ಮುಂಡಗೋಡ: ಪಟ್ಟಣದ KDCC ಬ್ಯಾಂಕ್ ಎದುರು ಅನ್ನದಾತರ ಪರದಾಟ ಇನ್ನೂ ನಿಂತಿಲ್ಲ. ತಮ್ಮ ಬೆಳೆಸಾಲದ ಹಣಕ್ಕಾಗಿ ದಿನವಿಡೀ ಬಿಸಿಲು, ಮಳೆಯಲ್ಲೇ ಕಾಯಬೇಕಾದ ದುಸ್ತಿತಿ ತಪ್ಪಿಲ್ಲ.. ಬ್ಯಾಂಕ್ ಎದುರು ಅರ್ಧ ಕಿಲೋ ಮೀಟರ್ ವರೆಗೂ ಸರತಿ ಸಾಲಲ್ಲಿ ನಿಂತು ಬಸವಳಿಯುತ್ತಿರೋ ಅನ್ನದಾತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಜವಾಬ್ದಾರಿ ಯಾರೂ ತೋರುತ್ತಿಲ್ಲ.
ಈ ಸುದ್ದಿಯ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ..
ಹೌದು, ಮುಂಡಗೋಡ ತಾಲೂಕಿನ ರೈತರಿಗೆ ಸಿಗಬೇಕಾದ ಬೆಳೆಸಾಲಕ್ಕೆ ಅನ್ನದಾತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದ KDCC ಬ್ಯಾಂಕ್ ಎದುರು ದಿನವಿಡೀ ಸರತಿ ಸಾಲಲ್ಲಿ ನಿಂತು ತಮ್ಮ ಬೆಳೆಸಾಲ ಪಡೆದುಕೊಳ್ಳುವ ಅನಿವಾರ್ಯತೆ ಎದಿರಾಗಿದೆ.
ಹೀಗಾಗಿ, ಲಾಕ್ ಡೌನ್ ನಡುವೆಯೂ ಅನ್ನದಾತ ತನ್ನ ಸಾಲದ ಬಾಬತ್ತು ಪಡೆಯಲು ಪರದಾಡುತ್ತಿದ್ದಾನೆ. KDCC ಬ್ಯಾಂಕ್ ಆಡಳಿತ ವರ್ಗ ರೈತರಿಗೆ ಆಗುತ್ತಿರೋ ಇಂತಹ ತೊಂದರೆ ನೀಗಿಸಲು ಸುಲಭವಾದ ಪರ್ಯಾಯ ಮಾರ್ಗ ಅನುಸರಿಸಬೇಕಿದೆ ಅಂತಾ ಮುಂಡಗೋಡ ರೈತ ಮುಖಂಡ ರಾಮಣ್ಣ ಕುನ್ನೂರ್ ಆಗ್ರಹಿಸಿದ್ದಾರೆ.
ಅಂದಹಾಗೆ, ಕೊರೋನಾ ಸಂದಿಗ್ದತೆಯ ಈ ಸಮಯದಲ್ಲಿ ಸಾಮಾಜಿಕ ಅಂತರದ ಯಾವೊಂದೂ ಕಟ್ಟಳೆಗಳೂ ಇಲ್ಲಿ ಜಾರಿಯಾಗುತ್ತಿಲ್ಲ. ಹೀಗಾಗಿ, ಬೆಳೆಸಾಲ ನೀಡುವ ಸಂಬಂಧ ಸೂಕ್ತ ವ್ಯವಸ್ಥೆ ಕಲ್ಪಿಸಿ ಕೊಟ್ಟರೆ ರೈತರಿಗೆ ಅನಕೂಲವಾಗಬಹುದು ಅಂತಾ ಸಾರ್ವಜನಿಕರ ಅಭಿಪ್ರಾಯವಾಗಿದೆ. ಸಂಬಂಧ ಪಟ್ಟವರು ಯೋಚಿಸಬೇಕಿದೆ.