ಕಾರವಾರ: ಪ್ರಸ್ತುತ ಬೇಸಿಗೆಗಾಲವಾದ್ದರಿಂದ ಜಿಲ್ಲೆಯ ಕೆಲ ಭಾಗಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ನೀರಿನ ಅಭಾವ ಉಂಟಾಗುವ ಸಾಧ್ಯತೆ ಇದ್ದು, ಜಿಲ್ಲೆಯ ಜನರಿಗೆ ಕುಡಿಯುವ ನೀರಿನ ಅಭಾವ ಉಂಟಾಗದoತೆ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕಾಂದೂ ಸೂಚನೆ ನೀಡಿದರು. ಅವರು ಗುರುವಾರ ಜಿಲ್ಲಾ ಪಂಚಾಯತ್ ನಲ್ಲಿ ನಡೆದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ಎಲ್ಲಾ ಅಂಗನವಾಡಿ, ಶಾಲೆ ಹಾಗೂ ವಸತಿ ನಿಲಯಗಳಿಗೆ ಶುದ್ದ ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗುವುದನ್ನು ಖಾತರಿಪಡಿಸಿಕೊಂಡು ವರದಿ ನೀಡುವಂತೆ ಸಂಬoಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ ಅವರು, ನೀರಿನ ಅಭಾವ ಇರುವ ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ ಟ್ಯಾಂಕರ್ ಮೂಲಕ ನೀರು ಒದಗಿಸಲಾಗುತ್ತಿದ್ದು, ಗ್ರಾಮ ಪಂಚಾಯತ್ ಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸುವ ಮುನ್ನ ಪಿಡಿಓ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳು ಸಮನ್ವಯ ಸಾಧಿಸಿ ಮಾಹಿತಿಯನ್ನು ಪಡೆದು ವರದಿ ಸಲ್ಲಿಸಬೇಕು. ಈ ವರದಿ...
Top Stories
ಮುಂಡಗೋಡ ತಾಲೂಕಿನ 79 ಶಾಲೆಗಳ ಸ್ಥಿತಿ ಚಿಂತಾಜನಕ, ಮಕ್ಕಳನ್ನು ಶಾಲೆಗೆ ಕಳಿಸೋಕೆ ಪಾಲಕರಿಗೆ ಭಾರೀ ಆತಂಕ..!
ಮೈನಳ್ಳಿಯಲ್ಲಿ ಸಿಡಿಲಾಘಾತ, ಐವರಿಗೆ ಸಿಡಿಲು ಬಡಿದು ಗಾಯ, ಆಸ್ಪತ್ರೆಗೆ ದಾಖಲು..!
ನಂದಿಪುರದಲ್ಲಿ ಸಿಡಿಲಿನಾರ್ಭಟ, ಮನೆಯ ವಿದ್ಯುತ್ ವೈಯರ್ ಗಳೇ ಭಸ್ಮ, ಟಿವಿ, ಪ್ರಿಡ್ಜು ಹರೋಹರ..! ಮನೆ ಮಂದಿಗೂ ಗಾಯ..!
ಪ್ರವಾಸಕ್ಕೆಂದು ಬಂದಿದ್ದ ಇಬ್ಬರು ವಿದ್ಯಾರ್ಥಿನಿಯರು ಸಮುದ್ರ ಪಾಲು, ಮತ್ತಿಬ್ಬರು ಬಚಾವ್..!
ಮುಂಡಗೋಡ ಪೊಲೀಸರ ಗಟ್ಟಿ ಕಾರ್ಯಾಚರಣೆ, ಗೋಹತ್ಯೆ ಕೇಸಿನಲ್ಲಿ ಓರ್ವ ಆರೋಪಿ ಅರೆಸ್ಟ್, ಮತ್ತೋರ್ವ ಪರಾರಿ..!
ಮುಂಡಗೋಡ ಕರಗಿನಕೊಪ್ಪ ಬಳಿ ಬೈಕ್ ಅಪಘಾತ, ಮೂಡಸಾಲಿಯ ವ್ಯಕ್ತಿಗೆ ಗಂಭೀರ ಗಾಯ..!
