ಮುಂಡಗೋಡ: ಉತ್ತರ ಕನ್ನಡ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವೂ ಕುತಂತ್ರದಿಂದ ಮತ ಪಡೆಯಲು ಹಣ ಹಂಚಿಕೆ ಮಾಡುತ್ತಿದೆ ಅಂತಾ ಜನರು ಮಾತಾಡಿಕೊಳ್ತಿದಾರೆ. ಗ್ಯಾರಂಟಿಗಿಂತ ಬದುಕಿಗೆ ಸ್ವಾಸ್ಥ್ಯ ಮುಖ್ಯ. ಗ್ಯಾರಂಟಿಯಿಂದ ಕಾಂಗ್ರೆಸ್ ಜನರನ್ನು ದಾರಿ ತಪ್ಪಿಸುತ್ತಿದೆ. ವಿಧಾನಸಭಾ ಚುನಾವಣೆಯ ತಂತ್ರವನ್ನೇ ಲೋಕಸಭಾ ಚುನಾವಣೆಯಲ್ಲಿ ಮಾಡುತ್ತಿದ್ದಾರೆ. ಇವುಗಳನ್ನು ಜನರು ನಂಬುವುದಿಲ್ಲ. ವಿಶ್ವೇಶ್ವರ ಹೆಗಡೆ ಕಾಗೇರಿಯವರು 3 ಲಕ್ಷ ಮತಗಳ ಅಂತರದಿಂದ ಗೆಲವು ಸಾಧಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಹೇಳಿದರು.

ಶನಿವಾರ ತಾಲೂಕು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಸಮಾಜದಲ್ಲಿ ಮಹಿಳೆಯರಿಗೆ ಮೊದಲು ಜೀವರಕ್ಷಣೆ ಗ್ಯಾರಂಟಿ ನೀಡುವುದು ಅವಶ್ಯವಿದೆ. ನೇಹಾ ಹಿರೇಮಠ ಹತ್ಯೆ ಮಾಡಿದವನಿಗೆ ಕಠಿಣ ಶಿಕ್ಷೆ ನೀಡುವ ಬದಲಾಗಿ ಕಾಂಗ್ರೆಸ್ ಅಪರಾಧಿಗೆ ರಕ್ಷಣೆ ನೀಡಿದೆ. ಮಹಿಳೆಯರಿಗೆ ಜೀವ ರಕ್ಷಣೆ ಇಲ್ಲ. ಹಿಂದು ಮುಸ್ಲಿಮರ ನಡುವೆ ಭೇದ ಹುಟ್ಟಿಸಿ ರಾಜಕಾರಣ ಮಾಡುತ್ತಿದ್ದಾರೆ. ತಮ್ಮ ಓಲೈಕೆ ರಾಜಕಾರಣದಿಂದ ಕಾಂಗ್ರೆಸ್ ಜನರನ್ನು ಮರಳು ಮಾಡುತ್ತಿದ್ದಾರೆ. ಮೋದಿಯವರು ಬಂದ ನಂತರ ದೇಶ ಸುಧಾರಣೆ ಆಗಿದೆ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ಮತದಾರನಿಗೂ ಹಕ್ಕು ಇದೆ. ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ. ಮೋದಿಯವರಿಂದ ಇಡೀ ಜಗತ್ತಿನಲ್ಲಿಯೇ ಗೌರವ ದೊರೆತಿದೆ. ಬಿಜೆಪಿ ಕಾರ್ಯಕರ್ತರು ಆಮಿಷಕ್ಕೆ ಬಲಿಯಾಗುವುದಿಲ್ಲ. ಬಿಜೆಪಿಯನ್ನು ಕಿತ್ತೆಸೆಯುವುದು ಬೊಂಬೆಯಾಟವಲ್ಲ ಅಂತಾ ಆಕ್ರೋಶ ಹೊರಹಾಕಿದ್ರು.

