ಮುಂಡಗೋಡ: ತಾಲೂಕಿನ ಇಂದೂರು ಗ್ರಾಮದಲ್ಲಿ ನಿನ್ನೆ ತಡರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ ತಗುಲಿ ಮನೆ ಸುಟ್ಟ ಕರಕಲಾದ ಘಟನೆ ನಡೆದಿದ್ದು, ಸಧ್ಯ ಇಡೀ ಕುಟುಂಬವೇ ಸಂಕಷ್ಟದಲ್ಲಿದೆ. ಬೆಂಕಿಯ ಕೆನ್ನಾಲಿಗೆಗೆ ಮನೆಯಲ್ಲಿದ್ದ ದವಸ ಧಾನ್ಯಗಳೂ ಸುಟ್ಟು ಕರಕಲಾಗಿದ್ದು ಕುಟುಂಬಕ್ಕೆ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಇಂದೂರಿನ ಗಂಗಾಧರ ಬಡಿಗೇರ ಹಾಗೂ ಮಂಜುನಾಥ್ ನಡಗೇರಿ ಸಂಕಷ್ಟದಲ್ಲಿರೋ ಕುಟುಂಬಕ್ಕೆ ದಿನಸಿ ವಿತರಿಸಿದ್ದಾರೆ. ಮನೆ ಸುಟ್ಟು ಕರಕಲಾದ ಹಿನ್ನೆಲೆಯಲ್ಲಿ ನೊಂದಿರೋ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ************************************** ಬೆಂಕಿಯ ಕೆನ್ನಾಲಿಗೆಗೆ ಇಡಿ ಕುಟುಂಬವೇ ಬೀದಿಗೆ.. ಪಬ್ಲಿಕ್ ಫಸ್ಟ್ ನ್ಯೂಸ್ ಇಂದಿನ ಪ್ರಮುಖ ಸುದ್ದಿ ನೋಡಲು ಈ ಲಿಂಕ್ ಕ್ಲಿಕ್ ಮಾಡಿ..
Top Stories
ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನಲ್ಲಿ ಕೆಲಸದ ಸಮಯದಲ್ಲಿ ಬೃಹತ್ ಗಾತ್ರದ ಪ್ಯಾನಲ್ ಬಿದ್ದು ಗುತ್ತಿಗೆ ಕಾರ್ಮಿಕ ಸಾವು
ಮುಂಡಗೋಡ ತಾಲೂಕಿನ 79 ಶಾಲೆಗಳ ಸ್ಥಿತಿ ಚಿಂತಾಜನಕ, ಮಕ್ಕಳನ್ನು ಶಾಲೆಗೆ ಕಳಿಸೋಕೆ ಪಾಲಕರಿಗೆ ಭಾರೀ ಆತಂಕ..!
ಮೈನಳ್ಳಿಯಲ್ಲಿ ಸಿಡಿಲಾಘಾತ, ಐವರಿಗೆ ಸಿಡಿಲು ಬಡಿದು ಗಾಯ, ಆಸ್ಪತ್ರೆಗೆ ದಾಖಲು..!
ನಂದಿಪುರದಲ್ಲಿ ಸಿಡಿಲಿನಾರ್ಭಟ, ಮನೆಯ ವಿದ್ಯುತ್ ವೈಯರ್ ಗಳೇ ಭಸ್ಮ, ಟಿವಿ, ಪ್ರಿಡ್ಜು ಹರೋಹರ..! ಮನೆ ಮಂದಿಗೂ ಗಾಯ..!
ಪ್ರವಾಸಕ್ಕೆಂದು ಬಂದಿದ್ದ ಇಬ್ಬರು ವಿದ್ಯಾರ್ಥಿನಿಯರು ಸಮುದ್ರ ಪಾಲು, ಮತ್ತಿಬ್ಬರು ಬಚಾವ್..!
ಮುಂಡಗೋಡ ಪೊಲೀಸರ ಗಟ್ಟಿ ಕಾರ್ಯಾಚರಣೆ, ಗೋಹತ್ಯೆ ಕೇಸಿನಲ್ಲಿ ಓರ್ವ ಆರೋಪಿ ಅರೆಸ್ಟ್, ಮತ್ತೋರ್ವ ಪರಾರಿ..!
ಮುಂಡಗೋಡ ಕರಗಿನಕೊಪ್ಪ ಬಳಿ ಬೈಕ್ ಅಪಘಾತ, ಮೂಡಸಾಲಿಯ ವ್ಯಕ್ತಿಗೆ ಗಂಭೀರ ಗಾಯ..!