ಮುಂಡಗೋಡಿನಲ್ಲಿ ಗೋಹತ್ಯೆಗೆ ಖಂಡನೆ, ಹಿಂದು ಕಾರ್ಯಕರ್ತರ ಆಕ್ರೋಶ, ರಸ್ತೆ ತಡೆದು ಪ್ರತಿಭಟನೆ..!
ಮುಂಡಗೋಡಿನಲ್ಲೂ ಮಾಂಸಕ್ಕಾಗಿ ಆಕಳ ಹತ್ಯೆ..! ಪೊಲೀಸರ ದಾಳಿ..! ಸಿಕ್ಕಿದ್ದೇನು..?
ಕಾರವಾರ ನಗರಸಭೆ ಸದಸ್ಯನ ಭೀಕರ ಹತ್ಯೆ ಕೇಸ್, ಇಬ್ಬರು PSI ಸೇರಿ ನಾಲ್ವರು ಪೊಲೀಸರು ಸಸ್ಪೆಂಡ್..? ಕಾರಣ..?
ಭಾರೀ ಮಳೆ ಗಾಳಿಗೆ ಇಂದೂರು ಕೊಪ್ಪ ಗ್ರಾಮದಲ್ಲಿ, ಮನೆಯ ಮೇಲ್ಚಾವಣಿ ಹಾನಿ, ಗೋವಿನಜೋಳ ರಾಶಿ ನೀರಲ್ಲಿ
ಮುಂಡಗೋಡ ಪೊಲೀಸರ ಮಿಂಚಿನ ದಾಳಿ, ಪಾಳಾದ ರಾಮಾಪುರ ಕ್ರಾಸ್ ಬಳಿ ಗಾಂಜಾ “ದಂಧೆ” ಗಿಳಿದಿದ್ದ ಓರ್ವ ಅಂದರ್..!
ಚಿಗಳ್ಳಿ ಹಿರಿಕೆರೆಯಲ್ಲಿ ಮೀನುಗಳ ದಾರುಣ ಸಾವು, ಇಡೀ ಕೆರೆಗೇ ವಿಷ ಹಾಕಿದ್ರಾ ದುರುಳರು..?
ಶಿವರಾಮ್ ಹೆಬ್ಬಾರ್ ಅಧ್ಯಕ್ಷತೆಯಲ್ಲಿ, ಮುಂಡಗೋಡ ತಾಲೂಕಾ ತ್ರೈಮಾಸಿಕ ಕೆಡಿಪಿ ಸಭೆ..!
ಇದು 108 ಅಂಬುಲೆನ್ಸ್ ಸಿಬ್ಬಂದಿಯ ಪ್ರಮಾಣಿಕ, ಮಾನವೀಯ ಕಾರ್ಯ.. 6 ತಿಂಗಳ ನಂತ್ರ ವ್ಯಕ್ತಿಯ ವಸ್ತುಗಳು ಮರಳಿದ್ದೇ ರೋಚಕ..?
ನಿವೃತ್ತ IPS ಅಧಿಕಾರಿ DG-IGP ಓಂ ಪ್ರಕಾಶ್ ಬರ್ಬರ ಹತ್ಯೆ..! ಪತ್ನಿಯೇ ಕೊಲೆ ಮಾಡಿರೋ ಶಂಕೆ..!
ಬೆಳ್ಳಂ ಬೆಳಿಗ್ಗೆ ಬೆಚ್ಚಿ ಬಿದ್ದ ಕಾರವಾರ, ನಗರಸಭೆಯ ಮಾಜಿ ಸದಸ್ಯನ ಭೀಕರ ಹತ್ಯೆ, ಸತೀಶ್ ಕೊಳಂಕರ್ ನ ನಡುರಸ್ತೆಯಲ್ಲೇ ಕೊಚ್ಚಿ ಕೊಲೆ..!
