ಬಾಗಲಕೋಟೆ: ಕೊರೊನಾ ಮೂರನೇ ಅಲೆ ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರುತ್ತೆ ಎನ್ನುವ ತಜ್ಞರ ವರದಿಯ ಬೆನ್ನಲ್ಲೇ, ಎರಡನೇ ಅಲೆಯೇ ಮಕ್ಕಳನ್ನ ಬಾಧಿಸುತ್ತಿದೆ. ಇದೀಗ ಗಾಯದ ಮೇಲೆ ಬರೆ ಎನ್ನುವಂತೆ ಕೋವಿಡ್’ನಿಂದ ಗುಣಮುಖರಾದ ಮಕ್ಕಳಲ್ಲಿ ಈಗ ಹೊಸದಾಗಿ ಕಾಯಿಲೆಯೊಂದು ಶುರುವಾಗಿದ್ದು ಪೊಷಕರನ್ನ ಬೆಚ್ವಿಬೀಳಿಸಿದೆ. ಬಹುಅಂಗಾಂಗ ವೈಫಲ್ಯ ಉಂಟುಮಾಡುವ ಆ ರೋಗ ಯಾವುದು? ಅಷ್ಟಕ್ಕೂ ಆ ಹೊಸ ರೋಗ ಬಾಧಿಸಿದ್ದು ಯಾವ ಜಿಲ್ಲೆಯಲ್ಲಿ..? ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್.
ಹೌದು, ಕೋವಿಡ್ ನಿಂದ ಗುಣಮುಖರಾದ ಚಿಕ್ಕ ಮಕ್ಕಳಲ್ಲಿ ಈಗ MIS-C ಎನ್ನುವ ಕಾಯಿಲೆಯೊಂದು ಕಾಣಿಸಿಕೊಂಡಿದ್ದು ಪೋಷಕರನ್ನ ಆತಂಕಕ್ಕೆ ಈಡು ಮಾಡಿದೆ. ಈಗ ಬಾಗಲಕೋಟೆ ಜಿಲ್ಲೆಯಲ್ಲಿ ನವಜಾತ ಶಿಶು ಸೇರಿದಂತೆ ಐದು ಮಕ್ಕಳಲ್ಲಿ ಮಲ್ಟಿ ಸಿಸ್ಟಮ್ ಇನ್ ಪ್ಲಾಮೇಟರಿ -ಚೈಲ್ಡ್ (M.I.S-C)ರೋಗ ಕಾಣಿಸಿಕೊಂಡಿದೆ. ಇದು ಉಸಿರಾಟದ ತೊಂದರೆ, ಹೃದಯ,ಮೆದುಳು,ಲೀವರ್ ಸೇರಿದಂತೆ ಎರಡಕ್ಕಿಂತ ಹೆಚ್ಚು ಕಾಯಿಲೆಗಳು ಕಾಣಿಸಿಕೊಳ್ಳುತ್ತವೆಯಂತೆ. ಸದ್ಯ ನಗರದ ಕುಮಾರೇಶ್ವರ ಆಸ್ಪತ್ರೆಯಲ್ಲಿ ಐವರು ಮಕ್ಕಳು ಚಿಕಿತ್ಸೆಗೆ ದಾಖಲಾಗಿದ್ದು, ಇಬ್ಬರು ಮಕ್ಕಳು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮೂವರಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಕುಮಾರೇಶ್ವರ ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.