ಮುಂಡಗೋಡಿನಲ್ಲಿ ಗೋಹತ್ಯೆಗೆ ಖಂಡನೆ, ಹಿಂದು ಕಾರ್ಯಕರ್ತರ ಆಕ್ರೋಶ, ರಸ್ತೆ ತಡೆದು ಪ್ರತಿಭಟನೆ..!
ಮುಂಡಗೋಡಿನಲ್ಲೂ ಮಾಂಸಕ್ಕಾಗಿ ಆಕಳ ಹತ್ಯೆ..! ಪೊಲೀಸರ ದಾಳಿ..! ಸಿಕ್ಕಿದ್ದೇನು..?
ಕಾರವಾರ ನಗರಸಭೆ ಸದಸ್ಯನ ಭೀಕರ ಹತ್ಯೆ ಕೇಸ್, ಇಬ್ಬರು PSI ಸೇರಿ ನಾಲ್ವರು ಪೊಲೀಸರು ಸಸ್ಪೆಂಡ್..? ಕಾರಣ..?
ಭಾರೀ ಮಳೆ ಗಾಳಿಗೆ ಇಂದೂರು ಕೊಪ್ಪ ಗ್ರಾಮದಲ್ಲಿ, ಮನೆಯ ಮೇಲ್ಚಾವಣಿ ಹಾನಿ, ಗೋವಿನಜೋಳ ರಾಶಿ ನೀರಲ್ಲಿ
ಮುಂಡಗೋಡ ಪೊಲೀಸರ ಮಿಂಚಿನ ದಾಳಿ, ಪಾಳಾದ ರಾಮಾಪುರ ಕ್ರಾಸ್ ಬಳಿ ಗಾಂಜಾ “ದಂಧೆ” ಗಿಳಿದಿದ್ದ ಓರ್ವ ಅಂದರ್..!
ಚಿಗಳ್ಳಿ ಹಿರಿಕೆರೆಯಲ್ಲಿ ಮೀನುಗಳ ದಾರುಣ ಸಾವು, ಇಡೀ ಕೆರೆಗೇ ವಿಷ ಹಾಕಿದ್ರಾ ದುರುಳರು..?
ಶಿವರಾಮ್ ಹೆಬ್ಬಾರ್ ಅಧ್ಯಕ್ಷತೆಯಲ್ಲಿ, ಮುಂಡಗೋಡ ತಾಲೂಕಾ ತ್ರೈಮಾಸಿಕ ಕೆಡಿಪಿ ಸಭೆ..!
ಇದು 108 ಅಂಬುಲೆನ್ಸ್ ಸಿಬ್ಬಂದಿಯ ಪ್ರಮಾಣಿಕ, ಮಾನವೀಯ ಕಾರ್ಯ.. 6 ತಿಂಗಳ ನಂತ್ರ ವ್ಯಕ್ತಿಯ ವಸ್ತುಗಳು ಮರಳಿದ್ದೇ ರೋಚಕ..?
ನಿವೃತ್ತ IPS ಅಧಿಕಾರಿ DG-IGP ಓಂ ಪ್ರಕಾಶ್ ಬರ್ಬರ ಹತ್ಯೆ..! ಪತ್ನಿಯೇ ಕೊಲೆ ಮಾಡಿರೋ ಶಂಕೆ..!
ಬೆಳ್ಳಂ ಬೆಳಿಗ್ಗೆ ಬೆಚ್ಚಿ ಬಿದ್ದ ಕಾರವಾರ, ನಗರಸಭೆಯ ಮಾಜಿ ಸದಸ್ಯನ ಭೀಕರ ಹತ್ಯೆ, ಸತೀಶ್ ಕೊಳಂಕರ್ ನ ನಡುರಸ್ತೆಯಲ್ಲೇ ಕೊಚ್ಚಿ ಕೊಲೆ..!
ಹಾವೇರಿ BEO ಮನೆ ಮೇಲೆ ಲೋಕಾಯುಕ್ತ ದಾಳಿ, ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬ್ರಷ್ಟರು..!
CET ಪರೀಕ್ಷಾರ್ಥಿಯ ಜನಿವಾರ ಕತ್ತರಿಸಿದ ವಿಚಾರ, ಶಾಸಕ ಶಿವರಾಮ್ ಹೆಬ್ಬಾರ್ ತೀವ್ರ ಖಂಡನೆ, ತಪ್ಪಿತಸ್ತರ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹ..!!