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬಂದರೆ ಹತ್ತು ಸಾವಿರ ಪ್ರತಿ ತಿಂಗಳು ನೀಡುತ್ತೇವೆ ಎಂದು ಹೇಳಿತ್ತಿರಿ, ಎಲ್ಲಿಂದ ತಂದು ಹಣ ಕೊಡುತ್ತಿರಾ ಎಂದು ಪ್ರಶ್ನಿಸಿದ ಅವರು ನಿಮ್ಮ ಕಾಂಗ್ರೆಸ್ ಪಕ್ಷ ಸ್ಪರ್ಧೆ ಮಾಡಿರುವುದು 230 ಕ್ಷೇತ್ರದಲ್ಲಿ ಮಾತ್ರ. ಇನ್ನೂ ಅಧಿಕಾರಕ್ಕೆ ಬರಬೇಕು ಅಂದರೆ ಬಹುಮತಕ್ಕೆ 272 ಸ್ಥಾನಗಳು ಬೇಕು. ಜನರಿಗೆ ಸುಳ್ಳು ಹೇಳಿ ದಾರಿ ತಪ್ಪಿಸುವ ಕೆಲಸವನ್ನು ಯಾಕೆ ಮಾಡುತ್ತಿರಾ..? ಮೋದಿಯವರು ಮಾಡಿರುವ ಅಭಿವೃದ್ಧಿ ದೊಡ್ಡ ಪ್ರಮಾಣದಲ್ಲಿದೆ.

ಬಿಜೆಪಿಯ ಅಭ್ಯರ್ಥಿ ಕಾಗೇರಿಯವರು ಪ್ರತಿಯೊಂದು ಹಳ್ಳಿ ಮೂಲೆ ಮೂಲೆಗಳಿಗೂ ತೆರಳಿ ಪ್ರಚಾರ ಕಾರ್ಯವನ್ನು ನಡೆಸಿದ್ದಾರೆ. ಅವರಿಗೆ ಉತ್ತಮವಾದ ಬೆಂಬಲ ವ್ಯಕ್ತವಾಗುತ್ತಿದೆ. ಈ ಕ್ಷೇತ್ರದ ಜನತೆಯೂ ಕಾಗೇರಿಯವರಿಗೆ ಮತ ನೀಡಿ ಅವರನ್ನು ಗೇಲ್ಲಿಸಬೇಕು ಎಂದು ವಿನಂತಿಸಿದರು.

ಆರಂಭದಲ್ಲಿ ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೊಣೆಮನೆ ಮಾತನಾಡಿ, ಲೋಕಸಭಾ ಚುನಾವಣೆಗೆ ಸಂಪೂರ್ಣ ಸಿದ್ಡತೆ ಮಾಡಿಕೊಳ್ಳಲಾಗಿದೆ. ಕ್ಷೇತ್ರದ ಎಲ್ಲ ಭಾಗಗಳಲ್ಲಿ ವೈಯಕ್ತಿಕವಾಗಿ ಕಾರ್ಯಕರ್ತರನ್ನು ಭೇಟಿ ಮಾಡಲಾಗುತ್ತಿದೆ. ಕೊನೆಯ ದಿನವಾದ ರವಿವಾರ ಇಂದೂರಿನಲ್ಲಿ ಸಂಜೆ ನಾಲ್ಕು ಗಂಟೆಗೆ ಅಶೋಕ ಚಲವಾದಿ ನೇತ್ರತ್ವದಲ್ಲಿ ಪಾದಯಾತ್ರೆ ಹಾಗೂ ಬೈಕ್ ರ‍್ಯಾಲಿ ನಡೆಯಲಿವೆ, ಚಿಗಳ್ಳಿ ಭಾಗದಲ್ಲಿ ಮುಖಂಡ ಎಲ್.ಟಿ.ಪಾಟೀಲ ನೇತ್ರತ್ವದಲ್ಲಿ ಸಂಜೆ 5ಕ್ಕೆ ಪಾದಯಾತ್ರೆ ಹಾಗೂ ಬೈಕ್ ರ‍್ಯಾಲಿ, ನಾಲ್ಕು ಗಂಟೆಗೆ ಮುಂಡಗೋಡ ಪಟ್ಟಣದಲ್ಲಿ ಸಂಕನೂರ ಅವರ ನೇತ್ರತ್ವದಲ್ಲಿ ಪಾದಯಾತ್ರೆ ಹಾಗೂ ಬೈಕ್ ರ‍್ಯಾಲಿ ನಡೆಯಲಿದೆ, ಇಂದು ಸಂಜೆ 5 ಕ್ಕೆ ಪಾಳಾ ಭಾಗದಲ್ಲಿ ಮಾಜಿ ಶಾಸಕಿ ರೂಪಾಲಿ ನಾಯ್ಕ ನೇತ್ರತ್ವದಲ್ಲಿ ಪಾದಯಾತ್ರೆ ಹಾಗೂ ಬೈಕ್ ರ‍್ಯಾಲಿ ನಡೆಯಲಿದೆ. ಬಿಜೆಪಿ ಅಭ್ಯರ್ಥಿ ಕಾಗೇರಿಯವರು ಪಕ್ಷದ ಸಂಘಟನೆಯನ್ನು ಮಾಡುವುದರ ಮೂಲಕ ಜಿಲ್ಲೆಯ ಜನರ ಮನಸ್ಸು ಗೆದ್ದಿದ್ದು ಜೊತೆಗೆ ಇತ್ತೀಚೆಗೆ ಪ್ರಧಾನಿ ಮೋದಿಯವರು ಶಿರಸಿ ಬಂದಾಗ ಜನ ಸಮೂಹವೆ ಹರಿದುಬಂದಿತ್ತು. ಬಿಜೆಪಿಯ ಶಕ್ತಿ ಪ್ರದರ್ಶನ ಶಿರಸಿಯಲ್ಲಿ ನಡೆದಿದೆ. ನಮ್ಮ ಬಿಜೆಪಿ ಅಭ್ಯರ್ಥಿಯ ಗೇಲವು ಖಚಿತ ಎಂದರು.