ಹಾವೇರಿ BEO ಮನೆ ಮೇಲೆ ಲೋಕಾಯುಕ್ತ ದಾಳಿ, ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬ್ರಷ್ಟರು..!
CET ಪರೀಕ್ಷಾರ್ಥಿಯ ಜನಿವಾರ ಕತ್ತರಿಸಿದ ವಿಚಾರ, ಶಾಸಕ ಶಿವರಾಮ್ ಹೆಬ್ಬಾರ್ ತೀವ್ರ ಖಂಡನೆ, ತಪ್ಪಿತಸ್ತರ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹ..!!
ಹುಬ್ಬಳ್ಳಿಯ 5 ವರ್ಷದ ಬಾಲಕಿ ಮೇಲೆ ರೇಪ್, ಮರ್ಡರ್ ಕೇಸ್, ಆರೋಪಿಯ ಎನಕೌಂಟರ್..!
ಶುದ್ಧ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಎಚ್ಚರಿಕೆ ವಹಿಸಿ : ಈಶ್ವರ್ ಕಾಂದೂ
ಕಲಕೇರಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕಂಚಿನ ಪ್ರತಿಮೆ ಅನಾವರಣ..!
ಮುಂಡಗೋಡ; ತಾಲ್ಲೂಕಿನ ಕಲಕೇರಿ ಗ್ರಾಮದ ಶಿವಾಜಿ ವೃತ್ತದಲ್ಲಿ ರವಿವಾರದಂದು ಗೋದುಳಿ ಮುಹೂರ್ತದಲ್ಲಿ ಕಲಕೇರಿ ಗ್ರಾಮದ ಯುವ ಮರಾಠ ಪರಿಷತ್, ಮುಂದಾಳತ್ವದಲ್ಲಿ, ತಾಲೂಕಿನ ಮರಾಠ ಸಮಾಜದ ಮುಖಂಡರ ಹಾಗೂ ಕಲಕೇರಿ, ಹೊನ್ನಿಕೊಪ್ಪ, ಅಂದಲಗಿ. ಗ್ರಾಮದ ಎಲ್ಲ ಸಮಾಜದ ಗುರು ಹಿರಿಯರ ಉಪಸ್ಥಿತಿಯಲ್ಲಿ ಹಿಂದೂ ಸಾಮ್ರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಕಂಚಿನ ಅಶ್ವಾರೂಢ ಮೂರ್ತಿಯನ್ನು ಲೋಕಾರ್ಪಣೆ ಮಾಡಲಾಯಿತು. ಶಿವಾಜಿ ಮಹಾರಾಜರ ಮೂರ್ತಿ ಅನಾವರಣ ಕಾರ್ಯಕ್ರಮದ ನಿಮಿತ್ತ ನಡೆದ ಸಭಾ ಕಾರ್ಯಕ್ರಮವನ್ನು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ವಿ.ಎಸ್.ಪಾಟೀಲ್, ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ್ರು. ಛತ್ರಪತಿ ಶಿವಾಜಿ ಮಹಾರಾಜರು ಹಿಂದೂ ಧರ್ಮದ ಉಳುವಿಗಾಗಿ ಹೋರಾಡಿದವರು. ಅವರ ಆದರ್ಶ, ತತ್ವ ಸಿದ್ಧಾಂತಗಳನ್ನ ಹಿಂದೂ ಧರ್ಮದ ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ದುಷ್ಟ ಚಟಗಳಿಂದ ದೂರ ಇದ್ದು, ತಂದೆ ತಾಯಿಗಳಿಗೆ ಒಳ್ಳೆಯ ಮಕ್ಕಳಾಗಬೇಕು ಅವಾಗ ಮಾತ್ರ ಇಂತಹ ಮಹಾನ್ ಪುರುಷರ ಪುತ್ತಳಿ ಅನಾವರಣ ಮಾಡಿರುವುದಕ್ಕೆ ಸಾರ್ಥಕವಾಗುತ್ತದೆ ಎಂದು ಹೇಳಿದರು. ನಂತರ ಮರಾಠ ಸಮಾಜದ ಹಿರಿಯ...