ಬೆಂಕಿಯಿಂದ ಮನೆ ಸುಟ್ಟು ಸಂಕಷ್ಟದಲ್ಲಿರೋ ಇಂದೂರಿನ ಬಡ ಕುಟುಂಬಕ್ಕೆ ದಿನಸಿ ವಿತರಿಸಿದ ಸಹೃದಯಿಗಳು..!
ಪಾಲಕರೇ ನಿಮ್ಮ ಮಕ್ಕಳ ಮೇಲೆ ಇರಲಿ ಹೆಚ್ಚಿನ ಕಾಳಜಿ, ಬಂದಿದೆ ಮತ್ತೊಂದು ಮಹಾಮಾರಿ..!
ಬಾಗಲಕೋಟೆ: ಕೊರೊನಾ ಮೂರನೇ ಅಲೆ ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರುತ್ತೆ ಎನ್ನುವ ತಜ್ಞರ ವರದಿಯ ಬೆನ್ನಲ್ಲೇ, ಎರಡನೇ ಅಲೆಯೇ ಮಕ್ಕಳನ್ನ ಬಾಧಿಸುತ್ತಿದೆ. ಇದೀಗ ಗಾಯದ ಮೇಲೆ ಬರೆ ಎನ್ನುವಂತೆ ಕೋವಿಡ್’ನಿಂದ ಗುಣಮುಖರಾದ ಮಕ್ಕಳಲ್ಲಿ ಈಗ ಹೊಸದಾಗಿ ಕಾಯಿಲೆಯೊಂದು ಶುರುವಾಗಿದ್ದು ಪೊಷಕರನ್ನ ಬೆಚ್ವಿಬೀಳಿಸಿದೆ. ಬಹುಅಂಗಾಂಗ ವೈಫಲ್ಯ ಉಂಟುಮಾಡುವ ಆ ರೋಗ ಯಾವುದು? ಅಷ್ಟಕ್ಕೂ ಆ ಹೊಸ ರೋಗ ಬಾಧಿಸಿದ್ದು ಯಾವ ಜಿಲ್ಲೆಯಲ್ಲಿ..? ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್. ಯಸ್, ನಿತ್ಯ ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗುವ ನೂರಾರು ಜನ, ಸೋಂಕು ಇಳಿಮುಖ ಕಾಣ್ತಾ ಇದ್ದರೂ ನಿಲ್ಲದ ದುಗುಡ. ಇಷ್ಟು ದಿನ ದೊಡ್ಡವರನ್ನ ಕಾಡ್ತಿದ್ದ ಹೆಮ್ಮಾರಿ ಕಾಟ ಈಗ ಮಕ್ಕಳ ಮೇಲೆ ವಕ್ರ ದೃಷ್ಟಿ ಬೀರ್ತಿದೆ. ಮಕ್ಕಳ ಪೋಷಕರು ಅಕ್ಷರಶಃ ಬೆಚ್ವಿಬೀಳುವಂತಾಗಿದೆ. ಇಷ್ಟೆಲ್ಲ ಆತಂಕಕ್ಕೆ ಸಾಕ್ಷಿಯಾಗಿರೋದು ಬಾಗಲಕೋಟೆ ಜಿಲ್ಲೆ. ಹೌದು, ಕೋವಿಡ್ ನಿಂದ ಗುಣಮುಖರಾದ ಚಿಕ್ಕ ಮಕ್ಕಳಲ್ಲಿ ಈಗ MIS-C ಎನ್ನುವ ಕಾಯಿಲೆಯೊಂದು ಕಾಣಿಸಿಕೊಂಡಿದ್ದು ಪೋಷಕರನ್ನ ಆತಂಕಕ್ಕೆ ಈಡು ಮಾಡಿದೆ. ಈಗ ಬಾಗಲಕೋಟೆ...
ಹಿರಿಯ ಬಿಜೆಪಿ ಶಾಸಕ ಸಿ.ಎಂ.ಉದಾಸಿ ವಿಧಿವಶ..!