ಬಿಜೆಪಿ ಮುಖಂಡ ಎಲ್.ಟಿ.ಪಾಟೀಲ, ಮಾತನಾಡಿ ಯಲ್ಲಾಪುರ ಕ್ಷೇತ್ರದ ಗೊಂದಲ ಬಗ್ಗೆ ಎಲ್ಲಿರಿಗೂ ತಿಳಿದಿದೆ. ಇತ್ತೀಚೆಗೆ ವಲಸಿಗರು ಶೇ 80ರಷ್ಟು ಬಿಜೆಪಿಯವರನ್ನು ಕರೆದುಕೊಂಡು ಬಂದಿದ್ದೇವೆ ಎಂದು ತಪ್ಪು ಹೇಳಿಕೆ ನೀಡುತ್ತಾ ಹೋಗುತ್ತಿದ್ದಾರೆ. ಇದು ಸುಳ್ಳು. ವಲಸಿಗರ ಜೊತೆ ಬೆರಳೆಣಿಕೆಯಷ್ಟು ಮುಖಂಡರು ಹೋಗಿದ್ದಾರೆ ಹೊರತು ಮತದಾರರು ಹೋಗಿಲ್ಲ. ಕ್ಷೇತ್ರದಲ್ಲಿ ಉತ್ತಮ ವಾತಾವರಣವಿದೆ. ಈ ಬಾರಿಯೂ ಗೆಲವು ಸಾಧಿಸುತ್ತೇವೆ ಎಂದರು.

ಈ ವೇಳೆ ಮುಖಂಡರಾದ ಅಶೋಕ ಚಲವಾದಿ, ಜಿ.ಎನ್.ಗಾಂವ್ಕರ, ಮಂಜುನಾಥ ಪಾಟೀಲ, ವಿಠ್ಠಲ ಬಾಳಂಬೀಡ, ಭರತ್ ಹದಳಗಿ, ಗುರುರಾಜ್ ಕಾಮತ್, ವೀಣಾ ಓಶಿಮಠ, ಸೌಮ್ಯ ಜಿ.ಕೆ, ನವೀನ ಇಂಗಳೆ, ಬಸವರಾಜ ತನಿಖೆದಾರ, ಮಂಜುನಾಥ ಶೇಟ್ ಸೇರಿದಂತೆ ಇತರರಿದ್ದರು.

error: Content is protected !!