ಉದ್ಯೋಗ ಖಾತರಿಯಲ್ಲಿ ಮಹಿಳಾ ಕಾರ್ಮಿಕರು ಭಾಗವಹಿಸುವಿಕೆ ಹೆಚ್ಚಿಸಲು ಸ್ತ್ರೀ ಚೇತನ ಅಭಿಯಾನ..!
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಮಹಿಳಾ ಕೂಲಿಕಾರರ ಭಾಗವಹಿಸುವಿಕೆ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಏಪ್ರಿಲ್ 1 ರಿಂದ ಜೂನ್ 30ರ ವರೆಗೆ ಸ್ತ್ರೀ ಚೇತನ ಎಂಬ ವಿಶೇಷ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿದೆ . ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಮಹಿಳಾ ಕೂಲಿಕಾರರ ಭಾಗವಹಿಸುವಿಕೆ ಪ್ರಮಾಣ ಕನಿಷ್ಠ 55 ಪ್ರತಿಶತದಷ್ಟು ಇರಬೇಕೆಂಬ ನಿಯಮವಿದೆ. ಆದರೆ ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ 2024-25ನೇ ಸಾಲಿನಲ್ಲಿ ಮಹಿಳಾ ಕೂಲಿಕಾರರ ಭಾಗವಹಿಸುವಿಕೆ ಪ್ರಮಾಣ 52.41 ಪ್ರತಿಶತವಿದೆ. ಕೆಲವು ತಾಲೂಕುಗಳಲ್ಲಿ ಈ ಪ್ರಮಾಣ ಉತ್ತಮವಾಗಿದೆ ಆದರೂ ಕೆಲ ತಾಲೂಕುಗಳಲ್ಲಿ ಕಡಿಮೆ ಇರುವುದರಿಂದ ಜಿಲ್ಲೆಯ ಒಟ್ಟಾರೆ ಫಲಿತಾಂಶದಲ್ಲಿ ನಿರೀಕ್ಚಿತ ಮಟ್ಟದ ಗುರಿ ಸಾಧನೆ ಸಾಧ್ಯವಾಗಿರುವುದಿಲ್ಲ. 2025-26ನೇ ಸಾಲಿನಲ್ಲಿ ಮಹಿಳಾ ಭಾಗವಹಿಸುವಿಕೆ ಪ್ರಮಾಣ ವೃದ್ಧಿಸಲು ವರ್ಷಾರಂಭದಲ್ಲಿಯೇ ಅಭಿಯಾನ ರೂಪಿಸಲಾಗಿದೆ. 50 % ಕ್ಕಿಂತ ಕಡಿಮೆ ಮಹಿಳಾ ಭಾಗವಹಿಸುವಿಕೆ ಪ್ರಮಾಣ ಹೊಂದಿರುವ ತಾಲೂಕುಗಳು ಕನಿಷ್ಠ 10% ಹಾಗೂ 50% ಕ್ಕಿಂತ ಹೆಚ್ಚು ಮಹಿಳಾ ಭಾಗವಹಿಸುವಿಕೆ ಪ್ರಮಾಣ...