ಹಾನಗಲ್- ಹಿರಿಯ ಬಿಜೆಪಿ ಶಾಸಕ ಮಾಜಿ ಸಚಿವ ಸಿ.ಎಂ.ಉದಾಸಿ(86) ವಿಧಿವಶವಾಗಿದ್ದಾರೆ. ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಉದಾಸಿ ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಉದಾಸಿಯವರನ್ನು ಚಿಕಿತ್ಸೆಗಾಗಿ ನಾರಾಯಣ ಹೃದಯಾಲಯದಲ್ಲಿ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ. ಹಾನಗಲ್ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರ ಅಂತಲೇ ಖ್ಯಾತಿ ಪಡೆದಿದ್ದ ಸಿ.ಎಂ.ಉದಾಸಿಯ ಅಗಲಿಕೆಗೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಪಬ್ಲಿಕ್ ಫಸ್ಟ್ ನ್ಯೂಸ್ TOP 5 ನ್ಯೂಸ್ ವೀಕ್ಷಿಸಲು ಈ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ.. https://youtu.be/712rEAKhVeE
ಇಂದೂರಿನಲ್ಲಿ ಮನೆಗೆ ಆಕಸ್ಮಿಕ ಬೆಂಕಿ: ಸುಟ್ಟು ಕರಕಲಾದ ಮನೆ, ಲಕ್ಷಾಂತರ ಹಾನಿ..!
ಮುಂಡಗೋಡ: ತಾಲೂಕಿನ ಇಂದೂರು ಗ್ರಾಮದಲ್ಲಿ ಮನೆಗೆ ಆಕಸ್ಮಿಕ ಬೆಂಕಿ ತಗುಲಿ ಇಡೀ ಮನೆಯೇ ಭಸ್ಮವಾಗಿ ಲಕ್ಷಾಂತರ ರೂ. ಹಾನಿಯಾದ ಘಟನೆ ಸೋಮವಾರ ತಡರಾತ್ರಿ ನಡೆದಿದೆ. ಇಂದೂರು ಗ್ರಾಮದ ದ್ಯಾಮವ್ವ ದೇವಿ ದೇವಸ್ಥಾನದ ಹಿಂದುಗಡೆ ಇರುವ ಗೂಡುಮನಿ ಅತ್ತಾರ್ ಎಂಬುವ ಮಹಿಳೆಗೆ ಸೇರಿದ ಮನೆ ಬೆಂಕಿಗೆ ಆಹುತಿಯಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿದೆ ಎನ್ನಾಲಾಗಿದ್ದು, ಬೆಂಕಿಯ ಕೆನ್ನಾಲಿಗೆ ಕೆಲವೇ ಹೊತ್ತಲ್ಲಿ ಇಡೀ ಮನೆಗೆ ಆವರಿಸಿದೆ. ಪಬ್ಲಿಕ್ ಫಸ್ಟ್ ನ್ಯೂಸ್ TOP 5 ಪ್ರಮುಖ ಸುದ್ದಿ ನೋಡಲು ಇಲ್ಲಿ ಕ್ಲಿಕ್ ಮಾಡಿ ಹೀಗಾಗಿ ಗ್ರಾಮಸ್ಥರು ತಕ್ಷಣವೇ ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಆದ್ರೆ ಬೆಂಕಿ ತಹಬದಿಗೆ ಬರದೇ ಇದ್ದಾಗ, ಮುಂಡಗೋಡ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಮದುವೆಗಾಗಿ ತಂದಿದ್ದ ವಸ್ತುಗಳು ಕರಕಲು: ಇನ್ನು ಬೆಂಕಿಯ ಕೆನ್ನಾಲಿಗೆಗೆ ಮಗಳ ಮದುವೆಗಾಗಿ ತಂದಿದ್ದ ಬಟ್ಟೆ ಬರೆಗಳು, ಪಾತ್ರೆಗಳು ಸುಟ್ಟು ಕರಕಲಾಗಿವೆ ಎನ್ನಾಲಾಗಿದ್ದು, 25 ಸಾವಿರ...
