ಶಿರಸಿಯಲ್ಲಿ ಬೆಳ್ಳಂಬೆಳಿಗ್ಗೆ IT ದಾಳಿಯಾಗಿದೆ. ನಾಲ್ವರು ಕಾಂಗ್ರೆಸ್ ಮುಖಂಡರ ಮನೆ ಮೇಲೆ ದಾಳಿ ನಡೆದಿದ್ದು, ಚುನಾವಣೆ ಹೊತ್ತಲ್ಲಿ ಕಾಂಗ್ರೆಸ್ ಗೆ ಶಾಕ್ ನೀಡಿದೆ.
ಕಾಂಗ್ರೆಸ್ ಯುವ ನಾಯಕ ಹಾಗು ಜಿಲ್ಲಾ ಮಾದ್ಯಮ ವಕ್ತಾರ ದೀಪಕ್ ದೊಡ್ಡೂರ್..
ಅನಿಲ್ ಮುಷ್ಟಗಿ ಹಾಗೂ ಶಿವರಾಮ್ ಹೆಗಡೆ
ಮನೆ ಮೇಲೆ ಐಟಿ ದಾಳಿ ನಡೆದಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.
ನಾಲ್ಕು ಕಾರಿನಲ್ಲಿ ಬಂದಿರುವ ಅದಿಕಾರಿಗಳು,
ದೀಪಕ ದೊಡ್ಡೂರ್ ಮನೆಯಲ್ಲಿ ದಾಖಲೆ ಪತ್ರ ಇನ್ನಿತರ ಆಸ್ತಿಯ ಮಾಹಿತಿಯನ್ನು ಅದಿಕಾರಿಗಳು ಪಡೆಯುತ್ತಿದ್ದಾರೆ ಅಂತಾ ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.
ಇನ್ನು ಕಾಂಗ್ರೆಸ್ ಪಕ್ಷದ ಮುಖಂಡರನ್ನೇ ಗುರಿಯಾಗಿಸಿ IT ದಾಳಿ ನಡಿದಿದೆಯಾ ಅನ್ನೋ ಪ್ರಶ್ನೆ ಎದುರಾಗಿದೆ.