ಯತ್ನಾಳ ಉಚ್ಚಾಟನೆಯ ಪರಿಣಾಮ ಎರಡ್ಮೂರು ದಿನದಲ್ಲಿ ಗೊತ್ತಾಗತ್ತೆ: ಶಿವರಾಮ್ ಹೆಬ್ಬಾರ್
ಮುಂಡಗೋಡ; ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಉಚ್ಚಾಟನೆ ಯಾಕಾಗಿದೆ ಗೊತ್ತಿಲ್ಲ. ಆದರೆ ಇದರ ಪರಿಣಾಮ ಮಾತ್ರ ಇನ್ನು ಎರಡು ಮೂರು ದಿನದಲ್ಲಿ ಗೊತ್ತಾಗಲಿದೆ ಎಂದು ಶಾಸಕ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ. ತಾಲೂಕಿನ ಬಾಚಣಕಿ ಗ್ರಾಮದಲ್ಲಿ ಮನುವಿಕಾಸ ಸಂಸ್ಥೆಯ ವತಿಯಿಂದ ಕೆರೆಯ ಹೂಳೆತ್ತುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿ. ಬಳಿಕ ಸುದ್ದಿಗಾರರ ಪ್ರಶ್ನೆಗೆ ಅವ್ರು ಪ್ರತಿಕ್ರಿಯಿಸಿದರು. ಬಸವನಗೌಡ ಪಾಟೀಲ್ ಉಚ್ಚಾಟನೆ ಅದು ಪಕ್ಷದ ನಿರ್ಣಯ. ನಾನು ಈ ಬಗ್ಗೆ ಪ್ರತಿಕ್ರಿಯೆ ನೀಡಲ್ಲ ಎಂದರು. ಇನ್ನು ಬಿಜೆಪಿ ನಮ್ಮನ್ನು ಉಚ್ಚಾಟಿಸಲ್ಲ. ಪಕ್ಷ ಏನೇ ನಿರ್ಧರಿಸಿದರೂ ನಾನು ಸ್ವಾಗತಿಸುವೆ. ಶಾಸಕ ಸೋಮಶೇಖರ ಅವರು ಪಕ್ಷವನ್ನು ನಿಜಕ್ಕೂ ಮುಜಗರಕ್ಕೀಡುಮಾಡಿರುವವರ ವಿರುದ್ಧ ಕ್ರಮವಾಗದ ಬಗ್ಗೆ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿ ನೂರಕ್ಕೆ ನೂರಾ ಒಂದರಷ್ಟು ನಿಜ ಎಂದರು. ‘ವಿಧಾನಸಭೆ ಕಲಾಪದಲ್ಲಿ ಬಿಜೆಪಿಯ 18 ಶಾಸಕರ ಅಮಾನತು ಆಯಿತು. ಶಾಸಕರಾದ ಸುನೀಲಕುಮಾರ, ಆರ್.ಅಶೋಕ ಅವರಿಗೆ ಏನೂ ಆಗಲಿಲ್ಲ. ಪಾಪದ ಶಾಸಕರು ಮಾತ್ರ ಅಮಾನತುಗೊಂಡರು. ದೊಡ್ಡ ನಾಯಕರಿಗೆ ಏನೂ...
ಮುಂಡಗೋಡ ತಾಲೂಕಿನ ಹಲವು ಕಾರ್ಯಕ್ರಮಗಳಲ್ಲಿ ಶಾಸಕ ಶಿವರಾಮ್ ಹೆಬ್ಬಾರ ಭಾಗಿ..!
ಮುಂಡಗೋಡ: ಶಾಸಕ ಶಿವರಾಮ ಹೆಬ್ಬಾರ್ ಇಂದು ಮುಂಡಗೋಡ ತಾಲೂಕಿನ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ರು. ಬಾಚಣಕಿ ಗ್ರಾಮದಲ್ಲಿ ಮನುವಿಕಾಸ ಸಂಸ್ಥೆಯ ವತಿಯಿಂದ ಕೆರೆಯ ಹೂಳೆತ್ತುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಪೂಜೆ ಸಲ್ಲಿಸುವ ಮೂಲಕ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ನಂತರ ಶಾಸಕರು ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಬ್ಲಾಕ್ ಪಬ್ಲಿಕ್ ಹೆಲ್ತ್ ಯುನಿಟ್ ಕಟ್ಟಡ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಬ್ಲಾಕ್ ಪಬ್ಲಿಕ್ ಹೆಲ್ತ್ ಯುನಿಟ್ ನಿರ್ಮಾಣ ಕಾಮಗಾರಿ ಭೂಮಿ ಪೂಜೆಯನ್ನು ಸಲ್ಲಿಸಿ ಚಾಲನೆ ನೀಡಿದ ಶಾಸಕರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಮಳಗಿ ಬಳಿ KSRTC ಬಸ್ ಮೇಲೆ ಉರುಳಿ ಬಿದ್ದ ಮರ, ರಸ್ತೆ ಸಂಚಾರ ಅಸ್ತವ್ಯಸ್ತ, ತಪ್ಪಿದ ಭಾರೀ ಅನಾಹುತ..!