ದೇವರಹಿಪ್ಪರಗಿ ತಾಲೂಕಿನಲ್ಲಿ ಬಿತ್ತನೆ ಬೀಜ, ಗೊಬ್ಬರದ ಕೊರತೆಯಿಲ್ಲ: ಶಾಸಕ ಸೋಮನಗೌಡ ಪಾಟೀಲ್
ದೇವರಹಿಪ್ಪರಗಿ: ತಾಲೂಕಿನಲ್ಲಿ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರಗಳ ಕೊರತೆಯಾಗದಂತೆ ಕ್ರಮ ವಹಿಸಿರುವುದಾಗಿ ಶಾಸಕ ಸೋಮನಗೌಡ ಪಾಟೀಲ್ ಸಾಸನೂರ್ ಹೇಳಿದ್ರು. ದೇವರಹಿಪ್ಪರಗಿ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ದೇವರಹಿಪ್ಪರಗಿ ತಾಲೂಕಿನಲ್ಲಿ ಈ ವರ್ಷ ಉತ್ತಮ ಮಳೆಯಾಗುತ್ತಿದ್ದು ರೈತರಿಗೆ ಬಿತ್ತನೆ ಬೀಜ ಕೊರತೆಯಾಗದಂತೆ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ. ದಾಸ್ತಾನು ಮಾಡಲು ಕೃಷಿ ಇಲಾಖೆ ಕ್ರಮ ಕೈಗೊಂಡಿದ್ದು ರೈತರು ಬಿತ್ತನೆ ಬೀಜಗಳು ದೊರಕುವ ಬಗ್ಗೆ ಆತಂಕ ಪಡುವ ಅವಶ್ಯಕತೆ ಇಲ್ಲ. ಸಮಯಕ್ಕೆ ಸರಿಯಾಗಿ ಎಲ್ಲರಿಗೂ ಬಿತ್ತನೆಬೀಜ ದೊರಕುತ್ತದೆ. ರೈತರು ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಸ್ಕ್ ಧರಿಸಿ ಬಿತ್ತನೆ ಬೀಜಗಳನ್ನು ಖರೀದಿ ಮಾಡಬೇಕು ಎಂದು ಕರೆ ನೀಡಿದ್ರು. ಇದೇ ಸಂದರ್ಭದಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಚ್. ವೈ ಸಿಂಗೆಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು.
“ನಮ್ಮ ಊರಾಗ್ ಇನ್ ಸೆರೇ ಮಾರಂಗಿಲ್ಲ” ಕಾಳಗಿನಕೊಪ್ಪ ಮಹಿಳೆಯರ ಖಡಕ್ ಎಚ್ಚರಿಕೆ..!
ಮುಂಡಗೋಡ: ತಾಲೂಕಿನ ಕಾಳಗಿನಕೊಪ್ಪದ ಮಹಿಳೆಯರು ಸಿಡಿದು ನಿಂತಿದ್ದಾರೆ. ತಮ್ಮ ಗ್ರಾಮದಲ್ಲಿ ಯುವಕರನ್ನ ದಾರಿ ತಪ್ಪಿಸ್ತಿರೋ ಸರಾಯಿ, ಗುಟ್ಕಾ, ಸಿಗರೇಟ್ ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ಮಾಡಿದ್ದಾರೆ. ಹೌದು, ಮುಂಡಗೋಡ ತಾಲೂಕಿನ ಕಾಳಗಿನ ಕೊಪ್ಪದ ಮಹಿಳೆಯರಿಗೆ ಇವತ್ತು ಆಕ್ರೋಶದ ಕಟ್ಟೆಯೊಡೆದಿದೆ. ನಿತ್ಯವೂ ಕುಡಿದು ನಶೆಯಲ್ಲಿ ತೇಲಾಡುವ, ಗುಟ್ಕಾ ತಿಂದು ಕಂಡ ಕಂಡಲ್ಲೆ ಗಲೀಜು ಮಾಡುವ, ಸಿಗರೇಟು ಸೇದುತ್ತು ಮಸ್ತಿ ಮಾಡುವ ಯುವಕರನ್ನು ಹಾಗೂ ತಮ್ಮ ಮನೆ ಯುವ ಹುಡುಗರನ್ನು ಹೇಗಾದ್ರೂ ಸರಿ ದಾರಿಗೆ ತರಲೇ ಬೇಕು ಅಂತಾ ಟೊಂಕ ಕಟ್ಟಿ ನಿಂತಿದ್ರು. ಅಂದಹಾಗೆ, ಕಾಳಗಿನಕೊಪ್ಪದ ಮಹಿಳೆಯರು ಇಂದು ಗ್ರಾಮದಲ್ಲಿನ ಕೆಲವು ಅನಧಿಕೃತವಾಗಿ ಮದ್ಯ ಮಾರಾಟ ಮಾಡುವವರಿಗೂ ತಕ್ಕ ಪಾಠ ಕಲಿಸಿದ್ದಾರೆ.ಮದ್ಯ ಮಾರಾಟ ಮಾಡುವ ಅಂಗಡಿಗಳಲ್ಲಿನ ಮದ್ಯದ ಬಾಕ್ಸ್ ಗಳನ್ನು ಹೊರಹಾಕಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇನ್ಮೇಲೆ ಗ್ರಾಮದಲ್ಲಿ ಮದ್ಯ ಮಾರಾಟ ಮಾಡಿದ್ರೆ ಹುಶಾರ್ ಅಂತಾ ಎಚ್ಚರಿಸಿದ್ದಾರೆ. ಅಂದಹಾಗೆ, ಮುಂಡಗೋಡ ತಾಲೂಕಿನಲ್ಲಿ ಅಧಿಕೃತ ಸರಾಯಿ ಅಂಗಡಿಗಳು ಎಷ್ಟಿವೆಯೋ ಗೊತ್ತಿಲ್ಲ, ಆದ್ರೆ ಅನಧೀಕೃತವಾಗಿ ತಾಲೂಕಿನ...