ಇನ್ನು ಕೊರೊನಾ ಮೂರನೇ ಅಲೆಯನ್ನ ಸಮರ್ಥವಾಗಿ ಎದುರಿಸುವುದಕ್ಕೆ ಜಿಲ್ಲಾಡಳಿತ ಮುಂದಾಗಿರುವ ಬೆನ್ನಲ್ಲೇ ಈಗ ಎರಡನೇ ಅಲೆಯೇ ಮಕ್ಕಳ ಪಾಲಿಗೆ ಮಾರಕವಾಗಿದೆ. ಜಿಲ್ಲೆಯಲ್ಲಿ ಸುಮಾರು ಎರಡು ಸಾವಿರಕ್ಕೂ ಅಧಿಕ ಮಕ್ಕಳಿಗೇ ಕೋವಿಡ್ ಸೋಂಕು ಭಾಧಿಸಿದೆ. ಈಗ ಕೋವಿಡ್ ನಿಂದ ಚೇತರಿಕೆ ಕಂಡ ಮಕ್ಕಳಲ್ಲಿ ಮಿಸ್ಸಿ ರೋಗ ಕಾಣಿಸಿಕೊಂಡಿದ್ದು ಎಲ್ಲರನ್ನೂ ಆತಂಕಕ್ಕೆ ಈಡು ಮಾಡಿದೆ. ಜಿಲ್ಲೆಯಲ್ಲಿ ಈಗಾಗಲೇ ಐವರು ಮಕ್ಕಳಲ್ಲಿ ಈ ರೋಗ ಕಾಣಿಸಿಕೊಂಡಿದೆ. ಇನ್ನು ಈ ಕುರಿತು ಬಾಗಲಕೋಟೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅನಂತ ದೇಸಾಯಿಯವರು ಪ್ರತಿಕ್ರಿಯೆಯನ್ನ ನೀಡಿದ್ದು, ಜಿಲ್ಲೆಯಲ್ಲಿ ಮಕ್ಕಳ ಚಿಕಿತ್ಸೆಗೆ ಎಲ್ಲ ರೀತಿಯ ಮುಂಜಾಗೃತ ಕ್ರಮಗಳನ್ನ ಕೈಗೊಂಡಿದ್ದು,ಈಗ ಕಾಣಿಸಿಕೊಳ್ಳುತ್ತಿರುವ ಮಿಸ್ಸಿ ರೋಗದ ಚಿಕಿತ್ಸೆಗಾಗಿ ಅಗತ್ಯ ಕ್ರಮಗಳನ್ನ ಕೈಗೊಳ್ಳಲಾಗಿದೆ. ಆದ್ರೆ ಮಕ್ಕಳು ಕೊರೊನಾದಿಂದ ಗುಣಮುಖರಾದ ಬಳಿಕ ಕಾಣಿಸಿಕೊಳ್ಳುವ ಈ ರೋಗದ ಕುರಿತು ಪೋಷಕರು ಬಹಳಷ್ಟು ಜಾಗರೂಕತೆಯನ್ನ ವಹಿಸಬೇಕಿದೆ. ಆರಂಭಿಕ ಹಂತದಲ್ಲೆ ಮಕ್ಕಳಲ್ಲಿ ಜ್ವರ ಕಾಣಿಸಿಕೊಂಡರೆ ಕೂಡಲೇ ವೈದ್ಯರನ್ನ ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಂಡರೆ ಮಕ್ಕಳು ಬೇಗ ಗುಣಮುಖರಾಗಬಹುದು ಅಂತ ತಿಳಿಸಿದ್ದಾರೆ. ಇನ್ನು ಕೊರೊನಾ ಬರದೇ ಇರುವ ಹಾಗೇ ಮಕ್ಕಳ ಪೋಷಕರು ನಿಯಮಾವಳಿಗಳನ್ನ ಪಾಲಿಸಬೇಕು,ಅದಾಗ್ಯೂ ಕೊರೊನಾ ಬಂದ್ರೆ ಶೀಘ್ರ ಚಿಕಿತ್ಸೆ ಪಡೆಯಬೇಕೆಂದು ಪೋಷಕರಿಗೆ ಮನವಿ ಮಾಡಿದ್ದಾರೆ.
ಒಟ್ಟಿನಲ್ಲಿ ಕೊರೊನಾ ಎರಡನೇ ಅಲೆಯಲ್ಲೇ ಮಕ್ಕಳು ಮಹಾಮಾರಿಗೆ ಟಾರ್ಗೆಟ್ ಆಗ್ತಿದ್ದು, ಹೊಸದಾಗಿ ಸೇರ್ಪಡೆಗೊಂಡಿರುವ ಈ ಮಿಸ್ಸಿ ರೋಗ ಎಲ್ಲ ಪೋಷಕರ ನಿದ್ದೆಗೆಡಿಸಿದೆ. ಹೀಗಾಗಿ, ಇಲ್ಲಿ ನಾವೇಲ್ಲ ಮುಂಜಾಗ್ರತೆ ವಹಿಸೋದು ಬಹು ಮುಖ್ಯವಾಗಿದೆ.
ಈ ಕರುಣಾಜನಕ ಕತೆಯನ್ನೂ ನೋಡಿ.. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.. ಪಬ್ಲಿಕ್ ಫಸ್ಟ್ ನ್ಯೂಸ್ ಇಂದಿನ ಪ್ರಮುಖ ಸುದ್ದಿ..