ಬೆಂಕಿಯಿಂದ ಮನೆ ಸುಟ್ಟು ಸಂಕಷ್ಟದಲ್ಲಿರೋ ಇಂದೂರಿನ ಬಡ ಕುಟುಂಬಕ್ಕೆ ದಿನಸಿ ವಿತರಿಸಿದ ಸಹೃದಯಿಗಳು..!

ಮುಂಡಗೋಡ: ತಾಲೂಕಿನ ಇಂದೂರು ಗ್ರಾಮದಲ್ಲಿ ನಿನ್ನೆ ತಡರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿ‌ಂದ ಮನೆಗೆ ಬೆಂಕಿ ತಗುಲಿ ಮನೆ ಸುಟ್ಟ ಕರಕಲಾದ ಘಟನೆ ನಡೆದಿದ್ದು, ಸಧ್ಯ ಇಡೀ ಕುಟುಂಬವೇ ಸಂಕಷ್ಟದಲ್ಲಿದೆ.

ಬೆಂಕಿಯ ಕೆನ್ನಾಲಿಗೆಗೆ ಮನೆಯಲ್ಲಿದ್ದ ದವಸ ಧಾನ್ಯಗಳೂ ಸುಟ್ಟು ಕರಕಲಾಗಿದ್ದು ಕುಟುಂಬಕ್ಕೆ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಹೀಗಾಗಿ ಇಂದೂರಿನ ಗಂಗಾಧರ ಬಡಿಗೇರ ಹಾಗೂ ಮಂಜುನಾಥ್ ನಡಗೇರಿ ಸಂಕಷ್ಟದಲ್ಲಿರೋ ಕುಟುಂಬಕ್ಕೆ ದಿನಸಿ ವಿತರಿಸಿದ್ದಾರೆ. ಮನೆ ಸುಟ್ಟು ಕರಕಲಾದ ಹಿನ್ನೆಲೆಯಲ್ಲಿ ನೊಂದಿರೋ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

**************************************

ಬೆಂಕಿಯ ಕೆನ್ನಾಲಿಗೆಗೆ ಇಡಿ ಕುಟುಂಬವೇ ಬೀದಿಗೆ.. ಪಬ್ಲಿಕ್ ಫಸ್ಟ್ ನ್ಯೂಸ್ ಇಂದಿನ ಪ್ರಮುಖ ಸುದ್ದಿ ನೋಡಲು ಈ ಲಿಂಕ್ ಕ್ಲಿಕ್ ಮಾಡಿ..