KDCC ಬ್ಯಾಂಕ್ ಎದುರು ಅನ್ನದಾತರ ಪರದಾಟ: ಬೆಳೆಸಾಲ ಪಡೆಯಲು ಹರಸಾಹಸ..!
ಮುಂಡಗೋಡ: ಪಟ್ಟಣದ KDCC ಬ್ಯಾಂಕ್ ಎದುರು ಅನ್ನದಾತರ ಪರದಾಟ ಇನ್ನೂ ನಿಂತಿಲ್ಲ. ತಮ್ಮ ಬೆಳೆಸಾಲದ ಹಣಕ್ಕಾಗಿ ದಿನವಿಡೀ ಬಿಸಿಲು, ಮಳೆಯಲ್ಲೇ ಕಾಯಬೇಕಾದ ದುಸ್ತಿತಿ ತಪ್ಪಿಲ್ಲ.. ಬ್ಯಾಂಕ್ ಎದುರು ಅರ್ಧ ಕಿಲೋ ಮೀಟರ್ ವರೆಗೂ ಸರತಿ ಸಾಲಲ್ಲಿ ನಿಂತು ಬಸವಳಿಯುತ್ತಿರೋ ಅನ್ನದಾತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಜವಾಬ್ದಾರಿ ಯಾರೂ ತೋರುತ್ತಿಲ್ಲ. ಈ ಸುದ್ದಿಯ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ.. ಹೌದು, ಮುಂಡಗೋಡ ತಾಲೂಕಿನ ರೈತರಿಗೆ ಸಿಗಬೇಕಾದ ಬೆಳೆಸಾಲಕ್ಕೆ ಅನ್ನದಾತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದ KDCC ಬ್ಯಾಂಕ್ ಎದುರು ದಿನವಿಡೀ ಸರತಿ ಸಾಲಲ್ಲಿ ನಿಂತು ತಮ್ಮ ಬೆಳೆಸಾಲ ಪಡೆದುಕೊಳ್ಳುವ ಅನಿವಾರ್ಯತೆ ಎದಿರಾಗಿದೆ. ಹೀಗಾಗಿ, ಲಾಕ್ ಡೌನ್ ನಡುವೆಯೂ ಅನ್ನದಾತ ತನ್ನ ಸಾಲದ ಬಾಬತ್ತು ಪಡೆಯಲು ಪರದಾಡುತ್ತಿದ್ದಾನೆ. KDCC ಬ್ಯಾಂಕ್ ಆಡಳಿತ ವರ್ಗ ರೈತರಿಗೆ ಆಗುತ್ತಿರೋ ಇಂತಹ ತೊಂದರೆ ನೀಗಿಸಲು ಸುಲಭವಾದ ಪರ್ಯಾಯ ಮಾರ್ಗ ಅನುಸರಿಸಬೇಕಿದೆ ಅಂತಾ ಮುಂಡಗೋಡ ರೈತ ಮುಖಂಡ ರಾಮಣ್ಣ ಕುನ್ನೂರ್ ಆಗ್ರಹಿಸಿದ್ದಾರೆ. ಅಂದಹಾಗೆ, ಕೊರೋನಾ...
ಮುಂಡಗೋಡಿನಲ್ಲಿ ಇಂದಿನಿಂದ 4 ನೇ ಹಂತದ ಲಾಕ್ ಡೌನ್: ಅಗತ್ಯ ವಸ್ತುಗಳ ಖರೀಧಿಗೆ ಮುಗಿಬಿದ್ದ ಜನ..!
