಬನವಾಸಿ: ಪಕ್ಷ ಬದಲಾಯಿಸುವವರ ಬಗ್ಗೆ ಎಚ್ಚರವಹಿಸಬೇಕಿದೆ. ಪಕ್ಷದಲ್ಲಿ ಇರಲು ಇಷ್ಟವಿಲ್ಲವಾದರೆ ರಾಜೀನಾಮೆ ನೀಡಿ, ಧೈರ್ಯವಿದ್ದರೆ ಉಪ ಚುನಾವಣೆ ಎದುರಿಸಲಿ ಎಂದು ಶಾಸಕ ಶಿವರಾಮ ಹೆಬ್ಬಾರ್ ಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಕಳ ಶಾಸಕ ವಿ.ಸುನೀಲಕುಮಾರ ಟಾಂಗ್ ನೀಡಿದ್ರು. ಬುಧವಾರ ಬನವಾಸಿಯಲ್ಲಿ ಮಾಧ್ಯಮದವರ ಜತೆ ಮಾತನಾಡಿ, ಬಿಜೆಪಿಯು ಕಾರ್ಯಕರ್ತರ ಆಧಾರ ಪಕ್ಷವಾಗಿದ್ದು, ಬಿಜೆಪಿಯಿಂದ ಎಲ್ಲ ಅವಕಾಶ ಸಿಕ್ಕಿದೆ. ಲಾಭ ಪಡೆದುಕೊಂಡಿರುವುದು ಬಿಜೆಪಿಯಿಂದ. ಯಾಕೆ ಅವರು ಪ್ರಚಾರಕ್ಕೆ ಬರುತ್ತಿಲ್ಲ ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕು ಎಂದರು. ಈ ಚುನಾವಣೆ ಭಾರತ ಭವಿಷ್ಯ ಹಾಗೂ ಬದುಕಿನ ನಡುವಿನ ಚುನಾವಣೆಯಾಗಿದ್ದು, ನರೇಂದ್ರ ಮೋದಿ ಮೂರನೆಯ ಬಾರಿಗೆ ಪ್ರಧಾನಿಯಾಗಬೇಕಿರುವುದು ಅನಿವಾರ್ಯ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಅವರ ಬಲ ನೀಡಲು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಜತೆ ಬಿಜೆಪಿ ಬೆಂಬಲಿಸಬೇಕು ಎಂದು ಹೇಳಿದರು. ಈ ವೇಳೆ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಜಿ.ನಾಯ್ಕ, ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಸೇರಿದಂತೆ ಮತ್ತಿತರರು ಇದ್ದರು.
ಹುನಗುಂದ ಗ್ರಾಪಂ ಮಾಜಿ ಸದಸ್ಯ ಮೌಲಾಸಾಬ್ ಗೋರಿ ಬೈಕ್ ಅಪಘಾತದಲ್ಲಿ ಸಾವು..! ಹಲವರ ಕಂಬನಿ
ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಮೌಲಾಸಾಬ್ ಮಹ್ಮದಸಾಬ್ ಗೋರಿ (42) ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಶಿವಮೊಗ್ಗ ಜಿಲ್ಲೆಯ ಆನವಟ್ಟಿ ಸಮೀಪ ಸಂಭವಿಸಿರೋ ಬೈಕ್ ಅಪಘಾತದಲ್ಲಿ ರವಿವಾರ ನಿಧನರಾಗಿದ್ದಾರೆ. ಹುನಗುಂದ ಗ್ರಾಮ ಪಂಚಾಯತಿಯ ಸದಸ್ಯರಾಗಿ ಆಯ್ಕೆಯಾಗಿದ್ದ ಮೌಲಾಸಾಬ್ ತಮ್ಮ ಅವಧಿಯಲ್ಲಿ ಜನಮನ್ನಣೆ ಗಳಿಸಿಕೊಂಡಿದ್ರು. ಹೀಗಾಗಿ, ಮೌಲಾಸಾಬರ ನಿಧನಕ್ಕೆ ಗ್ರಾಮಸ್ಥರು, ವಿವಿಧ ಸಮಾಜದ ಮುಖಂಡರು ಕಂಬನಿ ಮಿಡಿದಿದ್ದಾರೆ.