ಮುಂಡಗೋಡ ತಾಲೂಕಿನ ಮಳಗಿ ಬಳಿ ಚಲಿಸುತ್ತಿದ್ದ KSRTC ಬಸ್ ಮೇಲೆ ಮರ ಬಿದ್ದಿದೆ. ಪರಿಣಾಮ್ ಬಸ್ ಜಖಂ ಗೊಂಡಿದ್ದು, ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ, ಹುಬ್ಬಳ್ಳಿ ಶಿರಸಿ ರಸ್ತೆ ಸಂಚಾರ ಸ್ಥಗಿತವಾಗಿತ್ತು. ಮಳಗಿ ಭಾಗದಲ್ಲಿ ಸಂಜೆಯಿಂದ ಭಾರಿ ಪ್ರಮಾಣದ ಗಾಳಿ ಬೀಸಿದೆ. ಮಳೆಗಾಳಿಯ ಪರಿಣಾಮ ರಸ್ತೆ ಬದಿಯ ಮರ ಉರುಳಿ ಬಿದ್ದಿದೆ. ಅದೇ ವೇಳೆ ರಸ್ತೆ ಮೇಲೆ ಸಂಚರಿಸುತ್ತಿದ್ದ KSRTC ಬಸ್ ಮೇಲೆ ಮರ ಬಿದ್ದಿದೆ. ಅದೃಷ್ಟವಶಾತ್ ಪದರಯಾಣಿಕರಿಗೆ ಯಾವುದೇ ಪ್ತಾಣಾಪಾಯವಾಗಿಲ್ಲ. ನಂತರ ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ರಸ್ತೆ ಮೇಲಿನ ಮರ ತೆರವು ಮಾಡಿದ್ದಾರೆ. ಸುಗಮ ಸಂಚಾರಕ್ಕೆ ಅನುವು ಮಾಡಿದ್ದಾರೆ.
ಜಿಲ್ಲೆಯಲ್ಲಿ ಗೃಹ ಸಚಿವ: ಗೋವಾ ಗಡಿಯಲ್ಲಿ ಎಚ್ಚರಿಕೆ ವಹಿಸಿ: ಡಾ.ಜಿ. ಪರಮೇಶ್ವರ್
ಕಾರವಾರ: ಜಿಲ್ಲೆಯ ಗೋವಾ ಗಡಿ ಪ್ರದೇಶದ ಮೂಲಕ ರಾಜ್ಯಕ್ಕೆ ಮಾದಕ ವಸ್ತುಗಳ ಸಾಗಾಟ ನಡೆಯುವ ಬಗ್ಗೆ ಮತ್ತು ಅನಧಿಕೃತವಾಗಿ ಮದ್ಯ ಸಾಗಾಟವಾಗುವ ಬಗ್ಗೆ ಪರಿಶೀಲಿಸಿ, ಅತ್ಯಂತ ಕಟ್ಟಿನಿಟ್ಟಿನ ಪರಿಶೀಲನಾ ಕ್ರಮಗಳನ್ನು ಕೈಗೊಳ್ಳುವಂತೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸೂಚನೆ ನೀಡಿದರು. ಅವರು ಬುಧವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ನಡೆದ ಪೊಲೀಸ್ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಸಿ ಮಾತನಾಡಿದರು. ರಾಜ್ಯ ಸರ್ಕಾರವು ರಾಜ್ಯದಲ್ಲಿ ಮಾದಕ ವಸ್ತುಗಳ ನಿರ್ಮೂಲನೆ ಕುರಿತು ಯುದ್ದ ಸಾರಿದ್ದು, ಗಡಿಯ ಮೂಲಕ ರಾಜ್ಯದೊಳಗೆ ಮಾದಕ ವಸ್ತುಗಳ ಸರಬರಾಜು ನಡೆಯದಂತೆ ಪೊಲೀಸ್ ಇಲಾಖೆ ಹೆಚ್ಚು ಜಾಗೃತವಾಗಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು. ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ಪೊಲೀಸ್ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ನಿರಂತರವಾಗಿ ಭೇಟಿ ಮಾಡಿ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳು ಪತ್ತೆಯಾದಲ್ಲಿ ಸಂಬoದಪಟ್ಟ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳ ವಿರುದ್ದ ಕಠಿಣ...