ಮುಂಡಗೋಡ-ಪಟ್ಟಣದಲ್ಲಿ ನಾಲ್ಕನೇ ಹಂತದ ಲಾಕ್ ಡೌನ್ ಇಂದಿನಿಂದ ಪ್ರಾರಂಭವಾಗಿದೆ. ನಿನ್ನೆಯಷ್ಟೇ ಉತ್ತರ ಕನ್ನಡ ಜಿಲ್ಲಾಧಿಕಾರಿ ಪರಿಷ್ಕೃತ ಆದೇಶ ಹೊರಡಿಸಿದ್ದಾರ. ಈ ಹಿನ್ನೆಲೆಯಲ್ಲಿ ಇಂದಿನಿಂದ ಸೋಮವಾರ, ಮಂಗಳವಾರ, ಬುಧವಾರ ಹಾಗೂ ಗುರುವಾರ ಹೀಗೆ ನಾಲ್ಕು ದಿನಗಳ ಕಾಲ, ಬೆಳಿಗ್ಗೆ 8 ಗಂಟೆಯಿಂದ 12 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀಧಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ಇಂದು ಮುಂಡಗೋಡ ಪಟ್ಟಣದಲ್ಲಿ ಅಗತ್ಯ ವಸ್ತುಗಳ ಖರೀಧಿಗೆ ಜನ ಮುಗಿಬಿದ್ದಿದ್ರು. ಇಲ್ಲಿನ ದಿನಸಿ ಅಂಗಡಿಗಳ ಎದುರು ಜನ ಜಂಗುಳಿಯೇ ಸೇರಿತ್ತು. ಇನ್ನು ಅನಗತ್ಯ ತಿರುಗಾಡುವ ವಾಹನಗಳ ಬಗ್ಗೆ ಪೊಲಿಸ್ರು ಹದ್ದಿನ ಕಣ್ಣು ಇಟ್ಟಿದ್ರು..
ಮುಂಡಗೋಡಿನಲ್ಲಿ ಛತ್ರಿ, ರೇನ್ ಕೋಟ್ ಮಾರಾಟಕ್ಕೆ ಅನುಮತಿ: ಪಪಂ ನಿಂದ ಧ್ವನಿವರ್ದಕದ ಮೂಲಕ ಸೂಚನೆ..!
ಮುಂಡಗೋಡ: ಪಟ್ಟಣದಲ್ಲಿ ಮಳೆಗಾಲಕ್ಕೆ ಅವಶ್ಯಕವಾಗಿರೋ ಛತ್ರಿ, ರೇನ್ ಕೋಟ್ ಸೇರಿದಂತೆ ಅಗತ್ಯ ವಸ್ತುಗಳ ಖರೀಧಿಗೆ ಅವಕಾಶ ಕಲ್ಪಿಸಲಾಗಿದ್ದು ಪಟ್ಟಣ ಪಂಚಾಯತ ಈ ಕುರಿತು ಧ್ವನಿ ವರ್ಧಕದ ಮೂಲಕ ಪಟ್ಟಣದಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದೆ. ಛತ್ರಿ ರೇನ್ ಕೋಟ್ ಸೇರಿದಂತೆ ಮಳೆಗಾಲಕ್ಕೆ ಉಪಯೋಗಿಸುವ ಪಾದರಕ್ಷೆಗಳ ಮಾರಾಟಗಾರರು ತಮ್ಮ ಅಂಗಡಿಗಳಲ್ಲೆ ಬೆಳಿಗ್ಗೆ 8 ರಿಂದ 12 ಗಂಟೆಯವರೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಮಾರಾಟ ಮಾಡಲು ಅನುಮತಿ ನೀಡಲಾಗಿದೆ.
ಪಬ್ಲಿಕ್ ಫಸ್ಟ್ ನ್ಯೂಸ್ ನ ಇವತ್ತಿನ TOP 5 ನ್ಯೂಸ್
ಪಬ್ಲಿಕ್ ಫಸ್ಟ್ ನ್ಯೂಸ್ ನ ಇವತ್ತಿನ ಟಾಪ್ 5 ನ್ಯೂಸ್ ನೋಡಲು ಈ ಕೆಳಗಿನ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ.. Subscribe ಮಾಡಿ.. https://youtu.be/CJbeBeJyGuk