ಹುನಗುಂದ ಗ್ರಾಪಂ ಮಾಜಿ ಸದಸ್ಯ ಮೌಲಾಸಾಬ್ ಗೋರಿ ಬೈಕ್ ಅಪಘಾತದಲ್ಲಿ ಸಾವು..! ಹಲವರ ಕಂಬನಿ

ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಮೌಲಾಸಾಬ್ ಮಹ್ಮದಸಾಬ್ ಗೋರಿ (42) ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಶಿವಮೊಗ್ಗ ಜಿಲ್ಲೆಯ ಆನವಟ್ಟಿ ಸಮೀಪ ಸಂಭವಿಸಿರೋ ಬೈಕ್ ಅಪಘಾತದಲ್ಲಿ ರವಿವಾರ ನಿಧನರಾಗಿದ್ದಾರೆ.

ಹುನಗುಂದ ಗ್ರಾಮ ಪಂಚಾಯತಿಯ ಸದಸ್ಯರಾಗಿ ಆಯ್ಕೆಯಾಗಿದ್ದ ಮೌಲಾಸಾಬ್ ತಮ್ಮ ಅವಧಿಯಲ್ಲಿ ಜನಮನ್ನಣೆ ಗಳಿಸಿಕೊಂಡಿದ್ರು. ಹೀಗಾಗಿ, ಮೌಲಾಸಾಬರ ನಿಧನಕ್ಕೆ ಗ್ರಾಮಸ್ಥರು, ವಿವಿಧ ಸಮಾಜದ ಮುಖಂಡರು ಕಂಬನಿ ಮಿಡಿದಿದ್ದಾರೆ.

error: Content is protected !!