ಯತ್ನಾಳ್ ಉಚ್ಚಾಟನೆ, ಇದು ಅನಿವಾರ್ಯವಾಗಿ ತೆಗೆದು ಕೊಂಡಿರೋ ಕ್ರಮ, ವಿಜಯೇಂದ್ರ ಸ್ಪಷ್ಟನೆ..!
ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಬಿಜೆಪಿ ಶಿಸ್ತು ಸಮಿತಿ 6 ವರ್ಷಗಳ ಕಾಲ ಉಚ್ಚಾಟನೆ ಮಾಡುತ್ತಿದ್ದಂತೆ ಬಿಜೆಪಿ ರಾಜ್ಯ ಅಧ್ಯಕ್ಷ ಬಿ ವೈ ವಿಜಯೇಂದ್ರ ಸ್ಪಷ್ಟನೆ ಕೊಟ್ಟಿದ್ದಾರೆ. ನನ್ನ ಮೇಲೆ ನನ್ನ ಪೂಜ್ಯ ತಂದೆಯ ಮೇಲೆ ಮಾತಾಡಿದರು ಸಹ ನಾನು ಕೇಂದ್ರದ ವರಿಷ್ಟರಿಗೆ ಬಸನಗೌಡ ಪಾಟೀಲ ಯತ್ನಾಳರ ಮೇಲೆ ದೂರು ಕೊಟ್ಟಿಲ್ಲ ಎಂದು ಹೇಳಿದ್ದಾರೆ. ವಿಜಯೇಂದ್ರ ಹೇಳಿದ್ದಿಷ್ಟು..! ಭಾರತೀಯ ಜನತಾ ಪಾರ್ಟಿ, ಕಾರ್ಯಕರ್ತರನ್ನು ಹೊಂದುವ ಮೂಲಕ ವಿಶ್ವದಲ್ಲಿ ಅಗ್ರಮಾನ್ಯತೆಯನ್ನು ಪಡೆದಿರುವ ರಾಜಕೀಯ ಪಕ್ಷ, ಸಂಘ ಸಂಸ್ಕಾರ ಪಡೆದಿರುವ ಸಮರ್ಪಣಾ ಮನೋಭಾವದ ಕಾರ್ಯಕರ್ತರ ಬೆವರ ಪರಿಶ್ರಮದಿಂದ ಸಮೃದ್ಧ ವೃಕ್ಷದಂತೆ ಬೆಳೆದ ಪಕ್ಷದಲ್ಲಿ ಶಿಸ್ತು-ತ್ಯಾಗಕ್ಕೆ ಮೊದಲ ಆದ್ಯತೆ. ಪಕ್ಷದ ಹಿರಿಯರು ಹಾಗೂ ವರಿಷ್ಠರು ಈ ವಿಷಯದಲ್ಲಿ @BasanagoudaBJPರವರ ವಿರುದ್ದದ ಶಿಸ್ತುಕ್ರಮ ವರಿಷ್ಠರು ಸುದೀರ್ಘ ಅವಧಿಯಿಂದ ಸ್ಥಿತಿ-ಗತಿಗಳನ್ನು ಅವಲೋಕಿಸಿ ಅನಿವಾರ್ಯವಾಗಿ ತೆಗೆದುಕೊಂಡಿರುವ ಕ್ರಮವಾಗಿರುತ್ತದೆ. ಪಕ್ಷದ ಬೆಳವಣಿಗೆಯಲ್ಲಿನ ಕಹಿ ಘಟನೆಗಳನ್ನು ಉಲ್ಲೇಖಿಸಿ ಪಕ್ಷದ ವರಿಷ್ಠರಿಗೆ ನಾನು ಎಂದೂ ದೂರುಗಳನ್ನು ಹೇಳಿಕೊಂಡಿಲ್ಲ, ದಾಖಲಿಸಿಯೂ ಇಲ್ಲ. ಪೂಜ್ಯ...
ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿಯಿಂದ ಉಚ್ಚಾಟನೆ..! ಕೊನೆಗೂ ಶಾಕ್ ಕೊಟ್ಟ ಹೈಕಮಾಂಡ್..!
ಬಿಜೆಪಿಯ ಫೈರ್ ಬ್ರಾಂಡ್ ಎಂದೇ ಹೆಸರಾಗಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳರಿಗೆ ಬಿಜೆಪಿ ಹೈಕಮಾಂಡ ಶಾಕ್ ಕೊಟ್ಟಿದೆ. ಬಸನಗೌಡ ಪಾಟೀಲ ಯತ್ನಾಳರಿಗೆ ಬಿಜೆಪಿಯಿಂದ ಉಚ್ಚಾಟನೆ ಮಾಡಲಾಗಿದೆ. 6 ವರ್ಷಗಳ ಕಾಲ ಬಿಜೆಪಿಯಿಂದ ಉಚ್ಚಾಟನೆ ಮಾಡಲಾಗಿದೆ. ಸ್ವಪಕ್ಷಿಯರ ವಿರುದ್ಧ ಬಹಿರಂಗ ಸಮರ ಸಾರಿದ್ದ ಯತ್ನಾಳರು, ಬಿಜೆಪಿ ರಾಜ್ಯ ಅಧ್ಯಕ್ಷ ಬಿ ವೈ ವಿಜಯೇಂದ್ರ ಬದಲಾವಣೆಗೆ ಧ್ವನಿ ಎತ್ತಿದ್ದರು.
ಮುಂಡಗೋಡಲ್ಲಿ SSLC ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ ನೇಣಿಗೆ ಶರಣು..! ಫೇಲ್ ಆಗೋ ಆತಂಕದಲ್ಲಿ ಸಾವಿಗೆ ಕೊರಳೊಡ್ಡಿದ ಬಾಲಕ..!
ಮುಂಡಗೋಡಿನಲ್ಲಿ SSLC ಪರೀಕ್ಣೆ ಬರೆದಿದ್ದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ತನ್ನ ಕೋಣೆಯಲ್ಲೇ ವೇಲ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅರಹನ್ ಬಾಹುಬಲಿ ಚಿವಟೆ(16), ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಯಾಗಿದ್ದಾನೆ. ಈತ ಮುಂಡಗೋಡಿನ ಖಾಸಗಿ ಸಂಸ್ಥೆಯಲ್ಲಿ CBSE ವ್ಯಾಸಂಗ್ ಮಾಡುತ್ತಿದ್ದ. ಕಳೆದ ವಾರವಷ್ಟೇ SSLC ಪರೀಕ್ಷೆ ಬರೆದಿದ್ದ. ಆದ್ರೆ, ಪರೀಕ್ಣೆಯಲ್ಲಿ ಉತ್ತೀರ್ಣ ಆಗಲ್ಲವೇನೋ ಎಂಬ ಭಯದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಅಂತಾ ಅನುಮಾನಿಸಲಾಗಿದೆ. ಇಂದು ಬೆಳಗಿನ 8 ಗಂಟೆಯ ವೇಳೆ, ಮನೆಯ ಕೋಣೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಕ್ಷಣವೇ ತಂದೆ ತಾಯಿ ನೋಡಿ, ಕೆಳಗಿಳಿಸಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆದ್ರೆ, ಅಷ್ಟೊತ್ತಿಗಾಗಲೇ ವಿದ್ಯಾರ್ಥಿಯ ಅರಹನ್ ನ ಪ್ರಾಣಪಕ್ಷಿ ಹಾರಿಹೋಗಿತ್ತು ಎನ್ನಲಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.